ಥೇರಿಯರ (ಹಿರಿಯ ಬೌದ್ಧ ಬಿಕ್ಖುಣಿಯರು) ರಚನೆಗಳ ಅನುವಾದ ಯತ್ನವಿದು.... ನನ್ನಿರುವ ಕಾಂತಿ, ಕಣ್ ಹೊಳಪು ರೂಪ, ಮೈಬಣ್ಣಗಳಿಂದ ನೆರಕೆಯ ಹೆಣ್ಣುಗಳ ಹೊಟ್ಟೆಯುರಿಸುತಿದ್ದೆ. ಮೂರ್ಖ ಗಂಡಸರನ್ನ ಸೆಳೆಯಲಿಕ್ಕಾಗಿ ದೇಹವಲಂಕರಿಸಿ ನಿಂತು ಕೋಠಿ ಬಾಗಿಲ ಮುಂದೆ ಕಾಯುತಿದ್ದೆ. ಬೇಟೆಗಾತಿಯ ಹಾಗೆ ಹೊಂಚುತ್ತ ನನ್ನಾಭರಣಗಳ ಕುಲುಕಿ ಸೆಳೆದು ಮೋಹದ ಬಲೆಗೆ ಕೆಡವುತಿದ್ದೆ, ಬಿದ್ದವನ ಕಂಡು ಗುಂಪು ಸೀಳುವಂತೆ ಅಬ್ಬರಿಸಿ ನಗುತಲಿದ್ದೆ. ಈಗ... ಅದೇ ದೇಹ ದುಪ್ಪಟಿ ಕಾವಿ ಸುತ್ತಿಕೊಂಡಿದೆ; ತಲೆಗೂದಲು ತೆಗೆದು ಸಪಾಟು. ಭಿಕ್ಷೆಗಾಗಿ ಅಲೆದ ದಣಿವಲ್ಲಿ ಮರದ ಬೊಡ್ಡೆಗೆ ಮೈಯಾನಿಸಿ... Continue Reading →
ಮತ್ತೆ ಮತ್ತೆ ನೆನಪಾಗುವ ಗೌರಿ ನನಗೇನಾಗಿದ್ದಳು?
ನನ್ನ ಅಮ್ಮನಿಗೆ ಈಗ ಐವತ್ತಾರು ವರ್ಷ. ಕಳೆದ ಕೆಲವು ದಿನಗಳಿಂದ ಬರೆಯಲು ಶುರು ಹಚ್ಚಿದ್ದಾಳೆ. ನನಗೆ ಇದಕ್ಕಿಂತ ಖುಷಿಯ ವಿಷಯ ಉಂಟೆ? ಅಪ್ಪಟ ಮಲೆನಾಡಿಗಳಾದ ಅಮ್ಮ ಒಂದು ಅನುಭವಗಳ ಕಂತೆ. ನನ್ನಲ್ಲಿ ಕೊಂಚವೇನಾದರೂ ಸೂಕ್ಷ್ಮತೆ, ಸಂವೇದನೆಗಳಿದ್ದರೆ ಅದು ಅಮ್ಮನಿಂದಲೇ. ನಾನು ಯಾವತ್ತೂ ಹೇಳಿಕೊಳ್ಳುವಂತೆ, ನಾನು ನೋಡಿದ ಮೊದಲ ಫೆಮಿನಿಸ್ಟ್ ನನ್ನಮ್ಮ. ಅವಳ ಒಂದು ಬರಹವನ್ನ ’ಮಹಿಳಾ ದಿನಾಚರಣೆ’ಯ ಹೊತ್ತಿನಲ್ಲಿ ನಿಮ್ಮೆದುರು ಇಡುವ ಖುಷಿ ನನ್ನದು. ಅಂದ ಹಾಗೆ, ಅಮ್ಮನ ಹೆಸರು ಶೈಲಜಾ ಅಂತ. `ಅಮ್ಮಾ... ಅಮ್ಮಾ... '... Continue Reading →
ಎ ಕಾಸ್ಮಿಕ್ ಜೋಕ್ ~ ಮತ್ತೊಂದು ಮಧ್ಯದ ಎಪಿಸೋಡ್
