ಈ ಕಾಯುವಿಕೆ ಚಿರವಾಗಿರಲಿ


ನಾನು ಕಾಯುತ್ತ ನಿಂತು ಬಹಳ ಹೊತ್ತಾಗಿದೆ. ಅಥವಾ ಹಾಗನಿಸ್ತಿದೆ. ನನಗೆ ಯಾರನ್ನೂ ಕಾಯಿಸಿ ಅಭ್ಯಾಸ ಇಲ್ಲ. ಕಾಯುವುದು ಕೂಡ. ಅಂವ ಬರುವ ತನಕ ನನ್ನ ಮಾತುಗಳನ್ನ ಹೇಳಿಕೊಂಡು ರಿಹರ್ಸಲ್ ಮಾಡೋಣ ಅಂದುಕೊಳ್ತೇನೆ. ಪ್ರತಿ ಸರ್ತಿ ಶುರು ಹಚ್ಚಿಕೊಂಡಾಗಲೂ ಗಮನ ಬೇರೆಲ್ಲೋ ಹರಿದು ತುಂಡಾಗಿಬಿಡುತ್ತೆ. ಉದಾಹರಣೆಗೆ ಟ್ರಾನ್ಸ್‌ಫಾರ್ಮರಿನ ಕೆಳಗೆ ಕುಂತ ಹಸು, ದೊಡ್ಡ  ಮೋರಿಗೆ ಉಚ್ಚೆ ಹೊಯ್ಯುತ್ತ ನಿಂತ ಪೋಕರಿ, ಕೈ ಮೇಲೆ, ಹೆಗಲ ಮೇಲೆಲ್ಲ ಬೆಲ್ಟುಗಳನ್ನ ನೇತಾಕಿಕೊಂಡು ಕೊಳ್ಳುವಂತೆ ದುಂಬಾಲು ಬೀಳ್ತಿದ್ದ ಮನುಷ್ಯ, ಹೀಗೆ…. ಈ ಎಲ್ಲದರ ನಡುವೆ, ನನ್ನ ಮಾತುಗಳು ಹಾಗಿರಲಿ, ನಾನ್ಯಾತಕ್ಕೆ ಅಲ್ಲಿ ನಿಂತಿದ್ದೇನೆ ಅನ್ನೋದೇ ಮರೆತು ಹೋಗಿಬಿಡುತ್ತೆ.

…………………….. ಮುಂದಿನದ್ದು ಇಲ್ಲಿದೆ. ………………………………………..

ಬಿಡಲಾಗದ್ದಕ್ಕೆ ಅಂಟಿಕೊಂಡು, ದಕ್ಕಿಸಿಕೊಳ್ಳಲಾಗದ್ದಕ್ಕೆ ಕೈ ಚಾಚುತ್ತಾ ಸ್ವಾನುಕಂಪ ಅನುಭವಿಸೋದು ಎಷ್ಟು ಚೆಂದ! ಎಲ್ಲ ಸರಾಗ ನಡೆದುಬಿಟ್ಟರೆ ಬದುಕಿನ ಸ್ವಾರಸ್ಯ ಏನು ಅಂತ ಗಲಿಬಿಲಿಯಾಗ್ತದೆ ಕೆಲವು ಸರ್ತಿ. ಹೀಗೆಲ್ಲ, ಈ ಮಧ್ಯಾಹ್ನದಲ್ಲಿ ಸುಟ್ಟ ಕಬ್ಬಿಣದ ವಾಸನೆ ಕುಡಿಯುತ್ತ ಯಾಕೆ ನಿಂತಿದ್ದೇನೆ ಅಂತ ನೆನೆಸಿಕೊಳ್ತಿರುವಾಗ…. ಅನಿಸುತ್ತಿದೆ; ಅಂವ ಬರುವುದು ಬೇಡ. ಈ ಕಾಯುವಿಕೆ ಚಿರವಾಗಿರಲಿ. ಇದು ನನಗೆ ಇಷ್ಟವಾಗತೊಡಗಿದೆ.

……………………………… ಹಿಂದಿನದ್ದು ಇಲ್ಲಿದೆ  …………………………………….

 

ನಿಮ್ಮ ಟಿಪ್ಪಣಿ ಬರೆಯಿರಿ

Create a free website or blog at WordPress.com.

Up ↑