ನೋವಿನ ನದಿ ಹರಿಸಿ ಧರ್ಮದ ತೆಪ್ಪದಲ್ಲಿ ದಡ ಸೇರಲು ಬಯಸಿದ್ದಾರೆ! ತೊಟ್ಟಿಕ್ಕಿದ ನೋವು ಮಣ್ಣಲ್ಲಿ ಬೆರೆತು ಕೆಂಪಾಗಿದೆ... ಈ ಹಾಯ್ಕುವನ್ನು ಸ್ನೇಹಿತರಾದ ಡಾ.ರವೀಂದ್ರನಾಥ್ ಕಳುಹಿಸಿಕೊಟ್ಟಿದ್ದು. ಆಗವರು ನ್ಯೂಸ್ ನೋಡುತ್ತ ಕುಳಿತಿದ್ದರು. ಅದರಲ್ಲಿ ಏನು ಬರುತ್ತಿತ್ತೆನ್ನುವುದನ್ನು ಹೇಳಬೇಕಿಲ್ಲ ಅಲ್ಲವೆ? ~ ಹೀಗೆ ನೆನ್ನೆಯಿಡೀ ಹರಿದಾಡಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ರೋಷದ, ವಿಷಾದದ, ಹತಾಶೆಯ, ಸೇಡಿನ, ದ್ವೇಷದ, ಆತಂಕದ, ವಿಡಂಬನೆಯ.... ಒಂದೇ ಎರಡೇ? ಈ ಮೆಸೇಜುಗಳಲ್ಲಿ ಎರಡು ಹೀಗಿವೆ: 1. Pass it on... " Forgiving the terrorists is... Continue Reading →
ಬದಲಾದ ನನ್ನೂರು… ಬಯಲಾದ ನಾನು.
ಊರಿಗೆ ಹೋಗ್ಬೇಕು... ಹಾಗಂದಕೂಡಲೆ, ಸಂಭ್ರಮ ಮತ್ತು ವಿಷಾದಗಳೆರಡೂ ನನ್ನ ಆವರಿಸ್ಕೊಂಡು ಬಿಡುತ್ತೆ. ಎಷ್ಟೋ ಬಾರಿ ಊರಿಗೆ ಹೋಗಬೇಕಾದಾಗಲೆಲ್ಲ ಏನಾದರೊಂದು ನೆವ ತೆಗೆದು ಅದನ್ನ ತಪ್ಪಿಸಿಕೊಂಡು ಕುಂತಿದ್ದೂ ಇದೆ. ಇದೆಂಥ ಪಲಾಯನವೋ.. ಗೊತ್ತಾಗದೆ ಸುಮ್ಮನುಳಿದಿದ್ದೇನೆ. ನಾನ್ಯಾಕೆ ಚೇತನಾ ಹೆಸರಿನ ಜೊತೆ ತೀರ್ಥಹಳ್ಳಿಯನ್ನ ಅಂಟಿಸ್ಕೊಂಡೆ? ಚೇತನಾ ಬೆಂಗಳೂರು ಅನ್ನುವ ಹೆಸರು ಅಷ್ಟೇನೂ ಆಕರ್ಷಕವಾಗಿ ಕಾಣುವುದಿಲ್ಲವೆಂದೇ? ತೀರ್ಥಹಳ್ಳಿಯೆಂಬ ಹೆಸರಿಂದಲಾದರೂ ಒಂದಷ್ಟು ಜನ ನನ್ನ ಗಮನಿಸಲೆಂದೇ? ಅಥವಾ, ಹಳೆಯ ಐಡೆಂಟಿಟಿ ಕಳಚಲೆಂದು ಅಂದುಕೊಂಡರೂ, ನಾನು ಪೂರ್ತಿ ಕಳೆದುಹೋಗಿಬಿಡಬಾರದೆಂಬ ಎಚ್ಚರಿಕೆಯಿಂದಲೇ? ಇವನ್ನೆಲ್ಲ ಯೋಚಿಸುತ್ತ ಇದ್ದರೆ... Continue Reading →
‘ಮತ್ತೊಬ್ಬ ಗೆಳೆಯ’ನ ಪರಿಚಯ
ಮತ್ತೊಬ್ಬ ಗೆಳೆಯನ ಕವಿತೆ ಮೆಚ್ಚಿದವರಿಗೆ ಸಿದ್ಧು ದೇವರಮನಿಯ ಪರಿಚಯ ಇಲ್ಲಿದೆ. ಓದಿರದವರಿಗೂ... ನನಗೆ ಸಿದ್ಧು ಪರಿಚಯವಾಗಿದ್ದು ಒನ್ ಅಂಡ್ ಓನ್ಲಿ ಹಂಗಾಮಾದ ಮೂಲಕ. ಅದೊಂದು ಪುಟ್ಟ ಪತ್ರಿಕೆಯ ಮೂಲಕ ನನಗಾದ ಲಾಭವದೆಷ್ಟೋ!? ಆ ಮೂಲಕ ಪರಿಚಯವಾದವರು ವೆಂಕಟ್ರಮಣ ಗೌಡ, ಜಿ.ಎನ್.ಮೋಹನ್, ಸಿದ್ಧು ದೇವರಮನಿ ಮತ್ತು ಅರುಣ್ ಜೋಳದಕೂಡ್ಲಿಗಿ. ಅಷ್ಟೇ ಅಲ್ಲ, ಸುಮಾರು ಐದಾರು ವರ್ಷ ಕಳೆದುಹೋಗಿದ್ದ ಮತ್ತೊಬ್ಬ ಗೆಳೆಯ ವಿಕ್ರಮ್ ವಿಸಾಜಿಯನ್ನು ಹುಡುಕಿಕೊಟ್ಟಿದ್ದೂ ಇದೇ ಹಂಗಾಮಾ. ಈ ಸಿದ್ಧು ಎನ್ನುವ ಪುಣ್ಯಾತ್ಮನನ್ನು ನಾನು ನಾನು ನೋಡಿಲ್ಲ. ಪಕ್ಕಾ... Continue Reading →
