ಇರಾನಿನಲ್ಲಿ ಹೀಗೆ….

ಇರಾನ್ ಅಂದರೆ ತಣ್ಣತಣ್ಣನೆಯ ಮಜೀದಿ, ಮಖ್ಮಲ್‌ಬಫ್ ಸಿನೆಮಾಗಳು ಅನಿಸುತ್ತಿತ್ತು. ಕೆಲವು ವರ್ಷಗಳ ಕೆಳಗೆ ಅಹ್ಮದಿನೆಜಾದ್, ನ್ಯೂಕ್ಲಿಯಾರ್ಕಾರ್ಯಾಚರಣೆಗಳು ನೆನಪಾಗ್ತಿದ್ದವು. ಅದಕ್ಕೂ ಮುಂಚೆ ಇರಾನ್ ಜೊತೆ ಇರಾಕಿನ ನೆನಪಾಗಿ ಸದ್ದಾಮನೇ ಭೂತಾಕಾರವಾಗಿ ನಿಂತುಬಿಡ್ತಿದ್ದ. ಇವತ್ತು ಈ ಎಲ್ಲವನ್ನೂಮೀರಿ ಇರಾನ್ ಅಂದರೆ ಬೆಚ್ಚಿಬೀಳುವ ಹಾಗೆ ಆಗಿದೆ. ಕಣ್ಣಿಗೆ ಕಣ್ಣು, ಕೈಗೆ ಕೈ ಥರದ ಶಿಕ್ಷೆ ಕೇಳಿ ಗೊತ್ತಿತ್ತು. ಕಲ್ಲು ಹೊಡೆದು ಕೊಲ್ಲುವ ಕಥೆ ಜಮಾನಾದ್ದುಅಂದುಕೊಂಡಿದ್ದೆ. ಅದು ಈಗಲೂ ನಮ್ಮ ನಡುವೆ ಇದೆ ಅಂದರೆ.... ಇರಾನಿನ ಆಕೆಯ ಹೆಸರು ಸಕೀನೇ ಅಶ್ತಿಯಾನಿ. ಅನೈತಿಕ... Continue Reading →

ಈ ಕೆಲವು ದಿನಗಳಲ್ಲಿ….

ಈ ಕೆಲವು ದಿನಗಳಲ್ಲಿ, ಬರಾನ್ ನೋಡಿದೆ. ಪೀರ್ ಭಾಷಾರ ‘ದೇವರು ಮನುಷ್ಯನಾದ ದಿನ ದಿನ’ ಓದ್ತಾ ಇದ್ದೆ. ಸ್ವಲ್ಪ ‘ಸಿಕ್’ ಅನಿಸಿದ್ದು ನಿಜ. ಗೆಳೆಯ ಗುಣಮುಖರಾಗಲಿ ಎಂಬುದು ಹಾರೈಕೆ. ದಮ್ಮಯ್ಯ ಕಾರಣ ಕೆಳಬೇಡಿ ಯಾರೂನು. ಸೌಹಾರ್ದದ ಮಾತಾಡುವ ಜನರ ಕೆಲಸವೇ ಇಷ್ಟು! ಶಾರದಾ ದೇವಿ ಜೀವನಗಂಗಾ ಓದಿದೆ. ಒಂದು ರೂಪಕ ಬರೆಯುವುದಿತ್ತು. ಹೆಚ್ಚೂಕಡಿಮೆ ಬರೆದೆ. ದೇಶಕಾಲದ ಚರ್ಚೆ ದಾರಿತಪ್ಪಿದ್ದನ್ನು ನೋಡಿ ಬೇಸರಪಟ್ಟೆ. ಗೆಳೆಯರಿಬ್ಬರು ಏನು ಹೇಳಲು ಹೊರಟಿದ್ದಾರೆಂದೇ ಅರ್ಥ ಮಾಡಿಕೊಳ್ಳದೆ ನಡೆಸಲಾದ ಚರ್ಚೆ ತೀರ ಕಿರಿಕಿರಿ ಮಾಡಿತು.... Continue Reading →

