ನೀರಿಲ್ಲದ ಬಾವಿ
ಯೆದುರು
ಖಾಲಿ ಕೊಡದ ನಾನು
ಎದೆ ಬಗೆದು ತೋಡಿದರೂ
ಕಣ್ಣು ಹನಿಯದು
~
ಮರಳುಗಾಡು, ಮರೀಚಿಕೆ…
ಅವೆಲ್ಲ ಕ್ಲೀಷೆ.
ನೀನಿಲ್ಲದ ಬದುಕಿಗೆ
ನೀ ನೀಡದ ಪ್ರೀತಿಗೆ
ಬೇರೇನೂ ಹೋಲಿಕೆ
ತೋಚುತ್ತಿಲ್ಲ ನನಗೆ.
~
ಹಾಳು ಮೌನದ ಬಯಲಲ್ಲಿ
ಒಂಟಿ ಪಾಪಾಸುಕಳ್ಳಿ
ಯ ಹಾಗೆ ನಿಂತಿರುವೆ
ಅದಕ್ಕೇ,
ಮಾತಿಗೆ ನೆವವಿಲ್ಲ,
ಪ್ರೀತಿಗೆ ಜನವಿಲ್ಲ!

ಮನದಾಳದ ಮಾತುಗಳಿವು.., ಮನ ಕರಗಿಸಿದವು!