ಒಂದು ಊ………..ದ್ದ ನೆ ಪದ್ಯ

ಸುಮಾರು ಒಂದೂ ವರೆ ವರ್ಷದ ನಂತರ ಊರಿಗೆ ಹೊರಟಿದೀನಿ. ಪ್ರತಿ ಗ್ಯಾಪಿನಲ್ಲೂ  ಮತ್ತಷ್ಟು ದೂರಾಗುವಂಥ ಏನಾದರೂ ನಡೆದಿದ್ದಿದೆ, ಈ ಬಾರಿಯೂ ಹಾಗೇ ಆಗಿದೆ.  ಇನ್ನು, ಮುಂದಿನ ಸಾರ್ತಿ ಅನ್ನೋದು ಇರ್ತದೋ ಇಲ್ಲವೋ!  ಇರಲಿ, ಊರ ನೆನಪಲ್ಲಿ ಬರೆದಿದ್ದ ಕವಿತೆಯೊಂದು,  ಇಲ್ಲೀಗ- ಊರಿಗೆ ಹೊರಟಿರುವ ನೆವದಲ್ಲಿ...   ನನ್ನೂರ ತಿರುವುಗಳು ಬಹಳ ದಿನವಾಯ್ತು ಊರಕಡೆ ಕಾಲಿಟ್ಟು ಅಲ್ಲವೇನೋ ತಮ್ಮಾ? ಬರುವೆಯಾ ಹೊಡೆದು ಬರೋಣ ಒಂದು ರೌಂಡು... ಮರೆತುಬಿಟ್ಟಿದೀಯೆ! ದಾರಿ ತೋರುವೆ ನಡಿ, ಬಿಟ್ಟುಬಂದ ಮನೆಯವರೆಗೂ. ಬಸ್ಸಿಳಿದು ಎಡಕ್ಕೆ, ಅಲ್ಲಿಲ್ಲ... Continue Reading →

ಅಪ್ಪನ ಮುಖ

‘ಮಗೂ ಶ್ವೇತಕೇತೂ’ ಅಪ್ಪನ ಪ್ರಶ್ನೆಗೆ ಮಗನ ಮೌನ ಲೋಟದಲ್ಲಿ ನೀರು ನೀರಲ್ಲಿ ಉಪ್ಪು ಕರಗಿ, ತಿಳಿವು ಮೂಡಿ ಹರಿಯಿತು ಬೆಪ್ಪು   ಕಾಲಗಟ್ಟಲೆ ಕುಂತು ಕಲಿಯಲಾಗದ ಪಾಠಕೆ ಕಳಿಸಿದನೇಕೋ ತಂದೆ? ಕಲಿತು ಬಂದ ಗರ್ವ ಮುರಿದನೇಕೋ ತಂದೆ?   ಅಪ್ಪಂದಿರ ಹಿರಿಮೆಯಿದು ಬಹುಶಃ ಕಳಿಸುವುದು ಕೆದಕುವುದು ಕಲಿಸುವುದು ~ ‘ಹೊಸ ನೀರಿಗೆ ಹೊಸ ಮಣ್ಣಿಗೆ ಕಳಿತ ರುಚಿ ಬೇರೆ’ ಮರೆತವರ ಮಾತು- ಇಂದಿನ ಹಣ್ಣು ಹಿಂದಿನ ಹಣ್ಣಿಗಿಂತ ಕಳಪೆ!   ಬೇವು ಸಸಿಗೆ ಕಸಿಕಟ್ಟಿ ಕಹಿ ತೆಗೆವ... Continue Reading →

‘ಮಿಂಚುಹುಳು’- ಹನಿಗೊಂಚಲು (ಕೆಟ್ಟ ಟೈಟಲ್!)