ಕುಮುದೋಪಾಖ್ಯಾನವೆಂಬ ಚೊರ್ರೆ ಅಧ್ಯಾಯ

ಅದ್ಯಾಕೋ ಗೊತ್ತಿಲ್ಲ. ಸಿಂಚನಾ ಹೆಸರನ್ನ sin ಅಂತಲೂ ಸದಾಶಿವನ ಹೆಸರನ್ನ sad ಅಂತಲೂ ಫೀಡ್ ಮಾಡ್ಕೊಂಡಿದೀನಿ. ಮೊನ್ನೆ ಅದನ್ನ ನೋಡಿದ ಸಿಂಚನಾ, ‘ಏನಕ್ಕ ನೀವು, ಬರೀ ನೆಗೆಟಿವ್ವು. ನಾನು ಸಿನ್ನು, ಸದು ಸ್ಯಾಡ್ ಥರ ಕಾಣ್ತೀವಾ ನಿಮಗೆ?’ ಅಂದಾಗ್ಲೇ ನಂಗೆ ಅವು ನಿಕ್ ನೇಮ್ ಮಾತ್ರ ಆಗಿರುವುದಕ್ಕಿಂತ ಬೇರೆ ಸಾಧ್ಯತೆಗಳೂ ಇವೆ ಅನ್ನೋ ಅರಿವಾಗಿದ್ದು. ಅದು ಹೋಗ್ಲಿ, ಅವಳು ಹಾಗಂದಾಗಿಂದ, ನಾನು ಅವರಿಬ್ಬರ ಹೆಸರು ನೆನೆದಾಗೆಲ್ಲ ಸಿನ್- ಸ್ಯಾಡ್ ಗಳು ಅದದೇ ಅರ್ಥದಲ್ಲಿ ನೆನಪಾಗಿ ಅದೇ ಭಾವ ಗಟ್ಟಿ ಕುಂತುಬಿಡುತ್ತೆ.... Continue Reading →

ಎಲ್ಲಿಂದೆಲ್ಲಿಗೋ ಹರಿದು ಹರಟೆ…

ಇತ್ತೀಚೆಗೆ ಲೈಕ್ ವಾಟರ್ ಫಾರ್ ಚಾಕೊಲೇಟ್ ಮೂವಿ ನೋಡಿದೆ. ಅದಕ್ಕಿಂತ ಮುಂಚೆ ನಾವೆಲ್ ಓದಿದ್ದೆ. ಆಮೇಲೆ ಗೆಳತಿ ಟೀನಾ, ‘ಎನ್ನ ಭವದ ಕೇಡು’ ಹಾಗೇ ಇದೆ ಕಣೇ ಅಂದಳು. ಅದನ್ನೂ ಓದಿದೆ. ಹೌದು. ಚೆಂದ ಭಾವಾನುವಾದ ಮಾಡಿದಾರೆ. ನೇಟಿವಿಟಿಗೆ ಇಳಿಸಿದರೆ ಹಾಗೆ ಇಳಿಸಬೇಕು. ನಿಜ್ಜ ದಾವಣಗೆರೆಯಲ್ಲಿ ನಡೆದಿತ್ತೇನೋ ಅನ್ನುವ ಹಾಗೆ. ಓದಿ ಖುಷಿ ಆಗಿ, ಇನ್ನೂ ಅದರದೆ ಗುಂಗಲ್ಲಿದ್ದಾಗ, ‘ಗಾನ್ ವಿದ್ ದ ವಿಂಡ್’ ಮೂವಿ ನೋಡುವ ಯೋಗ. ನಾವೆಲ್ ಓದುವಾಗ ಏನೆಲ್ಲ ಕಲ್ಪಿಸ್ಕೊಂಡಿದ್ದೆನೋ ಹಾಹಾಗೇ ಪಾತ್ರಗಳು...... Continue Reading →

