ಇರಾನ್ ಅಂದರೆ ತಣ್ಣತಣ್ಣನೆಯ ಮಜೀದಿ, ಮಖ್ಮಲ್‌ಬಫ್ ಸಿನೆಮಾಗಳು ಅನಿಸುತ್ತಿತ್ತು. ಕೆಲವು ವರ್ಷಗಳ ಕೆಳಗೆ ಅಹ್ಮದಿನೆಜಾದ್, ನ್ಯೂಕ್ಲಿಯಾರ್ಕಾರ್ಯಾಚರಣೆಗಳು ನೆನಪಾಗ್ತಿದ್ದವು. ಅದಕ್ಕೂ ಮುಂಚೆ ಇರಾನ್ ಜೊತೆ ಇರಾಕಿನ ನೆನಪಾಗಿ ಸದ್ದಾಮನೇ ಭೂತಾಕಾರವಾಗಿ ನಿಂತುಬಿಡ್ತಿದ್ದ. ಇವತ್ತು ಈ ಎಲ್ಲವನ್ನೂಮೀರಿ ಇರಾನ್ ಅಂದರೆ ಬೆಚ್ಚಿಬೀಳುವ ಹಾಗೆ ಆಗಿದೆ. ಕಣ್ಣಿಗೆ ಕಣ್ಣು, ಕೈಗೆ ಕೈ ಥರದ ಶಿಕ್ಷೆ ಕೇಳಿ ಗೊತ್ತಿತ್ತು. ಕಲ್ಲು ಹೊಡೆದು ಕೊಲ್ಲುವ ಕಥೆ ಜಮಾನಾದ್ದುಅಂದುಕೊಂಡಿದ್ದೆ. ಅದು ಈಗಲೂ ನಮ್ಮ ನಡುವೆ ಇದೆ ಅಂದರೆ.... ಇರಾನಿನ ಆಕೆಯ ಹೆಸರು ಸಕೀನೇ ಅಶ್ತಿಯಾನಿ. ಅನೈತಿಕ... Continue Reading →
ಈ ಕೆಲವು ದಿನಗಳಲ್ಲಿ….
ಈ ಕೆಲವು ದಿನಗಳಲ್ಲಿ, ಬರಾನ್ ನೋಡಿದೆ. ಪೀರ್ ಭಾಷಾರ ‘ದೇವರು ಮನುಷ್ಯನಾದ ದಿನ ದಿನ’ ಓದ್ತಾ ಇದ್ದೆ. ಸ್ವಲ್ಪ ‘ಸಿಕ್’ ಅನಿಸಿದ್ದು ನಿಜ. ಗೆಳೆಯ ಗುಣಮುಖರಾಗಲಿ ಎಂಬುದು ಹಾರೈಕೆ. ದಮ್ಮಯ್ಯ ಕಾರಣ ಕೆಳಬೇಡಿ ಯಾರೂನು. ಸೌಹಾರ್ದದ ಮಾತಾಡುವ ಜನರ ಕೆಲಸವೇ ಇಷ್ಟು! ಶಾರದಾ ದೇವಿ ಜೀವನಗಂಗಾ ಓದಿದೆ. ಒಂದು ರೂಪಕ ಬರೆಯುವುದಿತ್ತು. ಹೆಚ್ಚೂಕಡಿಮೆ ಬರೆದೆ. ದೇಶಕಾಲದ ಚರ್ಚೆ ದಾರಿತಪ್ಪಿದ್ದನ್ನು ನೋಡಿ ಬೇಸರಪಟ್ಟೆ. ಗೆಳೆಯರಿಬ್ಬರು ಏನು ಹೇಳಲು ಹೊರಟಿದ್ದಾರೆಂದೇ ಅರ್ಥ ಮಾಡಿಕೊಳ್ಳದೆ ನಡೆಸಲಾದ ಚರ್ಚೆ ತೀರ ಕಿರಿಕಿರಿ ಮಾಡಿತು.... Continue Reading →