ನಂಗೆ ಮಿಂಚುಳ ತುಂಬಾ ಇಷ್ಟ. ಚಿಕ್ಕವಳಿರುವಾಗ ತಮ್ಮನೊಟ್ಟಿಗೆ ಅವನ್ನ ಹಿಡಿದು ಮೈಮೇಲೆ ಬಿಟ್ಟುಕೊಳೋದೊಮ್ದು ಆಟವಾಗಿತ್ತು. ಗೊತ್ತಾ!? ನಮ್ಮ ಸಂಬಂಧಿಕರೊಬ್ಬರ ಮದ್ವೆ ಹಳ್ಳೀಲಾಗಿತ್ತು. ರಾತ್ರಿ ವರಪೂಜೆ ಹೊತ್ತಿಗೆ ಕರೆಂಟ್ ಹೊರ್ಟೋಯ್ತು. ಅಲ್ಲಿ ದೇವಸ್ಥಾನದ ದಬ್ಬೆ ಬೇಲಿ ಉದ್ದಕ್ಕೂ ಗೊಂಚಲುಗೊಂಚಲು ಬೆಳಕು! ಅವು ಮಿಂಚುಹುಳು!! ಆ ನೋಟ ಕಟ್ಟಿಕೊಟ್ಟ ಅನುಭಾವ (ಭಾ- ಸ್ಪೆಲಿಂಗ್ ಮಿಸ್ಟೇಕ್ ಅಲ್ಲ)ವನ್ನ ಮರೆಯೋದು ಹೇಗೆ? ಅದನ್ನ ನೆನೆಸ್ಕೊಂಡ್ರೆ ಈಗ್ಲೂ ಅಷ್ಟೇ ಪ್ರಮಾಣದಲ್ಲಿ ರೋಮಗಳು ಎದ್ದೇಳ್ತವೆ. ಹಾಗೆ ಎದ್ದ ಘಳಿಗೆಯಲ್ಲಿ ಹುಟ್ಟಿದ ಕೆಲವು ಮಿಣುಕುಗಳು...... ~1~ ಚಂದ್ರನ... Continue Reading →

‘ರಾಧಾಷ್ಟಮಿ’ ಹೊತ್ತಲ್ಲಿ ‘ದುಂಬಿಗೆ ಧ್ಯಾನದ ಸಮಯ….’

ಕೊಳಲ ತರಂಗ ಕೊಳದ ತರಂಗ ಸೆಳೆತಕೆ ಸಿಕ್ಕ ರಾಧೆ ಯಂತರಂಗ ಕ ಲ ಕಿ ರಾಡಿ ~ ಕಣ್ಣಾ ಒಳಗಿದ್ದು ಕಾಡಬೇಡ ವಿಶ್ವರೂಪಿ ನಿನ್ನಗಲ ಎತ್ತರಕೆ ಸಾಲದಿದು ಪುಟ್ಟ ಹೃದಯ. ತುಣುಕು ಮಾತಿಗೆ ತುಂಬುವುದು ನಗೆ ಮಿಂಚಿಗೆ ಸುಳ್ಳು ಪ್ರೀತಿಗೂ ತುಂಬುವುದು ನೆನಪಿಗೂ ವಿರಹಕೂ ಸಾವಿರ ಬಾಳ ಫಲಗರೆವ ಒಂದು ಧನ್ಯ ನೋಟಕೂ ~ ಮಧು ತೀರಿದ; ರವಿ ತೆರಳಿದ... ಮಧು ತೀರಿದ, ರವಿ ತೆರಳಿದ ಹೊತ್ತೀಗ ದುಂಬಿಗೆ ಧ್ಯಾನದ ಸಮಯ ಮುದುಡದೆ ವಿಧಿಯೇ ಕಮಲಕೆ? ರಾಧೆಗೆ?... Continue Reading →

ಕಾಳಿದಾಸನ ಮೀನು

ನೀರಲ್ಲಿ ಕಳಚಿತ್ತು ನೆನಪಿನುಂಗುರ ದೂರ್ವಾಸನ ಶಾಪವಂತೆ ನಿಜ, ಕಳೆದ ಕಥೆ ಮಾತ್ರ ಕಾಳಿದಾಸ ಕರಾಮತ್ತು ನುಂಗಿತ್ತು ಮೀನು ಕಥೆ ಬೆಳೆಸಲು ಅರೆದು ಸೇರಿಸಿದ ಮಸಾಲೆ, ಕಾವ್ಯ ರುಚಿ ರಸಿಕರೆದೆ ಹರುಷ ನಾಟಕದ ಶಾಕುಂತಲೆ ಕಣ್ಣೀರು ಬೆರೆತ ನದಿ ಸೇರಿ ಸಾಗರದುಪ್ಪು ಜಾಸ್ತಿ. ನಿನ್ನ ನೆನಪ ಮೈಮರೆವಲ್ಲಿ ಯಾರ ಕಡೆಮಾಡಿದೆನೋ ಉಂಗುರ ಕಳೆದಿದೆ. ಶಾಪದ ಭಯ ಕಾಳಿದಾಸನ ಮೀನೂ ಉಪ್ಪು ಖಾರದಲಿ ಬೆಂದು ರುಚಿಯಾಗಿದೆ. ನನ್ನದೇ ಎದೆ ಬಗೆದು ಪ್ರೇಮದುಂಗುರ ತೋರಲೇ ವಿಮೋಚನೆಗೆ ?

