ಬಹುಶಃ ಇದನ್ನ ಕೆಟ್ಟ ಕುತೂಹಲ ಅಂತಲೂ ಅಂತಾರೇನೋ? ಹಾಗೆ ನೋಡಿದರೆ ‘ಸ್ಲಂ ಡಾಗ್... ’ ಮೂವಿಯ ‘ಮೇಕಿಂಗ್’ ಅದ್ಭುತವಾಗಿದೆಯೇ ಹೊರತು ಒಳಗಿನ ಕಥೆ ಬೆರಗಿನದೇನಲ್ಲ. ಅದಕ್ಕೆ ಪ್ರಶಸ್ತಿ ಬಂದಿದ್ದಕ್ಕೇ ಬಹುಶಃ ಇಷ್ಟೆಲ್ಲ ಚರ್ಚೆಯಾಗ್ತಿರೋದು ಅಂತ ಅನಿಸುತ್ತೆ ಈಗಲೂ. ಈಗಾಗಲೇ ಸಾಂಗತ್ಯದಲ್ಲಿ ಈ ಕುರಿತು ನಡೆದ ಉತ್ತಮ ಚರ್ಚೆಗಳನ್ನು ನೋಡಿಯಾಗಿದೆ. ಚರ್ಚೆ ಇನ್ನೂ ನಡೆಯುತ್ತಲೇ ಇದೆ. ಈಗ ಮ್ಯಾಜಿಕ್ ಕಾರ್ಪೆಟ್ ಈ ಸಿನೆಮಾದ ಕುರಿತ ಸಂವಾದವನ್ನು ಆಯೋಜಿಸುತ್ತಿದೆ. ಪರಮೇಶ್ವರ ಗುರುಸ್ವಾಮಿ ಅವರು ಮುಖ್ಯವಾಗಿ ಇದರಲ್ಲಿ ಪಾಲ್ಗೊಳ್ಳುವವರಿದ್ದಾರೆ. ವಿವರಗಳಿಗಾಗಿ ಇಲ್ಲಿ... Continue Reading →
‘ಸ್ಲಂ ಡಾಗ್…’ ವಾದ, ವಿವಾದ ಮತ್ತು ಸಂವಾದ
ಸಿನೆಮಾ ಕುರಿತ ಸಂವಾದಕ್ಕೆಂದು ಆರಂಭವಾದ ಬ್ಲಾಗ್ ಇಷ್ಟು ವ್ಯಾಪಕವಾಗಿ ಬೆಳೆಯುತ್ತದೆ ಮತ್ತು ಇಷ್ಟು ಗಂಭೀರವಾಗಿ ಮುಂದುವರೆಯುತ್ತದೆ ಎಂದು ಖಂಡಿತ ಅಂದುಕೊಂಡಿರಲಿಲ್ಲ. ಇದಕ್ಕಾಗಿ ನಮ್ಮ ‘ಸಾಂಗತ್ಯ’ದ ಗೆಳೆಯರಿಗೆ ಅಭಿನಂದನೆ ಹೇಳಲೇಬೇಕು. ಸದ್ಯಕ್ಕೆ ಚರ್ಚೆಯಲ್ಲಿರುವ ಸಿನೆಮಾ ‘ಸ್ಲಂ ಡಾಗ್ ಮಿಲಿಯನೇರ್’. ಈ ಸಿನೆಮಾ ಕುರಿತ ವಾದ- ಪ್ರತಿವಾದಗಳ ನಡುವೆಯೂ, ಸಿನೆಮಾ ಅತ್ಯುತ್ತಮವಾಗಿ ಚಿತ್ರಿತವಾಗಿದೆ, ವಾಸ್ತವತೆಯಿಂದ ಕೂಡಿದೆಯಾದರೂ ಪ್ರಶಸ್ತಿ ದೊರೆತುದರ ಹಿಂದೆ ಏನಾದರೊಂದು ಲಾಬಿ ಇದ್ದೇಇದೆ ಎನ್ನುವುದು ನನ್ನ ಅನಿಸಿಕೆ. ಹಾಗಂತ ಉಳಿದವರ ಮಾತುಗಳನ್ನ ಸಾರಾಸಗಟು ತಿರಸ್ಕರಿಸುತ್ತೇನೆಂದಲ್ಲ. ಹಾಗೆ ಮಾಡಲು ಸಾಧ್ಯವೂ... Continue Reading →
ಸಂಕೋಚದಿಂದಲೇ….