ಕೃಷ್ಣ ಸಿಗುವುದಿಲ್ಲ. ಅದಕ್ಕೇ, ರಾಧೆ ಕಾಯಲಿಲ್ಲ…

ಮತ್ತೆ, ಅವನಿಲ್ಲ. ಇಷ್ಟಕ್ಕೂ ಅವನು ಇದ್ದಿದ್ದು ಯಾವಾಗ? ಚಂದ್ರನ ಹಾಗೇನೇ ಅವನ ಕಾರುಬಾರು. ಇರ್ತಾನೆ, ಇಲ್ಲವಾಗುವ ಭಯ ಹಚ್ಚಿಯೇ ಇರ್ತಾನೆ. ಮತ್ತೆ ಬಂದೇ ಬರ್ತಾನೆ ಅನ್ನುವ ಭರವಸೆ ಏನೋ ಸರಿಯೇ. ಆದರೆ ಅದು, ಹುಣ್ಣಿಮೆ ಕುಡಿಯಲಿಕ್ಕೆ ಕಾತರಿಸುವ ಚಕೋರಿಗಾಗಿಯಲ್ಲ. ಕಾಯಿಸುವವರೆಲ್ಲ ಹಾಗೇ. ಕಾಯುವವರಿಗಾಗಿ ಬರುವುದಿಲ್ಲ. ರಾಮ ಅಷ್ಟುದ್ದ ಹಾದಿ ನಡೆದು ಬಂದಿದ್ದು ಶಬರಿಗಾಗಿ ಅಲ್ಲವೇ ಅಲ್ಲ. ಪಾಪ, ಅವಳಿಗದು ಗೊತ್ತಿತ್ತಾ? ಶಬರಿ... ಬೇಡರ ಹುಡುಗಿ. ಜಿಂಕೆ, ಮೊಲಗಳೊಟ್ಟಿಗೆ ಆಡ್ಕೊಂಡಿದ್ದವಳು. ಅವಳ ಮದುವೆ ಮಾಡಿ ಕಳಿಸುವಾಗ ಅವಳೆಲ್ಲ ಸಂಗಾತಿಗಳೂ... Continue Reading →

ಒಂದು ಸಾಫರ್‌ಜಾದೆ ಕವಿತೆ

ಸಾಫರ್‌ಜಾದೆ ಇರಾನಿ ಕವಯತ್ರಿ. ನೆಟ್ಟಲ್ಲಿ ಜಾಲಾಡುವಾಗ ಸಿಕ್ಕವಳು. ಈಕೆಯ ಕವಿತೆಗಳನ್ನೋದುವಾಗೆಲ್ಲ, ಮತ್ತೆ  ಬಹಳಷ್ಟು ದೇಶಗಳ- ಭಾಷೆಗಳ ಹೆಣ್ಣುಗಳನ್ನೋದುವಾಗೆಲ್ಲ, ಅರೆ! ನಮ್ಮ ಹಾಗೇನೇ... ಇವರೂ ನಮ್ಮಂತೇನೇ... ಅನ್ನಿಸಿ ಸಂಭ್ರಮ ಮತ್ತು ವಿಷಾದ. ಗೆಳೆಯನೊಬ್ಬನಿಗೆ ಈ ಸಾಮ್ಯತೆಯನ್ನು ಹೇಳಿದಾಗ ‘ನಾನ್‌ಸೆನ್ಸ್’ ಅಂದುಬಿಟ್ಟ. ಪರವಾಗಿಲ್ಲ. ಸಾಫರ್‌ಜಾದೆಯನ್ನ ಕನ್ನಡಕ್ಕೆ ತಂದುಕೊಂಡು ಸುಮ್ಮನಿದ್ದೆ. ಅವುಗಳಲ್ಲಿ ಕೆಲವು ಇಲ್ಲಿ ಕಂಡರೂ ಕಾಣಿಸಬಹುದು. ಸಾಮ್ಯತೆ, ನಿಮಗೇ ಗೊತ್ತಾಗುವುದು. ಮೊದಲ ಮಿಡಿತದ ಜಾಗದಲ್ಲಿ... ನನ್ನ ಹುಟ್ಟುನೆಲವನ್ನ ನೋಡಿಲ್ಲ. ಅವಳೆಲ್ಲ ಒಳಗುದಿಗಳ ಸಹಿತ ಅಮ್ಮನ್ನ ಇರಿಸಲಾಗಿತ್ತಲ್ಲ, ಆ ಮನೆಯನ್ನ. ಅಲ್ಲಿನ್ನೂ... Continue Reading →

