ಕ್ಷಮಿಸಿ. ಮುಂಬಯ್ ನರಮೇಧಕ್ಕೆ ಸಂಬಂಧಿಸಿದಂತೆ ನನ್ನ ಕೊನೆಯ ಪ್ರತಿಕ್ರಿಯೆ ಎಂದು ಹಿಂದಿನ ಪೋಸ್ಟಿನಲ್ಲಿ ಹೇಳಿಕೊಂಡಿದ್ದೆ. ಆದರೆ ಸಾಧ್ಯವಾಗುತ್ತಿಲ್ಲ. ಯಾವತ್ತೂ ಭಯೋತ್ಪಾದಕರ ಸಂಗತಿ ಹೀಗೆ ವಿಷಯಾಂತರಗೊಳ್ಳುತ್ತ ಸಾಗಿ, ನಮ್ಮ ನಮ್ಮ ನಡುವಿನ ಗಲಭೆಯಾಗಿ ಉಳಿದು ಅಸಲು ಸಂಗತಿ ಡೈಲ್ಯೂಟ್ ಆಗಿಹೋಗುತ್ತದೆ. ಇಲ್ಲಿ, ಪೀರ್ ಭಾಷಾ ಅವರ ಪ್ರತಿಕ್ರಿಯೆ ಇದೆ. ಅವನ್ನು ಯಥಾವತ್ತಾಗಿ ಹಾಕಿದ್ದೇನೆ. ಜೊತೆಗೆ ನನ್ನ ಪ್ರತ್ಯುತ್ತರವನ್ನೂ. ಗಾಳಿಯ ಜತೆ ಗುದ್ದಾಡಿ ಪ್ರಯೋಜನವಿಲ್ಲವೆಂದು ಈಗಾಗಲೇ ಅರಿವಾಗಿದ್ದರೂ ಮತ್ತೊಂದು ಹುಂಬ ಪ್ರಯತ್ನ ಮಾಡುತ್ತ, ಈ ಲೇಖನ ಸರಣಿಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.... Continue Reading →
ಜವಾಬ್ದಾರಿಯುತ ಮನುಷ್ಯರು ಸಾಕಷ್ಟಿದ್ದಾರೆ…
ನೋವಿನ ನದಿ ಹರಿಸಿ ಧರ್ಮದ ತೆಪ್ಪದಲ್ಲಿ ದಡ ಸೇರಲು ಬಯಸಿದ್ದಾರೆ! ತೊಟ್ಟಿಕ್ಕಿದ ನೋವು ಮಣ್ಣಲ್ಲಿ ಬೆರೆತು ಕೆಂಪಾಗಿದೆ... ಈ ಹಾಯ್ಕುವನ್ನು ಸ್ನೇಹಿತರಾದ ಡಾ.ರವೀಂದ್ರನಾಥ್ ಕಳುಹಿಸಿಕೊಟ್ಟಿದ್ದು. ಆಗವರು ನ್ಯೂಸ್ ನೋಡುತ್ತ ಕುಳಿತಿದ್ದರು. ಅದರಲ್ಲಿ ಏನು ಬರುತ್ತಿತ್ತೆನ್ನುವುದನ್ನು ಹೇಳಬೇಕಿಲ್ಲ ಅಲ್ಲವೆ? ~ ಹೀಗೆ ನೆನ್ನೆಯಿಡೀ ಹರಿದಾಡಿದ ಮೆಸೇಜುಗಳಿಗೆ ಲೆಕ್ಕವಿಲ್ಲ. ರೋಷದ, ವಿಷಾದದ, ಹತಾಶೆಯ, ಸೇಡಿನ, ದ್ವೇಷದ, ಆತಂಕದ, ವಿಡಂಬನೆಯ.... ಒಂದೇ ಎರಡೇ? ಈ ಮೆಸೇಜುಗಳಲ್ಲಿ ಎರಡು ಹೀಗಿವೆ: 1. Pass it on... " Forgiving the terrorists is... Continue Reading →
