ಒಂದು ಕಥೆ, ನಾಲ್ಕು ಮಾತು…

ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು.  ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು.   ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು... Continue Reading →

ಅಂವ, ‘ನಗ್ಬೇಕೂ ಅಂದ್ರೆ ಮದ್ವೆ ಆಗ್ಬೇಕು ಸಾರ್!’ ಅಂದ!!

ಇದೊಬ್ಬ ಗೆಳೆಯ ಬರೆದಿದ್ದು. ಇಂಥದ್ದು ಬಹಳ ಬರೆದಿದಾನೆ. ಅದೆಲ್ಲ ಗಂಡಸ್ರ ಗೋಳಂತೆ. ಹಾಗಂದಿದಾನೆ. ನಿಮಗೂ ನನ್ ಬ್ಲಾಗಲ್ಲಿ ಹೆಂಗಸರ ಸುಖದುಃಖ ಓದಿಯೋದಿ ಬೇಜಾರ್ ಬಂದಿರಬಹುದಲ್ವ? ಅದಕ್ಕೆ ಇದನ್ನ ಇಲ್ಲಿ ಹಾಕ್ತಿದೇನೆ. ಮುಂದೆಯೂ ರೆಗ್ಯುಲರ್ರಾಗಿ ಹಾಕುವ ಇರಾದೆ ಇದೆ. ಆಗಲಾದ್ರೂ ನೀವು ನಂಗೆ ಕೊಟ್ಟಿರುವ ‘ಬಿರುದು- ಬಾವಲಿ’ಗಳನ್ನ ವಾಪಸ್ ತೊಗೊಳ್ತೀರೇನೋ ಅನ್ನುವ ದೂರದ ಆಸೆ ನಂದು! ~ ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ... Continue Reading →

ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ

ಇತ್ತೀಚೆಗೆ ಕೆಲವು ದಿನಗಳಿಂದ ಯಾಕೋ ಚಿಪ್ಪಿನೊಳಗೆ ಹುದುಗಿಹೋಗಬೆಕೆನ್ನುವ ಹಂಬಲ ಮತ್ತೆ ತಲೆ ಎತ್ತುತ್ತಿದೆ. ಥೇಟು ಆಮೆಯ ಹಾಗೆ. ಈ ‘ಸುಮ್ಮನಿದ್ದುಬಿಡಬೇಕು’ ಅನ್ನಿಸುವ ಕಾಯಿಲೆ ಕಾಡಬಾರದು ನೋಡಿ ಯಾರಿಗೂ. ಇತ್ತೀಚೆಗೆ ದೆಹಲಿ ಸ್ಫೋಟವಾಯ್ತಲ್ಲ, ಎದೆ ಉರಿದುಹೋಗಿತ್ತು ಅವತ್ತು. ಹಾಗೆ ಉರಿದಿದ್ದನ್ನ ಬರೆದು ಬಿಸಾಡಬೇಕು ಅಂದ್ಕೊಂಡೆ. ಯಾಕೋ ಸಾಧ್ಯವೇ ಆಗಲಿಲ್ಲ. ಆಮೇಲೆ ಮತಾಂತರದ ಅವಾಂತರವಾಯ್ತಲ್ಲ, ಪ್ರಚೋದನೆ- ಪ್ರತಿಕ್ರಿಯೆಗಳಾದುವಲ್ಲ, ಆಗಲೂ ವಿಪರೀತ ಕಸಿವಿಸಿಯಾಯ್ತು. ಬರೀಬೇಕಂದುಕೊಂಡೆ. ಊಹೂಂ... ಆಗಲಿಲ್ಲ. ಒಳಗೊಳಗೆ ಎದ್ದ ಕೂಗು ಹಾಗೆಹಾಗೇ ಸತ್ತು ಹೋಗುತ್ತಿತ್ತು. ನಾನು ಮತ್ತೆ ಉರುಟುರುಟಿ ಸುತ್ತಿಕೊಳ್ಳುತ್ತ,... Continue Reading →

