ಮೊಗ್ಗಿನ್ನು ಅರಳುವುದಿಲ್ಲ…
ಇನ್ನು,
ಮೊಗ್ಗು ಅರಳುವುದಿಲ್ಲ.
ಹೂವಾಗದೆ,
ಕಾಯಾಗದೆ,
ಹಣ್ಣಾಗಿದೆ ಮೊಗ್ಗು-
ಬಿರಿಯುವುದಿಲ್ಲ.
ಯಾವ
ಪಾತರಗಿತ್ತಿಯ
ತುಟಿ ಸೋಂಕಿಗೂ
ದಳ
ತಳಮಳಿಸುವುದಿಲ್ಲ.
ಬಿಗಿದು ಕುಂತಿದೆ
ಮೊಗ್ಗು,
ಇನ್ನು ಅರಳುವುದಿಲ್ಲ.
ಮೊಗ್ಗೊಳಗೆ
ಹೂತು ಕೂತ ಬೀಜ
ಮತ್ತೆ ಮೊಳೆಯುವುದಿಲ್ಲ.
ಅದು,
ಗಿಡವಾಗಿ ಚಿಗಿಯುವುದಿಲ್ಲ,
ಹೂ ಹೆರುವುದಿಲ್ಲ.
ಯಾಕೆಂದರೆ,
ಮೊಗ್ಗಿನ್ನು ಅರಳುವುದಿಲ್ಲ.
ಹೂವಾಗದೆ
ಕಾಯಾಗದೆ
ಹಣ್ಣಾಗಿದೆ ಮೊಗ್ಗು,
ಇನ್ನು ಬಿರಿಯುವುದಿಲ್ಲ.

ನಿಮ್ಮ ಟಿಪ್ಪಣಿ ಬರೆಯಿರಿ