ಮಣಿ ಒಂದು ಮಧ್ಯಾಹ್ನ ನನ್ನನ್ನು ಊಟಕ್ಕೆ ಬರುವಂತೆ ಕರೆದಳು. ಏನೋ ಅಪರೂಪದ ತಿನಿಸು ಮಾಡಿದ್ದೀನಿ ಅಂತಲೂ ಹೇಳೀದಳು. 'ಏನು ವಿಶೇಷ?' ನಾನಂದೆ. 'ಸಂತೋಷ ಪಡಲಿಕ್ಕೆ ನಿನಗೆ ಏನಾದರೂ ಕಾರಣ ಇರಲೇಬೇಕೇನು!?' ಅಂದು ಬಾಯ್ಮುಚ್ಚಿಸಿದಳು. ಮರುಘಳಿಗೆಯಲ್ಲಿ ನಾನು ಅವಳ ಮನೆ ಹೊಸ್ತಿಲು ತುಳಿದಿದ್ದೆ. ಆದರೆ ಅಲ್ಲಿ ಬೇರೆಯೇ ಸ್ವಾಗತವಿತ್ತು. ವಿಲಕ್ಷಣ ನೋಟದ, ತೆಳ್ಳಗಿನ, ಎತ್ತರದ ವ್ಯಕ್ತಿಯೊಬ್ಬ ಅಲ್ಲಿ ಕುಳಿತುಕೊಂಡಿದ್ದ. ಅವನ ದಟ್ಟ- ಗಾಢ- ನೀಳ ಕೂದಲು ಭುಜದವರೆಗೂ ಇಳಿಬಿದ್ದಿತ್ತು. ಅವನ ಉದ್ದನೆಯ ಮುಖದಲ್ಲಿನ ಕಣ್ಣುಗಳು ಶಾಂತಕೊಳದಂತೆ ಕುಳಿತಿದ್ದವು. ಮುಖದಲ್ಲಿ... Continue Reading →
ಎ ಕಾಸ್ಮಿಕ್ ಜೋಕ್ ~ 18!
ಎ ಕಾಸ್ಮಿಕ್ ಜೋಕ್, ನಾನು ಸದ್ಯ ಅನುವಾದಿಸ್ತಿರೋ ಕಾದಂಬರಿ. ಇದರ ಭಾಗ 1 ಮತ್ತು 2 ಈಗಾಗಲೇ ಹಾಕಿದೀನಿ. ನಂತರದ 17 ಪೋಸ್ಟ್ ಗಳನ್ನು ಹಾರಿಸಿ 18ನೆಯದ್ದು ಇಲ್ಲಿದೆ 🙂 ಕುಂಜಮ್ ಕುಂಜಮ್ ಮನುಷ್ಯನ ಉಪಕಾರ ನಾನು ಪೂರ್ತಿಯಾಗಿ ಈ ಲೋಕಕ್ಕೆ ಮರಳಿದ್ದು ಜನರಲ್ ಬೋಗಿ ಹತ್ತಿಕೊಂಡ ಮೇಲೇನೇ. ದೇಹಕ್ಕೆ ಚಿಕ್ಕ ಚಲನೆಯೂ ಸಾಧ್ಯವಾಗದಷ್ಟು ಅದು ಕಿಕ್ಕಿರಿದು ತುಂಬಿಕೊಂಡಿತ್ತು. ಉಸಿರುಗಟ್ಟುವ ಪರಿಸ್ಥಿತಿ. ಟ್ರೈನ್ ನಿಧಾನಕ್ಕೆ ಓಡಲು ಶುರುಮಾಡಿ ವೇಗ ಪಡೆದುಕೊಳ್ಳುತ್ತಿತ್ತು. ನಾನು ಟಾಯ್ಲೆಟ್ ಬಾಗಿಲಿನ ಬಳಿ ಕಾಲೂರಲು... Continue Reading →
ಎ ಕಾಸ್ಮಿಕ್ ಜೋಕ್ ~ 2
