ಮರೆಯಲಾಗದ ಸಾವು, ಓದಿಸಿಕೊಳ್ತಲೇ ಇರುವ ಬರಹ…

ಯಾರೂ ಓದದಿದ್ರೂ ಪರವಾಗಿಲ್ಲ, ನಾನಂತೂ ಬರೀತೀನಿ... ಅಂತ ಅಂದ್ರೆ ಅದು ನಾಲಿಗೆಗಷ್ಟೆ ಸೀಮಿತವಾಗೋ ಮಾತು. ನಿಜ್ಜ ಅಂದ್ರೆ, ಯಾರಾದರೂ ಓದಿದ್ರೆ ಎಷ್ಟು ಚೆಂದ ಅಂತ ನಾವು- ಬರಿಯೋರೆಲ್ರೂ ಅಂದ್ಕೊಳ್ತೀವಿ. ಈ ನಮ್ಮ ಬ್ಲಾಗಲ್ಲಿ ಬ್ಲಾಗ್ ಸ್ಟ್ಯಾಟ್ಸ್ ಇದೆಯಲ್ಲ, ಅದನ್ನ ನಾನು ಆಗೀಗ ಚೆಕ್ ಮಾಡ್ತಿರ್ತೀನಿ. ಯಾವ್ಯಾವ ಪೋಸ್ಟ್‌ಗಳನ್ನ ಓದಿದಾರೆ ನೋಡಣಾ ಅಂತ ಕುತೂಹಲಕ್ಕೆ. ಸುಮಾರು ಎರಡು ವರ್ಷದಿಂದ ದಿನಾ ಅಂದ್ರೆ ದಿನಾಲೂ ಓದಲ್ಪಡುವ ಎರಡು ಬ್ಲಾಗ್ ಪೋಸ್ಟ್‌ಗಳು ‘ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ’ ಅನ್ನೋದು ಮತ್ತು ‘ಬಿಳಿಬಿಳೀ... Continue Reading →

ಕತೆಗಳಾ ಮಾರಾಣಿ ಐರಾವತಿ(ಯಲ್ಲಿ ನಾನು)

ಬರಿಯೋದು ಬಿಟ್ಟೇಬಿಟ್ಟಿದ್ದೆ. ಅಂದ್ರೆ- ಪತ್ರಿಕೆಗೆ ಅಲ್ಲದ ಬರಹಗಳನ್ನ... ನನ್ನಿಂದ ಮೊದಲ ಸಾರ್ತಿಗೆ ಕಾಲಮ್ ಕೊಟ್ಟು ಬರೆಸಿದ್ದ ವೆಂಕಟ್ರಮಣ ಗೌಡರು ಮತ್ತೆ ಅವಧಿಯಲ್ಲಿ ಬರೆಸಿದ್ದರು. ಈಗ ಮತ್ತೆ ಐರಾವತಿಯಲ್ಲಿ ನನ್ನ 3rd ಇನ್ನಿಂಗ್ಸ್. ಹುಕ್ಕಿಯಿಂದ ಶುರು ಏನೋ ಮಾಡಿದೀನಿ. ಮುಂದುವರೆಸುವ ಬಗ್ಗೆ ಖಾತ್ರಿ ಇಲ್ಲ. ನೀವು ಓದಿ ಮೆಚ್ಚಿದರೂನು, ಬಯ್ದರೂನು ಖುಷಿಯೇ. ಎರಡರಿಂದಲೂ ನನಗೆ ಲಾಭವೇ. ಸದ್ಯಕ್ಕೆ, ಪುರುಸೊತ್ತಿದ್ದರೆ ಇಲ್ಲಿ ಭೇಟಿ ಕೊಡಿ. ನನ್ನ ಎಲ್ಲ ತರಲೆ ತಿಕ್ಕಲುತನಗಳಿಗೆ ಸ್ಟೇಜ್ ಆಗಿರುವ ಬ್ಲಾಗ್ ಸ್ಪೇಸ್ ಅನ್ನು ನಾನು ಯಾವತ್ತೂ ಪ್ರೀತಿಸ್ತೀನಿ.... Continue Reading →

ವೈಯಕ್ತಿಕ ವಿಶ್ವಾಸಕ್ಕಿಂತ ಅಗ್ಗದ ಸಾಕ್ಷಿಯೇ ದೊಡ್ಡದಾಗುತ್ತದಾ?