ಕಾಳಿದಾಸನ ಮೀನು

ನೀರಲ್ಲಿ ಕಳಚಿತ್ತು ನೆನಪಿನುಂಗುರ ದೂರ್ವಾಸನ ಶಾಪವಂತೆ ನಿಜ, ಕಳೆದ ಕಥೆ ಮಾತ್ರ ಕಾಳಿದಾಸ ಕರಾಮತ್ತು ನುಂಗಿತ್ತು ಮೀನು ಕಥೆ ಬೆಳೆಸಲು ಅರೆದು ಸೇರಿಸಿದ ಮಸಾಲೆ, ಕಾವ್ಯ ರುಚಿ ರಸಿಕರೆದೆ ಹರುಷ ನಾಟಕದ ಶಾಕುಂತಲೆ ಕಣ್ಣೀರು ಬೆರೆತ ನದಿ ಸೇರಿ ಸಾಗರದುಪ್ಪು ಜಾಸ್ತಿ. ನಿನ್ನ ನೆನಪ ಮೈಮರೆವಲ್ಲಿ ಯಾರ ಕಡೆಮಾಡಿದೆನೋ ಉಂಗುರ ಕಳೆದಿದೆ. ಶಾಪದ ಭಯ ಕಾಳಿದಾಸನ ಮೀನೂ ಉಪ್ಪು ಖಾರದಲಿ ಬೆಂದು ರುಚಿಯಾಗಿದೆ. ನನ್ನದೇ ಎದೆ ಬಗೆದು ಪ್ರೇಮದುಂಗುರ ತೋರಲೇ ವಿಮೋಚನೆಗೆ ?

ಸಹಜೀವಿಗಳಿಗೊಂದಿಷ್ಟು ಜೀವಜಲವನಿರಿಸಿ….

ಚಿತ್ರ ~೧~ ಅದು- ಗಂಗೆ, ಗೌರಿ, ಲಕ್ಷ್ಮೀ, ತುಂಗೆ... ಯಾವ ಹೆಸರೂ ಇಲ್ಲದ ಬೇವಾರ್ಸಿ ಹಸು. ಮೊದಲೇ ಟ್ರಾಫಿಕ್ಕು ತುಂಬಿ ಗೋಳುಗುಂಡಿಯಾದ ರಸ್ತೆಯಲ್ಲಿ ನೆಟ್ಟಾನೇರ ನಿಂತು ಶಾಪ ತಿನ್ನುತ್ತಿದೆ. ಇಷ್ಟಗಲ ದಾರಿಯಲ್ಲೂ ಅಡ್ಡ ಮಲಗಿ ಜಾಗ ನುಂಗಿದೆ. ಅದರ ಕೆಚ್ಚಲೋ, ಕೊಳಚೆ ಬಿಂದಿಗೆ. ಚರ್ಮಕ್ಕೆ ನೀರು ಬೀಳಲು ಮತ್ತೆ ಮಳೆಗಾಲವೇ ಬರಬೇಕು. ದಿನವೆಲ್ಲ ಪಾರ್ಕಿನ ಬದಿಯೋ, ಟ್ರಾನ್ಸ್ ಫಾರ್ಮರಿನ ಕೆಳಗೋ ರಾಶಿಯೊಡ್ಡಿದ ಪ್ಲಾಸ್ಟಿಕ್, ಗಾರ್ಬೇಜನ್ನು ಮೆದ್ದು ಮಲಗಿರುತ್ತದೆ. ಅದೇನೋ ಈ ಊರಿನ ಜನಕ್ಕೆ ಹಸುಗಳೆಂದರೆ ಹೆದರಿಕೆ! ಹತ್ತಿರ... Continue Reading →

