ಸುಮ್ಮನೆ ಮೈ ಮೇಲೆ ಇರುವೆ ಬಿಟ್ಕೊಳ್ಳೋ ನನ್ನತನದ ವ್ಯರ್ಥ ಪ್ರಲಾಪ ಅರಿವಾದ ಹೊತ್ತಲ್ಲಿ ಒಂದರ ಹಿಂದೆ ಮತ್ತೊಂದು ನೆನಪಾದ ಕಥೆಗಳಿವು. ಅಥವಾ ಈ ಕಥೆಗಳು ನೆನಪಾದ ಬೆನ್ನಲ್ಲೇ ನನ್ನ ರೀತಿಯ ವ್ಯರ್ಥತೆ ಅರಿವಿಗೆ ಬಂತು ಅನ್ನಲೂಬಹುದು. ತಾವೋ ಹೇಳುತ್ತೆ, ಸುಮ್ಮನಿರು. ಪ್ರತಿಯೊಂದೂ ತನ್ನ ಪಾಡಿಗೆ ನಡೆಯುತ್ತೆ. ಹಾಗಂತ ನೀನು ನಿಜವಾಗ್ಲೂ ಸುಮ್ಮನಿರಬೇಕು ಮತ್ತೆ! ಕಾಲದ ಹರಿವಿಗೆ ನಿನ್ನ ಸಂಪೂರ್ಣವಾಗಿ ಕೊಟ್ಟುಕೋಬೇಕು ಮತ್ತೆ! ~ ಕಥೆ ೧ ~ ಅದೊಂದು ಬೀದಿ ನಾಯಿ. ಅದು ತನ್ನದೇ ಅಂತ ಅಂದುಕೊಂಡಿರುವ... Continue Reading →
ಕ್ರಿಕೆಟ್: ಅಮ್ಮನ ಗೀಳು, ಮಗನ ಹುಚ್ಚು, ನಡುವೆ ನಾನು!
ನನ್ಮಗ ಬೆಳಗ್ಗಿಂದ ಪುಸ್ತಕ ಹಿಡಿದು ತನ್ನ ಪಾಡಿಗೆ ತಾನು ಓದ್ಕೊಳ್ಳತೊಡಗಿದ್ದ. ನನಗಾಗಲೇ ಸಣ್ಣಗೆ ಅನುಮಾನ ಶುರುವಾಗಿತ್ತು. ಏನೂ ಲಾಭವಿಲ್ಲದೆ ಅಂವ ಹಂಗೆಲ್ಲ ಅಜ್ಜಿ ಹತ್ರ ಬೈಸ್ಕೊಳ್ಳದೆ ಪುಸ್ತಕ ಹಿಡಿಯೋ ಜನ ಅಲ್ಲ. ಮಧ್ಯಾಹ್ನ ಒಂದು- ಒಂದೂವರೆ ಅನ್ನೋ ಹೊತ್ತಿಗೆ ನನ್ನ ಅನುಮಾನ ನಿಜವಾಯ್ತು. ಮಾವ- ಅಳಿಯನ ಮ್ಯಾಚ್ ಫಿಕ್ಸಿಂಗ್ ನಡೆದು, ಇಂವ ಅವನ ಹತ್ತಿರ ಮ್ಯಾಚ್ ಆನ್ ಲೈನ್ ಮ್ಯಾಚ್ ನೋಡಬಹುದಾದ ಲಿಂಕ್ ಗುರುತು ಮಾಡಿಟ್ಟುಕೊಂಡಿದ್ದ. `ಬೇರೆ ಆಗಿದ್ದಿದ್ರೆ ಗ್ಯಾರಂಟಿ ನೋಡ್ತಿರ್ಲಿಲ್ಲ ಮುನ್ನೀ, ಇದು ಇಂಡಿಯಾ ಪಾಕಿಸ್ತಾನ... Continue Reading →
ಮಾರ್ಚ್ ಎಂಟು ಮತ್ತು ಏಳರಾಟ