ಮತ್ತೊಬ್ಬ ಗೆಳೆಯನ ಕವಿತೆ…
ಬೆಂಗಳೂರಿಗೆ ದೂರವೆನಿಸುವ ಬಳ್ಳಾರಿಯ ಕೊಟ್ಟೂರಿನಲ್ಲೊಬ್ಬ ಗೆಳೆಯನಿದ್ದಾನೆ. ಹೆಸರು, ಸಿದ್ಧು ದೇವರಮನಿ. ಗೆಳೆತನದ ವಿಶೇಷವೆಂದರೆ, ಅವನು ಗಾಢವಾದ ಕವಿತೆಗಳನ್ನ ಬರೀತಾನೆ, ಮತ್ತು ಅದರಿಂದಲೇ ನನಗೆ ಪರಿಚಿತನಾಗಿದ್ದಾನೆ. ಬರಹ ನನಗೆ ಏನು ಕೊಟ್ಟಿದೆ? ಅಂತ ಕೇಳಿದರೆ ಹೊಟ್ಟೆಬಟ್ಟೆಗಿಂತಲೂ ಹೆಚ್ಚಾಗಿ ಸಾಕಷ್ಟು ಗೆಳೆಯರನ್ನು ಕೊಟ್ಟಿದೆ ಎಂದು ತುಂಬು ಮನಸಿನಿಂದ ಹೇಳಿಕೊಳ್ತೇನೆ. ಅಂತಹ ಕೆಲವು ಖುಷಿಖುಷಿಯ ಗೆಳೆಯರಲ್ಲಿ ಈತನೂ ಒಬ್ಬ. ಅಲ್ಲದೆ, ನನ್ನನ್ನು ‘ಗಾನಾ’ ಎಂದು ಕರೆಯುವ ಕೆಲವೇ ಮಂದಿಯಲ್ಲೊಬ್ಬ. ಸಿದ್ಧು ದೇವರಮನಿಯ ಕವಿತೆಗಳಲ್ಲಿ ನನಗಿಷ್ಟವಾದ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಇಲ್ಲಿ... Continue Reading →
ಪುಸ್ತಕ ಸಂತೆಯಲ್ಲಿ ಸಿಕ್ಕ ನೀಲಾ ಮೇಡಮ್
ಅದು ನೀಲಾ ಮೇಡಮ್ ಕಥೆ. ಅದೇ, ಅಮ್ಮ ಇಲ್ಲದ ಹುಡುಗಿ... ಮದುವೆಯಾದ ಹೊಸತರಲ್ಲೆ ಗಂಡನ್ನ ಕಳಕೊಂಡು ಅಪ್ಪನ ಮನೆ ಸೇರಿದ ಹುಡುಗಿ... ಚೆನ್ನಾಗಿ ಓದು ಬರಹ ಕಲಿತು, ನೀಲಾಳಿಂದ ನೀಲಾ ಮೇಡಮ್ ಆದ ಹುಡುಗಿ. ಅಪ್ಪನೂ ಇಲ್ಲವಾಗಿ, ಮತ್ತೆ ಒಬ್ಬಂಟಿಯಾದ ಹುಡುಗಿ. ತಮ್ಮನ್ನ ಓದಿಸಲಿಕ್ಕೆ ಕವಡೆಕಟ್ಟಿಕೊಂಡು ದುಡಿದ ಹುಡುಗಿ. ಟೀಚರ್ ಆಗಿದ್ದಾಗಲೇ ನಾಟಕದ ಪಾತ್ರವಾಗಿದ್ದ ಅರ್ಜುನನ್ನ ಮೋಹಿಸಿ, ಊರು ಬಿಟ್ಟು, ಕೇರಿ ಬಿಟ್ಟು, ಜಾತಿ ಬಿಟ್ಟು, ತಮ್ಮನ್ನೂ ಬಿಟ್ಟು ಮದುವೆಯಾದ ಹುಡುಗಿ. ಅರ್ಜುನ ಕುಡಿದು ಅವಾಂತರ ಮಾಡಿದ... Continue Reading →
ಎಲ್ರಿಗೂ ಥ್ಯಾಂಕ್ಸ್…
ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ… ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ. ಎಲ್ರಿಗೂ ಥ್ಯಾಂಕ್ಸ್... ಈ ಮೇಲಿನ... Continue Reading →
ಶ್ವೇತಾಳ ಸಂಕಟಕ್ಕೆ ಪರಿಹಾರವಿದೆಯೇ?
ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ... ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ. ವಂದೇ, ಚೇತನಾ ತೀರ್ಥಹಳ್ಳಿ.
ಇದು ಹುಡುಗರ ‘ಸಡಗರ’
ಸುಮಾರು ಒಂದೂವರೆ- ಎರಡು ವರ್ಷದ ಹಿಂದಿನ ಮಾತು. ಯಾವುದೋ ಕಾರ್ಯಕ್ರಮ ಮುಗಿಸ್ಕೊಂಡು ಬಂದ ಅಣ್ಣ, “ಇದು ನೋಡು, ಹುಡುಗರು ಸೇರಿ ಮಾಡ್ತಿರೋ ಹೊಸ ಪತ್ರಿಕೆ. ಅದ್ರಲ್ಲೂ ಇಂಜಿನಿಯರಿಂಗ್ ಸ್ಟೂಡೆಂಟ್ಸು" ಅನ್ನುತ್ತಾ ಒಂದು ಪತ್ರಿಕೆಯ ಹಲವು ಪ್ರತಿಗಳನ್ನ ನನ್ನ ಮುಂದೆ ಹಿಡಿದ. ನಾನು, ಹುಡುಗರು ತಾನೇ, ಒಂದಷ್ಟು ಪ್ರೇಮ ಕಥೆ - ಕಚ್ಚಾ ಕವಿತೆಗಳಿರುತ್ತೆ ಅಂತ ಉಡಾಫೆಯಿಂದ್ಲೇ ತೆಗೆದಿಡಲು ಹೋದೆ. ಅಂವ ಬಿಡದೆ, ‘ಚೆನ್ನಾಗಿದೆ ಕಣೋ, ಒಳ್ಳೆ ಪ್ರಯತ್ನ ಮಾಡಿದಾರೆ’ ಅಂತ ಶಿಫಾರಸು ಮಾಡಿದ ಮೇಲೆ, ರಾತ್ರಿಯೂಟದ ಜತೆ... Continue Reading →
ನಿನ್ನ ಗಂಡೆದೆ ಹೀಗೆ…
ನಿನ್ನೆದೆಯಲ್ಲಿ ಮುಖವಿಟ್ಟಾಗ ಒಳಗೆಲ್ಲ ಏನೊ ಅರಳಿದ ಸದ್ದು. ನಿದ್ದೆಯ ಮಗು ನಕ್ಕ ಹಾಗೆ, ಹಾಗೇ ಸಣ್ಣ ನಿರುಮ್ಮಳ. ಕೂದಲ ನಡುವೆ ಬೆರಳು ತೂರಿ ನೀ ತಲೆಯನುಜ್ಜುವಾಗ ಸಾವಿರ ದಳದ ಮೊಗ್ಗು ಬಿರಿದು, ಸಹಸ್ರಾರ ಚಟಪಟ. ಜಗದ ಬೆರಗು ಹರಿಯುವಂತೆ ತುಳುಕುತ್ತ ನಗುವ ನಿನ್ನ ಗಂಡೆದೆ ಹೀಗೆ, ಅಮ್ಮನ ತೊಡೆಯ ಹಾಗೆ…
ಸುಮ್ಮನೆ ನೋಡಿದ ಸಿನೆಮಾಗಳು
ಕಳೆದೊಂದು ವಾರದಿಂದ ರಜೆ ಮೇಲೆ ರಜೆ ಬಂದು ಸೋಮಾರಿತನದಿಂದ ಮೈ ಮುರೀತಲೇ ಆಫೀಸಿಗೆ ಬಂದ ನನ್ನ ಬಾಯಲ್ಲಿ, ಅಪಸ್ವರದಲ್ಲಿ ಗುನುಗಾಡುತ್ತಿರುವ ಹಾಡು ಯಾವುದು? ಚಲ್ಕೆ ಪಲ್ಕೋಂ ಕೆ ಪೀಚೆ, ಚಲ್ಕ ತನ್ಹ ಆಸೂಂ ಕೊಯಿ....... ಇಕ್ ಮೀಠ ಮರ್ಜ್ ದೇನೆ, ಆನಾ ತುಮ್ ಯೂಂ ಹಿ... ಫಿರ್ ದವಾ ಕ ಕರ್ಜ್ ದೇನೆ, ಆನಾ ತುಮ್ ಯೂಂ ಹಿ.... ಕೇಳಿದೀರಾ ಈ ಹಾಡನ್ನ? ~ ಅದೇನಾಯ್ತು ಅಂದ್ರೆ, ಅಕ್ಟೋಬರ್ ಕೊನೇ ದಿನ ಸಂಜೆ ‘ಮುಂಬಯ್ ಮೇರಿ ಜಾನ್’... Continue Reading →
