ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ?

ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ... ಎಂಟು ವರ್ಷದ ಮಧು ಗಿಟಾರ್ ಬಾರಿಸ್ತಿರೋ ಹಾಗೆ ಪೋಸು ಕೊಟ್ಕೊಂಡು ಹಾಡ್ತಾ ಇದ್ರೆ, ಮುದ್ದಿಸಿ ಹಿಂಡಿ ಹಿಪ್ಪೆ ಮಾಡ್ಬಿಡ್ಬೇಕು ಅನಿಸ್ತಿತ್ತು. ಅದೊಂದು ದೊಡ್ಡ ಮನೆತನ. ನೂರೆಂಟು ಕಚ್ಚಾಟ- ಕಿತ್ತಾಟಗಳ ನಡುವೆಯೂ ಆದಿ ಮನೆಯ ಭದ್ರ ತೇಪೆ. ಹಬ್ಬ ಹರಿದಿನ, ಮದುವೆ ಮುಂಜಿ ಅಂದ್ರೆ ಎಲ್ರೂ ಅಲ್ಲಿ ಸೇರಲೇಬೇಕು. ಊರಗಲ ಹೊಳಪು ಕಣ್ಣೂ, ಮೂಗಿನ ತುದಿ ಮೇಲೆ ಕೋಪ, ಮೊಂಡು ವಾದ ಮತ್ತು ಅಗ್ದಿ ತಲೆ ಹರಟೆ- ಇವು ಆ... Continue Reading →

ಖುಶಿಪಡಲೆರಡು ಸಂಗತಿಗಳು!

 ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು.   ನೆನ್ನೆ ತಾನೆ ಗೆಳತಿಯೊಟ್ಟಿಗೆ ಮಾತನಾಡಿದ್ದೆ. ಈ ಪೂರ್ವಗ್ರಹ ಪೀಡಿತ ಮಂದಿಯೆದುರು ಮಾತಾಡಿ ಉಪಯೋಗವಿಲ್ಲ, ಸದ್ಯಕ್ಕೆ ನನ್ನ ಪಾಡಿಗೆ ನಾನು ಕಥೆ ಕವನದ ಥರದ್ದೇನಾದರೂ ಬರೆದ್ಕೊಂಡು ಇದ್ದುಬಿಡ್ತೇನೆ ಅಂತ. ಬಹುಶಃ ನನ್ನ... Continue Reading →

ವ್ಯವಸ್ಥೆಯ ತಲೆ ಕಡಿದರೆ ಆದರ್ಶ ಚಿಗುರುವುದಂತೆ!

"ಹಂಗಂದ್ರೆ ಹೆಂಗೇ ಅಮ್ಮಿ? ಸುಖಾಸುಮ್ನೆ ಯಾರೋ ಅಡ್ನಾಡಿಗಳು ಕೇಳಿದ್ರು ಅಂತ ಹಂಗೆಲ್ಲ ಮನೆ- ಜಮೀನು ಕೊಟ್ಬಿಡಕ್ಕಾಗ್ತದಾ? ಅದ್ಕೇಯ, ನಾ ನಿಮ್ಮಪ್ಪನ್ ಹತ್ರ ಬಡ್ಕಂಡಿದ್ದು. ಓದ್ಸೋ ಉಸಾಬ್ರಿ ಬೇಕಾಗಿಲ್ಲ, ಸುಮ್ನೆ ನಮ್ಮಣ್ಣನ ಮಗನ ಕೈಲಿ ತಾಳಿ ಕಟ್ಟಿಸ್ಬಿಡಿ ಅಂತ" ಅಮ್ಮ ವಟಗುಡ್ತಿದ್ದಳು. ಹಾಗೆ ಅವಳು ನನ್ನ ಮೇಲೆ ಹರಿಹಾಯೋದಕ್ಕೆ ಕಾರಣವೂ ಇತ್ತು... ಅದೇ ತಾನೆ ನಾನು ಕಾಲೇಜಿಂದ ಮನೇಗೆ ಹೊರಟಿದ್ದೆ. ಈಗ ಇಲ್ಲವಾಗಿರೋ ಆ ಇಬ್ಬರು ಹೆಣ್ಮಕ್ಕಳು ನನ್ನ ದಿಕ್ಕು ತಪ್ಪಿಸಿದ್ದರು. ತಿಳಿಯಾಗಿದ್ದ ನನ್ನ ಮನಸಿಗೆ ಆದರ್ಶಗಳ ಕಲ್ಲೆಸೆದು... Continue Reading →

ಕುಶಲ ವೃತ್ತಾಂತವ ಕೇಳಿರೆ!

ಬಾಗಿಲು ಬಡಿದ ಸದ್ದಿಗೆ ಕೆಲಸದಾಕೆ ಓಡಿ ಬಂದಳು. ನನ್ನ ನೋಡಿ `ತಗಾಳಿ! ಡೆಲ್ಲಿಯಿಂದ ಬರೋದೂ ಅಂದ್ರೆ ಶಿಮಾಗದಿಂದ ಬಂದಷ್ಟ್ ಸುಲೂಭ ಆಗ್ಯದೆ ಈಗ’ ಅಂದು ಸಡಗರಿಸಿದಳು. ಅವಳ ಹಿಂದೆಯೇ ಸೆರಗಿಗೆ ಕೈಯೊರೆಸುತ್ತ ಬಂದ ಅಮ್ಮನ ಮುಖದಲ್ಲೇನೂ ಖುಷಿ ಕಾಣಲಿಲ್ಲ. ಕಾಣೋದಾದರೂ ಹೇಗೆ? ನಾನೊಬ್ಬಳೇ… ಅದೂ ಅಷ್ಟು ದೊಡ್ಡ ಸೂಟ್ ಕೇಸ್ ಹಿಡ್ಕೊಂಡು, ಹೀಗೆ ಹೇಳದೆ ಕೇಳದೆ ಬಂದಿರುವಾಗ!? ಮುಂದಿನದು ಇಲ್ಲಿದೆ...

ಇದನ್ನ ಹೇಳಬಹುದಿತ್ತಾದರೂ ಹೇಗೆ!?

ಡಾರ್ಕ್ ರೂಮ್ ಇದರ ತುಂಬ ಬರೀ ಮಡಚಿಟ್ಟ ಪುಟಗಳೇ. ಈ ರೂಮಿಗೆ ಬೀಗ ಹಾಕಿ, ನಾನೇ ಕೀಲಿ ಕಳೆದು ಹಾಕಿದ್ದೇನೆ. ಹೀಗೆ ಕತ್ತಲಲ್ಲಿ ಕೂಡಿಟ್ಟರೂ ಈ ಕತೆಗಳು ನೂರಾಗಿ, ಸಾವಿರವಾಗಿ, ಕೊಳೆತ ತರಕಾರಿಯ ಮೇಲೆ ಗಿಜಿಗುಟ್ಟುವ ಹುಳಗಳಂತೆ ತೆವಳುತ್ತ ತೆವಳುತ್ತ ಎಲ್ಲೆಲ್ಲೂ ಹರಿದಾಡಿ, ಗೋಡೆಯೊಳ ತೂರಿ, ಇತ್ತಲಿಂದ ಹೊರಬರುತ್ತಿವೆ, ನನ್ನ ಹುರಿದು ಮುಕ್ಕುತ್ತಿವೆ. ...... (ಒಂದು ಹಳೆಯ ಬರಹ)  ಎಲ್ಲರೂ ಕೇಳ್ತಾರೆ. ಮೂವತ್ತು ದಾಟಿದ್ರೂ ಮದುವೆಯತ್ತ ಮನಸ್ಯಾಕೆ ಮಾಡಿಲ್ಲ ಅಂತ. ಈಗಿನ ಕಾಲದಲ್ಲಿ ಮದುವೆಗೆ ಇಂತಿಷ್ಟೇ ವಯಸ್ಸಾಗಿರಬೇಕು... Continue Reading →

