ಏನೆಲ್ಲ ಹೇಳ್ತಾರೆ. ಕೆಲವರಂತೂ ‘ಹೆಣ್ಣುಮಕ್ಕಳಿಗೆ ಪಾಪ ಅನ್ನೋದಾ? ಅವರು ಕೊಡೋ ಹಿಂಸೆ ನಿಮಗೇನು ಗೊತ್ತು?’ ಅಂತ ಬೆದರುಗಣ್ಣು ಮಾಡ್ಕೊಂಡು ಕೈ ತಿರುಗಿಸ್ತಾರೆ. ನಿಜಕ್ಕೆ ಹಿಂಗಾಗಿರುತ್ತೆ. ದಿಟ್ಟ ಹೆಣ್ಣುಮಕ್ಕಳ ಹೆಜ್ಜೆ ಗಂಡಸಿನ ಅಹಂಕಾರಕ್ಕೆ ಪೆಟ್ಟುಕೊಟ್ಟಿರುತ್ತೆ. ಆದರೆ ಎಲ್ಲ ಹೆಣ್ಣುಗಳು ಹಾಗೆ ಸಿಡಿದೇಳೋಕೆ ಆಗಲ್ಲ. ಎದ್ದು ಬದುಕುಳಿಯೋಕೆ ಆಗಲ್ಲ. ಇದಕ್ಕೆ ಕಾರಣ, ಗಂಡಸರು ಮಾತ್ರ ಅಲ್ಲ, ಮತ್ತಷ್ಟು ಹೆಣ್ಣುಗಳೂ ಅನ್ನೋದು ದುರಂತ. ಅದಕ್ಕೇ ನೋಡಿ, ಮುರಿಯುವ- ಮೀರುವ ಹೆಣ್ಣುಮಕ್ಕಳಿಗೆ ಸಾವಿರದೆಂಟು ಹೆಸರುಗಳನ್ನಿಡೋದು!
ಈ ಹೊತ್ತು ಇದನ್ನೆಲ್ಲ ಯೋಚಿಸುವ ಹಾಗೆ ಮಾಡಿದ್ದು ಮರ್ಯಾದಾ ಹತ್ಯೆ ಪ್ರಕರಣ. ಎಲ್ಲೋ ಬಿಹಾರದಲ್ಲಿ, ರಾಜಸ್ಥಾನದಲ್ಲಿ, ಮೂಲಭೂತವಾದ ಮೈಹೊಕ್ಕ ಸಮುದಾಯಗಳಲ್ಲಿ, ಅಂಥ ದೇಶಗಳಲ್ಲಿ ಇದು ನಡೆಯುತ್ತಿದ್ದು ಕೇಳಿತಿಳಿದಿದ್ದೆವು. ಅಥವಾ ಹಾಗೆ ಅಪ್ಪನೋ ಅಮ್ಮನೋ ಪ್ರೇಮದಲ್ಲಿ ಬಿದ್ದ ಮಗಳನ್ನು ಹೊಡೆದು ಕೊಂದದ್ದು ಬೆಳಕಿಗೆ ಬರುತ್ತಿರಲಿಲ್ಲ; ಬಂದರೂ ಮರ್ಯಾದಾ ಹತ್ಯೆಯ ಹೆಸರು ಇರುತ್ತಿರಲಿಲ್ಲ. ಆದರೀಗ ಬೆಚ್ಚಿಬೀಳುವಂತೆ, ಊರಿನವರೆದುರೇ ಒಬ್ಬ ಹೆಣ್ಣನ್ನು ಹೊಡೆದು ನೇಣಿಗೆ ಹಾಕಲಾಗಿದೆ.
ಸಾಯುವುದು ನಮ್ಮ ಹಕ್ಕು. ನಮ್ಮ ಮರ್ಜಿಯಂತೆ ನಮ್ಮನ್ನ ಸಾಯಲಿಕ್ಕಾದರೂ ಬಿಡಿ… ಹಿತ್ತಲಿನ ತರಕಾರಿ ಹಾಗೆ, ಸಾಕಿದ ಕೋಳಿ ಹಾಗೆ, ನಿಮಗೆ ಮನಸ್ಸು ಬಂದಾಗ ಹಿಡಿದು ಕೊಯ್ಯುತ್ತೀರಲ್ಲ? ಪ್ರತಿ ಹೆಣ್ಣು ಹೊಡೆತ ತಿಂದು ಸತ್ತಾಗಲೂ ಮೈ ಉರಿಯುತ್ತೆ. ನೂರೆಂಟು ನೆವಗಳ ನಿಷ್ಕ್ರಿಯತೆ ಮತ್ತು ಭಯಗಳೇ ದನಿಯೆತ್ತಲು ಅಡ್ಡಿಯಾ? ನನ್ನಮಟ್ಟಿಗಂತೂ ಹೌದು ಅನ್ನಿಸುತ್ತೆ. ಆದರೂ ಪ್ರತಿಭಟನೆಗೆ ಹೊರಟವರ ಜತೆ ದನಿಗೂಡಿಸುವ ಕೆಲಸವನ್ನಾದರೂ ಮಾಡಬಲ್ಲೆ. ಅಷ್ಟರಮಟ್ಟಿನ ಸಂವೇದನೆ ಉಳಿಸಿಕೊಂಡಿದ್ದೀನಿ ಅನ್ನುವ ಬಗ್ಗೆ ಕೊಂಚ ಸಮಾಧಾನವೂ ಇದೆ.
ಸುವರ್ಣಳ ಸಾವಿಗೆ ಕಾರಣರಾದವರನ್ನ ಶಿಕ್ಷಿಸಿ ಅನ್ನುವ ಒತ್ತಾಯವನ್ನಿಟ್ಟುಕೊಂಡು ಸಹೃದರು ಪ್ರತಿಭಟನೆಗೆ ಮುಂದಾಗಿದ್ದಾರೆ. ದಯವಿಟ್ಟು ಬೆಂಬಲಿಸಿ. ಮತ್ತೆ ಇಂಥಾ ಸಾವುಗಳು ಆಗೋದು ಬೇಡ…. ಕೊನೆಯ ಪಕ್ಷ ಕಡಿಮೆಯಾದರೂ ಆಗಲಿ ಅನ್ನುವ ಆಶಯ…


ನಿಮ್ಮ ಟಿಪ್ಪಣಿ ಬರೆಯಿರಿ