‘ಮತ್ತೊಬ್ಬ ಗೆಳೆಯ’ನ ಪರಿಚಯ
ಮತ್ತೊಬ್ಬ ಗೆಳೆಯನ ಕವಿತೆ ಮೆಚ್ಚಿದವರಿಗೆ ಸಿದ್ಧು ದೇವರಮನಿಯ ಪರಿಚಯ ಇಲ್ಲಿದೆ. ಓದಿರದವರಿಗೂ... ನನಗೆ ಸಿದ್ಧು ಪರಿಚಯವಾಗಿದ್ದು ಒನ್ ಅಂಡ್ ಓನ್ಲಿ ಹಂಗಾಮಾದ ಮೂಲಕ. ಅದೊಂದು ಪುಟ್ಟ ಪತ್ರಿಕೆಯ ಮೂಲಕ ನನಗಾದ ಲಾಭವದೆಷ್ಟೋ!? ಆ ಮೂಲಕ ಪರಿಚಯವಾದವರು ವೆಂಕಟ್ರಮಣ ಗೌಡ, ಜಿ.ಎನ್.ಮೋಹನ್, ಸಿದ್ಧು ದೇವರಮನಿ ಮತ್ತು ಅರುಣ್ ಜೋಳದಕೂಡ್ಲಿಗಿ. ಅಷ್ಟೇ ಅಲ್ಲ, ಸುಮಾರು ಐದಾರು ವರ್ಷ ಕಳೆದುಹೋಗಿದ್ದ ಮತ್ತೊಬ್ಬ ಗೆಳೆಯ ವಿಕ್ರಮ್ ವಿಸಾಜಿಯನ್ನು ಹುಡುಕಿಕೊಟ್ಟಿದ್ದೂ ಇದೇ ಹಂಗಾಮಾ. ಈ ಸಿದ್ಧು ಎನ್ನುವ ಪುಣ್ಯಾತ್ಮನನ್ನು ನಾನು ನಾನು ನೋಡಿಲ್ಲ. ಪಕ್ಕಾ... Continue Reading →
ಶ್ವೇತಾಳ ಸಂಕಟಕ್ಕೆ ಪರಿಹಾರವಿದೆಯೇ?
ಭ್ರಷ್ಟಾಚಾರದ ಬಗ್ಗೆ ಮಾತನಾಡುವಾ ಅಂತ ನಾನೇನಾದರೂ ಅಂದರೆ ನೀವು ನಕ್ಕುಬಿಡಬಹುದು. ಈಗ ನಾನು ಹೇಳಲಿರುವ ವಿಷಯ ಅತ್ಯಂತ ಸಾಮಾನ್ಯ ಸಂಗತಿಯೂ ಆಗಿರಬಹುದು. ಆದರೆ, ವಿದ್ಯಾರ್ಥಿನಿಯೊಬ್ಬಳು ಲಂಚ ಕೊಡಲು ಮನಸೊಲ್ಲದೆ, ಕೊಡದೆ ಬೇರೆ ದಾರಿಯಿಲ್ಲದೆ ತನ್ನ ಸಂಕಟ ತೋಡಿಕೊಂಡಾಗ, ಇದನ್ನು ನಿಮ್ಮ ಮುಂದಿಟ್ಟು, ಪರಿಹಾರ ತಿಳಿದಿದ್ದರೆ, ಸಲಹೆ ಸೂಚನೆಗಳಿದ್ದರೆ ಕೇಳಬೇಕೆನಿಸಿತು. ಇಲ್ಲಿದೆ- ಶ್ವೇತಾ ಎನ್ನುವ ಹುಡುಗಿಯ ಸಂಕಟ, ಅಣ್ಣ ಚಕ್ರವರ್ತಿಯ ಬಳಿ ಹೇಳಿಕೊಂಡಂತೆ... ನಾವು ನಿಮ್ಮ ಸಲಹೆ ಸಹಕಾರಗಳಿಗಾಗಿ ಕಾದಿದ್ದೇವೆ. ಶ್ವೇತಾ ಕೂಡಾ. ವಂದೇ, ಚೇತನಾ ತೀರ್ಥಹಳ್ಳಿ.