ಇಲ್ಲಿ ಸವಾಲ್ ಜವಾಬ್ ನಡೆದಿದೆ…

ಇಲ್ಲಿ ಕವಿತೆಗಳ ಸವಾಲ್ ಜವಾಬ್ ನಡೆದಿದೆ! ಆನಂದ್ ಋಗ್ವೇದಿ ಅವರ ‘ನಿನ್ನ ನೆನಪಿಗೊಂದು ನವಿಲುಗರಿ ಸಾಕು’ ಕವಿತೆಗೆ ಉತ್ತರವೆಂಬಂತೆ ಶಿಶಿರ ಅವರ ‘ಶಾಸ್ತ್ರ’ ಕವಿತೆಯಿದೆ. ಅದಕ್ಕೆ ಸಂವಾದಿಯಾಗಿದೆ, ಪೂರ್ಣಾ ಅವರ ‘ಮೋಸವಾಯಿತೇನೆ ರಾಧೆ!?’ ಕವಿತೆ. ಕನ್ನಡ ಬ್ಲಾಗ್ದಾಣದಲ್ಲಿ ಇದೊಂಥರಾ ಹೊಸ ಪ್ರಯೋಗ. ಆಸಕ್ತಿಯಿದ್ದವರು ಇಲ್ಲೊಮ್ಮೆ ಭೇಟಿಕೊಡಿ. ನಲ್ಮೆ, ಚೇತನಾ ತೀರ್ಥಹಳ್ಳಿ

ಛೆ! ನಾನು ಹುಡ್ಗಿಯಾಗಿ ಹುಟ್ಬೇಕಿತ್ತು…

  * ಚಂದಿರ ನಾನು ಗಂಡಾಗಿ ಹುಟ್ಟಿದ್ದರ ಅಹಂಕಾರ ನನಗೆ ಖಂಡಿತ ಇತ್ತು. ಹಾಗಂತ ಹೆಣ್ಣುಮಕ್ಕಳಿಲ್ಲದ ನಮ್ಮ ಮನೆಯಲ್ಲಿ ನಾನೇ ಮಗನೂ ಮಗಳೂ ಆಗಿದ್ದೆ. ರಂಗೋಲಿ ಹಾಕೋದು, ಅಮ್ಮ ಮನೆ ಕ್ಲೀನು ಮಾಡುವಾಗ ಸಹಾಯಕ್ಕೆ ನಿಲ್ಲೋದು, ಅವಳ ಪೂಜೆ ಪುನಸ್ಕಾರಗಳಿಗೆ ಅಣಿ ಮಾಡ್ಕೊಡೋದು... ನನಗದೆಷ್ಟು ದೇವರನಾಮಗಳು ಬಾಯಿಗೆ ಬರ್ತಿದ್ದವೆಂದರೆ, ನಮ್ಮ ಮನೆಗೆ ಬಂದುಹೋಗುವ ಆಂಟಿಯರೆಲ್ಲ “ಈ ಹುಡ್ಗನ್ನ ನೋಡಾದ್ರೂ ಕಲ್ತುಕೊಳ್ಳಿ" ಅಂತ ತಮ್ಮ ಹೆಣ್ಣುಮಕ್ಕಳ ಮೂತಿ ತಿವೀತಿದ್ದರು! ಇದರ ಜೊತೆಗೆ ಓದಿನಲ್ಲಿ, ಆಟದಲ್ಲಿ ಎಲ್ಲಾದರಲ್ಲೂ ಮುಂದು. ನಮ್ಮಪ್ಪ... Continue Reading →

’ಕೊಕನಕ್ಕಿ’ ಯ ಹೆಸರು ಹುಡುಕುತ್ತಾ…

ಪ್ರಾಮಾಣಿಕವಾಗಿ ಹೇಳ್ತೀನಿ, ನನಗೊಂದು ದುರ್ಬುದ್ಧಿ ಇದೆ. ಅದು ಬಹುತೇಕರಿಗೆ ಇರಬಹುದಾದ ಮೋಸ್ಟ್ ಕಾಮನ್ ದುರ್ಬುದ್ಧಿಯೂ ಹೌದು. ಅದೇನು ಅಂತ ಈ ಲೇಖನ ಓದುವಾಗ ನಿಮ್ಗೆ ಗೊತ್ತಾಗತ್ತೆ. ಮೊನ್ನೆ ಮಲ್ಲೇಶ್ವರಕ್ಕೆ ಹೋಗಿದ್ನಾ, ಅಚಾನಕ್ಕಾಗಿ ಒಬ್ಬಳನ್ನ ನೋಡಿದೆ. ಅದೇ ಮುಖ, ಅದೇ ನಗು, ಅದೇ ಉದ್ದದ ಕಾಲು... ಕೊಕನಕ್ಕಿ!! ಇನ್ನೇನು, ನಾನು ಕೂಗೋದೊಂದು ಬಾಕಿ! ಹೀಗೆ ನಂಗೆ ಬೆಂಗಳೂರಿನ ಬೀದಿಬೀದಿಗಳಲ್ಲಿ ಯಾರ್ಯಾರೋ ಊರವರು ಕಾಣ್ತಿರ್ತಾರೆ. ಕೆಲವರಿಗೆ ನನ್ನ ಗುರುತು ಸಿಕ್ಕು, ನನಗೆ ಅವರದು ಸಿಗದೆ (ಅದರಲ್ಲೂ ಯಾರೋ ದೂರದ ನೆಂಟರದ್ದು)... Continue Reading →