ಕೌಲೇದುರ್ಗದ ಕಥೆ

ಮತ್ತೆ ಇದೊಂದು ಹಳೆಯ ಬರಹ. ಸರಿಯಾಗಿ ಒಂದು ವರ್ಷ ಹಿಂದೆ ಬರೆದಿದ್ದು. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿ ಎಂಟು ತಿಂಗಳು ಕಳೆದಿವೆ. ಆದರೂ ಕವಲೇದುರ್ಗದ ನೆನಪು ತಾಜಾ ಆಗಿದೆ. ಕಾಲು ಮತ್ತೆ ಮತ್ತೆ ಅತ್ತ ಎಳೀತಿದೆ. ನಾವು ಆಗೆಲ್ಲ ಕೊಡಚಾದ್ರಿ, ಬರ್ಕಣ, ಜೋಗಿ ಗುಂಡಿ, ಸಿರಿಮನೆ ಜಲಪಾತ ಅಂತ ಅದೆಷ್ಟು ಸುತ್ತಾಡ್ತಿದ್ದೆವು ಗೊತ್ತಾ? (ಹಳೇ ಹಪ್ಪಟ್ಟು ಕಥೆ ಬಿಡಿ. ಹನ್ನೆರಡು- ಹದಿಮೂರು ವರ್ಷ ಹಿಂದಿನದು!) ಅದನ್ನೆಲ್ಲ ಬರೆಯುವ ಆಸೆ. ಫೋಟೋಗಳಿಲ್ಲ ಅನ್ನೋದು ಕೊರಗು. ಮತ್ತೀಗ ಅಲ್ಲೆಲ್ಲ ನಕ್ಸಲರ ಪಾರುಪತ್ಯ... Continue Reading →

ನೆಲದಡಿಯ ನದಿಯೆಡೆಗೆ…

ನನ್ನ ಪ್ರಿಯ ಸ್ನೇಹಿತರೊಬ್ಬರು ಒಂದು ಹೊಸ ಬ್ಲಾಗ್ ಶುರು ಮಾಡಿದಾರೆ. ಹೆಸರು- ಇನಿಗ್ಮಾ. “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ! ~ ಹೀಗನ್ನುತ್ತಾರೆ ಈ ಬ್ಲಾಗಿನ ಸಂಪಾದಕರು. ಈಗಿನ್ನೂ ಇದರ ಶುರುವಾತು ಅಷ್ಟೇ. ಮುಂದೆ ಅವರು ವಿಭಿನ್ನ ಓದನ್ನ ನಮಗಿಲ್ಲಿ ಕಟ್ಟಿಕೊಡಲಿರುವುದನ್ನು... Continue Reading →

‘ಬಸ್ಸಿನ ಹೆಂಗಸು’- ಒಂದು ಗಟ್ಟಿ ಚರ್ಚೆ

ನಿಮಗೆ ಗೊತ್ತು. ‘ಬಸ್ಸಿನ ಹೆಂಗಸು ಮತ್ತು ಬಿಳಿ ಬಿಳೀ ಸೀರೆಯ ಹುಡುಗಿಯರು’ ಲೇಖನದ ಪ್ರತಿಕ್ರಿಯೆಗಳು ಚರ್ಚೆಯಾಗಿ, ‘ಪೊರಕೆ ಎಲ್ಲಿದೆ?- ಮತ್ತೊಂದು ಚರ್ಚೆ’ ಎಂಬ ಶಿರೋನಾಮೆಯೊಂದಿಗೆ ಮುಂದುವರೆದಿದ್ದು. ಅಲ್ಲಿಂದಲೂ ಮುಂದುವರೆದು ಇದೀಗ ಚರ್ಚೆ ಬಹಳ ಸತ್ವಶಾಲಿಯಾಗಿ, ಗಟ್ಟಿಯಾಗಿ ಬೆಳೆದುನಿಂತಿದೆ ಸುಪ್ರೀತ್, ಹೇಮ ಶ್ರೀ, ಶ್ರೀಪ್ರಿಯೆ, ಸಂದೀಪ್ ಮತ್ತು ವಿಕೆ ಅವರು ಸಾಕಷ್ಟು ಸಂಗತಿಗಳನ್ನೊಳಗೊಂಡ ಸುದೀರ್ಘ ಪ್ರತಿಕ್ರಿಯೆಗಳನ್ನು ಬರೆದು ಚರ್ಚೆ ಮುಂದುವರೆಸಿದ್ದಾರೆ. ಅವೆಲ್ಲವನ್ನೂ ನಿಮ್ಮ ಅವಗಾಹನೆಗಾಗಿ ಪ್ರತ್ಯೇಕ ಪೋಸ್ಟ್ ಮೂಲಕ ಪೋಸ್ಟ್ ಮಾಡಿರುವೆ. ನಿಮ್ಮ ಪ್ರತಿಕ್ರಿಯೆಗೆ, ಪಾಲ್ಗೊಳ್ಳುವಿಕೆಗೆ ನಾನು ಆಭಾರಿ.... Continue Reading →

ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ

‘ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು’ ಲೇಖನದ ವಸ್ತು ನಿಜ ಘಟನೆಯನ್ನ ಆಧರಿಸಿದ್ದು. ಇಲ್ಲಿರುವ ಕೊನೆಯ ಪ್ರಶ್ನೆ, ಪ್ರಾಮಾಣಿಕವಾಗಿ ನನ್ನ ಅಂತರಾಳದ್ದು. ಇದು ನನ್ನನ್ನ ಕಾಡುತ್ತಿರುವುದಕ್ಕೆ ಕಾರಣ ಬಹಳವಿದೆ. ಭಾಷಣ, ಬರಹ ಅಂತೆಲ್ಲ ಶುಚಿಶುಚಿಯ ಚಟುವಟಿಕೆಯಲ್ಲಿ ಮುಳುಗಿಹೋಗುವ ನನಗೆ ಏನೂ ಮಡಲಾರದವಳಾಗಿರುವೆನಲ್ಲ ಎಂಬ ನಾಚಿಕೆ ಕಾಡಿ ಅದನ್ನ ಹೇಳಿಕೊಂಡಾದರೂ ಹಗುರಾಗುವ ಎಂದಿದನ್ನ ಬರೆದೆ. ಇದನ್ನ ಬರೆದಿದ್ದು ಮೇ ತಿಂಗಳಿನಲ್ಲಿ. ಈ ಲೇಖನ ಕೆಂಡ ಸಂಪಿಗೆಯಲ್ಲಿ ಬಂದು, ಇದೀಗ ನಿಮ್ಮೊಡನೆ ಚರ್ಚಿಸುವ ಸಲುವಾಗಿಯೆ ನನ್ನ ಬ್ಲಾಗಿಗೆ ಹಾಕಿಕೊಂಡೆ.... Continue Reading →

ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು…

ಬೆಂಗಳೂರಿಂದ ಹೊರಟು ಹೊಸಕೋಟೆ ಸ್ಟಾಪಲ್ಲಿಳಿದಾಗ ನೀಲಿ ಕಲರಿನ ಸ್ವಾಗತ್ ಬಸ್ಸು ರೊಂಯ್... ರೊಂಯ್ಯ್ಯ್ಯ್ ಅಂತ ಸದ್ದು ಮಾಡುತ್ತ, ಇನ್ನೇನು ನೀ ಬರುವುದರಳೊಗೆ ಹೊರಟೇಬಿಟ್ಟೆ ಅಂತ ಹೆದರಿಸ್ತ ನಿಂತಿತ್ತು. ಟಾಕೀಸಿನೆದುರು ದೊಂಬರಾಟದ ಮಜ ತೊಗೊಳ್ತ ಹೆಜ್ಜೆಯೆಣಿಸ್ತಿದ್ದವಳಿಗೆ ಅದು ಕಂಡು ಎದ್ದೆನೋ ಬಿದ್ದೆನೋ ಅಂತ ದಾಪುಗಾಲುಹಾಕಿ ನಡೆದೆ, ಮತ್ತೆ ನೂರಾ ಅರವತ್ತೇಳನೇ ಸಾರ್ತಿ ಮೋಸ ಹೋಗಿದ್ದೆ! ಮತ್ತಿನ್ನೇನು!? ಹಾಗೆ ಹೊಸಕೋಟೆಯಿಂದ ಹೊರಡುವ ಪ್ರತಿ ಬಸ್ಸೂ ಸ್ಟಾರ್ಟ್ ಮಾಡಿಕೊಂಡಾದಮೇಲೂ ಅರ್ಧ ಗಂಟೆ ಕಾದು ತನ್ನ ಟಾಪು ಭರ್ತಿಯಾಗುವ ತನಕವೂ ನಿಂತಿರುತ್ತದೆ ಅನ್ನೋದು... Continue Reading →