ಕುಮುದೋಪಾಖ್ಯಾನವೆಂಬ ಚೊರ್ರೆ ಅಧ್ಯಾಯ
ಅದ್ಯಾಕೋ ಗೊತ್ತಿಲ್ಲ. ಸಿಂಚನಾ ಹೆಸರನ್ನ sin ಅಂತಲೂ ಸದಾಶಿವನ ಹೆಸರನ್ನ sad ಅಂತಲೂ ಫೀಡ್ ಮಾಡ್ಕೊಂಡಿದೀನಿ. ಮೊನ್ನೆ ಅದನ್ನ ನೋಡಿದ ಸಿಂಚನಾ, ‘ಏನಕ್ಕ ನೀವು, ಬರೀ ನೆಗೆಟಿವ್ವು. ನಾನು ಸಿನ್ನು, ಸದು ಸ್ಯಾಡ್ ಥರ ಕಾಣ್ತೀವಾ ನಿಮಗೆ?’ ಅಂದಾಗ್ಲೇ ನಂಗೆ ಅವು ನಿಕ್ ನೇಮ್ ಮಾತ್ರ ಆಗಿರುವುದಕ್ಕಿಂತ ಬೇರೆ ಸಾಧ್ಯತೆಗಳೂ ಇವೆ ಅನ್ನೋ ಅರಿವಾಗಿದ್ದು. ಅದು ಹೋಗ್ಲಿ, ಅವಳು ಹಾಗಂದಾಗಿಂದ, ನಾನು ಅವರಿಬ್ಬರ ಹೆಸರು ನೆನೆದಾಗೆಲ್ಲ ಸಿನ್- ಸ್ಯಾಡ್ ಗಳು ಅದದೇ ಅರ್ಥದಲ್ಲಿ ನೆನಪಾಗಿ ಅದೇ ಭಾವ ಗಟ್ಟಿ ಕುಂತುಬಿಡುತ್ತೆ.... Continue Reading →
ಸಹಜೀವಿಗಳಿಗೊಂದಿಷ್ಟು ಜೀವಜಲವನಿರಿಸಿ….
ಚಿತ್ರ ~೧~ ಅದು- ಗಂಗೆ, ಗೌರಿ, ಲಕ್ಷ್ಮೀ, ತುಂಗೆ... ಯಾವ ಹೆಸರೂ ಇಲ್ಲದ ಬೇವಾರ್ಸಿ ಹಸು. ಮೊದಲೇ ಟ್ರಾಫಿಕ್ಕು ತುಂಬಿ ಗೋಳುಗುಂಡಿಯಾದ ರಸ್ತೆಯಲ್ಲಿ ನೆಟ್ಟಾನೇರ ನಿಂತು ಶಾಪ ತಿನ್ನುತ್ತಿದೆ. ಇಷ್ಟಗಲ ದಾರಿಯಲ್ಲೂ ಅಡ್ಡ ಮಲಗಿ ಜಾಗ ನುಂಗಿದೆ. ಅದರ ಕೆಚ್ಚಲೋ, ಕೊಳಚೆ ಬಿಂದಿಗೆ. ಚರ್ಮಕ್ಕೆ ನೀರು ಬೀಳಲು ಮತ್ತೆ ಮಳೆಗಾಲವೇ ಬರಬೇಕು. ದಿನವೆಲ್ಲ ಪಾರ್ಕಿನ ಬದಿಯೋ, ಟ್ರಾನ್ಸ್ ಫಾರ್ಮರಿನ ಕೆಳಗೋ ರಾಶಿಯೊಡ್ಡಿದ ಪ್ಲಾಸ್ಟಿಕ್, ಗಾರ್ಬೇಜನ್ನು ಮೆದ್ದು ಮಲಗಿರುತ್ತದೆ. ಅದೇನೋ ಈ ಊರಿನ ಜನಕ್ಕೆ ಹಸುಗಳೆಂದರೆ ಹೆದರಿಕೆ! ಹತ್ತಿರ... Continue Reading →
ವಿವಾದ ಮತ್ತು ನನಗನಿಸಿದ್ದು….
