ಸನ್ಯಾಸದ ನಿಜ ರೂಪಕವಾದವಳು, ಜೀವಾ

ಕುಮಾರಾಯನನನ್ನು ಕುಶಾನರು ತಮ್ಮ ರಾಜಪಂಡಿತನನ್ನಾಗಿ ಮಾಡಿಕೊಂಡರು. ಮನೆಗಿಂತ ಹೆಚ್ಚು ವಿಚಾರ ಗೋಷ್ಠಿಗಳಲ್ಲೇ ಕಾಲ ಕಳೆಯುತ್ತಿದ್ದ ಜೀವಾ ಆತನಿಂದ ಆಕರ್ಷಿತಳಾದಳು. ಅದುವರೆಗೂ ಮದುವೆ ಬೇಡವೆಂದು ಹಟ ಹಿಡಿದಿದ್ದ ಹುಡುಗಿ ಈಗ ಮತ್ತೊಂದು ಹಟ ಮುಂದಿಟ್ಟಳು. “ನಾನು ಮದುವೆಯಾಗುವುದಾದರೆ ಅಂತಲ್ಲ, ನಾನು ಖಂಡಿತವಾಗಿಯೂ ಕುಮಾರಾಯನನ್ನು ಮದುವೆಯಾಗ್ತೀನಿ. ನೀವು ಅವರ ಬಳಿ ಪ್ರಸ್ತಾಪವಿಡಬೇಕು”! ಬುದ್ಧಿವಂತಳೂ ವಿನಯಶೀಲಳೂ ಆಗಿದ್ದ ತಂಗಿಯ ಬೇಡಿಕೆ ಅಣ್ಣಂದಿರಿಗೇನೋ ಪ್ರಿಯವೇ ಆಗಿತ್ತು. ಆದರೆ ಬಿಕ್ಖುವಿನಂತೆ ಇರುತ್ತಿದ್ದ ಕುಮಾರಾಯನನನ್ನು ಒಪ್ಪಿಸೋದು ಹೇಗೆ? ಜೀವಾ ತನ್ನ ಲಜ್ಜೆಯ ಪರದೆ ಸರಿಸಿದಳು. ತಾನೇ... Continue Reading →

ಕ್ರೂರ ಕಣ್ಣುಗಳೆಡೆಗಿನ ತಣ್ಣನೆಯ ನೋಟ!

ಪುಟ್ಟ ‘ಗುಯಿ’ಗೆ ಹಾಡುವುದು ಅಂದರೆ ಇಷ್ಟ. ನರ್ತಿಸೋದು ಕೂಡಾ. ಬರಿ ಹಸ್ತಗಳನ್ನೆ ಬಳಕಿಸುತ್ತ ಚೂರು ಚೂರೆ ಸೊಂಟ ತಿರುಗಿಸುತ್ತ ಕೊರಿಯಾದ ಹಳೆ ಹಾಡುಗಳಿಗೆ ಹೆಜ್ಜೆ ಹಾಕುತ್ತ ಅಂತಃಪುರದ ಉದ್ದಗಲ ಬಣ್ಣ ತುಂಬುತ್ತಿದ್ದಳು. ಅವಳು ರಾಜ ಕುಮಾರಿ. ಹಾಗಂತ ಅವಳಮ್ಮ ರಾಣಿಯೇನಲ್ಲ. ಜೊಸೆಯಾನ್ ವಂಶದ ರಾಜ ಯಂಗ್‌ಯುಂಗ್‌ನ ಹಾದರಕ್ಕೆ ಹುಟ್ಟಿದವಳು. ಜನ್ಮ ಕೊಡುತ್ತಲೇ ಅಮ್ಮ ತೀರಿಕೊಂಡಿದ್ದರಿಂದ ಅಂತಃಪುರದ ಹಿರಿಯ ಹೆಂಗಸರು ಮಗುವನ್ನ ತಂದು ಜೋಪಾನ ಮಾಡಿದ್ದರು, ಮುದ್ದಿನಿಂದ ‘ಗುಯಿ’ ಎಂದು ಕರೆದರು. ಅವಳ ಪೂರ್ತಿ ಹೆಸರು ಹ್ಯುನ್‌ಯು ಗುಯಿ.... Continue Reading →

ಮೊದಲ ಕವಯತ್ರಿಯ ಕೊನೆಯುಸಿರು… ಕೊನೆ ಕವಿತೆ….

  ರಾಜನರಮನೆಯ ಚೆಂದದ ಹೆಣ್ಣುಮಗಳೊಬ್ಬಳು ಗುಲಾಮನ ರೂಪಕ್ಕೆ ಮನಸೋಲುತ್ತಾಳೆ. ಪ್ರೇಮದಲ್ಲಿ ಮುಳುಗುತ್ತಾಳೆ. ಈ ಪ್ರೇಮ ಅವಳನ್ನು ಕವಿಯಾಗಿಸುತ್ತೆ. ಕವಿತೆಗಳಿಂದಲೇ ರಟ್ಟಾಗುವ ಗುಟ್ಟು ಅವಳ ಜೀವಕ್ಕೆ ಮುಳುವಾಗುತ್ತೆ. ಗುಲಾಮನನ್ನು ಹಾಳು ಬಾವಿಗೆ ತಳ್ಳಿಸುವ ಅವಳಣ್ಣ, ತಂಗಿಯ ಎರಡೂ ಕೈಗಳ ನರ ಕತ್ತರಿಸಿ ಹಬೆಕೋಣೆಯಲ್ಲಿ ಕೂಡಿ ಹಾಕುತ್ತಾನೆ. ಸೋರಿದ ರಕ್ತದೊಳಗೆ ಬೆರಳದ್ದಿ ಹಬೆಕೋಣೆಯ ಗೋಡೆಯ ಮೇಲೆ ತನ್ನ ಕೊನೆಯ ಕವಿತೆ ಬರೆಯುತ್ತಾಳೆ ರಾಜಕುಮಾರಿ. ರಕ್ತದ ಮಡುವಿನಲ್ಲೇ ಕೊನೆಯಾಗುತ್ತಾಳೆ.   ಅವಳನ್ನು ಪರ್ಷಿಯನ್ ಕಾವ್ಯ ಜಗತ್ತು ತನ್ನ ಭಾಷೆಯ ಮೊದಲ ಕವಯತ್ರಿ... Continue Reading →

Blog at WordPress.com.

Up ↑