ಗೆಳೆಯ ರಾಘವ ಚಿನಿವಾರ್ ಬರೆದ ಇಂಗ್ಲಿಷ್ ನಾವೆಲ್ 'ಎ ಕಾಸ್ಮಿಕ್ ಜೋಕ್'. ಅದನ್ನ ಕನ್ನಡದಲ್ಲಿ ನನ್ನ ಗ್ರಹಿಕೆ- ಶೈಲಿಯಲ್ಲಿ ನಿರೂಪಣೆ ಮಾಡಿದರೆ ಹೇಗಿರುತ್ತೆ ಅನ್ನುವ ಪ್ರಯೋಗ ನಡೆದಿದೆ. ಹುಡುಗನೊಬ್ಬನ biographyಯನ್ನ ಮತ್ತೆ ನಿರೂಪಿಸುವಾಗ ಗೊತ್ತಾಗ್ತಿದೆ, ಈ ಸಹಜೀವಗಳ ಒಳತೋಟಿಗಳು ಹೇಗೆಲ್ಲ ಇರ್ತವಲ್ಲ ಅಂತ... ~ ಕಂತು 1 ~ ಒಂದೇ ಸಮ ಮಳೆ. ನಾನು ಕಾಯುತ್ತ ನಿಂತಿದೇನೆ ಅನ್ನುವುದಷ್ಟೆ ಗೊತ್ತು. ಜೀನ್ಸು ಟೀ ಷರ್ಟುಗಳ ಹದಿ ಹುಡುಗ ಹುಡುಗಿಯರು ನನ್ನ ನೋಡಿಕೊಂಡು ಕಿಸಕ್ಕನೆ ನಕ್ಕು ಹೋಗ್ತಿರುವುದು ಕಾಣುತ್ತಿದೆ.... Continue Reading →
ಸೌಹಾರ್ದ ಪ್ರಿಯರು ಹೀಗಂತಾರೆ…
*ಕಳೆದ ಅಲ್ಲ, ಅದರ ಹಿಂದಿನ ಫೆಬ್ರವರಿಯಲ್ಲಿ ಪತ್ರಿಕೆಯೊಂದರಲ್ಲಿ ಏನೋ ಬಂದು, ಜನ ಟಯರ್ ಸುಟ್ಟು, ಎರಡು ಸಾವು (ಅವರ ಮೇಲೆ ಶಾಂತಿ ಇರಲಿ) ಸಂಭವಿಸಿತ್ತು. ನಮ್ಮ ಸೌಹಾರ್ದಪ್ರಿಯರು 'ಹಂಗಾ ಬರೆಯೋದು? ಭಾಷೆ ಬಳಕೆ ಮೇಲಾದ್ರೂ ನಿಗಾ ಬೇಡವಾ? ಏನೆ ಆಗಲಿ ಮತ್ತೊಂದು ಧರ್ಮದ ಮುಖಂಡ ಅವರು. ಹಾಗೆಲ್ಲ ಭಾವನೆಗೆ ಧಕ್ಕೆ ಮಾಡೋದು ಎಂಥ ವಿಕೃತಿ ಅಂದಿದ್ದರು. * ಈಗ ಹಿಂಗಾಗಿದೆ. ಇಲ್ಲೊಬ್ಬರು ಒಂದಷ್ಟು ಜನರಿಗೆ ನೋವಾಗುವಂಥ ಧಾಟಿಯಲ್ಲಿ ಬರೆದಿದಾರೆ. ಅದೇ ಸೌಹಾರ್ದಪ್ರಿಯರು ಮಾತಿನ ಮೂಲಕ, ಧರಣಿಯ ಮೂಲಕ... Continue Reading →
ಸ್ವಾಮಿ ವಿವೇಕಾನಂದ ಎಂಬ ಮನುಷ್ಯ ಹೀಗಿದ್ದರು.. ಅದಕ್ಕೇ ನಮ್ಮ ಐಕಾನ್ ಆಗಿರುವರು