ಸ್ವಂತದ್ದು ಇಲ್ಲಿ ಹರಟುವುದಿಲ್ಲ ಅಂದಿದ್ದೆ. ಬೇರೆ ಜಾಗವಿಲ್ಲ. ತೀರದ ಬೇಸರ. ಹೇಳಿಕೊಂಡಾಗಲಷ್ಟೆ ಮನಸು ಹಗುರ. ವರ್ಷದ ಹಿಂದಿನ ಮಾತು. ತಸ್ಲಿಮಾ ಮಾತುಗಳನ್ನ ಮಹಾಶಯರೊಬ್ಬರು ಹುಡುಗಿ ಹೆಸರಲ್ಲಿ ಅನುವಾದಿಸಿ ಕ.ಪ್ರ.ದಲ್ಲಿ ಪ್ರಕಟಿಸಿದ್ದರು. ಪರಿಣಾಮ- ಬೆಂಕಿ ಬಿದ್ದಿತ್ತು. ಎರಡು ಜೀವ ಹೋಗಿತ್ತು. ನಾನು ಆಗ ಕೆಲಸ ಮಾಡುತ್ತಿದ್ದ ಸಂಸ್ಥೆಗೆ ಕಪ್ಪು ಚುಕ್ಕೆ ಅದು. ಜೊತೆಗೆ ವೈಯಕ್ತಿಕ ನಷ್ಟವೂ. ನನ್ನ ಕೆಲವು ಗೆಳೆಯರು, ಮನಸು- ಹೃದಯಗಳೊಂದೂ ಇಲ್ಲದೆ ಬುದ್ಧಿಯಲ್ಲಷ್ಟೆ ಜೀವಿದುವವರು- ಇಂಥವರೆಲ್ಲ ಅದು ನಾನು ಎಂದು ತೀರ್ಮಾನಿಸಿಬಿಟ್ಟಿದ್ದರು. ಕೆಲವರ ಚುಚ್ಚು ಮಾತು, ಮೆಸೇಜುಗಳು, ಕಮೆಂಟುಗಳು... Continue Reading →

ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು

ನಾನೊಬ್ಬಳೇಇಲ್ಲಿ, ಹೀಗೆಕವಿತೆಗಳ ಜತೆಗೆ. ನನ್ನ ನೀವೆಲ್ಲ ಜತೆಯಾದವರುಕವಿತೆಗಳ ಜತೆಗೇ... ನನ್ನಾತ್ಮ ರತಿಗೆ ಒಸರಿಬಂದ ಅಕ್ಷರಗಳ ಸ್ರಾವ, ಒಡಲುಗಟ್ಟಿದೆಯಿಲ್ಲಿ ಕವಿತೆಗಳ ಹಾಗೆ. ಪ್ರತಿ ನೋವು ದುಃಖ ಸುಖ-ಎಲ್ಲದರ ಸಂಭೋಗ ಫಲ ಕೊಟ್ಟು ಹುಟ್ಟಿಬಂದಿದೆಸಾಲು ಸಂತಾನ. ಸುತ್ತಲಿನ ತಿಕ್ಕಲಿಗೆತೆರೆದ ಘಳಿಗೆಯ ಧ್ಯಾನ, ಸಂಸಾರ ವಿಷವೃಕ್ಷದಡಿಯಲ್ಲೆ ಅರಳಿ ತಬ್ಬಿದೆ ಜ್ಞಾನ ಅಥವಾ, ನನ್ನ ಅಜ್ಞಾನ. ಖಾಲಿ ತಲೆಯ ಕಾರನಾಮೆಗಳು ಹೊಸೆದ ಸಾವಿರ ಮಾತು, ಹುಳಿತು ಹದವಾಗಿನೊರೆಗಟ್ಟಿದೆ ಕವಿತೆ ನೋವ ಮರೆಸುವ ಮತ್ತು ತಂದಿತ್ತು. ಯಾರು ಹೇಳುವರು, ಪಾಪನಾನೊಂಟಿಯೆಂದು? ಬರಹ ಪ್ರೀತಿಯ ಸುಖಕೆ ಏಕಾಂತ ಬಯಸಿ ಪಡೆದೆ, ಹೀಗೆ... Continue Reading →

ಕಣ್ಣಿಗೆ ಹೊಸ ನೋಟ ನಿಲುಕಬಹುದಾ?

