ಕಾಫಿ ಆರುವ ತನಕ…..


ಪೂರ್ತಿ ಬರಹ ಈ ಲಿಂಕಿನಲ್ಲಿದೆ

ಅದು, ಸುಖ ಸೂರೆ ಹೋದುದರ ಸಂಕೇತವಾ? ಹಾಲು ಉಕ್ಕಿದ್ದಕ್ಕೆ ಖುಷಿ ಪಡಬೇಕಾ, ದುಃಖವಾ? ಅದು ಸಿನೆಮಾದ ಮುಂದಿನ ಕಥೆಯಲ್ಲಿ ನಿರ್ಧಾರವಾಗ್ತದೆ. ಬಹುತೇಕ ಅಲ್ಲೆಲ್ಲ ಹೀರೋಯಿನ್ನು ಆಮೇಲೆ ಅಳುತ್ತಾಳೆ. ಎಂಥ ಕೆಟ್ಟ ಫಾರ್ಮುಲಾ!

~

ಅಮ್ಮನ ಗೊಣಗಾಟದಲ್ಲಿ ಇಷ್ಟೂ ಕಥೆ ಕೇಳಿ ತಿಳೀತಿದ್ದ ನಾನು ಅಂದುಕೊಳ್ತಿದ್ದೆ. ‘ಈ ಹುಂಜನ್ನ ಯಾರಾದ್ರೂ ತಿಂದು ಹಾಕಬಾರದಾ ಅತ್ಲಾಗಿ?’
ಸ್ವಲ್ಪ ದೊಡ್ಡಕಾದ ಮೇಲೆ ಅಮ್ಮಂಗೆ ಹೇಳಿದ್ದೆ, ‘ಹೀಗೆ ನನ್ನ ನಿದ್ದೆ ಕೆಡಿಸೋ ಬದಲು ನೀವೇ ಕಾಫಿ ಕಾಸ್ಕೊಂಡು ಕುಡೀರಿ ಅನ್ನು….’  ಅಮ್ಮ ಬರಿದೇ ನಕ್ಕಿದ್ದಳು.

~

ಮಜಾ ಅನಿಸತ್ತೆ. ಬೇಕಾಗಿರೋದನ್ನ ಕೇಳಿ ಬಣ್ಣಗೇಡಿಗಳಾಗ್ತೇವೆ ಬಹಳ ಸರ್ತಿ. ಬೇಡವಾದ್ದನ್ನ ಬಾಯಿಬಿಟ್ಟು ಹೇಳೋಕೆ ಹಿಂಜರಿಕೆ ಯಾಕೆ? ಇಷ್ಟಕ್ಕೂ ‘ಉಹು….’ ಅನ್ನೋದು ಎರಡೇ ಅಕ್ಷರದ ಪದ. ನಿರಾಕರಣೆಯ ಈ ನೇರಭಾಷೆಯನ್ನ ಕಲಿಯೋಕೆ ಅದೇನು ಕಷ್ಟವೋ!? ಬಹಳಷ್ಟು ಜನಕ್ಕೆ ಅದು ಬರೋದಿಲ್ಲ. ಈ ಬಹಳಷ್ಟರಲ್ಲಿ ನಾವುಗಳೆ ಮುಕ್ಕಾಲು ಮೀರಿದ ಪಾಲು

~

ಪ್ರೀತಿಸೋಕೆ ಬೇಕಾಗಿ ಪ್ರೀತಿಸೋದಾದರೆ ನೀ ನನ್ನ ಜತೆ ಇರು. ನನ್ನನ್ನ ಭಾವನಾತ್ಮಕ ಆಸರೆ ಮಾಡ್ಕೊಳ್ಳೋದೇ ಹವಣಿಕೆಯಾದರೆ, I am sorry…’ ಅಂವ ಅಂದಿದ್ದ. ನಾನು ಕೋಪಿಸ್ಕೊಂಡಿದ್ದೆ. ನಾನು ಪ್ರೀತಿಸೋಕೆ ಹೊರಟಿದ್ದೇ ನನ್ನೆಲ್ಲ ಜವಾಬ್ದಾರಿ ಅಂವ ತೆಗೆದ್ಕೊಳ್ಳಲಿ ಅಂತ. ನನ್ನ ಬದುಕಿನ ನಿರ್ಧಾರಗಳನ್ನ ಅಂವ ಮಾಡ್ತಿದ್ದರೆ ನನಗೆ ಆರಾಮವಿರುತ್ತಿತ್ತು.

~

ಕ್ಯಾಲೆಂಡರಿನಲ್ಲಿ ಲಕ್ಷ್ಮಿ ತಲೆ ತಗ್ಗಿಸಿದ್ದಾಳೆ. ತಣ್ಣನೆ ಹಾವಿನ ತುದಿಯಲ್ಲಿ ಕುಂತು ಕಾಲು ಒತ್ತುತ್ತಿದ್ದಾಳೆ. ಅವಳಿಗೂ ಈ ಕಥೆ ಹೊಳೆದು ಗೊಣಗ್ತಿರಬಹುದಾ? ಅಮ್ಮನ ಹಾಗೆ? ಮತ್ತೆಲ್ಲ ನನ್ನ ಲಿಸ್ಟಿನವರ ಹಾಗೆ?

ಪೂರ್ತಿ ಬರಹ ಇಲ್ಲಿದೆ~ ಐರಾವತಿಯಲ್ಲಿ

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