ಹೌದಲ್ಲ? ನಾನೂ ನೆರೂದನ ಕವಿತೆ ಅನುವಾದ ಮಾಡಿದೀನಿ ಅಂತ ಹೇಳ್ಕೊಂಡು ಅದನ್ನ ಹಾಕದೆ ಹೋದರೆ ತಲೆತಪ್ಪಿಸ್ಕೊಂಡ ಹಾಗೆ ಆಗುತ್ತೇನೋ? ಅದಕ್ಕೇ, ಸಂಕೋಚದಿಂದಲೇ ಇಲ್ಲಿ ಹಾಕ್ತಿದೇನೆ. ಈಗಾಗಲೇ ಟೀನಾ ಮತ್ತು ಮಹೇಶ್ ಅನುವಾದಗಳನ್ನ ಓದಿದೀರಲ್ಲ? ನಿಮ್ಮಲ್ಲೂ ಯಾರಾದರೂ ಇದೇ ಕವಿತೆಯನ್ನ ಅನುವಾದಿಸಿದ್ದರೆ ದಯವಿಟ್ಟು ನಮ್ಮ ಜೊತೆ ಹಂಚಿಕೊಳ್ಳಿ. ನಿಸಾರರು ಮಾಡಿರುವರೆಂದು ಕೇಳಿದ್ದೇನೆ. ಯಾರಲ್ಲಾದರೂ ಅದರ ಪ್ರತಿ ಇದ್ದರೆ ಪೋಸ್ಟ್ ಮಾಡಬೇಕೆಂದು ವಿನಂತಿ. ಇಂದಿನಿರುಳು ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ... ಇಂದಿನಿರುಳು ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ.... Continue Reading →
ನೆರೂದನ ಒಂದು ಕವಿತೆ…
ಪ್ಯಾಬ್ಲೋ ನೆರೂದ... ಬಹಳ ಹಿಂದೆ ನನಗೆ ಇಂಗ್ಲಿಶ್ ಕವಿತೆಗಳ ಗುಚ್ಛ ಸಿಕ್ಕ ಹೊತ್ತಿನಲ್ಲಿ ಈತ ಅದೆಷ್ಟು ಜನಪ್ರಿಯ ಮತ್ತು ಅದೆಷ್ಟು ಮುಖ್ಯ ಅನ್ನುವ ಅರಿವು ಇರಲಿಲ್ಲ. ಆಗೆಲ್ಲ ನನಗೆ ಅನುವಾದ ಮಾಡಿಟ್ಟುಕೊಳ್ಳುವ ಹುಚ್ಚು. ಹಾಗೆಂದೇ ಆ ಪುಸ್ತಕದ ಕೆಲವು ಕವಿತೆಗಳನ್ನ ಅನುವಾದ ಮಾಡುವ ಸಾಹಸಕ್ಕೆ ಕೈಹಾಕಿದೆ. ಅದರಲ್ಲಿ ನನಗೆ ನೆರೂದನ ಕವಿತೆ ಬಹಳ ಬಹಳ ಇಷ್ಟವಾಗಿಬಿಟ್ಟಿತ್ತು. ಮನಸಿಗೆ ತೋಚಿದ ಹಾಗೆ, ನನ್ನ ಖುಷಿಗೆ ಅನುವಾದ ಮಾಡಿಟ್ಟುಕೊಂಡೆ. ಇದು, ಆರೇಳು ವರ್ಷದ ಹಿಂದಿನ ಮಾತಿರಬಹುದು. ಕಳೆದ ವರ್ಷ ಒಂದು... Continue Reading →
ಭಾನುವಾರದ ಸಾಕ್ಷಿಯಾಗಿ… ಸುಳ್ಳಲ್ಲ!