5 ವರ್ಷದಲ್ಲಿ 6 ಕೆಲಸ ಬದಲಿಸಿದ ಉಜ್ವಲ ಇತಿಹಾಸವುಳ್ಳ ನನ್ನ ಅಕೌಂಟ್‌ಗಳು ಆಯಾ ಆಫೀಸಿಗೆ ತಕ್ಕ ಹಾಗೆ ಬೇರೆಬೇರೆ ಬ್ಯಾಂಕುಗಳಲ್ಲಿವೆ. ಆಫೀಸುಗಳ ಜತೆಗೆ ಆ ಎಲ್ಲ ಬ್ಯಾಂಕುಗಳ ಸಹವಾಸವನ್ನೂ ಬಿಟ್ಟಿರೋದ್ರಿಂದ ಅವೆಲ್ಲದರಲ್ಲೂ ವ್ಯವಹಾರ ನಿಂತು, ಈಗ ನನ್ನ ಮೊಟ್ಟಮೊದಲ ಅಕೌಂಟ್ ಒಂದೇ ಚಾಲ್ತಿಯಲ್ಲಿದೆ. ಕೆಲವದರಲ್ಲಿ ಬಹುಶಃ ಝೀರೋ ಬ್ಯಾಲೆನ್ಸ್ ಇರಬೇಕು. ಗೆಳೆಯರೆಲ್ಲ ಹೆದರಿಸ್ತಾರೆ, ಫೈನ್ ಆಗತ್ತೆ, ಕ್ಲೋಸ್ ಮಾಡಿಸ್ಬಿಡು ಅಂತೆಲ್ಲ... ಆಫೀಸುಗಳಿಗೆ ಎಡತಾಕುವುದನ್ನೊಂದು ಘೋರ ಶಿಕ್ಷೆ ಅಂದುಕೊಂಡಿರುವ ನಾನು ಹಾಗೆಯೇ ಇದ್ಬಿಟ್ಟಿದೀನಿ.... ಈ ನನ್ನ ಪೆದ್ದುತನದ ಅನಾವರಣ... Continue Reading →

ಅವರ ಖುಷಿಯಲ್ಲಿ ನಮ್ಮ ಪಾಲು…

ಗೆಳತಿ ಶ್ರೀದೇವಿ ಕಳಸದ ಮತ್ತು ಪ್ರೀತಿಯ ಸಿರಿಯ ಪುಸ್ತಕಗಳ ಬಿಡುಗಡೆ ಬುಧವಾರ ಇದೆ. ನಮ್ಮೆಲ್ರನ್ನೂ  ಶ್ರೀದೇವಿ ಕರೀತಿರೋದು ಹೀಗೆ... ಹೇಗಿದ್ದೀರಿ? ಅಂದಹಾಗೆ ಆ ದಿನ ನೀವೂ ಅಲ್ಲಿರುತ್ತೀರಿ. ಆ ದಿನ ’ಮರೆವು’ ಎನ್ನುವುದು ನಿಮ್ಮ ಹತ್ತಿರವೂ ಸುಳಿಯಲಾರದು. ಇನ್ನು ’ನೆಪ’ ಎನ್ನುವುದು ನಿಮ್ಮ ನಿಘಂಟಿನಲ್ಲಿ ಇಲ್ಲೇ ಇಲ್ಲ! ಖಂಡಿತ ಬಂದೇ ಬರುತ್ತೀರಿ... ಬರ‍್ತೀರಿ ಅಲ್ವಾ? ದಯವಿಟ್ಟು ಬನ್ನಿ. ನನ್ನ ಖುಷಿಯಲ್ಲಿ ನಿಮ್ಮ ಪಾಲೂ ಇದೆ 🙂 ಪ್ರೀತಿಯಿಂದ ಶ್ರೀದೇವಿ ಕಳಸದ

ಗೊಳೋ ಅಳುವವರು ಮತ್ತು ಗಳ ಹಿಡಿಯುವವರು- ಮಧ್ಯೆ ನಾವು!!

