ಕನಸು ‘ನೋಡೋಣ’ ಬನ್ನಿ!

ಜಗತ್ತಿನ ಖ್ಯಾತ ನಿರ್ದೇಶಕರಲ್ಲೊಬ್ಬರಾದ ಅಕಿರಾ ಕುರಸೋವಾ   ಅವರ ‘ಡ್ರೀಮ್ಸ್’ ಸಿನೆಮಾವನ್ನು ನೋಡುವ ಅವಕಾಶ ಒದಗಿಸಿಕೊಟ್ಟಿದೆ ಸಾಂಗತ್ಯ. ಇನ್ನು ಮುಂದೆಯೂ ಈ ಬಗೆಯ ವಿಭಿನ್ನ ಪ್ರಯೋಗಗಳನ್ನು ಬ್ಲಾಗ್ಲೋಕದಲ್ಲಿ ಮಾಡಲಿದೆ ಈ ಉತ್ಸಾಹಿ ತಂಡ. ಅದಾಗಲೇ ಚಿತ್ರ ಖಜಾನೆಯಂತಹ ವಿನೂತನ ಪ್ರಯೋಗಕ್ಕೆ ಕೈಹಾಕಿರುವ ಸಾಂಗತ್ಯ, ಸಿನೆಮಾ ಜಗತ್ತಿನ ಎಲ್ಲವನ್ನೂ ಕನ್ನಡದಲ್ಲಿ ಒದಗಿಸಿಕೊಡುವ ಮಹದಾಸೆ ಹೊಂದಿದೆ. ಇದಕ್ಕೆ ಬ್ಲಾಗ್ಗೆಳೆಯರೆಲ್ಲರ ಸಲಹೆ, ಸಹಕಾರ, ಪ್ರೋತ್ಸಾಹಗಳು ಬೇಕಷ್ಟೆ. ಇನ್ನೇಕೆ ತಡ, ಕನಸು ನೋಡಲು ಸಾಂಗತ್ಯಕ್ಕೆ ಹೊರಡೋಣ, ಬನ್ನಿ!

ಕೊನೆಗೂ ಸಿದ್ದಣ್ಣನ ಪುಸ್ತಕ ರೆಡಿಯಾಗ್ತಿದೆ!!

ಹಾಗೆ ನೋಡಿದರೆ, ಸಿದ್ದು ದೇವರ ಮನಿ ಎಂಬ ಯುವ ಕವಿಯ ಕವನ ಸಂಕಲನ ಯಾವತ್ತೋ ಪುಸ್ತಕವಾಗಿ ಹೊರಬರಬೇಕಿತ್ತು. ಆದರೆ, ಚೆಂದ ಚೆಂದದ ಕವಿತೆಗಳನ್ನು ಬರೆದೂ ಗೆಳೆಯರು ‘ಚೆನ್ನಾಗಿದೆ’ ಅಂದಾಗ ಸ್ವತಃ ‘ಹೌದಾ’ ಅನ್ನುತ್ತ ಬೆರಗಿಗೆ ಒಳಗಾಗುವ ಸಂಕೋಚದ ಹುಡುಗ ಸಿದ್ದು, ಹಾಗೆ ತನ್ನಿಂದ ತಾನೆ ಪುಸ್ತಕ ಹೊರಡಿಸುವುದು ಅಸಾಧ್ಯದ ಮಾತಾಗಿತ್ತು. ಕನ್ನಡ ಪುಸ್ತಕ ಪ್ರಾಧಿಕಾರ ಪ್ರತಿ ವರ್ಷ ಆಯ್ದ ಯುವ ಕವಿಗಳ ಚೊಚ್ಚಲ ಕೃತಿ ಪ್ರಕಟಣೆಗೆ ನೀಡುವ ‘ಪ್ರೋತ್ಸಾಹ ಧನ ಪ್ರಶಸ್ತಿ’ಗೆ ಸಿದ್ದುವಿನ ಕವನ ಸಂಕಲನ ಆಯ್ಕೆಯಾಗಿದೆ.... Continue Reading →

ಸಂಕೋಚದಿಂದಲೇ….