ಈ 'ಹೆಣ್ಣುದಿನ' ನಂಗಿಷ್ಟ ಆಗೋದು ಎರಡು ಕಾರಣಕ್ಕೆ. ನಾನು ಹೆಣ್ಣು ಅನ್ನೋ ಹೆಮ್ಮೆಗೆ, ನಾನು ಬದುಕು ಕಟ್ಟಿಕೊಂಡ ದಿನ ಅನ್ನೋ ಖುಷಿಗೆ. ಏಳು ವರ್ಷ ಹಿಂದಿನ ಮಾತು. ಮಾರ್ಚ್ 8ರ ರಾತ್ರಿ ತೀರ್ಥಹಳ್ಳಿಯನ್ನ ಕಣ್ತುಂಬಿಕೊಳ್ತಾ ಊರು ಬಿಟ್ಟಾಗ, ಇದು ಇಂಥಾ ದಿನ ಅಂತೇನೂ ಗೊತ್ತಿರಲಿಲ್ಲ. ಆಮೇಲೆ ತಿಳಿದುಕೊಂಡ ಹಾಗೆ, ಈ ದಿನವನ್ನ ಶುರು ಮಾಡಿದ್ದು 'ದುಡಿಯೋ ಹೆಣ್ಣುಮಕ್ಕಳ ದಿನ' ಅಂತಲಂತೆ. ಇದೇ ದಿನ ನಾನೂ ದುಡಿಯುವ ಹೆಣ್ಣಾಗಲು ಹೊರಟಿದ್ದು, ಅದು ಕೂಡಾ ಸೇರಿದ್ದ ಮನೆಮಂದಿಯ ಕಾಟ, ಆ... Continue Reading →
ಎ ಕಾಸ್ಮಿಕ್ ಜೋಕ್ ~ ಮತ್ತೊಂದು ಮಧ್ಯದ ಎಪಿಸೋಡ್
ಮಣಿ ಒಂದು ಮಧ್ಯಾಹ್ನ ನನ್ನನ್ನು ಊಟಕ್ಕೆ ಬರುವಂತೆ ಕರೆದಳು. ಏನೋ ಅಪರೂಪದ ತಿನಿಸು ಮಾಡಿದ್ದೀನಿ ಅಂತಲೂ ಹೇಳೀದಳು. 'ಏನು ವಿಶೇಷ?' ನಾನಂದೆ. 'ಸಂತೋಷ ಪಡಲಿಕ್ಕೆ ನಿನಗೆ ಏನಾದರೂ ಕಾರಣ ಇರಲೇಬೇಕೇನು!?' ಅಂದು ಬಾಯ್ಮುಚ್ಚಿಸಿದಳು. ಮರುಘಳಿಗೆಯಲ್ಲಿ ನಾನು ಅವಳ ಮನೆ ಹೊಸ್ತಿಲು ತುಳಿದಿದ್ದೆ. ಆದರೆ ಅಲ್ಲಿ ಬೇರೆಯೇ ಸ್ವಾಗತವಿತ್ತು. ವಿಲಕ್ಷಣ ನೋಟದ, ತೆಳ್ಳಗಿನ, ಎತ್ತರದ ವ್ಯಕ್ತಿಯೊಬ್ಬ ಅಲ್ಲಿ ಕುಳಿತುಕೊಂಡಿದ್ದ. ಅವನ ದಟ್ಟ- ಗಾಢ- ನೀಳ ಕೂದಲು ಭುಜದವರೆಗೂ ಇಳಿಬಿದ್ದಿತ್ತು. ಅವನ ಉದ್ದನೆಯ ಮುಖದಲ್ಲಿನ ಕಣ್ಣುಗಳು ಶಾಂತಕೊಳದಂತೆ ಕುಳಿತಿದ್ದವು. ಮುಖದಲ್ಲಿ... Continue Reading →
ಎ ಕಾಸ್ಮಿಕ್ ಜೋಕ್ ~ 18!