ಕರ್ಮಕಾಂಡ! ತಡ್ಕೊಳಾಗ್ತಿಲ್ಲ. ಟೀವಿ ನೋಡದ ನಾನೇ ಹೀಗೆ ತಲೆಚಚ್ಕೊಳ್ತಿರುವಾಗ, ಬಿಟ್ಟೂಬಿಡದ ಹಾಗೆ ಅದರ ಮುಂದೆ ಕೂತಿರೋ ಮಂದಿ ಹೆಂಗಾಗಿರಬೇಡ!? ಹಾಗಂತ ನೋಡದೆ ಇರೋಕೂ ಸಾಧ್ಯವಿಲ್ಲ. ಇದೊಂದು ಥ್ರಿಲ್ಲರ್ ಕಿಲ್ಲರ್ ಸಿನೆಮಾ! ಅಲ್ಲಿ ಯಾರಾದರೊಬ್ಬರು ವಾರದ ಇಪ್ಪತ್ನಾಲ್ಕೂ ಗಂಟೆ ‘ಗಳ’ ಹಿಡಿಯುವವರು ‘ಸರ್ಕಾರ ಉರುಳತ್ತಾ ಉಳಿಯತ್ತಾ? ವೀಕ್ಷಕರೇ ಕಾದು ನೋಡಿ...’ ಅನ್ನುತ್ತ ಕಾವಲಿಯ ಮೇಲೆ ಕೂರಿಸುತ್ತಿದ್ದರೆ, ಇಲ್ಲಿ ಕುಂತವರು ಅಂಡು ಸುಟ್ಟ ಬೆಕ್ಕಿನ ಥರ ಚಡಪಡಚಡಪಡ!! ~ ಯ್ಯೀಕ್ಸ್! ಇದು ಪಾಲಿಟಿಕ್ಸ್!! ನಮಗೆ ನಾವೇ ಉಗಿದುಕೊಳ್ಬೇಕು. ನಮಗೆ ನಿಜ್ಜ... Continue Reading →

ಸುಳ್ಳಾದಳು ಕೇದಗೆ….

ನನಗೆ ಬೇಜಾರಾಗಿದೆ. ಇದೇನೂ ಅಂಥ ದೊಡ್ಡ ಸಂಗತಿ ಅಲ್ಲದಿರಬಹುದು. ಸಾಮಾನ್ಯ ಮನುಷ್ಯರ ಮಾತುಗಳಿಗೆ ಬೆಲೆ ಇರದ, ದನಿ ಇರದ ಜಗತ್ತಿದು ಅನ್ನುವುದು ಗೊತ್ತಾದ ಬೇಸರ. ಏನೂ ಅಲ್ಲದವರಿಗೆ ಅಸ್ತಿತ್ವವೇ ಇಲ್ಲವಲ್ಲ ಅನ್ನುವ ಬೇಸರ. ನನ್ನ ‘ಪ್ರಕಟವಾಗದ’ ಪುಸ್ತಕದ ರಿವ್ಯೂ ಪ್ರಕಟಗೊಂಡಿದ್ದನ್ನ ಪ್ರಶ್ನಿಸಿ ಇಶ್ಯೂ ಮಾಡುವುದು ಉದ್ದೇಶವಲ್ಲ. ಇದರ ಹಿನ್ನೆಲೆಯಲ್ಲಿ, ಯಾವುದೇ ವ್ಯಕ್ತಿಯ ಭಾವನೆಗೆ ಸ್ಥಾಪಿತ, ಪ್ರಸಿದ್ಧ  ಮತ್ತು ಉನ್ನತ ಜಾಗದಲ್ಲಿರುವವರು ತೋರುವ ಅಲಕ್ಷ್ಯವನ್ನು ಕುರಿತು ಮಾತಾಡುವುದಷ್ಟೆ ನನ್ನ ಬಯಕೆ. ನಾನು 2ಬಾರಿ ನನ್ನ ಪುಸ್ತಕ ಪ್ರಕಟವಾಗಿಲ್ಲ ಎಂದು... Continue Reading →