ನಮಗಿದೆಲ್ಲ ಮೊದಲೇ ಗೊತ್ತಿತ್ತು. ಅವೆಲ್ಲ ಆಕ್ಷೇಪಾರ್ಹಅಂತೇನೂ ಅನ್ನಿಸದೆ ಸಾಧಕನಾಗಿ ನಾವು ಅವರನ್ನ ನೋಡಿದ್ದೆವು. ಈಗೊಬ್ಬ ಮನುಷ್ಯರು ಹೊಸತಾಗಿ ಓದಿಕೊಂಡು ಗಾಬರಿ ಬಿದ್ದಿದ್ದಾರೆ. ಇಂಥಾ ವಿವೇಕಾನಂದ ಐಕಾನ್ ಹೇಗಾದನಪ್ಪಾ ಅಂತ ನಿದ್ದೆಬಿಟ್ಟಿದ್ದಾರೆ. ದಡ್ಡ, ಕಾಯಿಲೆಯ, ಬಡವ, ಅಬ್ರಾಹ್ಮಣ ನರೇಂದ್ರ ನಮ್ಮ ಐಕಾನ್ 'ಸ್ವಾಮಿ ವಿವೇಕಾನಂದ' ಆಗಿರೋದು ಯಾಕೆ ಗೊತ್ತಾ? ಅವರು..... ಶ್ರೀಮಂತ ಮನೆತನದಲ್ಲಿ ಹುಟ್ಟಿಯೂ ಬಡತನದ ಕಷ್ಟಗಳನ್ನೆಲ್ಲ ಎದುರಿಸಿದ್ದರು. ತಮ್ಮೆಲ್ಲ ಅನಾರೋಗ್ಯಗಳ ನಡುವೆಯೂ ನಿರಂತರ ಓಡಾಟದಲ್ಲಿ ತೊಡಗಿಕೊಂಡು ಸೇವೆಗೆ, ಅಧ್ಯಾತ್ಮಕ್ಕೆ ತಮ್ಮನ್ನು ಕೊಟ್ಟುಕೊಂಡಿದ್ದರು. ಸ್ಟೀಫನ್ ಹಾಕಿಂಗ್ ನಂತೆ ಆನಾರೋಗ್ಯದಿಂದ... Continue Reading →
ಹೊಸ ವರ್ಷ ನನಗೆ ಹೊಸ ನಂಬರ್ ಮಾತ್ರ
ನಿಶಾಚರ ಪಿಚಾಚಿಯ ಹಾಗೆ 7 ಗಂಟೆಯಾದರೂ ಹೊರಳಾಡುತ್ತಿದ್ದ ನನ್ನ ಮೇಲೆ ಹಾರಿ, ಹೊದಿಕೆ ಕಿತ್ತು ಎಬ್ಬಿಸಿದ ಮಗ. ನಾವಿಬ್ಬರೂ ಕೆಲ್ವಿನ್- ಹಾಬ್ಸ್ ಹಾಗೆ ಕಿತ್ತಾಡಿ ಅಮ್ಮನ ಹತ್ತಿರ ಬಯ್ಸಿಕೊಂಡು, ಏನೂ ಆಗೇ ಇಲ್ಲ ಅನ್ನುವಂತೆ ಹೆಗಲೆಗಲ ಮೇಲೆ ಕೈಹಾಕ್ಕೊಂಡು ನಗುತ್ತ ರೂಮಾಚೆ ಬಂದೆವು. ಅಡುಗೆ ಮನೆಯಲ್ಲಿ ಅವರೆ ಕಾಳು ಸಾಗು ಮತ್ತು ಅಕ್ಕಿ ರೊಟ್ಟಿಯ ಘಮ ತುಂಬಿಕೊಳ್ಳುತ್ತಿತ್ತು. ಮಗ ತಕಪಕ ಕುಣಿಯುತ್ತ ಇವತ್ತು ಇಯರ್ ಎಂಡ್... ರಜ ಹಾಕು ಅಂತ ರಾಗ ತೆಗೆದಿದ್ದ. ನನ್ನ ಕಾಫಿ ಕಟ್ಟೆಯ... Continue Reading →
ನಾನೂ ಸೈತಾನನ ಮಗಳೇನೆ!