ಭಾನುವಾರದ ಸಾಕ್ಷಿಯಾಗಿ ಹೇಳುತ್ತೇನೆ ಕೇಳು, ವಾರವೆಲ್ಲ ಹೀಗೇ ಇದ್ದರೆಷ್ಟು ಚೆಂದ! ಅಂದುಕೊಂಡಿದ್ದು ಸುಳ್ಳಲ್ಲ. ಥರ ಥರದ ತರಕಾರಿ, ಹೊಸ ರುಚಿಯ ಬುಕ್ಕು, ಮಜ ಮಜದ ಸೀರಿಯಲ್ಲು, ಸಂಜೆ ಶಾಪಿಂಗು ನೀ ಬರುವ ಹೊತ್ತಲ್ಲಿ (ಮಲ್ಲಿಗೆ ಮುಡಿಯಲಾರೆ ಅಲರ್ಜಿ!) ಹೊಸಿಲಲ್ಲಿ ನಿಂತು ನಾಚುವುದೆಷ್ಟು ಚೆಂದ! ಅಂದುಕೊಂಡಿದ್ದು ಸುಳ್ಳಲ್ಲ. ಫೋನಲ್ಲಿ ಗಂಟೆ ಗಂಟೆ ಹರಟುವುದು ನೀ ಬಿಲ್ಲು ನೋಡಿ ಬಯ್ಯುವುದು, ಹಗೂರ ಹೆಜ್ಜೆಯಲಿ ಬಂದು ಹ್ಯಾಂಗರಿನ ಷರಟಿಂದ ನೋಟು ಕದಿಯುವುದು, ಲೆಕ್ಕ ತಪ್ಪುವ ನಿನ್ನ ಕೆನ್ನೆಗೊಂದು ಚಿವುಟಿ ನೂರೊಂದು ಕಥೆ... Continue Reading →
ಏನೋ ಬರೆಯಲು ಹೋಗಿ…
ಕವಿತೆ ಬರೆಯುವಾಗ, ಕವಿತೆ ಬಿಡಿ, ಏನನ್ನೇ ಬರಿಯುವಾಗಲೂ ಶುರು ಮಾಡುವಾಗಲೇ ಒಂದು, ಮುಗಿಸುವಾಗಲೇ ಮತ್ತೊಂದು ಆಗಿಬಿಟ್ಟಿರುತ್ತದೆ. ನನ್ನ ಪಾಲಿಗಂತೂ ಅದು ಯಾವತ್ತೂ ಹಾಗೇ ಆಗೋದು. ಪದ- ಸಾಲುಗಳಿರಲಿ, ಕೆಲವು ಸಾರ್ತಿ ಭಾವವೇ ಬದಲಾಗೋದಿದೆ. ಅಥವಾ, ಮತ್ತೆ ಕೆಲವು ಸಾರ್ತಿ ಕವಿತೆ ಪೂರ್ತಿ ಬರೆದಾದ ಮೇಲೆ ಅದನ್ನ ಮೊದಲಿಗಿಂತ ಬೆರೆಯದೇ ಆಗಿ ತಿದ್ದುವುದಿದೆ. ನಾನ್ಯಾಕೆ ಹೀಗೆಲ್ಲ ಪರದಾಡ್ತೇನೆ ಅಂತ ತಲೆಕೆರ್ಕೊಳ್ಳುವಾಗ ಮಹೇಶ ‘ನಾನೂ ನಿನ್ನ ಹಾಗೊಬ್ಬನಿದ್ದೇನೆ’ ಅಂತ ಸಮಾಧಾನ ಮಾಡಿದ್ದಾನೆ. ಆಮೇಲೆ ನೋಡ್ತಾ ಹೋದರೆ, ಬಹುತೇಕ ಜನರೆಲ್ಲ ಹಾಗೇ... Continue Reading →