ಎ ಕಾಸ್ಮಿಕ್ ಜೋಕ್, ನಾನು ಸದ್ಯ ಅನುವಾದಿಸ್ತಿರೋ ಕಾದಂಬರಿ. ಇದರ ಭಾಗ 1 ಮತ್ತು 2 ಈಗಾಗಲೇ ಹಾಕಿದೀನಿ. ನಂತರದ 17 ಪೋಸ್ಟ್ ಗಳನ್ನು ಹಾರಿಸಿ 18ನೆಯದ್ದು ಇಲ್ಲಿದೆ 🙂 ಕುಂಜಮ್ ಕುಂಜಮ್ ಮನುಷ್ಯನ ಉಪಕಾರ ನಾನು ಪೂರ್ತಿಯಾಗಿ ಈ ಲೋಕಕ್ಕೆ ಮರಳಿದ್ದು ಜನರಲ್ ಬೋಗಿ ಹತ್ತಿಕೊಂಡ ಮೇಲೇನೇ. ದೇಹಕ್ಕೆ ಚಿಕ್ಕ ಚಲನೆಯೂ ಸಾಧ್ಯವಾಗದಷ್ಟು ಅದು ಕಿಕ್ಕಿರಿದು ತುಂಬಿಕೊಂಡಿತ್ತು. ಉಸಿರುಗಟ್ಟುವ ಪರಿಸ್ಥಿತಿ. ಟ್ರೈನ್ ನಿಧಾನಕ್ಕೆ ಓಡಲು ಶುರುಮಾಡಿ ವೇಗ ಪಡೆದುಕೊಳ್ಳುತ್ತಿತ್ತು. ನಾನು ಟಾಯ್ಲೆಟ್ ಬಾಗಿಲಿನ ಬಳಿ ಕಾಲೂರಲು... Continue Reading →
ನಿಂತರೆ ಮಾತ್ರ ನಡೆಯಲು ಸಾಧ್ಯ ~ ತಾವೋ
ಇಲ್ಲ. ಎಲ್ಲವನ್ನೂ ಮೇಲಿಂದ ಮೇಲೆ ಅನುಸರಿಸಿ ನೋಡಿಯಾಗಿದೆ. ಯಾವ್ದೂ ಸಮಾಧಾನ ಕೊಡ್ತಾ ಇಲ್ಲ. ವಿಪಸ್ಸನ ಕ್ಲಾಸು, ವೀಕೆಂಡ್ ಮೆಡಿಟೇಶನ್ನು, ಸಂಕೀರ್ತನ ಪಾರ್ಟಿ... ಉಹು... ಯಾವ್ದಕ್ಕೂ ಅರ್ಥವೇ ಇಲ್ಲ. ಏನು ಮಾಡೋದು? ಎಡವೋದು ಇಲ್ಲೇನೆ. ಏನಾದರೂ ಯಾಕೆ ಮಾಡಬೇಕು? ಸುಮ್ಮನೆ ಇರಲು ಸಾಧ್ಯವಾದರೆ ಅಷ್ಟೇ ಸಾಕು. ಅನ್ನುತ್ತೆ ತಾವೋ. ದಿನವೆಲ್ಲ ದಾಪುಗಾಲು ಹಾಕ್ಕೊಂಡು ನಡೀತಾ ಇದ್ದರೆ ಬೇಗ ರಾತ್ರಿಯಾಗಿಬಿಡ್ತದೇನು? ಅನ್ನುತ್ತಾನೆ ಗೆಳೆಯ. ಹಾಗಂತ ಸಾಪೇಕ್ಷ ಸಿದ್ಧಾಂತ ಮರೆಯುವ ಹಾಗಿಲ್ಲ. ನಡಿಗಯಲ್ಲಿ ಸವೆದ ಹೊತ್ತೆಲ್ಲ ರಾತ್ರಿಯನ್ನ ಬೇಗ ಹತ್ತಿರ ತಂದಂಥ... Continue Reading →
ಎ ಕಾಸ್ಮಿಕ್ ಜೋಕ್ ~ 2