ತಸ್ಲಿಮಾ ಬುರ್ಖಾಕೆ ಬೆಂಕಿ ಹಾಕಿ ಅಂದಿದ್ದಳು. ಜನ ಸಾರ್ವಜನಿಕ ಆಸ್ತಿಗೆ ಬೆಂಕಿ ಇಟ್ಟರು. ದೊಂಬಿ ಹತ್ತಿಕ್ಕಲು ನಡೆದ ಗೋಲೀಬಾರಿನಲ್ಲಿ ಒಬ್ಬ ಅಮಾಯಕ ಪ್ರಾಣ ತೆತ್ತರೆ, ಏನೂ ಅರಿಯದ ಹುಡುಗ ಇರಿತಕ್ಕೊಳಗಾದ. ಸಾಕಷ್ಟು ನಷ್ಟವಾಯ್ತು. ಎಲ್ಲಕ್ಕಿಂತ ಜನರ ಮನಸುಗಳು ಮತ್ತಷ್ಟು ಮುರುಟಿಹೋದವು. ಈ ಹೊತ್ತು ನನ್ನ ನೋವು, ಸಮಾಜ ಯಾಕಿಷ್ಟು ಅಸಹಿಷ್ಣುವಾಗಿದೆ ಅನ್ನುವುದರ ಬಗ್ಗೆ. ತಸ್ಲಿಮಾಳ ಬರಹಗಳು ಹೊಸತೇನಲ್ಲ. ಸಾರ್ವಜನಿಕ ಓದಿಗೆ ಸಿಗುತ್ತಿರುವುದೂ ಮೊದಲ ಸಾರ್ತಿಯಲ್ಲ. ಈ ಬಾರಿ ಪತ್ರಿಕೆ ಆಕೆಯ ಲೇಖನವನ್ನು ಪ್ರಕಟಿಸಿದ ಸಮಯ ಸರಿಯಿಲ್ಲ. ಹಬ್ಬದ... Continue Reading →
ಇವರನ್ನು ದಯವಿಟ್ಟು ರಾಜಕೀಯಪಕ್ಷಗಳಿಂದ ದೂರವಿಡಿ…
ನೆನ್ನೆ-ಮೊನ್ನೆ ಕೇಳಿಪಟ್ಟೆ, ಸಂಸತ್ತಲ್ಲಿ ‘ಯೂಥ್ ಐಕಾನ್’ ಅಂತ ಸರ್ವಪಕ್ಷಗಳ ಸಮಾನ ಸಮ್ಮತಿಯಿಂದ ವಿವೇಕಾನಂದರ ಹೆಸರನ್ನ ಅಂಗೀಕಾರ ಮಾಡಲಾಯ್ತು ಅಂತ. ಸಖತ್ ಖುಷಿ ಆಯ್ತು. ಸಧ್ಯ! ವಿವೇಕಾನಮ್ದರನ್ನ ಯಾವುದೋ ಪಕ್ಷದ, ಜಾತಿಯ ಐಕಾನ್ ಆಗಿ ಸೀಮಿತಗೊಳಿಸ್ಲಿಲ್ವಲ್ಲ ಅಂತ. ವಿವೇಕಾನಂದರಂಥವರನ್ನು ಇಂವ ನಮ್ಮವ ಅನ್ನೋರೇ ಎಲ್ರೂ. ಅವರ ವ್ಯಕ್ತಿತ್ವ ಅಂಥದ್ದು. ಬಟ್ ಇತ್ತೀಚೆಗೆ ಬಿಜೆಪಿ-ಎಬಿವಿಪಿ ಅವರನ್ನ ಹೈಜಾಕ್ ಮಾಡಿಬಿಟ್ಟಿತ್ತು. ಯಾರಾದ್ರೂ ಸರಿಯೇ. ಈ ವಿಶ್ವಮಾನವನ ಚಿಂತನೆಗಳು ಹರಡೋದಷ್ಟೆ ಇಂಪಾರ್ಟೆಂಟು ಅನ್ನೋದೇನೋ ಸರಿ. ಅವರು ಮಾಡಿದ್ದು ಒಳ್ಳೆ ಕೆಲಸಾನೇ. ಬಟ್, ಉಳ್ದವ್ರು... Continue Reading →