ಚೆಂದದ ಫೋಟೋಗಳನ್ನೆ ಹೆಕ್ಕಿ ಫೇಸ್ ಬುಕ್ಕಿಗೆ ಹಾಕುವಾಗ ಗಲ್ಲದ ಮೇಲಿನ ಪಿಂಪಲ್ ಅಣಕಿಸುತ್ತ ಇರುತ್ತದೆ. ಡಿಸೆಂಬರಿನ ತುಟಿಯ ಬಿರುಕಲ್ಲಿ (ಎಲಾ ನಿನ್ನ ಅನ್ನುವಂಥ) ಮುಗುಳು ನಗು ತುಂಬಿಕೊಳ್ಳುತ್ತದೆ. ಈ ಚಳಿಗೆ ಮೈಕೊರೆಯುವಾಗ ಯೋಚನೆ. ಅವಳು ಬೆನ್ನಿಗೆ ಹಾಕಿದ ಚೂರಿ ಫ್ರೀಜರಿನಲ್ಲಿಟ್ಟು ತೆಗೆದ ಐಸ್ ಕ್ಯೂಬಾ? ಕೊರಳ ತಿರುವಲ್ಲಿ ಸದಾ ಅವನ ಹೂಮುತ್ತಿರುವ ಈ ದಿನಗಳಲ್ಲಿ ಕೊರಗಲೊಂದು ನೆವ ಬೇಕು. ಅವಳ ದ್ರೋಹಕ್ಕೆ ಋಣಿ. ಒಂದಲ್ಲ ಒಂದು ಬೇಸರಕ್ಕೆ ಜೋತುಕೊಳ್ಳಲು ಎಷ್ಟೊಂದು ಹಲಬುತ್ತೀವಿ! ಉತ್ಕಟವಾಗಿ ಬದುಕೋದಿಕ್ಕೆ ಪ್ರೀತಿ ಹೇಗೆ... Continue Reading →
ತಿನ್ನಬಾರದ ಹಣ್ಣು ತಿಂದಿದೇವೆ ನಾವು
(ಓಶೋ ನಿಷೇಧಿತ ಹಣ್ಣಿನ ಬಗ್ಗೆ ಕೊಡೋ ವ್ಯಾಖ್ಯೆ ಅದ್ಭುತ. ಅವರದನ್ನ ತಿಳಿವಿನ ಹಣ್ನು ಅನ್ನುತ್ತಾರೆ. ಅದನ್ನ ತಿಂದಾಗ ಆಡಮ್- ಈವರಿಗೆ ತಮ್ಮ ಹುಟ್ಟಿನ ಉದ್ದೇಶ ಗೊತ್ತಾಯ್ತು, ಸ್ವತಂತ್ರರಾಗಿ ಬದುಕು ಕಟ್ಟಿಕೊಂಡರು ಅನ್ನುತ್ತಾರೆ ಓಶೋ. ಅದನ್ನ ಓದುತ್ತ ನನ್ನೊಳಗಿನ ಅವರಂಥದೇ ತಲೆತಿರುಕತನ ಜಾಗೃತವಾಗಿ ಈ ಕವಿತೆ.... ಥರದ್ದು...) ಬಾಯಿ ಒರೆಸಿಕೋ ನೀರು ಕುಡಿದುಬಿಡು ರುಚಿ ನಾಲಗೆಯಗಲಿ ತೊಲಗಿಹೋಯ್ತೋ ನೋಡು. ತಿನ್ನಬಾರದ ಹಣ್ಣು ತಿಂದಿದೇವೆ ನಾವು. ಮೊದಲಿಂದಲೂ ಹಾಗೇನೇ ದೇವರೆಂಬ ಅಪ್ಪ ತೋಟದಲಿ ಗಿಡ ನೆಟ್ಟು ಹೂಬಿಟ್ಟು ಹಣ್ಣಿಟ್ಟು ತಿನ್ನಬೇಡಿರೆಂದ.... Continue Reading →
ಪಾಂಡಣ್ಣನ ನೆನಪಿನೊಂದಿಗೆ ಜಾನುವಾರು ಜಾತ್ರೆ ಬಯಲು
