ಕನಸು ‘ನೋಡೋಣ’ ಬನ್ನಿ!

ಜಗತ್ತಿನ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಕಿರಾ ಕುರಸೋವಾ   ಅವರ ‘ಡ್ರೀಮ್ಸ್’ ಸಿನೆಮಾವನ್ನು ನೋಡುವ ಅವಕಾಶ ಒದಗಿಸಿಕೊಟ್ಟಿದೆ ಸಾಂಗತ್ಯ. ಇನ್ನು ಮುಂದೆಯೂ ಈ ಬಗೆಯ ವಿಭಿನ್ನ ಪ್ರಯೋಗಗಳನ್ನು ಬ್ಲಾಗ್ಲೋಕದಲ್ಲಿ ಮಾಡಲಿದೆ ಈ ಉತ್ಸಾಹಿ ತಂಡ. ಅದಾಗಲೇ ಚಿತ್ರ ಖಜಾನೆಯಂತಹ ವಿನೂತನ ಪ್ರಯೋಗಕ್ಕೆ ಕೈಹಾಕಿರುವ ಸಾಂಗತ್ಯ, ಸಿನೆಮಾ ಜಗತ್ತಿನ ಎಲ್ಲವನ್ನೂ ಕನ್ನಡದಲ್ಲಿ ಒದಗಿಸಿಕೊಡುವ ಮಹದಾಸೆ ಹೊಂದಿದೆ. ಇದಕ್ಕೆ ಬ್ಲಾಗ್ಗೆಳೆಯರೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹಗಳು ಬೇಕಷ್ಟೆ. ಇನ್ನೇಕೆ ತಡ, ಕನಸು ನೋಡಲು ಸಾಂಗತ್ಯಕ್ಕೆ ಹೊರಡೋಣ, ಬನ್ನಿ!

ನನ್ನೂರ ದಾರಿಯಲ್ಲಿ ನಡೆದಾಡಿದ ಆ ದಿನ…

ಮೊನ್ನೆ ನಾನು, ನನ್ನ ತಮ್ಮ ನನ್ನೂರು ತೀರ್ಥಳ್ಳಿಗೆ ಹೋಗಿದ್ವಿ. ಬರೋಬ್ಬರಿ ಒಂದೂವರೆ ದಶಕದ ನಂತರ ನಾವಿಬ್ಬರೂ ಹಾಗೆ ನಮ್ಮೂರ ರೋಡಲ್ಲಿ ಒಟ್ಟಾಗಿ ಓಡಾಡಿದ್ದು! ಅದರದೊಂದು ಖುಷಿ ಖುಷಿ  ಸಂಕಟದ ಅನುಭವ ಹಂಚಿಕೊಳ್ತಿದೇನೆ ನಿಮ್ಮೊಟ್ಟಿಗೆ... ಊರು, ಉಳಿದಂತೆಲ್ಲ ಹಾಗೇ ಇತ್ತು. ಗದ್ದೆಗಳಲ್ಲಿ ಕಾಂಪ್ಲೆಕ್ಸುಗಳು ಎದ್ದು ನಿಂತಿದ್ದು, ಖಾಲಿ ಹೊಡೆಯುತ್ತ ಬೀಗ ಬಡಚಿಕೊಂಡು ಬಿದ್ದಿದ್ದವು. ಊರಿನ ರೋಡಿನುದ್ದಕ್ಕೂ ನಡೆಯುವ ಖುಷಿಗೆಂದೇ ನಾನು, ಅಪ್ಪಿ ಆಟೋ ಹತ್ತದೆ ಪೇಟೆ ತನಕ ಕಾಲು ಬೀಸುತ್ತ ಹೊರಟಿದ್ದೆವು. “ಇವ್ರೆಲ್ಲ ಹೊಟ್ಟೆಗೆ ಏನು ಮಾಡ್ಕೊಳ್ತಾರೋ?" ಭೂತ... Continue Reading →

ಗಾಂಧಿ, ಅಪ್ಪ ಮತ್ತು ವ್ಯವಸ್ಥೆಯ ಮೇಲಿನ ದ್ವೇಷ!

“ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ಈ ವ್ಯವಸ್ಥೆಯನ್ನೂ ದ್ವೇಷಿಸ್ತೇನೆ” ಅಂತ ಅಂವ ಪತ್ರ ಬರೆದಿಟ್ಟು ಹೋಗಿದ್ದ! “ಹಾಗೇನೂ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಗಾಂಧೀಜಿ ಏನಲ್ಲ. ತುಂಡು ಲಂಗೋಟಿ ಉಟ್ಟು ಉಪವಾಸ ಕುಂತ ಮಾತ್ರಕ್ಕೆ ಬಿಳಿಯರು ಓಡಿಹೋಗಿಬಿಟ್ರು ಅನ್ನೋದು ಮೂರ್ಖತನ!” ಅಣ್ಣ ವಾದಿಸ್ತಿದ್ದ. ಅಪ್ಪನ ಮುಖ ಸುಟ್ಟ ಬದನೆಕಾಯಿ ಆಗಿತ್ತು. ಮಾತಿಗೆ ಮಾತು ಬೆಳೀತು. “ಗಾಂಧೀಜಿ ಅಹಿಂಸಾವಾದಿಯಾಗಿದ್ರು, ಸಹನಾಮೂರ್ತಿಯಾಗಿದ್ರು…” ಅಂತ ಅಂವ ಕಿರುಚಾಡಿದ. ” ಅವರು ಯಾವತ್ತೂ ಯಾರನ್ನೂ ನೋಯಿಸಿದೋರಲ್ಲ. ಬಡ್ಡೀ... Continue Reading →

ಕೊನೆಗೂ ಸಿದ್ದಣ್ಣನ ಪುಸ್ತಕ ರೆಡಿಯಾಗ್ತಿದೆ!!

ಹಾಗೆ ನೋಡಿದರೆ, ಸಿದ್ದು ದೇವರ ಮನಿ ಎಂಬ ಯುವ ಕವಿಯ ಕವನ ಸಂಕಲನ ಯಾವತ್ತೋ ಪುಸ್ತಕವಾಗಿ ಹೊರಬರಬೇಕಿತ್ತು. ಆದರೆ, ಚೆಂದ ಚೆಂದದ ಕವಿತೆಗಳನ್ನು ಬರೆದೂ ಗೆಳೆಯರು ‘ಚೆನ್ನಾಗಿದೆ’ ಅಂದಾಗ ಸ್ವತಃ ‘ಹೌದಾ’ ಅನ್ನುತ್ತ ಬೆರಗಿಗೆ ಒಳಗಾಗುವ ಸಂಕೋಚದ ಹುಡುಗ ಸಿದ್ದು, ಹಾಗೆ ತನ್ನಿಂದ ತಾನೆ ಪುಸ್ತಕ ಹೊರಡಿಸುವುದು ಅಸಾಧ್ಯದ ಮಾತಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಆಯ್ದ ಯುವ ಕವಿಗಳ ಚೊಚ್ಚಲ ಕೃತಿ ಪ್ರಕಟಣೆಗೆ ನೀಡುವ ‘ಪ್ರೋತ್ಸಾಹ ಧನ ಪ್ರಶಸ್ತಿ’ಗೆ ಸಿದ್ದುವಿನ ಕವನ ಸಂಕಲನ ಆಯ್ಕೆಯಾಗಿದೆ.... Continue Reading →

ಚರ್ಚೆ- ಕೊನೆಯ ಕಂತು

‘ಶ್ರೀ ರಾಮ ಸೇನೆ’ ಮಾಡಿದ್ದು ತಪ್ಪು. ಅದು ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಮುಂದೆ ಈ ರೀತಿಯ ದುರ್ನಡತೆಗೆ ಅವಕಾಶ ಕೊಡುವುದಿಲ್ಲವೆಂದು ಭರವಸೆ ನೀಡಬೇಕು. ಇದು ನನ್ನ ಒತ್ತಾಯ. ಬಿಜೆಪಿಗಾಗಲೀ ಅದರ ಸಚಿವರಿಗಾಗಲೀ ‘ಪಬ್ ಸಂಸ್ಕೃತಿ ವಿರೋಧಿಸುತ್ತೇವೆ’ ಎಂದೆಲ್ಲ ಹೇಳಿಕೆ ನೀಡುವ ನೈತಿಕತೆ ಎಷ್ಟು ಮಾತ್ರವೂ ಇಲ್ಲ.  ಚುನಾವಣೆಗಳಲ್ಲಿ, ರಾಜಕಾರನದ ‘ಆಪರೇಶನ್ನು’ಗಳಲ್ಲಿ, ಖಾಸಗಿ ಮೀಟಿಂಗುಗಳಲ್ಲಿ, ‘ರೆಸಾರ್ಟ್ ರಾಜಕಾರಣ’ದ ಸಂದರ್ಭಗಳಲ್ಲಿ ನೆನಪಾಗದ ಸಾಂಸ್ಕೃತಿಕ ಕಾಳಜಿ ಈಗ ಜಾಗೃತಗೊಂಡರೆ ಅದಕ್ಕೆ ಮೌಲ್ಯವಿಲ್ಲ. ಇನ್ನು ಶ್ರೀ ರಾಮ ಸೇನೆಯವರು... ಇವರಲ್ಲಿ ನನ್ನ ವಿನಂತಿ,... Continue Reading →

ಪುಂಡಾಟಿಕೆ ಬಗ್ಗೆ ಮಾತಾಡಿ ಅಂದ್ರೆ, ‘ನೀವು ಕುಡೀತೀರಾ?’ ಕೇಳ್ತಾರೆ!