ಸಿನೆಮಾ `ಸಾಂಗತ್ಯ’
ವರ್ಷದ ಹಿಂದಿನ ಮಾತು. ಕುಪ್ಪಳ್ಳಿಗೆ ಹೊರಟಾಗ ನನಗೆ ಗೊತ್ತಿದ್ದುದು ನಾನು ಸಿನೆಮಾ ನೋದಲಿಕ್ಕೆ ಹೋಗ್ತಿದೇನೆ, ಅದೂ ನನ್ನ ಮೆಚ್ಚಿನ ಮಲೆನಾಡಲ್ಲಿ ತಣ್ಣಗೆ ಕುಂತು ನೋಡಲಿದ್ದೇನೆ, ಮತ್ತಿದನ್ನ ನಾವಡ, ಸುಧೀರ್ ಕುಮಾರ್ (ನನ್ನ ಪ್ರೀತಿಯ ಗೆಳತಿ ದೀಪಾಳ ಪತಿಯೂ ಆಗಿರುವ), ಮಧು, ವಾದಿರಾಜ್ ಮೊದಲಾದ ಗೆಳೆಯರು `ಸಾಂಗತ್ಯ' ವೇದಿಕೆಯಡಿ ಆಯೋಜಿಸಿದಾರೆ ಅನ್ನುವುದಷ್ಟೆ. ಅಲ್ಲಿ ಹೋಗಿ ಸಿನೆಮಾ ನೊಡಿ ಬರುವುದು ಬಿಟ್ಟು ಬೇರೆ ಏನೂ ನಿರೀಕ್ಷೆ ಇರಲೂ ಇಲ್ಲ, ಅವರು ಅದರ ಹೊರತಾಗಿ ಮತ್ತೇನೋ ಮಾಡಲಿದ್ದಾರೆ ಅನ್ನುವ ನಿರೀಕ್ಷೆಯಂತೂ ಇರಲೇ... Continue Reading →
2009 ಖುಷಿ, ಬೇಸರ ಮತ್ತು ಗುಟ್ಟು!
ಅಯ್ಯಬ್ಬ! ಮುಗ್ದೇ ಹೋಯ್ತಲ್ಲ ಮತ್ತೊಂದ್ ವರ್ಷ!! ನೆನೆಸ್ಕೊಂಡ್ರೆ ಬೇಜಾರಾಗತ್ತೆ. ಹೀಗೇ ವರ್ಷಾ ವರ್ಷಾ ಶುಭಾಷಯಗಳನ್ನ ಹೇಳ್ಕೊಂಡು ಕಳೆದುಬಿಡ್ಬೇಕಲ್ಲ ಅಂತ. ನಂಗಂತೂ ಸುಮ್ನೇ ಒಂದಿನ ಸತ್ತೋಗ್ಬಿಡಕ್ಕೆ ಬೇಜಾರಪ್ಪ. ಎಷ್ಟೊಂದು ದಿನಗಳಿವೆ ನಮ್ಮ ಕೈಲಿ. ಉಪಯೋಗಿಸ್ಕೊಳೋಕೆ ಬರೋಲ್ವಲ್ಲಾ ಅಂತ... ಇರಲಿ. ವೇದಾಂತದ ಮೂಡ್ ಇಲ್ಲ. ನಾಳೆ ಚಾರ್ಜ್ ಆಗತ್ತೇಂತ ಇವತ್ತೇ ಕೆಲವರೆಲ್ಲ ವಿಶಸ್ ಕಳಿಸಿದ್ರು. ಆಗ ಗಾಬರಿಯಾಗೋಯ್ತು, ೨೦೦೯ ಮುಗ್ದೇಬಿಡ್ತಲ್ಲ ಅಂತ. ಈ ಹೊತ್ತಲ್ಲಿ ಒಂದ್ ಸಲ ಹಿಂತಿರುಗಿ ನೋಡಿದಾಗ ಕಂಡ ೨೦೦೯ರ ಖುಷಿ, ಬೇಸರ, ಗುಟ್ಟುಗಳು ಇಲ್ಲಿವೆ. ಜತೆಗೆ... Continue Reading →
‘ಚೈತ್ರೋದಯ’ದ ಕಾಲಕ್ಕೆ ಅಲ್ಲಿ ನಾನು ಮತ್ತು ನೀವು…
ವಾರಾಂತ್ಯದಲ್ಲಿ, ವರ್ಷಾಂತ್ಯದಲ್ಲಿ ಒಂದು ಒಳ್ಳೆ ಕಾರ್ಯಕ್ರಮ. ಧನುರ್ಮಾಸದ ಬೆಳಗ್ಗೆ ಕಾವ್ಯದ ಹಣತೆ ಹಚ್ಚಿ ಕಾರ್ತಿಕದ ಸಂಭ್ರಮ, ರವೀಂದ್ರ ಕಲಾಕ್ಷೇತ್ರದಲ್ಲಿ ಚೈತ್ರೋದಯ! ನಾವೆಲ್ಲ ಅಲ್ಲಿ ಸೇರೋಣವಾ?
ಮತಕ್ಕೊಂದು ಬಣ್ಣ! ಅತಿ ಹೆಚ್ಚು ಕಚ್ಚಾಡುವ ಪ್ರಾಣಿಗಳು ಯಾವುವು?
ತೀರ ಇತ್ತೀಚಿನವರೆಗೂ ಅಂದರೆ ದಶಕದ ಹಿಂದಿನವರೆಗೂ ಇವೆಲ್ಲ ಇಷ್ಟು ಹದಗೆಟ್ಟಿರಲಿಲ್ಲ. ಅವರು ಮಾಡ್ತಾರೆ ಅಂತ ಇವ್ರು, ನೋಡ್ಕೊಂಡು ಸುಮ್ನಿರಬೇಕ ಅಂತ ಮತ್ತೊಬ್ರು ಎಲ್ರೂ ಕಾಂಪಿಟೇಷನ್ನಿನ ಮೇಲೆ ಧರ್ಮದ ಹೆಸರಲ್ಲಿ ಅನಾಚಾರ ಮಾಡೋರೇ. ಈ ಕರ್ಮಕಾಂಡಕ್ಕೆ ಹೊಸ ಸೇರ್ಪಡೆ- ಚರ್ಚಲ್ಲಿ ಕನ್ನಡದ ಬಾವುಟ ಹಾರಿಸಿದ್ದಕ್ಕೆ ತಕರಾರು ತೆಗೆದಿರುವ ಘಟನೆ. ಎಂಥ ಅಸಹ್ಯ-ವಿಕೃತ ಮನುಷ್ಯರು! ವಂದೇ ಮಾತರಂ ಗೀತೆಯನ್ನ ‘ಹಿಂದೂ ದೇವಿಯ ಪೂಜೆ’ ನಾವು ಅದನ್ನ ತಿರಸ್ಕರಿಸ್ತೇವೆ ಅಂತ ಕೆಲವರಂದರು. ನಾಲ್ಕು ಹೆಜ್ಜೆ ಮುಂದೆ ಹೋಗಿ ಶ್ರದ್ಧಾವಂತರ ಮನನೋಯಿಸುವ ಜೋಶಾವೇಶದ ಮಾತನ್ನೂ ಆಡಿದರು.... Continue Reading →