ನಾನು ಚಿಕ್ಕಿರುವಾಗಿಂದ ನೋಡಿದ್ದ ಪಾಂಡಣ್ಣ ಮೊನ್ನೆ, ಹಬ್ಬದ ಹಿಂದಿನ ದಿನ ಹೃದಯನಿಂತು ಇಲ್ಲವಾಗಿದ್ದಾರೆ. ನಾನೂ ಅಪ್ಪಿಯೂ ಪ್ರಿತಿಯಿಂದಲೂ ಚೇಷ್ಟೆಯಿಂದಲೂ 'ಭಾಲು' ಅಂತ ಕರೆಯುವುದಿತ್ತು ಅವರನ್ನ. ಪಾಂಡಣ್ಣ, ತಮ್ಮಪಾಡಿನ ಮನುಷ್ಯ. ಯಾರ ಉಸಾಬರಿಗೂ ಹೋಗದೆ ಇರುತ್ತಿದ್ದವರು. ಊರ ಜನರೆಲ್ಲ ಕಾರ್ತೀಕದ ಹೊತ್ತಿಗೆ ಮಾತ್ರ ವೆಂಕಟರಮಣ ಗುಡಿಗೆ ಸಿಂಗಾರ ಮಾಡಲು ಉತ್ಸಾಹ ತೋರ್ತಿದ್ದರೆ, ಇವರು ಮಾತ್ರ ಪ್ರತಿ ಬೆಳಗ್ಗೆ ಅಲ್ಲೊಂದು ರೌಂಡು ಓಡಾಡಿ, ಗುಡಿ ಸುತ್ತ ಗುಡಿಸಿ, ಅಗೀಗ ಕಳೆ ತೆಗೆದು ಬರುತ್ತಿದ್ರು. ಅದನ್ನವರು 'ಸೇವೆ' ಅಂತಲೂ ಅಂದುಕೊಳ್ತಿರಲಿಲ್ಲ, ಕರ್ತವ್ಯ... Continue Reading →
ಮಾರ್ಚ್ 25,2008ರ ಒಂದು ಬರೆಹ
ಎಂದಿನಂತೆ, ಬ್ಲಾಗಲ್ಲೇನೋ ಗಲಾಟೆಯಾಗಿ, ಬ್ಲಾಗಿಂಗ್ ಶುರು ಮಾಡಿದ ವರ್ಷದೊಳಗೇ ಡಿಲೀಟ್ ಮಾಡಿಬಿಟ್ಟಿದ್ದೆ. ಆಗಿನ ಬರೆಹಗಳ ಸಾಫ್ಟ್ ಕಾಪಿ ಒಂದು ಕಡೆ ಇದ್ದಿದ್ದು ಅಚಾನಕ್ ಇವತ್ತು (ಮತ್ತೊಮ್ಮೆ) ಸಿಕ್ತು. ಕೆಲವೆಲ್ಲ 'ಅರ್ರೆ!' ಅನಿಸಿ, ಮತ್ತೆ ಇಲ್ಲಿ... ಈ ಬರೆಹ, ನೈಪಾಲರು ತಮ್ಮ ಬಯಾಗ್ರಫಿಯಲ್ಲಿ ಬರೆದುಕೊಂಡಿದ್ದ ಒಂದು ಸಂಗತಿಯನ್ನಾಧರಿಸಿ ಬರೆದಿದ್ದಾಗಿತ್ತು... ಬರೋಬ್ಬರಿ ನಲವತ್ತು ವರ್ಷಗಳ ಕಾಲ ಹೆಂಡತಿಯನ್ನ ಹುರಿದುಮುಕ್ಕಿದ ನೈಪಾಲರು ಕನ್ಫೆಸ್ ಮಾಡಿಕೊಂಡಿದ್ದಾರೆ. “ಬಹುಶಃ ನಾನು ನಿರಂತರವಾಗಿ ನೀಡಿದ ಮಾನಸಿಕ ಹಿಂಸೆಯೇ ಅವಳನ್ನು ಕೊಂದಿತು” ಎಂದು ಹೇಳಿಕೊಂಡಿದ್ದಾರೆ. ಪ್ಯಾಟ್ರಿಕ್ ಫ್ರೆಂಚ್... Continue Reading →