ಇಲ್ಲೊಂದಷ್ಟು ಆರೋಪಗಳಿವೆ…

ನಾನು ನೆಟ್ ತೆಗೆಸಿ ನಾಲ್ಕು ತಿಂಗಳಾಗ್ತಾ ಬಂತು. ಅವತ್ತಿಂದ ರೆಗ್ಯುಲರ್ರಾಗಿ ಮೇಲ್ ಚೆಕ್ ಮಾಡಲು ಸಾಧ್ಯವೇ ಆಗ್ತಿಲ್ಲ. ಕೆಲಸ ಮಾಡೋದ್ ಬಿಟ್ಟು ಚಾಟ್ ಮಾಡ್ಕೊಂಡು ಕೂರ್ತಾರೆ ಅಂತಲೋ ಏನೋ ಆಫೀಸಲ್ಲೂ ಬ್ಲಾಕ್ ಮಾಡಿಬಿಟ್ಟಿದಾರೆ ನೋಡಿ! ಅದಕ್ಕೇ. ಹಾಗೂ, ನೆನ್ನೆ ಸಂಜೆ ಸೈಬರ್ ನತ್ತ ಹೆಜ್ಜೆ ಹಾಕಿದೆ. ಆಮೇಲೆ ‘ಯಾಕಪ್ಪಾ ಬೇಕಿತ್ತು ಈ ಉಸಾಬರಿ’ ಅಂತ ಬೇಸರಪಟ್ಕೊಂಡು ಉಳಿದ ಸಮಯ ಹಾಳು ಮಾಡ್ಕೊಂಡೆ. ಕಾರಣ, ಸ್ವಲ್ಪ ಗಂಭೀರವಾಗಿದೆ. ಒಬ್ಬ ಪುಣ್ಯಾತ್ಮರು ಮೇಲ್ ಮಾಡಿದ್ದರು. (ಅವರನ್ನು ವೈಯಕ್ತಿಕವಾಗಿ ತರಾಟೆಗೆ ತೆಗೆದ್ಕೊಳ್ಳುವ... Continue Reading →

ನಾಲ್ಕು ಮಾತು- ನಾಲ್ಕು ಮಂದಿಯ ಪ್ರತಿಕ್ರಿಯೆ

ಈ ಲೇಖನದಲ್ಲಿ ಹೇಳಿದ್ದೆ. ನನಗೆ ಚರ್ಚೆ ಬೇಕು, ಸರಿ ತಪ್ಪು ತಿಳಿಯಬೇಕು ಅಂತೆಲ್ಲಾ. ಅದಕ್ಕೆ ಸರಿಯಾಗಿ, ನನ್ಒಂದು ಕಥೆ, ನಾಲ್ಕು ಮಾತಿಗೆ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನ್ನ ಉತ್ತರಗಳೂ ಇವೆ. ಇದರ ಮೂಲಕ ವಿಷಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹಾಕ್ತಿದೇನೆ. ಆಸಕ್ತಿಯಿದ್ದವರು ಮುಂದುವರೆಸಬಹುದು. ಚೇತನಾ, ವಿಶ್ವಮಾನವರ ಬಗ್ಗೆ ಯಾಕ್ರಿ ತಲೆ ಕೆಡಿಸ್ಕೋತೀರಾ?? ಗಾಂಧೀಜಿಯ ರಾಮರಾಜ್ಯ,ಕುವೆಂಪುರವ ವಿಶ್ವಮಾನವ ಕಲ್ಪನೆ ಎಲ್ಲ ಪುಸ್ತಕದಲ್ಲಿದ್ರೇನೆ ಚೆನ್ನ. ಕಾನೂನು ಕೈಗೆತ್ತಿದರ ಬಗ್ಗೆ ಆಕ್ಶೇಪ ಎತ್ತೋರು ತುಂಬಾ ಜನ ಸಿಗ್ತಾರೆ. ಕೊಲೆ... Continue Reading →

Blog at WordPress.com.

Up ↑