ಮೊದಲ ಕವಯತ್ರಿಯ ಕೊನೆಯುಸಿರು… ಕೊನೆ ಕವಿತೆ….


 

ರಾಜನರಮನೆಯ ಚೆಂದದ ಹೆಣ್ಣುಮಗಳೊಬ್ಬಳು ಗುಲಾಮನ ರೂಪಕ್ಕೆ ಮನಸೋಲುತ್ತಾಳೆ. ಪ್ರೇಮದಲ್ಲಿ ಮುಳುಗುತ್ತಾಳೆ. ಈ ಪ್ರೇಮ ಅವಳನ್ನು ಕವಿಯಾಗಿಸುತ್ತೆ. ಕವಿತೆಗಳಿಂದಲೇ ರಟ್ಟಾಗುವ ಗುಟ್ಟು ಅವಳ ಜೀವಕ್ಕೆ ಮುಳುವಾಗುತ್ತೆ. ಗುಲಾಮನನ್ನು ಹಾಳು ಬಾವಿಗೆ ತಳ್ಳಿಸುವ ಅವಳಣ್ಣ, ತಂಗಿಯ ಎರಡೂ ಕೈಗಳ ನರ ಕತ್ತರಿಸಿ ಹಬೆಕೋಣೆಯಲ್ಲಿ ಕೂಡಿ ಹಾಕುತ್ತಾನೆ. ಸೋರಿದ ರಕ್ತದೊಳಗೆ ಬೆರಳದ್ದಿ ಹಬೆಕೋಣೆಯ ಗೋಡೆಯ ಮೇಲೆ ತನ್ನ ಕೊನೆಯ ಕವಿತೆ ಬರೆಯುತ್ತಾಳೆ ರಾಜಕುಮಾರಿ. ರಕ್ತದ ಮಡುವಿನಲ್ಲೇ ಕೊನೆಯಾಗುತ್ತಾಳೆ.

 

ಅವಳನ್ನು ಪರ್ಷಿಯನ್ ಕಾವ್ಯ ಜಗತ್ತು ತನ್ನ ಭಾಷೆಯ ಮೊದಲ ಕವಯತ್ರಿ ಎಂದು ಹಾಡಿ ಹೊಗಳುತ್ತದೆ. ಅವಳನ್ನು ಆಫ್ಘಾನಿಸ್ತಾನದ ಮಹಿಳಾ ಕಾವ್ಯಪರಂಪರೆಯ ತಾಯಿ ಎಂದು ಕೊಂಡಾಡಲಾಗುತ್ತದೆ.

 

ರಾಬಿಯಾ ಬಾಲ್ಖಿಯ ಬದುಕಿನ ಒನ್‌ಲೈನ್ ಸ್ಟೋರಿ ಇದು… ಮುಂದಿನ ಭಾಗ ಇಲ್ಲಿದೆ. 

 

ನಿಮ್ಮ ಟಿಪ್ಪಣಿ ಬರೆಯಿರಿ

Blog at WordPress.com.

Up ↑