ಅನುಗೂಂಜಿನ ನೆವದಲ್ಲಿ… (ಒಂದು ರಿಸೈಕಲ್ಡ್ ಬರಹ)
ನಾನಿಲ್ಲಿ ಎಂಭತ್ತರ ದಶಕದ ಕೆಲವು ಸೀರಿಯಲ್ಲುಗಳ ಬಗ್ಗೆ ಹರಟಿದ್ದೇನೆ. ಸೂತ್ರವಿಲ್ಲದೆ ಸಾಗಿರುವ ಬರಹವಿದು. ಒಂಥರಾ ನಾಸ್ಟಾಲ್ಜಿಯಾ. ಅಂದಿನ ಸೀರಿಯಲ್ಲುಗಳ ಬಗ್ಗೆ ಗೊತ್ತಿಲ್ಲದವರು, ಇಂದಿನವರು ಇದನ್ನ ಓದಿ ಬಯ್ದುಕೊಳ್ಳಬೇಡಿ. ಬಹುಶಃ ಈ ಲೇಖನದಲ್ಲಿ ನಿಮಗೆ ಏನೂ ಸಿಗಲಾರದು. ಇದೊಂದು ನೆನಪಿನ ಸೆಲೆಬ್ರೇಶನ್ ಅಷ್ಟೇ. ಆದ್ದರಿಂದ ಇದು ಕಡ್ಡಾಯವಾಗಿ ಆಸಕ್ತರಿಗೆ ಮಾತ್ರ. ಆದರೂ ಓದುತ್ತೇವೆಂದು ಹೊರಟು ಬೋರು ಹೊಡೆಸಿಕೊಂಡರೆ, ಆಮೇಲೆ ನನ್ನನ್ನ ಮಾತ್ರ ದೂರಬೇಡಿ, ಮೊದಲೇ ಹೇಳ್ಬಿಟ್ಟಿದ್ದೀನಿ! (ಇದು 3 ವರ್ಷ ಹಳೆಯ ಬರಹ) ~ “ಪ್ರೇಮ್ ಓ ಚಂದನ್... Continue Reading →
ಕನ್ಫೆಶನ್
ನಾನು ಬಹಳ ಇಷ್ಟಪಟ್ಟ ಬದುಕುಗಳಲ್ಲಿ ವಾಂಗರಿಯದ್ದೂ ಒಂದು. ಇಂಥವರಲ್ಲದೆ ನಮಗೆ ಇನ್ಯಾರು ತಾನೆ ಪ್ರೇರಣೆ? ಕೊನೆಪಕ್ಷ ಆ ದಿನವಾದರೂ ಒಂದು ಕ್ಷಣ ಮೌನದ ಗೌರವ ನನ್ನಿಂದ ಸಂದಾಯವಾಗಬೇಕಿತ್ತು. ಬಹುಶಃ ಈ ಶಿರೋನಾಮೆಯಲ್ಲದೆ ಬೇರೆ ಯಾವುದೂ ಸರಿ ಹೊಂದೋದಿಲ್ಲ ಇಲ್ಲಿ. ನಾನು ನಿಯಮಿತವಾಗಿ ಪೇಪರ್ ಓದೋದಿಲ್ಲ. ರೆಗ್ಯುಲರ್ ಆಗಿ ಟೀವಿ ನ್ಯೂಸ್ ನೋಡೋದು ಮತ್ತು ಪೇಪರ್ ಓದೋದನ್ನ ಬಿಟ್ಟು ಆರೇಳು ವರ್ಷಗಳಾಗಿಹೋಗಿವೆ. ಕಾರಣ ನೂರೆಂಟಿವೆ. ಇಂಥ ನನ್ನ ಮೊಂಡುತನದಿಂದ ಹಲವಷ್ಟು ಸಂಗತಿಗಳು ತಡವಾಗಿ ಗೊತ್ತಾಗ್ತವೆ. ಹಾಗೆ ತಡವಾಗಿ ಗೊತ್ತಾದ... Continue Reading →
