ಮೊದಲ ಸಾರ್ತಿ ವಿಮಾನ ಹತ್ತಿದ್ದೆ. ಅಣ್ಣ ನನ್ನ ಆತಂಕ, ಸಂಭ್ರಮವೆಲ್ಲ ನೋಡುತ್ತ ಖುಷಿಯಾಗಿದ್ದ. ನಾನು ಕಲ್ಕತ್ತಕ್ಕೆ ಹೊರಟಿದ್ದೂ ಅದೇ ಮೊದಲ ಸಾರ್ತಿ. ಬಂಗಾಳಿಗಳೆಲ್ಲರ ಕಣ್ಣು ದೊಡ್ಡದೊಡ್ಡ ಇರೋದಿಲ್ಲ. ನೂರಕ್ಕೆ ಐವತ್ತು ಚಿಕ್ಕ ಕಣ್ಣಿನವರೂ ಇದ್ದಾರಲ್ಲಿ. ನನ್ನ ಜಪಾನೀ ಕಣ್ಣುಗಳು ನನ್ನನ್ನ ಒಡಿಶಾದವಳೋ ಅಸೋಮ್ ಕಡೆಯವಳೋ (ಒರಿಸ್ಸಾ- ಅಸ್ಸಾಮ್‌ಗಳನ್ನು ಹಂಗನ್ನಬೇಕಂತೆ) ಅನ್ನುವಂತೆ ಮಾಡಿದ್ದವು. ಸಾಲದ್ದಕ್ಕೆ ನಂಗೆ ಚಿಕ್ಕವಳಿರುವಾಗಿಂದ್ಲೂ ಈಶಾನ್ಯ ರಾಜ್ಯಗಳ ಬಗ್ಗೆ ಮೋಹ. ಭಾನುವಾರಗಳ ಬಂಗಾಳಿ, ಒರಿಯಾ, ಅಸ್ಸಾಮಿ, ಮಣಿಪುರಿ ಪ್ರಾದೇಶಿಕ ಭಾಷಾ ಫಿಲಮ್‌ಗಳನ್ನು ತಪ್ಪಿಸದೆ ನೋಡುತ್ತ ಬೆಳೆದವಳು... Continue Reading →
ಎಲ್ಲಿಂದೆಲ್ಲಿಗೋ ಹರಿದು ಹರಟೆ…
ಇತ್ತೀಚೆಗೆ ಲೈಕ್ ವಾಟರ್ ಫಾರ್ ಚಾಕೊಲೇಟ್ ಮೂವಿ ನೋಡಿದೆ. ಅದಕ್ಕಿಂತ ಮುಂಚೆ ನಾವೆಲ್ ಓದಿದ್ದೆ. ಆಮೇಲೆ ಗೆಳತಿ ಟೀನಾ, ‘ಎನ್ನ ಭವದ ಕೇಡು’ ಹಾಗೇ ಇದೆ ಕಣೇ ಅಂದಳು. ಅದನ್ನೂ ಓದಿದೆ. ಹೌದು. ಚೆಂದ ಭಾವಾನುವಾದ ಮಾಡಿದಾರೆ. ನೇಟಿವಿಟಿಗೆ ಇಳಿಸಿದರೆ ಹಾಗೆ ಇಳಿಸಬೇಕು. ನಿಜ್ಜ ದಾವಣಗೆರೆಯಲ್ಲಿ ನಡೆದಿತ್ತೇನೋ ಅನ್ನುವ ಹಾಗೆ. ಓದಿ ಖುಷಿ ಆಗಿ, ಇನ್ನೂ ಅದರದೆ ಗುಂಗಲ್ಲಿದ್ದಾಗ, ‘ಗಾನ್ ವಿದ್ ದ ವಿಂಡ್’ ಮೂವಿ ನೋಡುವ ಯೋಗ. ನಾವೆಲ್ ಓದುವಾಗ ಏನೆಲ್ಲ ಕಲ್ಪಿಸ್ಕೊಂಡಿದ್ದೆನೋ ಹಾಹಾಗೇ ಪಾತ್ರಗಳು...... Continue Reading →
ಕೃಷ್ಣ ಸಿಗುವುದಿಲ್ಲ. ಅದಕ್ಕೇ, ರಾಧೆ ಕಾಯಲಿಲ್ಲ…
ಮತ್ತೆ, ಅವನಿಲ್ಲ. ಇಷ್ಟಕ್ಕೂ ಅವನು ಇದ್ದಿದ್ದು ಯಾವಾಗ? ಚಂದ್ರನ ಹಾಗೇನೇ ಅವನ ಕಾರುಬಾರು. ಇರ್ತಾನೆ, ಇಲ್ಲವಾಗುವ ಭಯ ಹಚ್ಚಿಯೇ ಇರ್ತಾನೆ. ಮತ್ತೆ ಬಂದೇ ಬರ್ತಾನೆ ಅನ್ನುವ ಭರವಸೆ ಏನೋ ಸರಿಯೇ. ಆದರೆ ಅದು, ಹುಣ್ಣಿಮೆ ಕುಡಿಯಲಿಕ್ಕೆ ಕಾತರಿಸುವ ಚಕೋರಿಗಾಗಿಯಲ್ಲ. ಕಾಯಿಸುವವರೆಲ್ಲ ಹಾಗೇ. ಕಾಯುವವರಿಗಾಗಿ ಬರುವುದಿಲ್ಲ. ರಾಮ ಅಷ್ಟುದ್ದ ಹಾದಿ ನಡೆದು ಬಂದಿದ್ದು ಶಬರಿಗಾಗಿ ಅಲ್ಲವೇ ಅಲ್ಲ. ಪಾಪ, ಅವಳಿಗದು ಗೊತ್ತಿತ್ತಾ? ಶಬರಿ... ಬೇಡರ ಹುಡುಗಿ. ಜಿಂಕೆ, ಮೊಲಗಳೊಟ್ಟಿಗೆ ಆಡ್ಕೊಂಡಿದ್ದವಳು. ಅವಳ ಮದುವೆ ಮಾಡಿ ಕಳಿಸುವಾಗ ಅವಳೆಲ್ಲ ಸಂಗಾತಿಗಳೂ... Continue Reading →
ಈ ಹಾಳಾದವ ಸಿಗದೆಹೋಗಿದ್ದರೆ….
ಮೊನ್ನೆ ಸಣ್ಣಗೆ ಮಳೆ ಬಿದ್ದು ಹೋಯ್ತು. ಈ ಹೊತ್ತು ಬೆವರಲ್ಲಿ ಮೈಯೆಲ್ಲ ಒದ್ದೆಒದ್ದೆ. ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು. ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ. ಅಗೋ ಅಲ್ಲಿ, ಅವುಗಳ ಮಧ್ಯ ಗೆಳೆಯನೊಬ್ಬ ಹಾವು ಹಾವು ಅಂತ ಕನವರಿಸ್ಕೊಂಡು ಬರೆದಿಟ್ಟ ಕವನ ಪುಸ್ತಕ. ಅದನ್ನ ಓದಿಕೊಳ್ತಲೇ ಮಲಗಿದ್ದಕ್ಕೋ ಏನೋ ಕನಸ ತುಂಬ ಹಾವು. ಅದೊಂದಕ್ಕೆ ಅವನ ಕಣ್ಣು. ಕಾಣಬಾರದಂತೆ ಹಾವು ಕನಸಲ್ಲಿ. ಹಾವಂದರೆ ಕಾಮವಂತೆ! ಗೊತ್ತಿರೋದು ಇಷ್ಟೇನೇ... ಹಾವಂದರೆ ಅಧ್ಯಾತ್ಮ ಕೂಡ!... Continue Reading →
ಮಗುವಿಗೊಂದು ಪತ್ರ
ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ. ಮುಳ್ಳು ಕಿತ್ತ ನೋವು, ಮುಳ್ಳು ಕಿತ್ತ ನಿರುಮ್ಮಳ, ಹಾಗೇ ಇದೆ. ಕಿವುಡಾಗಲೇಬೇಕಿತ್ತು ನಾನು, ಕುರುಡಾಗಲೇಬೇಕಿತ್ತು. ಮೂಕತನವನೆಲ್ಲ ಹುಗಿದು ಮಾತಾಡಲೇಬೇಕಿತ್ತು. ಅಬ್ಬರದ ಸಂತೆಯಲಿ ನೀನು ಅಮ್ಮಾ ಅಂದಿದ್ದು- ಎದೆಯ ಆಚೆಗೇ ನಿಂತು ಹೋಗಿತ್ತು... ನಿನ್ನ ಪುಟ್ಟ ಕೈಗಳು ನನ್ನ ತಡೆಯಲಾಗಲಿಲ್ಲ. ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ ಕಣ್ಣುಗಳನ್ನ ತಪ್ಪಿಸಿಬರಬೇಕಿತ್ತು... ನಾ ಕಳೆದ ನಿನ್ನ ಬದುಕಿನ ಮೊತ್ತ ಲೆಕ್ಕವಿಟ್ಟಿದೇನೆ ಮಗೂ, ನಿನ್ನ ನೋವಿನ ಋಣ ನನ್ನ ಹೆಗಲ ಮೇಲಿದೆ. ನೆನಪಿಗೊಂದು ಕಂಬನಿ... Continue Reading →
ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?
ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್ದು ಹೋಗಿಬಿಟ್ಟ. “ನಾಳೆಯಿಂದ ನಿನ್ನ ಮರೀತೇನೆ" ಅಂತ ಪತ್ರ ಬರೆದಿದ್ದ. ಯಾವ ನಾಳೆ ನನ್ನ ಮರೆತನೋ, ಮರಳಿ ಬರುವ ಮಾತಂತೂ ಇನ್ನು ಇಲ್ಲ. ಈ ಕೋಣೆಯ ಕನ್ನಡಿಯಲ್ಲಿ ಅರೆ! ಅವನ ಬಿಂಬ ನಗುತ್ತಲೇ ಇದೆ. ‘ಒಡೆಯನೆಲ್ಲಿ?’ ನನ್ನ ಕಂಡ ಬಿಂಬಕ್ಕೆ... Continue Reading →
ನನ್ನೊಳಗಿನ ಸಿದ್ಧಾರ್ಥ….
ತಿಂಗಳಾಯ್ತು ಈ ಅಸಹನೆ ಶುರುವಿಟ್ಟು. ಖಡಾಖಂಡಿತವಾಗಿ ಹೇಳ್ಬಿಟ್ಟಿದಾರೆ, ಇನ್ನು ‘ಅಪ್ ರೈಸಲ್’ ಪ್ರಶ್ನೆಯೇ ಇಲ್ಲ! ಲೇ ಆಫ್ ಮಾಡದಿರೋದೇ ನಮ್ಮ ಪುಣ್ಯವಂತೆ!! ಐಟಿ ಸೆಕ್ಟರಿನ ಜತೆ, ಅಮೆರಿಕದ ಜತೆ ಪೈಸಾಪೈಸ ಸಂಬಂಧವಿರದ ಈ ಆಫೀಸಿಗೂ ರಿಸೆಷನ್ನಿನ ರೋಗ ಹರಡಿದೆ. ಇದೊಂಥರಾ ‘ಗೋಕುಲಾಷ್ಟಮಿಗೂ, ಇಮಾಮ್ ಸಾಬರಿಗೂ...’ ~ ಬಹಳ ದಿನಗಳೇ ಆಗಿತ್ತು ಹೀಗೆ ಕಾಲ್ನಡಿಗೆಯಲ್ಲಿ ಓಡಾಡದೆ. ಅದರಲ್ಲೂ ಶ್ರೀರಾಮಪುರದಲ್ಲಿ ದಾರಿ ತಪ್ಪಿ ಅಲೆಯದೆ ಮೂರ್ನಾಲ್ಕು ವರ್ಷಗಳೇ ಅಗಿಹೋಗಿತ್ತು. “ಇಲ್ಲೇ..." “ಇನ್ನೇನು ಬಂದೇಬಿಡ್ತು..." ಅನ್ನುತ್ತಾ, ನಾನೂ ದಾರಿ ತಪ್ಪಿ, ಜತೆಗಿದ್ದವಳನ್ನೂ... Continue Reading →
ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು…
ಮಾರ್ಚ್ ೨೭ರ ಯುಗಾದಿಯ ದಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷವೇನೂ ಇರಲಿಲ್ಲ. ಸಿಬ್ಬಂದಿಗಳೊಂದಷ್ಟು ಜನ ಯೂನಿಫಾರಮ್ಮಲ್ಲದೆ ಸಾಮಾನ್ಯ ಉಡುಗೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಅವತ್ತು ಹಬ್ಬ ಎಂಬುದರ ಸಾಕ್ಷಿಯಾಗಿತ್ತಷ್ಟೆ. ಯುಗಾದಿಯ ದಿನವನ್ನ ಕಾರಾಗೃಹದಲ್ಲಿರುವ ಸಹೋದರರ ಜೊತೆ ಕಳೆಯಬೇಕು, ದೇಶ ಪ್ರೇಮ ಉದ್ದೀಪಿಸುವ ಗೀತ ಗಾಯನ ನಡೆಸಿಕೊಡಬೇಕು ಎಂದೆಲ್ಲ ಉಮ್ಮೇದಿಯೊಂದಿಗೆ ಹೋಗಿದ್ದ ಜಾಗೋಭಾರತ್ ತಂಡಕ್ಕೆ, ಅಲ್ಲಿ ಎದುರಾದ ವಾತಾವರಣ ಅಷ್ಟೇನೂ ಪ್ರೋತ್ಸಾಹದಾಯಕವಾಗಿರಲಿಲ್ಲ. “ನೋಡೋಣ, ಎಷ್ಟು ಸಾಧ್ಯವೋ ಅಷ್ಟು ಹಾಡಿ ಬರೋಣ. ನಮ್ಮ ಸಂಕಲ್ಪ ನಾವು ನೆರವೇರಿಸುವುದಷ್ಟೆ ನಮ್ಮ ಕೆಲಸ.... Continue Reading →
ನನ್ನೂರ ದಾರಿಯಲ್ಲಿ ನಡೆದಾಡಿದ ಆ ದಿನ…
ಮೊನ್ನೆ ನಾನು, ನನ್ನ ತಮ್ಮ ನನ್ನೂರು ತೀರ್ಥಳ್ಳಿಗೆ ಹೋಗಿದ್ವಿ. ಬರೋಬ್ಬರಿ ಒಂದೂವರೆ ದಶಕದ ನಂತರ ನಾವಿಬ್ಬರೂ ಹಾಗೆ ನಮ್ಮೂರ ರೋಡಲ್ಲಿ ಒಟ್ಟಾಗಿ ಓಡಾಡಿದ್ದು! ಅದರದೊಂದು ಖುಷಿ ಖುಷಿ ಸಂಕಟದ ಅನುಭವ ಹಂಚಿಕೊಳ್ತಿದೇನೆ ನಿಮ್ಮೊಟ್ಟಿಗೆ... ಊರು, ಉಳಿದಂತೆಲ್ಲ ಹಾಗೇ ಇತ್ತು. ಗದ್ದೆಗಳಲ್ಲಿ ಕಾಂಪ್ಲೆಕ್ಸುಗಳು ಎದ್ದು ನಿಂತಿದ್ದು, ಖಾಲಿ ಹೊಡೆಯುತ್ತ ಬೀಗ ಬಡಚಿಕೊಂಡು ಬಿದ್ದಿದ್ದವು. ಊರಿನ ರೋಡಿನುದ್ದಕ್ಕೂ ನಡೆಯುವ ಖುಷಿಗೆಂದೇ ನಾನು, ಅಪ್ಪಿ ಆಟೋ ಹತ್ತದೆ ಪೇಟೆ ತನಕ ಕಾಲು ಬೀಸುತ್ತ ಹೊರಟಿದ್ದೆವು. “ಇವ್ರೆಲ್ಲ ಹೊಟ್ಟೆಗೆ ಏನು ಮಾಡ್ಕೊಳ್ತಾರೋ?" ಭೂತ... Continue Reading →
ಬಂಗಾಳ, ಸುಭಾಶ್ ಮತ್ತು ಎಮಿಲೀ ಶೆಂಕೆಲ್
ನನಗೆ ಬಂಗಾಳ ಇಷ್ಟವೆನ್ನುವ ನನ್ನ ಮಾತು ಕೇಳೀ ಕೇಳೀ ನಿಮಗೆ ಬೋರ್ ಬಂದಿರಬಹುದು. ಆದರೆ ನಾನಂತೂ ಹೇಳಿ ದಣಿದಿಲ್ಲ. ಹೌದು... ನನಗೆ ಬಂಗಾಳ ಇಷ್ಟ. ಯಾಕೆಂದರೆ, ಆಮೇಲೆ ವಿಶ್ವಮಾನವನಾಗಿ ಬೆಳೆದ ಸ್ವಾಮಿ ವಿವೇಕಾನಂದರು ಅಲ್ಲಿ ಹುಟ್ಟಿದವರು. ಪರಮಹಂಸ, ಶಾರದಾ ದೇವಿ, ಅರಬಿಂದೋ ಕೂಡಾ ಅಲ್ಲಿಯವರು. ಶಚೀಂದ್ರನಾಥ, ರಾಸ್ ಬಿಹಾರಿ, ಭಾಗಾ ಜತೀನನಂಥ ಕ್ರಾಂತಿಕಾರಿಗಳ ಹುಟ್ಟೂರು ಅದು. ನಿವೇದಿತಾ, ಸಾರಾ ಬುಲ್ ಮೊದಲಾದ ವಿದೇಶೀ ಹೆಣ್ಣುಮಕ್ಕಳು ನಮ್ಮವರೇ ಆಗಿ ನಮ್ಮನ್ನು ಪ್ರೀತಿಸಿದ ನೆಲ ಅದು. (ಇವ್ರೆಲ್ಲ ನಾನು ತುಂಬಾ ಮೆಚ್ಚಿಕೊಂಡಿರುವ,... Continue Reading →