ನಿಜಘಮದ ಕೇದಗೆ

ಶಿವನ ಮೂಲ ಹುಡುಕುತ್ತ ಕೆಳಗೆ ವಿಷ್ಣು, ಮೇಲೆ ಬ್ರಹ್ಮ ನಡುವೆ ಗುಟ್ಟು ಬಿಚ್ಚಿಟ್ಟ ಕೇದಗೆಗೆ ಶಿವನ ತಲೆ ಸೋಕಬಾರದ ಶಾಪ- ಕ್ಕೆ ಹುಟ್ಟಿದ ಹೆಣ್ಣು ನಾನು ಹೊಟ್ಟೆಯಲ್ಲಿ ಗುಟ್ಟು ಬಚ್ಚಿಡಲು ಬರುವುದಿಲ್ಲ ಹಿತ್ತಿಲ ಬಾಗಿಲಾಚೆ ಮಲ್ಲಿಗೆ, ಕನಕಾಂಬರ, ತುಂಬೆ ಪೂಜೆಗೆ ಹತ್ತು ಹೂವು ಹೆಣೆಯುತ್ತ ಕುಂತವರು ಕೇದಗೆ ಸೋಂಕಿಗೆ ಉರಿಯಾಗಿದ್ದಾರೆ ಮೈ ಮುತ್ತಿದ ಘಮ ಶಿವನ ಪೂಜೆಗೆ ಅಡ್ಡಿ ‘ಇದು ಬಿಳಿ ಮಲ್ಲಿಗೆಯದೆ’ ಅನ್ನುತ್ತ ಸುಳ್ಳಾಗುತ್ತಿದ್ದಾರೆ... ಕೇದಗೆ ಇರುವಿನರಿವಿಗೆ ಜಾಹೀರಾತು ಬೇಕಿಲ್ಲ, ಎಲೆಹೂವ ಸೆಳೆತಕ್ಕೆ ಭುಸುಗುಟ್ಟಿವೆ ಹಾವುಗಳೂ,... Continue Reading →

ಮಾತಾಡೆನೆಂಬ ಮುನಿಸು ಮಂದಿಗೆ…

ನನ್ನ ಮನೆಯ ಗೋಡೆಗಳಿಗೆ ಕಿವಿಗಳನಿರಿಸಿಲ್ಲ ಮಾತಾಡಲಿ ಯಾರ ಕೂಡ? ಮಾತೆಂದರೆ ವಾಕರಿಕೆ ಗೆಳೆಯಾ ಮುತ್ತೆಂದು ಅರಸುತಿದ್ದ ನೀ ಜತೆಗಿಲ್ಲದೆ... ಕಾದು ಕಾಯಿಸುವ ಜೀವವಿರಲುಕ್ಕಿ ಸುರಿಯುತಿತ್ತು ಮಾತು, ಸತ್ತ ದಿನಗಳ ಹೆಣದ ತಂಪಿಗೆ ಸೆಟೆದು ಬಿದ್ದಿವೆ ಪದಗಳು. ಮಾತಾಡೆನೆಂಬ ಮುನಿಸು ಮಂದಿಗೆ, ದನಿಯನೆಲ್ಲಿಂದ ಬಗೆದು ತರಲಿ ನಾನು?

ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು…

ಒಮ್ಮೊಮ್ಮೆ ಅನಿಸುತ್ತದೆ ಸಾವನ್ನ ತಟ್ಟೆಯೊಳಗಿಟ್ಟು ಚೂರು ಚೂರೆ ಹರಿದು ತಿನ್ನಬೇಕು ನನಗೆ ಸಾವಿನ ಹಸಿವು... ಅನಿಸುತ್ತದೆ ಸಾವನ್ನ ತಬ್ಬಿ ಚುಂಬಿಸಬೇಕು ತೋಳಲ್ಲಿ ಬಳಸಿ ಇಂಚಿಂಚು ಕರಗುತ್ತ ಕಳೆದುಹೋಗಬೇಕು ಒಲ್ಲದ ಮದುವೆಯಂತೆ ಇದು ಕಟ್ಟಿಕೊಂಡ ಬದುಕು ಅನಿಸುತ್ತದೆ, ಕಳ್ಳಾಟವಾಡುತ್ತ ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು... ವಿ.ಸೂ: ಇವೆಲ್ಲ ನನ್ನ ವಿಷಾದಗೀತ ಸೀರೀಸ್ ಕವಿತೆಗಳಷ್ಟೆ. ಸುಮ್ಮನೆ ಬಿದ್ದು ಒದ್ದಾಡಿಕೊಂಡು ಅಳುತ್ತಿದ್ದವು, ಇಲ್ಲಿ ಹಾಕಿಕೊಂಡಿದೇನೆ.

