ವೈಯಕ್ತಿಕ ವಿಶ್ವಾಸಕ್ಕಿಂತ ಅಗ್ಗದ ಸಾಕ್ಷಿಯೇ ದೊಡ್ಡದಾಗುತ್ತದಾ?

ಸ್ವಂತದ್ದು ಇಲ್ಲಿ ಹರಟುವುದಿಲ್ಲ ಅಂದಿದ್ದೆ. ಬೇರೆ ಜಾಗವಿಲ್ಲ. ತೀರದ ಬೇಸರ. ಹೇಳಿಕೊಂಡಾಗಲಷ್ಟೆ ಮನಸು ಹಗುರ. ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು... Continue Reading →

ಕೃಷ್ಣ ಬಿಕ್ಕಿದ್ದೂ ಕೇಳುತಿದೆ…

ಹೇಳಲಿಕ್ಕೆ ಬಹಳವೇನಿಲ್ಲ. ಕೇಳುವುದರಲ್ಲಿ ಕಳೆದುಹೋಗಿದೇನೆ. ರಾಧೆ ಹಿಂದೆ ಬಿದ್ದಿದ್ದೆ. ಗೆಳತಿ ಬಯ್ಯುವುದೊಂದು ಬಾಕಿ. ತಪ್ಪು ನನ್ನದಲ್ಲ.ಜಯದೇವನ ಗೀತ ಗೋವಿಂದ ಓದಬಾರದಿತ್ತು. ಚಂಡೀದಾಸನ ಕವಿತಗಳನ್ನಾದರೂ ಯಾಕೆ ಓದಬೇಕಿತ್ತು? ಸಾಲದ್ದಕ್ಕೆ ವಿದ್ಯಾಪತಿ ಬೇರೆ ಜತೆಗೆ. ಈ ಎಲ್ಲದರ ನಡುವೆ ಕನ್ನಡದ ಕಾಡುವ ಕೃಷ್ಣರು... ಭಾಗವತದಲ್ಲಿ ರಾಧೆಯಿಲ್ಲ. ಅದ್ವೈತವಾದಕ್ಕೆ ಇಲ್ಲೊಂದು ಪಾಯಿಂಟ್ ಇದೆ. ರಾಧೆ ಇಲ್ಲದಲ್ಲಿ ಕೃಷ್ಣನೂ ಇಲ್ಲ. ಸೋ, ಅಲ್ಲಿ ಬ್ರಹ್ಮತತ್ತ್ವವೋ ಪರಮ ಸತ್ಯವೋ ಇದೆ ಹೊರತು ಅದು ಕೃಷ್ಣ ಕಥೆಯೇನಲ್ಲ. ರಾಧೆ ಇಲ್ಲದಲ್ಲಿ ಕೃಷ್ಣ ಇರೋದಾದ್ರೂ ಹೇಗೆ? ಇಷ್ಟಕ್ಕೂ... Continue Reading →

ಕಳೆದ ಜನ್ಮದ ಎಳೆಯೊಂದು ಹುಡುಕಿ ಬಂದಂತೆ

ಚಳಿ ಬಿದ್ದಿದೆ. ಹಾಡುಗಳ ಕೌದಿ ಹೊದ್ದು ಬೆಚ್ಚಗೆ ಕೂತಿದೇನೆ. ಎದೆಯಲ್ಲಿ ನೆನಪುಗಳ ಅಗ್ಗಿಷ್ಟಿಕೆ. ಕಾವಿಗೆ ಮೈ, ಮನಸು ಹಿತವಾಗಿದೆ. ಎಲ್ಲ ನೆನಪಾಗಲಿಕ್ಕೆ ಮಳೆಯೇ ಸುರಿಯಬೇಕೆಂದಿಲ್ಲ. ಒಂದಷ್ಟು ಹಾಡುಗಳ ಸಾಲು ಸುರಿದರೂ ಸಾಕು. ಆದರೇಕೋ ಈ ಹೊತ್ತು ಯಾವ ಹೊಸ ಹಾಡೂ ತುಟಿ ಹತ್ತುತ್ತಿಲ್ಲ. ಎದೆಯೊಳಕ್ಕೆ ಇಳಿದ ಹಳೆಯ ಗಂಧ ಹಾಗೆ ದಟ್ಟ, ಗಾಢ. ಅಪ್ಪನ ಹುಡುಗುತನದ ಕಾಲಕ್ಕೆ ಹಾಡಾಗುತ್ತಿದ್ದ ಸಾಹಿರನ ಮೇಲೆ ನನ್ನ ಪ್ರೀತಿ. ಗುಲ್ಜಾರ ನನ್ನ ಅಂತರಂಗ ಬಲ್ಲ ಗೆಳೆಯನಂತೆ. ಇವರೆಲ್ಲ ಮುಪ್ಪೇ ಇಲ್ಲದ ಆತ್ಮಸಖರು. ನನ್ನಂಥವರಿಗೆ ಚಿರಕಾಲದ... Continue Reading →