ಹೌದಲ್ಲ? ನಾನೂ ನೆರೂದನ ಕವಿತೆ ಅನುವಾದ ಮಾಡಿದೀನಿ ಅಂತ ಹೇಳ್ಕೊಂಡು ಅದನ್ನ ಹಾಕದೆ ಹೋದರೆ ತಲೆತಪ್ಪಿಸ್ಕೊಂಡ ಹಾಗೆ ಆಗುತ್ತೇನೋ? ಅದಕ್ಕೇ, ಸಂಕೋಚದಿಂದಲೇ ಇಲ್ಲಿ ಹಾಕ್ತಿದೇನೆ. ಈಗಾಗಲೇ ಟೀನಾ ಮತ್ತು ಮಹೇಶ್ ಅನುವಾದಗಳನ್ನ ಓದಿದೀರಲ್ಲ? ನಿಮ್ಮಲ್ಲೂ ಯಾರಾದರೂ ಇದೇ ಕವಿತೆಯನ್ನ ಅನುವಾದಿಸಿದ್ದರೆ ದಯವಿಟ್ಟು ನಮ್ಮ ಜೊತೆ ಹಂಚಿಕೊಳ್ಳಿ. ನಿಸಾರರು ಮಾಡಿರುವರೆಂದು ಕೇಳಿದ್ದೇನೆ. ಯಾರಲ್ಲಾದರೂ ಅದರ ಪ್ರತಿ ಇದ್ದರೆ ಪೋಸ್ಟ್ ಮಾಡಬೇಕೆಂದು ವಿನಂತಿ. ಇಂದಿನಿರುಳು ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ... ಇಂದಿನಿರುಳು  ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ.... Continue Reading →

ಮತ್ತೊಬ್ಬ ಗೆಳೆಯನ ಕವಿತೆ…

ಬೆಂಗಳೂರಿಗೆ ದೂರವೆನಿಸುವ ಬಳ್ಳಾರಿಯ ಕೊಟ್ಟೂರಿನಲ್ಲೊಬ್ಬ ಗೆಳೆಯನಿದ್ದಾನೆ. ಹೆಸರು, ಸಿದ್ಧು ದೇವರಮನಿ. ಗೆಳೆತನದ ವಿಶೇಷವೆಂದರೆ, ಅವನು ಗಾಢವಾದ ಕವಿತೆಗಳನ್ನ ಬರೀತಾನೆ, ಮತ್ತು ಅದರಿಂದಲೇ ನನಗೆ ಪರಿಚಿತನಾಗಿದ್ದಾನೆ. ಬರಹ ನನಗೆ ಏನು ಕೊಟ್ಟಿದೆ? ಅಂತ ಕೇಳಿದರೆ ಹೊಟ್ಟೆಬಟ್ಟೆಗಿಂತಲೂ ಹೆಚ್ಚಾಗಿ ಸಾಕಷ್ಟು ಗೆಳೆಯರನ್ನು ಕೊಟ್ಟಿದೆ ಎಂದು ತುಂಬು ಮನಸಿನಿಂದ ಹೇಳಿಕೊಳ್ತೇನೆ. ಅಂತಹ ಕೆಲವು ಖುಷಿಖುಷಿಯ ಗೆಳೆಯರಲ್ಲಿ ಈತನೂ ಒಬ್ಬ. ಅಲ್ಲದೆ, ನನ್ನನ್ನು ‘ಗಾನಾ’ ಎಂದು ಕರೆಯುವ ಕೆಲವೇ ಮಂದಿಯಲ್ಲೊಬ್ಬ. ಸಿದ್ಧು ದೇವರಮನಿಯ ಕವಿತೆಗಳಲ್ಲಿ ನನಗಿಷ್ಟವಾದ ಒಂದನ್ನು ನಿಮ್ಮೊಂದಿಗೆ ಹಂಚಿಕೊಳ್ಳುವ ಆಸೆಯಿಂದ ಇಲ್ಲಿ... Continue Reading →

ಕುಶಲ ವೃತ್ತಾಂತವ ಕೇಳಿರೆ!