ತಪ್ಪೊಪ್ಪಿಗೆ

ಇದೋ! ಕತ್ತಲಾಗಿದೆ. ನಿನ್ನ ಬೆತ್ತಲು ಕಾಣುವುದಿಲ್ಲ ನಿನಗೂ... ನಾಚಿಕೆ ಕಿತ್ತೆಗೆ, ಒಳಗನೆಲ್ಲ ಹರಡಿ ಹಗುರಾಗು. ಸುಳ್ಳು ನಾಟಕದ ಹೊರೆ ಎಷ್ಟೆಂದು ಹೊರುತ್ತೀ? -ಆತ್ಮ ಸಾಕ್ಷಿಯ ಮಾತು.   ತಪ್ಪೊಪ್ಪಿಗೆಯ ಹೊತ್ತಲ್ಲಿ ಬೆಳೆಯುತ್ತಿದೆ ಪಟ್ಟಿ॒   ಎದೆಗೋರಿಯ ಕನವರಿಕೆ, ಹೇಳಲಾಗದ ಅವನ ಹೆಸರು; ಬರೆಯದೆ ಬಿಟ್ಟ ಕವಿತೆ, ಮಡಚಿಟ್ಟ ಪುಟಗಳು. ಸಂತನೊಡಲಲ್ಲಿ ಹಚ್ಚಿಟ್ಟ ಹೆಣ ಸುಡುವ ಕಿಚ್ಚು! ಒಂದೇ, ಎರಡೇ?   ನಾ ನಂಬಿಕೊಂಡ ನನ್ನ ಸುಳ್ಳುಗಳು, ನಾನಪ್ಪಿಕೊಂಡ ನನ್ನ ಶತ್ರುಗಳು, ನಾ ಕೊಂದ ನನ್ನ ಇಷ್ಟಗಳು, ನನ್ನದಲ್ಲದ... Continue Reading →

ಸಿಡಿಲಾಗಲು ಕಾದಿದ್ದೇನೆ…

ಮೌನವಾಗಿ ಉಳಿದಿದೇನೆ ಅಂದ ಮಾತ್ರಕ್ಕೆ ಶಾಂತವಾಗಿದ್ದೇನೆ ಎಂದಲ್ಲ ನೂರೊಂದು ನೋವುಗಳ ಎದೆಗುದಿಯುಕ್ಕಿ ಸಿಡಿಯುವ ಹೊತ್ತಿಗೆ ಕಾದಿದ್ದೇನೆ.   ವಿಷದ ಹನಿ ಹನಿ ನುಂಗುತ್ತ ಬೆಳೆದಿದ್ದೇನೆ. ಸಾವಿರ ನಾಲಗೆಯ ನಂಜು ಕೂಡ ನನ್ನ ನೀಲಿಗಟ್ಟಿಸಲು ಸೋತಿವೆ ರಣಚೋರಳೆನ್ನ ಬೇಡಿ, ತಮ್ಮ ಕಣ್ಣುರಿಗೆ ತಾವೇ ಬೂದಿಯಾಗುವಂತೆ ಕನ್ನಡಿಗಳನಿರಿಸಿದ್ದೇನೆ. ಅವರವರ ‘ನಿಜ’ ಬಿಂಬ ಕಂಡವರು ಸುಟ್ಟುಹೋಗುತ್ತಿದ್ದಾರೆ.   ಜಡಿಮಳೆಗೆ ಮುನ್ನ ಹೆಪ್ಪುಗಟ್ಟುವ ಕತ್ತಲಂತೆ ಅಮಾಯಕಳಂತೆ ಸುಮ್ಮನೆ- ಸುಮ್ಮನೇ ಕುಳಿತಿದೇನೆ. ಅಂದ ಮಾತ್ರಕ್ಕೆ ಶಾಂತವಾಗಿದ್ದೇನೆ ಎಂದಲ್ಲ ಸಿಡಿಲಾಗುವ ತವಕದಲ್ಲಿ ಮಾತನೆಲ್ಲ ಒಟ್ಟುಮಾಡುತಿದ್ದೇನೆ. ಅದೋ,... Continue Reading →

Blog at WordPress.com.

Up ↑