ಮೊದಲ ಭಾಗ ಇಲ್ಲಿದೆ ಹಾಗೆ ನಾನು ಅವಳನ್ನ ನೋಡಿದ ತಕ್ಷಣ ಅನಿಸಿದ್ದನ್ನೇ ನೆಚ್ಚಿಕೊಂಡಿದ್ದರೆ ತಪ್ಪಾಗಿಬಿಡ್ತಿತ್ತು. ಕೆಲವರಿಗೆ ಹೀಗಾಗುತ್ತೆ. ಮೊದಲ ನೋಟದಲ್ಲಿ ಅನಿಸಿದ್ದಕ್ಕೇ ಜೋತುಬಿದ್ದು ಎಷ್ಟೋ ಅಮೂಲ್ಯವಾದ್ದನ್ನ ಕಳಕೊಂಡುಬಿಡ್ತೇವೆ, ಪಡೆಯುವ ಮೊದಲೇ. ಇಂತಹ ಸನ್ನಿವೇಶದ ಭೇಟಿಯಲ್ಲಿ ಅವಳು ಅಪರಿಚಿತತೆಯನ್ನ ಹೋಗಲಾಡಿಸ್ಕೊಳ್ಳಲು ಹಾಗೆ ಆಡಿದಳು ಅನಿಸುತ್ತೆ ಈಗ. ಅವಳನ್ನೇ ನಾನು ಕಾಯ್ತಿದ್ದುದು ಅಂತ ಗೊತ್ತಾದ ಮೇಲೆ ಇಬ್ಬರೂ ನಾನು ಮೊದಲೇ ನೋಡಿಟ್ಟುಕೊಂಡಿದ್ದ ಕಾರ್ನರ್ ಟೇಬಲಿನೆಡೆಗೆ ಬಂದೆವು. ನನ್ನ ಕಣ್ಣು ಇನ್ನೂ ಕಿಟಕಿಯ ಗಾಜಿನಾಚೆ ನಡುರೋಡಿನ ಹುಡುಗಿಯನ್ನೇ ಹುಡುಕುತ್ತಿತ್ತು. ‘ಅವಳು ನನ್ನ... Continue Reading →
ತಾವೋ… ದಾರಿಯಲ್ಲದ ದಾರಿ
ಸುಮಾರು ಒಂದು ವರ್ಷ ಆಗಿರಬಹುದು. ತಾವೋ ಕಾಡಲು ಶುರುವಿಟ್ಟು. ಸುಮ್ಮನಿರುವ ಸುಮ್ಮಾನ ಮತ್ತು ತಾವೋ ತೆ ಚಿಂಗ್ ಓದಿ, ನೆಟ್ಟಾಡಿಸಿ ಕೂಡ ತಣಿಯದೆ ಉಳಿದಾಗ ಸಿಕ್ಕಿದ್ದು ಓಶೋ. ದಾರಿಯಲ್ಲದ ಈ ದಾರಿಯ ಚಹರೆ ಬಗ್ಗೆ ಕೇಳೋದೇ ಒಂದು ಚೆಂದ. ನಮ್ಮ ಪಾಲಿಗೆ ಅಧ್ಯಾತ್ಮ ಗಂಭೀರವಾಗಿಯೂ ಕಠಿಣವಾಗಿಯೂ ಸುಲಭಕ್ಕೆ ಅನುಸರಿಸಲು ಬರದೆ ಇರುವಂಥದ್ದೂ ಸಾಮಯಿಕ ಸಂಪ್ರದಾಯಗಳಿಂದ ಕೂಡಿದ್ದೂ ಆಗಿರಬೇಕು. ಆಗ ಮಾತ್ರ ಅದಕ್ಕೊಂದು ಘನತೆ. ಆದರೆ ತಾವೋ ಹುಲ್ಲಿಗಿಂತ ಹಗುರ. ಮರದಿಂದ ತೊಟ್ಟು ಕಳಚಿ ಗಾಳಿಯೊಟ್ಟಿಗೆ ಅಲೆಅಲೆಯಾಗಿ ತೇಲುತ್ತಾ... Continue Reading →
ಸುಭಾಷರ ನೆನಪಿನೊಂದಿಗೆ ಮರೆಯಬಾರದ ಹೆಣ್ಣು