ಜನವರಿ ೧೪- ೨೦೦೮ರ ಕವಿತೆ
ನೀ ಹೇಗೆ ಒಂಟಿಯಾಗಿರುವೆ ಅಲ್ಲಿ!? ನೀ ಹೇಗೆ ಒಂಟಿಯಾಗಿರುವೆ ಅಲ್ಲಿ? ಇಲ್ಲಿ, ಒಂದೆ ಸಮನೆ ಇಬ್ಬನಿ ಸುರಿಯುತ್ತಿದೆ ನನ್ನೆದೆಗೆ ಭಗ್ಗೆನ್ನಲು ವಿರಹದುರಿ ನೀನಿಲ್ಲದೆ ಈ ಬಾರಿ ವಿಪರೀತ ಚಳಿ ರಗ್ಗು- ರಝಾಯಿಗಳ ಕೊಡವುತ್ತಿದ್ದೇನೆ, ಬಿಸಿಯುಸಿರನಷ್ಟು ಕಳಿಸಿಕೊಡು ಬೇಗ! ಹೊರಗೆ ಯಾರೋ ಇಬ್ಬರು ಪ್ರೇಮಿಗಳ ಜಗಳ. ಹೌದು ಬಿಡು, ಹುಡುಗಿಯರ ಕೂಗಾಟವೆ ಹೆಚ್ಚು! ನೀ ಛೇಡಿಸಿದ ನೆನಪು. ಊಟದ ಟೇಬಲ್ಲಿನ ಮೇಲೆ ಅರ್ಧ ಬರೆದಿಟ್ಟ ಕವಿತೆ, ಮಂಚದ ಮೇಲೆ ಕುಂತು ಕುಡಿದಿಟ್ಟ ಕಾಫಿ ಬಟ್ಟಲು ಹಾಗೇ ಇವೆ ಮನೆಯಲ್ಲಿ... Continue Reading →
ಕಥೆಯ ದಿನದಲ್ಲೊಂದು ಬೆಳಗು
ಕೌಸಲ್ಯಾ ಸುಪ್ರಜಾ ರಾಮ ಪೂರ್ವಾ ಸಂಧ್ಯಾ ಪ್ರವರ್ತತೇ... ಬಡ್ಕೊಳ್ತಲೇ ಇದೆ ಅಲರಾಮು. ಈ ಹೊಸ ಹ್ಯಾಂಡ್ ಸೆಟ್ ಕೊಂಡಾಗಿಂದ ಇದನ್ನೇ ಅಲರಾಮ್ ಟೋನ್ ಮಾಡ್ಕೊಂಡಿದಾನೆ. ಬೆಳಬೆಳಗಿನ ಸುಪ್ರಭಾತ ಕೇಳುವಾಗೆಲ್ಲ ಅವನಿಗೆ ಐದು ಗಂಟೆಗೆ ಎದ್ದು ಬಾಗಿಲಿಗೆ ನೀರು ಹಾಕ್ತಿದ್ದ ಅಮ್ಮನ ನೆನಪು. ಇತ್ತೀಚೆಗೆ ಅವನು ಅಮ್ಮನ್ನ ನೆನೆಸ್ಕೊಳ್ಳೋದು ಜಾಸ್ತಿಯಾಗಿದೆ. ಅಲಾರಮ್ಮು ಸ್ನೂಜ್ ಮಾಡಿ ಮತ್ತೈದು ನಿಮಿಷ ಹೊರಳಾಡಿದವನು ಏಳಲೇಬೇಕಾದ ಅನಿವಾರ್‍ಯತೆಗೆ ಗೊಣಗುತ್ತಲೇ ಎದ್ದು ಕುಂತ. ಚಳಿಗಾಲ ಬೇರೆ. ತಾನೆದ್ದ ಅದೆಷ್ಟೋ ಹೊತ್ತಿನ ಮೇಲೆ ಕಾಣಿಸ್ಕೊಳ್ತಾನೆ ಸೂರ್ಯ. ಸೂರ್ಯನ... Continue Reading →