ಮೊದಲ ಭಾಗ ಇಲ್ಲಿದೆ ಹಾಗೆ ನಾನು ಅವಳನ್ನ ನೋಡಿದ ತಕ್ಷಣ ಅನಿಸಿದ್ದನ್ನೇ ನೆಚ್ಚಿಕೊಂಡಿದ್ದರೆ ತಪ್ಪಾಗಿಬಿಡ್ತಿತ್ತು. ಕೆಲವರಿಗೆ ಹೀಗಾಗುತ್ತೆ. ಮೊದಲ ನೋಟದಲ್ಲಿ ಅನಿಸಿದ್ದಕ್ಕೇ ಜೋತುಬಿದ್ದು ಎಷ್ಟೋ ಅಮೂಲ್ಯವಾದ್ದನ್ನ ಕಳಕೊಂಡುಬಿಡ್ತೇವೆ, ಪಡೆಯುವ ಮೊದಲೇ. ಇಂತಹ ಸನ್ನಿವೇಶದ ಭೇಟಿಯಲ್ಲಿ ಅವಳು ಅಪರಿಚಿತತೆಯನ್ನ ಹೋಗಲಾಡಿಸ್ಕೊಳ್ಳಲು ಹಾಗೆ ಆಡಿದಳು ಅನಿಸುತ್ತೆ ಈಗ. ಅವಳನ್ನೇ ನಾನು ಕಾಯ್ತಿದ್ದುದು ಅಂತ ಗೊತ್ತಾದ ಮೇಲೆ ಇಬ್ಬರೂ ನಾನು ಮೊದಲೇ ನೋಡಿಟ್ಟುಕೊಂಡಿದ್ದ ಕಾರ್ನರ್ ಟೇಬಲಿನೆಡೆಗೆ ಬಂದೆವು. ನನ್ನ ಕಣ್ಣು ಇನ್ನೂ ಕಿಟಕಿಯ ಗಾಜಿನಾಚೆ ನಡುರೋಡಿನ ಹುಡುಗಿಯನ್ನೇ ಹುಡುಕುತ್ತಿತ್ತು. ‘ಅವಳು ನನ್ನ... Continue Reading →
ಎ ಕಾಸ್ಮಿಕ್ ಜೋಕ್
ಗೆಳೆಯ ರಾಘವ ಚಿನಿವಾರ್ ಬರೆದ ಇಂಗ್ಲಿಷ್ ನಾವೆಲ್ 'ಎ ಕಾಸ್ಮಿಕ್ ಜೋಕ್'. ಅದನ್ನ ಕನ್ನಡದಲ್ಲಿ ನನ್ನ ಗ್ರಹಿಕೆ- ಶೈಲಿಯಲ್ಲಿ ನಿರೂಪಣೆ ಮಾಡಿದರೆ ಹೇಗಿರುತ್ತೆ ಅನ್ನುವ ಪ್ರಯೋಗ ನಡೆದಿದೆ. ಹುಡುಗನೊಬ್ಬನ biographyಯನ್ನ ಮತ್ತೆ ನಿರೂಪಿಸುವಾಗ ಗೊತ್ತಾಗ್ತಿದೆ, ಈ ಸಹಜೀವಗಳ ಒಳತೋಟಿಗಳು ಹೇಗೆಲ್ಲ ಇರ್ತವಲ್ಲ ಅಂತ... ~ ಕಂತು 1 ~ ಒಂದೇ ಸಮ ಮಳೆ. ನಾನು ಕಾಯುತ್ತ ನಿಂತಿದೇನೆ ಅನ್ನುವುದಷ್ಟೆ ಗೊತ್ತು. ಜೀನ್ಸು ಟೀ ಷರ್ಟುಗಳ ಹದಿ ಹುಡುಗ ಹುಡುಗಿಯರು ನನ್ನ ನೋಡಿಕೊಂಡು ಕಿಸಕ್ಕನೆ ನಕ್ಕು ಹೋಗ್ತಿರುವುದು ಕಾಣುತ್ತಿದೆ.... Continue Reading →
ಒಂದು ಸಾಫರ್‌ಜಾದೆ ಕವಿತೆ
ಸಾಫರ್‌ಜಾದೆ ಇರಾನಿ ಕವಯತ್ರಿ. ನೆಟ್ಟಲ್ಲಿ ಜಾಲಾಡುವಾಗ ಸಿಕ್ಕವಳು. ಈಕೆಯ ಕವಿತೆಗಳನ್ನೋದುವಾಗೆಲ್ಲ, ಮತ್ತೆ ಬಹಳಷ್ಟು ದೇಶಗಳ- ಭಾಷೆಗಳ ಹೆಣ್ಣುಗಳನ್ನೋದುವಾಗೆಲ್ಲ, ಅರೆ! ನಮ್ಮ ಹಾಗೇನೇ... ಇವರೂ ನಮ್ಮಂತೇನೇ... ಅನ್ನಿಸಿ ಸಂಭ್ರಮ ಮತ್ತು ವಿಷಾದ. ಗೆಳೆಯನೊಬ್ಬನಿಗೆ ಈ ಸಾಮ್ಯತೆಯನ್ನು ಹೇಳಿದಾಗ ‘ನಾನ್‌ಸೆನ್ಸ್’ ಅಂದುಬಿಟ್ಟ. ಪರವಾಗಿಲ್ಲ. ಸಾಫರ್‌ಜಾದೆಯನ್ನ ಕನ್ನಡಕ್ಕೆ ತಂದುಕೊಂಡು ಸುಮ್ಮನಿದ್ದೆ. ಅವುಗಳಲ್ಲಿ ಕೆಲವು ಇಲ್ಲಿ ಕಂಡರೂ ಕಾಣಿಸಬಹುದು. ಸಾಮ್ಯತೆ, ನಿಮಗೇ ಗೊತ್ತಾಗುವುದು. ಮೊದಲ ಮಿಡಿತದ ಜಾಗದಲ್ಲಿ... ನನ್ನ ಹುಟ್ಟುನೆಲವನ್ನ ನೋಡಿಲ್ಲ. ಅವಳೆಲ್ಲ ಒಳಗುದಿಗಳ ಸಹಿತ ಅಮ್ಮನ್ನ ಇರಿಸಲಾಗಿತ್ತಲ್ಲ, ಆ ಮನೆಯನ್ನ. ಅಲ್ಲಿನ್ನೂ... Continue Reading →
ಮೇಲೇಳುತ್ತೇನೆ ನಾನು
ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನ ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ, ದೂಳ ಕಣವಾಗಿಯಾದರೂನು ಮೇಲೇಳುತ್ತೇನೆ ನಾನು ನನ್ನ ಭಾವಭಂಗಿ ಬೇಸರವೇನು? ಮುಖ ಸೋತು ಕುಳಿತಿರುವೆ ಯಾಕೆ? ಕೋಣೆ ಮೂಲೆಯಲ್ಲಿ ನೂರು ತೈಲಬಾವಿಗಳನಿರಿಸಿಕೊಂಡಂಥ ಠೀವಿ ನನ್ನ ನಡೆಯಲಿದೆಯೆಂದೆ? ಸೂರ್ಯರಂತೆ, ಚಂದ್ರರಂತೆ ಕಡಲ ಮಹಾಪೂರದಂತೆ ಚಿಮ್ಮುಕ್ಕುವ ಭರವಸೆಯಂತೆ ಮೇಲೇಳುತ್ತೇನೆ ನಾನು ನಾನು ಮುರಿದು ಬೀಳುವುದ ನೋಡಬೇಕೆ? ತಲೆತಗ್ಗಿಸುವುದನ್ನು, ಕಣ್ ಕುಗ್ಗುವುದನ್ನು? ಎದೆಯ ಚೀರಾಟಕ್ಕೆ ಸೋತು ಕುಸಿದು ಬೀಳುವುದನ್ನು? ನನ್ನ ಗತ್ತು ನೋಯಿಸಿತೆ ನಿನ್ನ?... Continue Reading →
ಬೇಳೂರು ಸುದರ್ಶನರ ಕವಿತೆ, ಅನುಮತಿಯಿಲ್ಲದೆ…