ಪ್ರತಿಕ್ರಿಯೆ ಅಂತ ಬರೆದಿದ್ದನ್ನೆಲ್ಲ ಚರ್ಚೆ ಅಂತ ಹಾಕಿಬಿಡೋದು ಸರಿಯಾ? ಅಂತ ಕೇಳಿದ್ದಾರೆ ವಿಕಾಸ್. ಯಾವುದೇ ಒಂದು ವಿಷಯಕ್ಕೆ ವಿಭಿನ್ನ  ಅಥವಾ ಪೂರಕ ಪ್ರತಿಕ್ರಿಯೆಗಳು ಬರತೊಡಗಿದಾಗ ಅದು ಚರ್ಚೆಯ ರೂಪ ಪಡಕೊಳ್ಳುತ್ತದೆ ಅನ್ನೋದು ನನ್ನ ಅನಿಸಿಕೆ. ಅದು ಸರಿಯೇ ಅನ್ನುವುದನ್ನ ತಿಳಿದವರು ಹೇಳಬೇಕಷ್ಟೆ. ಮತ್ತಷ್ಟು ಚಿಂತನಾರ್ಹ ಕಮೆಂಟುಗಳೊಂದಿಗೆ ಈ ಚರ್ಚೆ ಮುಂದುವರೆದಿದೆ.  ಜೊತೆಗೆ, ಸಂಕೇತ್ ಬರೆದಿರುವ ‘ಸಂರಕ್ಷಕನೆ’ ಎನ್ನುವ ಸ್ವಾರಸ್ಯಕರ- ಅರ್ಥಪೂರ್ಣ ಲೇಖನದ ಲಿಂಕ್ ಮತ್ತು ಮೌನ ಕಣಿವೆಯ ಒಂದು ಲೇಖನದ ಲಿಂಕ್ ಕೊಟ್ಟಿರುವೆ. ಮತ್ತೊಂದು ಮಾತು...  ಸಹಬ್ಲಾಗಿಗರೊಬ್ಬರು... Continue Reading →

‘ಶ್ರೀ ರಾಮ ಸೇನೆಯ ಕಪಿ ಚೇಷ್ಟೆ’- ಮುಂದುವರಿದ ಚರ್ಚೆ…

      ಶ್ರೀ ರಾಮ ಸೇನೆಯ ‘ಕಪಿ ಚೇಷ್ಟೆ’ ಕುರಿತ ಚರ್ಚೆಯನ್ನು ಗೆಳೆಯರು ಮುಂದುವರೆಸಿದ್ದಾರೆ. ಇಂಥ ಸಂಗತಿಗಳನ್ನು ಈ ಹೊತ್ತಲ್ಲೇ ವಿರೋಧಿಸದೆ ಉಳಿದರೆ ಪರಿಸ್ಥಿತಿ ಕೈ ಮೀರಿದ ನಂತರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸುಮ್ಮನೆ ಉಳಿದ ದೋಷ ನಮ್ಮದೇ ಆಗುವುದು. ಮಂಗಳೂರಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಕೇಳಿಪಟ್ಟೆ. ಹಾಗೆಯೇ ಕೆಲವು ಮಂದಿ ಬಂದ್ ಗೆ ಸಹಕರಿಸದಂತೆ ಚಿತಾವಣೆ ನಡೆಸುತ್ತಿರುವುದೂ ತಿಳಿದಿದೆ. ಇಲ್ಲಿಯೂ ಕೂಡ ರಾಜಕಾರಣವನ್ನು ಎಳೆದು ತರುತ್ತಿರುವ ಮನಸ್ಸುಗಳ ಅಸ್ವಸ್ಥತೆಯ ಬಗ್ಗೆ ಅನುಕಂಪ ಮೂಡುತ್ತಿದೆ.... Continue Reading →

ಶ್ರೀ ರಾಮ ಸೇನೆಯ ‘ಕಪಿ ಚೇಷ್ಟೆ!’