ಒಂದು ಋತ್ವಿಕ್ ಘಟಕ್ ಸಿನೆಮಾ
ಮೊದಲೇ ಬಂಗಾಳದ ಆಕರ್ಷಣೆ. ಸಾಲದಕ್ಕೆ ಋತ್ವಿಕ್ ಘಟಕ್ ಸಿನೆಮಾ... ಇವರ ಸಿನೆಮಾಗಳಲ್ಲಿ ನಾನು ನೊಡಿರೋದು ಎರಡೇ. ಒಂದು, ಜುಕ್ತಿ ಟಕ್ಕೋ ಆರ್ ಗಪ್ಪೋ. ಮತ್ತೊಂದು ಮೇಘೇ ಡಕ್ಕೆ ತಾರಾ. ಈ ಎರಡನೆಯದ್ದನ್ನ ನೋಡಿ ಜಮಾನಾ ಕಳೆದಿದೆ. ಹೈಸ್ಕೂಲಿನ ದಿನಗಳಲ್ಲಿ ನೋಡಿದ್ದ ನೆನಪು. ಆದರೂ ಈ ಸಿನೆಮಾಗಳು ನನ್ನನ್ನ ತಟ್ಟಿದ ಪರಿ ಹೇಳಲಿಕ್ಕೆ ಬಾರದು. ಆದರೂ ತಕ್ಕ ಮಟ್ಟಿಗೆ ಬರೆಯುವ ಯತ್ನ ಮಾಡಿದ್ದೇನೆ. ಅದು ಹೀಗಿದೆ... ~ ಜುಕ್ತಿ, ಟಕೋ ಆರ್ ಗಪ್ಪೋ. ಅಂದರೆ- ಕಾರಣ, ವಾದ, ಮತ್ತು ಕಥೆ.... Continue Reading →
‘ಸಾಂಗತ್ಯ’ದ ಸಂಗಾತ…
ದಿನಾಂಕ ೨.೧.೨೦೦೯ರ ರಾತ್ರಿ ಒಂಭತ್ತೂವರೆಗೆ ಮನೆಯಿಂದ ಹೊರಟ ನಾನು, ಟೀನಾ ಒಂಭತ್ತೂ ಐವತ್ತಕ್ಕೆ ಮೆಜಸ್ಟಿಕ್ ಸೇರಿ, ಸ್ವಲ್ಪ ಹೊತ್ತಿಗೇ ಬಂದುನಿಂತಿದ್ದ ಬಿಳಿಯ ಬಸ್ಸನ್ನ ಮಹರಾಯನೊಬ್ಬ ‘ಚಿಕ್ ಮಗ್ಳೂರ್ ಬಸ್ಸು’ ಅಂದು, ನಾವು ಆಸುಪಾಸಿನ ಜನರನ್ನ ‘ಇವ್ರೂ ಕುಪ್ಪಳ್ಳಿಗೆ ಹೊಂಟವರಿರಬೇಕು’ ಅಂತ ಗುಮಾನಿ ಕಣ್ಣಲ್ಲಿ ನೋಡುತ್ತ ಗಾಸಿಪ್ ಮಾಡ್ಕೊಂಡು ಕುಂತಿರುವಾಗ ಇದ್ದಕ್ಕಿದ್ದ ಹಾಗೇ ಟೀನಾ ತಲೆಮೇಲೆ ಬೋಧಿವೃಕ್ಷ ಚಿಗುರಿ, ‘ಮತ್ತೊಂದ್ಸಲ ವಿಚಾರಿಸ್ಕೊಂಡ್ ಬಾರೇ’ ಅಂದು, ನಾನು ಹೋಗಿ ಕೇಳಲಾಗಿ ಅದೇ ಬಿಳಿ ಬಸ್ಸು ಕುಪ್ಪಳ್ಳಿಗೆ ಹೋಗೋದು ಗ್ಯಾರಂಟಿಯಾಗಿ, ನಮ್ಮ... Continue Reading →