ಇದು ನನ್ನ `ಸಿಡಿಲಾಗಲು ಕಾದಿದ್ದೇನೆ' ಕವಿತೆಗೆ ಸುದರ್ಶನ ಬೇಳೂರು ಅವರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ಕವಿತೆ. ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದು!! ನನಗಿಷ್ಟವಾಯ್ತು ಅಂತಲೇ ನಿಮ್ಮ ಜತೆ ಹಂಚಿಕೊಳ್ತಿದೇನೆ, ಅವರ ಅನುಮತಿ ಪಡೆಯದೆ... ಅವರು ಮನ್ನಿಸಿಯಾರು ಎನ್ನುವ ಭರವಸೆಯಿಂದ! ~ಚೇತನಾ ನನಗೆ ಶಬ್ದಗಳ ಪರಿಚಯವಿದೆ ಎಂದ ಮಾತ್ರಕ್ಕೆ ಮಾತನಾಡುತ್ತೇನೆ ಎಂದೆಲ್ಲ ಖುಷಿಪಡಬೇಡಿ. ನಾನು ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು. ನನಗೆ ನಿಶ್ಶಬ್ದದ ಬಗ್ಗೆ ಒಲವಿದೆ ಎಂದಮಾತ್ರಕ್ಕೆ ಸುಮ್ಮನಿರುತ್ತೇನೆ ಎಂದೆಲ್ಲ ದುಃಖಿಸಬೇಡಿ. ನಾನು ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು. ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ ನೀವು... Continue Reading →
ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…
ಮೊನ್ನೆವರೆಗೂ ಸೃಜನ್ ಚೆಂದದ ಚಿತ್ರಗಳನ್ನು ಬರೆಯುತ್ತಾರೆ, ಸೊಗಸಾದ ವಿನ್ಯಾಸ ಮಾಡುತ್ತಾರೆ ಎಂದಷ್ಟೆ ಗೊತ್ತಿದ್ದ ನನಗೆ, ಅವರು ಕಥೆಯನ್ನೂ ಕವನವನ್ನೂ ಬರೆಯುವುದಲ್ಲದೆ ಒಳ್ಳೆಯ ಅನುವಾದವನ್ನೂ ಮಾಡುತ್ತಾರೆಂದು ತಿಳಿಯಿತು. ನಮ್ಮ ವಾರಗೆಯ ಬರಹಗಾರರ ಬಗ್ಗೆ ಇರುವ ಅಜ್ಞಾನಕ್ಕೆ ನಾಚಿಕೆಯಾಗುವುದರ ಜೊತೆಗೇ ಓದಿನ ಕೊರತೆ ಮುಖಕ್ಕೆ ಹೊಡೆದಂತಾಯ್ತು! ಈ ಜ್ಞಾನೋದಯವಾಗಿದ್ದು, ಸೃಜನ್ ಅವರ ‘ಯಶೋಧರೆ, ಈ ವ್ಯಥೆಯೇತಕೆ?’ ಎಂಬ ಅನುವಾದಿತ ಕವಿತೆಯನ್ನೋದಿದಾಗ. ಈ ಕವಿತೆಯ ಮೂಲ ತೆಲುಗಿನದು. ಅಲ್ಲಿನ ಸ್ತ್ರೀ ಸಂವೇದನೆಯ ಕವಯತ್ರಿ ಡಾ.ಜಯಪ್ರಭಾ ಅವರ ಅದೇ ಹೆಸರಿನ ಕವನ ಸಂಕಲನದ... Continue Reading →