ಬಾಗಿಲು ಬಡಿದ ಸದ್ದಿಗೆ ಕೆಲಸದಾಕೆ ಓಡಿ ಬಂದಳು. ನನ್ನ ನೋಡಿ `ತಗಾಳಿ! ಡೆಲ್ಲಿಯಿಂದ ಬರೋದೂ ಅಂದ್ರೆ ಶಿಮಾಗದಿಂದ ಬಂದಷ್ಟ್ ಸುಲೂಭ ಆಗ್ಯದೆ ಈಗ’ ಅಂದು ಸಡಗರಿಸಿದಳು. ಅವಳ ಹಿಂದೆಯೇ ಸೆರಗಿಗೆ ಕೈಯೊರೆಸುತ್ತ ಬಂದ ಅಮ್ಮನ ಮುಖದಲ್ಲೇನೂ ಖುಷಿ ಕಾಣಲಿಲ್ಲ. ಕಾಣೋದಾದರೂ ಹೇಗೆ? ನಾನೊಬ್ಬಳೇ… ಅದೂ ಅಷ್ಟು ದೊಡ್ಡ ಸೂಟ್ ಕೇಸ್ ಹಿಡ್ಕೊಂಡು, ಹೀಗೆ ಹೇಳದೆ ಕೇಳದೆ ಬಂದಿರುವಾಗ!? ಮುಂದಿನದು ಇಲ್ಲಿದೆ...

ಅಂವ, ‘ನಗ್ಬೇಕೂ ಅಂದ್ರೆ ಮದ್ವೆ ಆಗ್ಬೇಕು ಸಾರ್!’ ಅಂದ!!

ಇದೊಬ್ಬ ಗೆಳೆಯ ಬರೆದಿದ್ದು. ಇಂಥದ್ದು ಬಹಳ ಬರೆದಿದಾನೆ. ಅದೆಲ್ಲ ಗಂಡಸ್ರ ಗೋಳಂತೆ. ಹಾಗಂದಿದಾನೆ. ನಿಮಗೂ ನನ್ ಬ್ಲಾಗಲ್ಲಿ ಹೆಂಗಸರ ಸುಖದುಃಖ ಓದಿಯೋದಿ ಬೇಜಾರ್ ಬಂದಿರಬಹುದಲ್ವ? ಅದಕ್ಕೆ ಇದನ್ನ ಇಲ್ಲಿ ಹಾಕ್ತಿದೇನೆ. ಮುಂದೆಯೂ ರೆಗ್ಯುಲರ್ರಾಗಿ ಹಾಕುವ ಇರಾದೆ ಇದೆ. ಆಗಲಾದ್ರೂ ನೀವು ನಂಗೆ ಕೊಟ್ಟಿರುವ ‘ಬಿರುದು- ಬಾವಲಿ’ಗಳನ್ನ ವಾಪಸ್ ತೊಗೊಳ್ತೀರೇನೋ ಅನ್ನುವ ದೂರದ ಆಸೆ ನಂದು! ~ ಅವನ ನಗುವಿನ ಹಿಂದೆ ವಿಪರೀತ ದುಃಖ ಇದೆ ಅಂತ ನನಗೆ ಮಾತ್ರ ಅನ್ನಿಸ್ತಿತ್ತು. ಅದನ್ನ ಗೆಳೆಯರಿಗೆ ಹೇಳಿದ್ರೆ ನಕ್ಕುಬಿಡ್ತಿದ್ರು, “ನಿಂಗೆ... Continue Reading →

Create a free website or blog at WordPress.com.

Up ↑