ಕವಿ, ಋಷಿ, ಯೋಗಿ, ಸಂತ… ಲೋಕಾದ್ಯಂತ ನಡೆವ ವಸಂತ!

(ಶೀರ್ಷಿಕೆ ಸಾಲು ಜಿಎಸ್ಸೆಸ್ ಅವರು ವಿವೇಕಾನಂದರನ್ನು ಕುರಿತು ಬರೆದ ಪದ್ಯದಿಂದ ತೆಗೆದುಕೊಂಡಿರೋದು...) ನನಗೆ ಇಷ್ಟವಾದ ಕೆಲವು ಸ್ವಾಮೀಜಿ ಸೇಯಿಂಗ್ಸ್... ಇವು ಕೆಲವು ಮಾತ್ರ... My ideal, indeed, can be put into a few words, and that is to preach unto mankind their divinity, and how to make it manifest in every movement of life. Religion is the manifestation of the divinity already... Continue Reading →

ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು

ನಾನೊಬ್ಬಳೇಇಲ್ಲಿ, ಹೀಗೆಕವಿತೆಗಳ ಜತೆಗೆ. ನನ್ನ ನೀವೆಲ್ಲ ಜತೆಯಾದವರುಕವಿತೆಗಳ ಜತೆಗೇ... ನನ್ನಾತ್ಮ ರತಿಗೆ ಒಸರಿಬಂದ ಅಕ್ಷರಗಳ ಸ್ರಾವ, ಒಡಲುಗಟ್ಟಿದೆಯಿಲ್ಲಿ ಕವಿತೆಗಳ ಹಾಗೆ. ಪ್ರತಿ ನೋವು ದುಃಖ ಸುಖ-ಎಲ್ಲದರ ಸಂಭೋಗ ಫಲ ಕೊಟ್ಟು ಹುಟ್ಟಿಬಂದಿದೆಸಾಲು ಸಂತಾನ. ಸುತ್ತಲಿನ ತಿಕ್ಕಲಿಗೆತೆರೆದ ಘಳಿಗೆಯ ಧ್ಯಾನ, ಸಂಸಾರ ವಿಷವೃಕ್ಷದಡಿಯಲ್ಲೆ ಅರಳಿ ತಬ್ಬಿದೆ ಜ್ಞಾನ ಅಥವಾ, ನನ್ನ ಅಜ್ಞಾನ. ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು, ಹುಳಿತು ಹದವಾಗಿನೊರೆಗಟ್ಟಿದೆ ಕವಿತೆ ನೋವ ಮರೆಸುವ ಮತ್ತು ತಂದಿತ್ತು. ಯಾರು ಹೇಳುವರು, ಪಾಪನಾನೊಂಟಿಯೆಂದು? ಬರಹ ಪ್ರೀತಿಯ ಸುಖಕೆ ಏಕಾಂತ ಬಯಸಿ ಪಡೆದೆ, ಹೀಗೆ... Continue Reading →

ಕಣ್ಣಿಗೆ ಹೊಸ ನೋಟ ನಿಲುಕಬಹುದಾ?