ಹೆಣ್ಣು- ಮಣ್ಣಿನ ಹಿಂದೆ ಬಿದ್ದವರೆಲ್ಲ ಕೆಡುತ್ತಾರೆ- ಹಾಗನ್ನುತ್ತಾರಲ್ಲವೆ? ಆದರೆ, ಸುಭಾಷರು ಮಾತ್ರ ಕೆಡಲಿಲ್ಲ. ಬದಲಾಗಿ ಉನ್ನತ ಗೌರವವನ್ನೇ ಪಡೆದರು. ಶತಮಾನಗಳ ಕಾಲ ಉಳಿಯುವಂತಾದರು. ಯಾಕೆ ಗೊತ್ತಾ? ಅವರು ಹಂಬಲಿಸಿದ ನೆಲ ಭಾರತ. ಮತ್ತು, ಅವರು ಪ್ರೇಮಿಸಿದ ಹೆಣ್ಣು ಎಮಿಲೀ!........... (ಇವತ್ತು ಸುಭಾಷ್ ಬಾಬು ಹುಟ್ಟುಹಬ್ಬ. ಈವತ್ತು ಅವರನ್ನ ನೆನೆಸಿಕೊಂಡರೆ, ಎಮಿಲಿಗೂ ನಮ್ಮಿಂದ ಒಂದು ಗೌರವ ಸಲ್ಲಲಿ ಅಂತ ಹಾರೈಸ್ತಾ.... "ನಿನ್ನ ನೋಡಲು ಮತ್ತೆಂದೂ ಸಾಧ್ಯವಾಗದೆ ಹೋಗಬಹುದು. ಆದರೆ ನನ್ನ ನಂಬು. ನೀನು ಸದಾ ನನ್ನ ಹೃದಯದಲ್ಲಿ, ಆಲೋಚನೆಗಳಲ್ಲಿ, ಕನಸಲ್ಲಿ ಇದ್ದೇ ಇರುತ್ತೀಯೆ.... Continue Reading →
ನಾವು ತರಕಾರಿ ಹಾಗೆ, ಸಾಕು ಕೋಳಿಯ ಹಾಗೆ
ಏನೆಲ್ಲ ಹೇಳ್ತಾರೆ. ಕೆಲವರಂತೂ 'ಹೆಣ್ಣುಮಕ್ಕಳಿಗೆ ಪಾಪ ಅನ್ನೋದಾ? ಅವರು ಕೊಡೋ ಹಿಂಸೆ ನಿಮಗೇನು ಗೊತ್ತು?' ಅಂತ ಬೆದರುಗಣ್ಣು ಮಾಡ್ಕೊಂಡು ಕೈ ತಿರುಗಿಸ್ತಾರೆ. ನಿಜಕ್ಕೆ ಹಿಂಗಾಗಿರುತ್ತೆ. ದಿಟ್ಟ ಹೆಣ್ಣುಮಕ್ಕಳ ಹೆಜ್ಜೆ ಗಂಡಸಿನ ಅಹಂಕಾರಕ್ಕೆ ಪೆಟ್ಟುಕೊಟ್ಟಿರುತ್ತೆ. ಆದರೆ ಎಲ್ಲ ಹೆಣ್ಣುಗಳು ಹಾಗೆ ಸಿಡಿದೇಳೋಕೆ ಆಗಲ್ಲ. ಎದ್ದು ಬದುಕುಳಿಯೋಕೆ ಆಗಲ್ಲ. ಇದಕ್ಕೆ ಕಾರಣ, ಗಂಡಸರು ಮಾತ್ರ ಅಲ್ಲ, ಮತ್ತಷ್ಟು ಹೆಣ್ಣುಗಳೂ ಅನ್ನೋದು ದುರಂತ. ಅದಕ್ಕೇ ನೋಡಿ, ಮುರಿಯುವ- ಮೀರುವ ಹೆಣ್ಣುಮಕ್ಕಳಿಗೆ ಸಾವಿರದೆಂಟು ಹೆಸರುಗಳನ್ನಿಡೋದು! ಈ ಹೊತ್ತು ಇದನ್ನೆಲ್ಲ ಯೋಚಿಸುವ ಹಾಗೆ ಮಾಡಿದ್ದು... Continue Reading →