ಈ ಹಾಳಾದವ ಸಿಗದೆಹೋಗಿದ್ದರೆ….

ಮೊನ್ನೆ ಸಣ್ಣಗೆ ಮಳೆ ಬಿದ್ದು ಹೋಯ್ತು. ಈ ಹೊತ್ತು ಬೆವರಲ್ಲಿ ಮೈಯೆಲ್ಲ ಒದ್ದೆಒದ್ದೆ. ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು. ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ. ಅಗೋ ಅಲ್ಲಿ, ಅವುಗಳ ಮಧ್ಯ ಗೆಳೆಯನೊಬ್ಬ ಹಾವು ಹಾವು ಅಂತ ಕನವರಿಸ್ಕೊಂಡು ಬರೆದಿಟ್ಟ ಕವನ ಪುಸ್ತಕ. ಅದನ್ನ ಓದಿಕೊಳ್ತಲೇ ಮಲಗಿದ್ದಕ್ಕೋ ಏನೋ ಕನಸ ತುಂಬ ಹಾವು. ಅದೊಂದಕ್ಕೆ ಅವನ ಕಣ್ಣು. ಕಾಣಬಾರದಂತೆ ಹಾವು ಕನಸಲ್ಲಿ. ಹಾವಂದರೆ ಕಾಮವಂತೆ! ಗೊತ್ತಿರೋದು ಇಷ್ಟೇನೇ... ಹಾವಂದರ‍ೆ ಅಧ್ಯಾತ್ಮ ಕೂಡ!... Continue Reading →

ಮೇಲೇಳುತ್ತೇನೆ ನಾನು

ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನ ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ, ದೂಳ ಕಣವಾಗಿಯಾದರೂನು ಮೇಲೇಳುತ್ತೇನೆ ನಾನು ನನ್ನ ಭಾವಭಂಗಿ ಬೇಸರವೇನು? ಮುಖ ಸೋತು ಕುಳಿತಿರುವೆ ಯಾಕೆ? ಕೋಣೆ ಮೂಲೆಯಲ್ಲಿ ನೂರು ತೈಲಬಾವಿಗಳನಿರಿಸಿಕೊಂಡಂಥ ಠೀವಿ ನನ್ನ ನಡೆಯಲಿದೆಯೆಂದೆ? ಸೂರ್ಯರಂತೆ, ಚಂದ್ರರಂತೆ ಕಡಲ ಮಹಾಪೂರದಂತೆ ಚಿಮ್ಮುಕ್ಕುವ ಭರವಸೆಯಂತೆ ಮೇಲೇಳುತ್ತೇನೆ ನಾನು ನಾನು ಮುರಿದು ಬೀಳುವುದ ನೋಡಬೇಕೆ? ತಲೆತಗ್ಗಿಸುವುದನ್ನು, ಕಣ್ ಕುಗ್ಗುವುದನ್ನು? ಎದೆಯ ಚೀರಾಟಕ್ಕೆ ಸೋತು ಕುಸಿದು ಬೀಳುವುದನ್ನು? ನನ್ನ ಗತ್ತು ನೋಯಿಸಿತೆ ನಿನ್ನ?... Continue Reading →

Create a free website or blog at WordPress.com.

Up ↑