5 ವರ್ಷದಲ್ಲಿ 6 ಕೆಲಸ ಬದಲಿಸಿದ ಉಜ್ವಲ ಇತಿಹಾಸವುಳ್ಳ ನನ್ನ ಅಕೌಂಟ್‌ಗಳು ಆಯಾ ಆಫೀಸಿಗೆ ತಕ್ಕ ಹಾಗೆ ಬೇರೆಬೇರೆ ಬ್ಯಾಂಕುಗಳಲ್ಲಿವೆ. ಆಫೀಸುಗಳ ಜತೆಗೆ ಆ ಎಲ್ಲ ಬ್ಯಾಂಕುಗಳ ಸಹವಾಸವನ್ನೂ ಬಿಟ್ಟಿರೋದ್ರಿಂದ ಅವೆಲ್ಲದರಲ್ಲೂ ವ್ಯವಹಾರ ನಿಂತು, ಈಗ ನನ್ನ ಮೊಟ್ಟಮೊದಲ ಅಕೌಂಟ್ ಒಂದೇ ಚಾಲ್ತಿಯಲ್ಲಿದೆ. ಕೆಲವದರಲ್ಲಿ ಬಹುಶಃ ಝೀರೋ ಬ್ಯಾಲೆನ್ಸ್ ಇರಬೇಕು. ಗೆಳೆಯರೆಲ್ಲ ಹೆದರಿಸ್ತಾರೆ, ಫೈನ್ ಆಗತ್ತೆ, ಕ್ಲೋಸ್ ಮಾಡಿಸ್ಬಿಡು ಅಂತೆಲ್ಲ... ಆಫೀಸುಗಳಿಗೆ ಎಡತಾಕುವುದನ್ನೊಂದು ಘೋರ ಶಿಕ್ಷೆ ಅಂದುಕೊಂಡಿರುವ ನಾನು ಹಾಗೆಯೇ ಇದ್ಬಿಟ್ಟಿದೀನಿ.... ಈ ನನ್ನ ಪೆದ್ದುತನದ ಅನಾವರಣ... Continue Reading →

ಅವರ ಖುಷಿಯಲ್ಲಿ ನಮ್ಮ ಪಾಲು…

ಗೆಳತಿ ಶ್ರೀದೇವಿ ಕಳಸದ ಮತ್ತು ಪ್ರೀತಿಯ ಸಿರಿಯ ಪುಸ್ತಕಗಳ ಬಿಡುಗಡೆ ಬುಧವಾರ ಇದೆ. ನಮ್ಮೆಲ್ರನ್ನೂ  ಶ್ರೀದೇವಿ ಕರೀತಿರೋದು ಹೀಗೆ... ಹೇಗಿದ್ದೀರಿ? ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಎನ್ನುವುದು ನಿಮ್ಮ ಹತ್ತಿರವೂ ಸುಳಿಯಲಾರದು. ಇನ್ನು ’ನೆಪ’ ಎನ್ನುವುದು ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ! ಖಂಡಿತ ಬಂದೇ ಬರುತ್ತೀರಿ... ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ 🙂 ಪ್ರೀತಿಯಿಂದ ಶ್ರೀದೇವಿ ಕಳಸದ

ಅಶ್ವಯುಜ ಶುಕ್ಲ ಮಾನವಮಿ ಬರಲೆಂದು…

ಟೆರೇಸಿನ ಮೇಲೆ ಒಣಹಾಕಿದ ಹಪ್ಪಳದ ವಾಸನೆಯಂತೆ ಬಿಸಿಲು. ಏನೋ ಒಥರಾ ಮಂಕು ಕವಿದ ಹಾಗೆ. ಆ ಭಾದ್ರಪದವೇ ಹಾಗಿತ್ತು. ಕೊನೆಯದರ್ಧ, ಶೂನ್ಯಮಾಸ. ಮುಗಿದ ಮಳೆ, ಶುರುವಾಗದ ಚಳಿ, ಒಳ್ಳೆ ಕೆಲಸಕ್ಕೆಲ್ಲ ಅಜ್ಜ-ಅಜ್ಜಿಯರ ಕತ್ತರಿ.  ಚರ್ಮ ಬೇರೆ ಬೇಸಿಗೆಯೇನೋ ಅಂತೆಲ್ಲ ಗಲಿಬಿಲಿಯಾಗಿ ಒಡೆದುಕುಂತಿತ್ತು. ಹಾವಿನ ಚರ್ಮದ ಹಾಗೆ. ಮುಟ್ಟಿದರೆ ಹೊಟ್ಟೇಳುತ್ತಿದ್ದ ಮೈಯನ್ನ ನೋಡಿ ಚಿತ್ತಿ ವಾಚಾಮಗೋಚರ ಬಯ್ದಿದ್ದಳು. ಬಹಳ ಕಾವ್ಯಾತ್ಮಕವಾಗಿ ಬಯ್ತಾಳೆ ಚಿತ್ರಾ. ನನ್ನ, ‘ಶಕುಂತಲೆ ಹಾಗೆ ಕುಂತಿದೀಯಲ್ಲೆ, ನಿನ್ ಉಂಗುರ ಮೀನು ನುಂಗಿಲ್ಲ, ಯಾವ್ದೋ ದೊಡ್ಡ ತಿಮಿಂಗಿಲವೇ... Continue Reading →

ಗೊಳೋ ಅಳುವವರು ಮತ್ತು ಗಳ ಹಿಡಿಯುವವರು- ಮಧ್ಯೆ ನಾವು!!

ಕರ್ಮಕಾಂಡ! ತಡ್ಕೊಳಾಗ್ತಿಲ್ಲ. ಟೀವಿ ನೋಡದ ನಾನೇ ಹೀಗೆ ತಲೆಚಚ್ಕೊಳ್ತಿರುವಾಗ, ಬಿಟ್ಟೂಬಿಡದ ಹಾಗೆ ಅದರ ಮುಂದೆ ಕೂತಿರೋ ಮಂದಿ ಹೆಂಗಾಗಿರಬೇಡ!? ಹಾಗಂತ ನೋಡದೆ ಇರೋಕೂ ಸಾಧ್ಯವಿಲ್ಲ. ಇದೊಂದು ಥ್ರಿಲ್ಲರ್ ಕಿಲ್ಲರ್ ಸಿನೆಮಾ! ಅಲ್ಲಿ ಯಾರಾದರೊಬ್ಬರು ವಾರದ ಇಪ್ಪತ್ನಾಲ್ಕೂ ಗಂಟೆ ‘ಗಳ’ ಹಿಡಿಯುವವರು ‘ಸರ್ಕಾರ ಉರುಳತ್ತಾ ಉಳಿಯತ್ತಾ? ವೀಕ್ಷಕರೇ ಕಾದು ನೋಡಿ...’ ಅನ್ನುತ್ತ ಕಾವಲಿಯ ಮೇಲೆ ಕೂರಿಸುತ್ತಿದ್ದರೆ, ಇಲ್ಲಿ ಕುಂತವರು ಅಂಡು ಸುಟ್ಟ ಬೆಕ್ಕಿನ ಥರ ಚಡಪಡಚಡಪಡ!! ~ ಯ್ಯೀಕ್ಸ್! ಇದು ಪಾಲಿಟಿಕ್ಸ್!! ನಮಗೆ ನಾವೇ ಉಗಿದುಕೊಳ್ಬೇಕು. ನಮಗೆ ನಿಜ್ಜ... Continue Reading →

ಅಪ್ಪನ ಮುಖ

‘ಮಗೂ ಶ್ವೇತಕೇತೂ’ ಅಪ್ಪನ ಪ್ರಶ್ನೆಗೆ ಮಗನ ಮೌನ ಲೋಟದಲ್ಲಿ ನೀರು ನೀರಲ್ಲಿ ಉಪ್ಪು ಕರಗಿ, ತಿಳಿವು ಮೂಡಿ ಹರಿಯಿತು ಬೆಪ್ಪು   ಕಾಲಗಟ್ಟಲೆ ಕುಂತು ಕಲಿಯಲಾಗದ ಪಾಠಕೆ ಕಳಿಸಿದನೇಕೋ ತಂದೆ? ಕಲಿತು ಬಂದ ಗರ್ವ ಮುರಿದನೇಕೋ ತಂದೆ?   ಅಪ್ಪಂದಿರ ಹಿರಿಮೆಯಿದು ಬಹುಶಃ ಕಳಿಸುವುದು ಕೆದಕುವುದು ಕಲಿಸುವುದು ~ ‘ಹೊಸ ನೀರಿಗೆ ಹೊಸ ಮಣ್ಣಿಗೆ ಕಳಿತ ರುಚಿ ಬೇರೆ’ ಮರೆತವರ ಮಾತು- ಇಂದಿನ ಹಣ್ಣು ಹಿಂದಿನ ಹಣ್ಣಿಗಿಂತ ಕಳಪೆ!   ಬೇವು ಸಸಿಗೆ ಕಸಿಕಟ್ಟಿ ಕಹಿ ತೆಗೆವ... Continue Reading →

Create a free website or blog at WordPress.com.

Up ↑