ಚಾಕಲೇಟು, ಬ್ಲಾಗಿಂಗ್ ಚಟ ಇತ್ಯಾದಿ…

ಆ ನೀಲಿ ಹೊದಿಕೆಯನ್ನ ಚೂರೇ ಬಿಚ್ಚಿ, ಒಳಗಿನ ಬಂಗಾರದಪ್ಪುಗೆಯನ್ನ ಹಗೂರ ಬೇರ್ಪಡಿಸುತ್ತ, ಒಳಗಿನ ಲಘುಕಂದು ಬಣ್ಣದ ಚೌಕಗಳ ಘಮವನ್ನ ಹಾಗೇ ಒಮ್ಮೆ ಒಳಗೆಳೆದುಕೊಂಡು, ಅದರ ರುಚಿಗೆ ನನ್ನನ್ನೇ ಕೊಟ್ಟುಕೊಳ್ಳುತ್ತ ಚಾಕಲೇಟು ಕಡಿಯುವುದಂದರೆ ನನಗೆ ಸ್ವರ್ಗಸುಖ. ಮತ್ತು ಈ ಸ್ವರ್ಗ ನಿತ್ಯವೂ ನನ್ನ ಅಂಗೈಲಿ. ಈ ಕಾರಣಕ್ಕೇ ಬಹುಶಃ ನನ್ನ ಮುಖ ಹುಣ್ಣಿಮೆ ಚಂದ್ರನ ಹಾಗೆ ಕಲೆಮಯವೂ ಕುಳಿಪೂರ್ಣವೂ ಆಗಿರುವುದು. ಚಿಂತಿಯೇನಿಲ್ಲ. ಅಷ್ಟಕ್ಕೆಲ್ಲ ಚಾಕಲೇಟು ತಿನ್ನುವ ಸುಖವನ್ನ ಬಿಟ್ಟುಕೊಡಲಾಗುತ್ತೆಯೇ? ಚಾಕಲೇಟು ಬಿಟ್ಟರೆ, ಆ ಸುಖವನ್ನ ಕೊಡೋದು ಕಾಫಿ ಮಾತ್ರ.... Continue Reading →

ಈ ಛಳಿಯಲ್ಲಿ ಬೆಚ್ಚಗಿರಿ…

ಘಮ್ಮಗೆ ಮೈತುಂಬ ಸ್ನಾನ ಮಾಡಿ ಕುಳಿತಿದೇನೆ. ಮನೆಮುಂದೆ ಅಂಗಳದಷ್ಟು ವಿಶಾಲ ಜಾಗದಲ್ಲಿ... ಸೂರ್ಯ ಮೋಡ ಹೊದ್ದು ಮಲಗಿಬಿಟ್ಟಿದಾನೆ. ಅಬ್ಬ! ಇಬ್ಬನಿ ಇಲ್ಲದಿದ್ರೂ ಎಂಥ ಛಳಿ? ಈ ಅಮ್ಮ ಮಸಾಲೆದೋಸೆ ಯಾಕಾದರೂ ಮಾಡಿದಳೋ? ಕಪ್ಪೆ ನುಂಗಿದ ಹೆಬ್ಬಾವಿನ ಹಾಗೆ ಆಗಿದೆ ಹೊಟ್ಟೆ. ಯಾವುದನ್ನ ಸುತ್ತುಗಟ್ಟಿ ಅರಗಿಸ್ಕೊಳ್ಳಲಿ? ಮತ್ತೊಂದು ಹಬ್ಬದ ಸೀಸನ್ ಮುಗಿದಿದೆ. ಆಷಾಡದಲ್ಲಾ? ಅನ್ನಬೇಡಿ. ಅಂವ ಇರ್ತಾನಲ್ಲ... ಅಷ್ಟೂ ದಿನವೂ ಹಬ್ಬವೇ. ಧೂಪ ಹೊತ್ತಿಸಿ, ದೀಪ ಬೆಳಗಿ ಹೂವಿಟ್ಟಷ್ಟು ದಿವ್ಯದಿವ್ಯ, ಆ ಸಡಗರ ಸಂಭ್ರಮಗಳೆಲ್ಲ. ಇನ್ನೀಗ ಅಂವ ಹೊರಟ.... Continue Reading →

Blog at WordPress.com.

Up ↑