ಪ್ರಜಾಪ್ರಭುತ್ವವಿರುವ ಈ ಹೊತ್ತಿನಲ್ಲೂ ಹೀಗೆ ಯಾವುದೋ ಒಂದು ಪಡೆ ತನಗೆ ಸೇರದೇ ಹೋಗುವ ಸಂಗತಿಯನ್ನ ಈ ಪರಿಯ ಹಿಂಸೆಯ ಮೂಲಕ ವಿರೋಧಿಸತ್ತೆ ಅಂದ್ರೆ, ಪ್ರಜಾಪ್ರಭುತ್ವ ಯಾಕೆ ಬೇಕು? ಈ ಜನರಿಗೆ ಸಂಸ್ಕೃತಿ ರಕ್ಷಣೆಯ ಗುತ್ತಿಗೆ ಕೊಟ್ಟವರಾದರೂ ಯಾರು? ಇದು ರಾಮಸೇನೆಗೆ ಮಾತ್ರ ಹೇಳುತ್ತಿರುವ ಮಾತಲ್ಲ. ಇದು, ಶಿವಸೇನೆಗೂ ಅನ್ವಯವಾಗುವಂಥದ್ದು, ಕ.ರ.ವೇ ಗೂ ಅನ್ವಯವಾಗುವಂಥದ್ದು. ಧರ್ಮಾಂಧತೆಯಷ್ಟೇ ಭಾಷಾಂಧತೆ- ರಾಷ್ಟ್ರಾಂಧತೆಗಳೂ ಅಪಾಯಕಾರಿ.  ಈ ಘಟನೆ ಕುರಿತು ಬರೆದಿರುವ ಇತರ ಬ್ಲಾಗ್ಗೆಳೆಯರು: ಸಂಕೇತ್, ದಾರಾಶಿಕೋ, ಟೀನಾ. ಈ ಬ್ಲಾಗುಗಳಲ್ಲಿ ನಾವು ಚರ್ಚಿಸಬಹುದಾದ ಬೇರೆ... Continue Reading →

ಬಂಗಾಳ, ಸುಭಾಶ್ ಮತ್ತು ಎಮಿಲೀ ಶೆಂಕೆಲ್

ನನಗೆ ಬಂಗಾಳ ಇಷ್ಟವೆನ್ನುವ ನನ್ನ ಮಾತು ಕೇಳೀ ಕೇಳೀ ನಿಮಗೆ ಬೋರ್ ಬಂದಿರಬಹುದು. ಆದರೆ ನಾನಂತೂ ಹೇಳಿ ದಣಿದಿಲ್ಲ. ಹೌದು... ನನಗೆ ಬಂಗಾಳ ಇಷ್ಟ. ಯಾಕೆಂದರೆ, ಆಮೇಲೆ ವಿಶ್ವಮಾನವನಾಗಿ ಬೆಳೆದ ಸ್ವಾಮಿ ವಿವೇಕಾನಂದರು ಅಲ್ಲಿ ಹುಟ್ಟಿದವರು. ಪರಮಹಂಸ, ಶಾರದಾ ದೇವಿ, ಅರಬಿಂದೋ ಕೂಡಾ ಅಲ್ಲಿಯವರು. ಶಚೀಂದ್ರನಾಥ, ರಾಸ್ ಬಿಹಾರಿ, ಭಾಗಾ ಜತೀನನಂಥ ಕ್ರಾಂತಿಕಾರಿಗಳ ಹುಟ್ಟೂರು ಅದು. ನಿವೇದಿತಾ, ಸಾರಾ ಬುಲ್ ಮೊದಲಾದ ವಿದೇಶೀ ಹೆಣ್ಣುಮಕ್ಕಳು ನಮ್ಮವರೇ ಆಗಿ ನಮ್ಮನ್ನು ಪ್ರೀತಿಸಿದ ನೆಲ ಅದು. (ಇವ್ರೆಲ್ಲ ನಾನು ತುಂಬಾ ಮೆಚ್ಚಿಕೊಂಡಿರುವ,... Continue Reading →

ನೆಚ್ಚಿನ ಕವಿತೆಯ ಮತ್ತೊಂದು ಅನುವಾದ…

ಅರೆ! ಖುಶಿಯಾಗ್ತಿದೆ... ಮತ್ತೊಬ್ಬರು ನೆರೂದನ ಕವಿತೆಯ ಅನುವಾದ ಮಾಡಿದ್ದಾರೆ, ಮತ್ತು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ!! ‘ಕೂಗು’ ಬ್ಲಾಗಿನ ಚಂದಿನ ಕೂಡ ’Tonight I can Write the Saddest Lines ಕವಿತೆಯ ಅನುವಾದ ಮಾಡಿ ಪೋಸ್ಟ್ ಮಾಡಿದ್ದಾರೆಂದು ಇದೀಗ ಗೊತ್ತಾಯ್ತು.  ಅನುವಾದ ನನಗೆ ಬಹಳ ಹಿಡಿಸಿತು. ಇದನ್ನ ನೀವೂ ಒಮ್ಮೆ ಓದಿ ನೋಡಲೇಬೇಕು... ಹೆಲೋ... ಮತ್ಯಾರಾದ್ರೂ ಇದ್ದಾರಾ? ದಯವಿಟ್ಟು ನಿಮ್ಮ ಅನುವಾದಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ... ನಾನಂತೂ ಅಕ್ಕರೆಯಿಂದ ಕಾಯ್ತಿರ್ತೇನೆ...

Blog at WordPress.com.

Up ↑