ಹೀಗೇ ಮೂರು, ವೇದದ ಚೂರು

ಏಕೋಹಮ್ ಬಹುಷ್ಯಾಮ... ಅಲ್ಲಿ ಏನೂ ಇರಲಿಲ್ಲ. ಇರಲಿಲ್ಲವೆಂದರೆ, ಇತ್ತು...  ಹಾಗೆ ‘ಇದೆ’ ಎನ್ನಲು ಮತ್ತೊಂದು ಜೊತೆಗಿರಲಿಲ್ಲ. ಹಾಗೆ ಇದ್ದದ್ದು ಅಗಾಧವಾಗಿತ್ತು. ಏನಿದ್ದರೇನು? ಒಂಟೊಂಟಿಗೆ ಬೆಲೆಯಿಲ್ಲವೆನ್ನುವುದು ಅದಕ್ಕೆ ಗೊತ್ತಾಯ್ತು. ತಿಳಿವಿಗೆ ಬಿರಿದು ಚೂರಾಯ್ತು. ಪ್ರತಿ ಚೂರಲ್ಲೂ ತಾನೇ ತಾನಾಗಿ ತಾನೇ ತಾನಾಗಿ ತಾನೇ ತಾನಾಗಿ... ಚೂರಿನ ಚೂರಿನ ಚೂರಿನ.... ಚೂರು ತನ್ನನ್ನೇ ತಾನು ಮರೆತು, ಜಗತ್ತು, ಜೀವದಿಂದ ತುಂಬಿಕೊಂಡಿತು. ~ ತತ್ ತ್ವಮ್ ಅಸಿ ಬಣ್ಣವಿಲ್ಲ, ರುಚಿಯಿಲ್ಲ, ಆಕಾರವಿಲ್ಲ. ತ್ರೀ ರೋಸಸ್ ಜಾಹೀರಾತಿನ ಸ್ಲೋಗನ್ ಇದಲ್ಲ. ಯಾಕಂದರೆ, ಅದೇನಿಲ್ಲದಿದ್ದರೂ... Continue Reading →

ಚೇತನಾ…. ಅನಿಕೇತನ!

ಅದ್ಯಾವ ಘಳಿಗೇಲಿ ಬ್ಲಾಗೋದುಗ ಮಹಾಶಯರೊಬ್ಬರು ‘ಆಗು ನೀ ಅನಿಕೇತನ’ ಅಂತ ಹಾರೈಸಿದ್ರೋ, ಕಾಕತಾಳೀಯವೆನ್ನುವ ಹಾಗೆ ಮೇಲಿನ ಮನೆ ಆಂಟಿ ಕೂಡ ಬೆಳಗಾಗೆದ್ದು “ಪೂಜೀಸಾಲೆನ್ನಿಂದ ವರವೇ ಶ್ರೀ ಗವ್ರೀ ನಿನ್ನಯ ಚರಣಗಳಾ... ಓ ನನ್ನ ಚೇತನಾ, ಆಗು ನೀ ಅನಿಕೇತನಾ... ಹೂವ್ವೂ... ಚೆಲುವೆಲ್ಲಾ ನಂದೆಂದಿತೂ..." ಅಂತ ರಿಮಿಕ್ಸ್ ಹಾಡಲು ಶುರುವಿಟ್ಟರು. ದಿನಾಬೆಳಗೂ ಅವರ ಆರ್ಕೆಸ್ಟ್ರ್‍ಆ ಕೇಳೀ ಕೇಳೀ, ಅದಿಲ್ಲದೆ ಊಟ ನಿದ್ದೆ ಸೇರದೆ ಪುಷ್ಪಕವಿಮಾನದ ಕಮಲ್ ಹಾಸನ್ ಸ್ಥಿತಿ ತಲುಪಿದ್ದ ನನಗೆ ಈ ... ಅನಿಕೇತನ... ಎಲ್ಲಿಂದ ಬಂದು... Continue Reading →

Create a free website or blog at WordPress.com.

Up ↑