ಇದು ಹುಡುಗರ ‘ಸಡಗರ’
ಸುಮಾರು ಒಂದೂವರೆ- ಎರಡು ವರ್ಷದ ಹಿಂದಿನ ಮಾತು. ಯಾವುದೋ ಕಾರ್ಯಕ್ರಮ ಮುಗಿಸ್ಕೊಂಡು ಬಂದ ಅಣ್ಣ, “ಇದು ನೋಡು, ಹುಡುಗರು ಸೇರಿ ಮಾಡ್ತಿರೋ ಹೊಸ ಪತ್ರಿಕೆ. ಅದ್ರಲ್ಲೂ ಇಂಜಿನಿಯರಿಂಗ್ ಸ್ಟೂಡೆಂಟ್ಸು" ಅನ್ನುತ್ತಾ ಒಂದು ಪತ್ರಿಕೆಯ ಹಲವು ಪ್ರತಿಗಳನ್ನ ನನ್ನ ಮುಂದೆ ಹಿಡಿದ. ನಾನು, ಹುಡುಗರು ತಾನೇ, ಒಂದಷ್ಟು ಪ್ರೇಮ ಕಥೆ - ಕಚ್ಚಾ ಕವಿತೆಗಳಿರುತ್ತೆ ಅಂತ ಉಡಾಫೆಯಿಂದ್ಲೇ ತೆಗೆದಿಡಲು ಹೋದೆ. ಅಂವ ಬಿಡದೆ, ‘ಚೆನ್ನಾಗಿದೆ ಕಣೋ, ಒಳ್ಳೆ ಪ್ರಯತ್ನ ಮಾಡಿದಾರೆ’ ಅಂತ ಶಿಫಾರಸು ಮಾಡಿದ ಮೇಲೆ, ರಾತ್ರಿಯೂಟದ ಜತೆ... Continue Reading →
ಸುಮ್ಮನೆ ನೋಡಿದ ಸಿನೆಮಾಗಳು
ಕಳೆದೊಂದು ವಾರದಿಂದ ರಜೆ ಮೇಲೆ ರಜೆ ಬಂದು ಸೋಮಾರಿತನದಿಂದ ಮೈ ಮುರೀತಲೇ ಆಫೀಸಿಗೆ ಬಂದ ನನ್ನ ಬಾಯಲ್ಲಿ, ಅಪಸ್ವರದಲ್ಲಿ ಗುನುಗಾಡುತ್ತಿರುವ ಹಾಡು ಯಾವುದು? ಚಲ್ಕೆ ಪಲ್ಕೋಂ ಕೆ ಪೀಚೆ, ಚಲ್ಕ ತನ್ಹ ಆಸೂಂ ಕೊಯಿ....... ಇಕ್ ಮೀಠ ಮರ್ಜ್ ದೇನೆ, ಆನಾ ತುಮ್ ಯೂಂ ಹಿ... ಫಿರ್ ದವಾ ಕ ಕರ್ಜ್ ದೇನೆ, ಆನಾ ತುಮ್ ಯೂಂ ಹಿ.... ಕೇಳಿದೀರಾ ಈ ಹಾಡನ್ನ? ~ ಅದೇನಾಯ್ತು ಅಂದ್ರೆ, ಅಕ್ಟೋಬರ್ ಕೊನೇ ದಿನ ಸಂಜೆ ‘ಮುಂಬಯ್ ಮೇರಿ ಜಾನ್’... Continue Reading →
ಖುಶಿಪಡಲೆರಡು ಸಂಗತಿಗಳು!
ನನಗಂತೂ ಖುಷಿಯಾಗಿದೆ. ಅಂತೂ ನನ್ನ ಬ್ಲಾಗ್ ಯಶಸ್ವಿಯಾಗಿ ಮುನ್ನುಗ್ಗುತ್ತಿದೆ. ‘ಮೊದಲು ಎಲ್ಲವೂ ಸರಿಯಿದ್ದ’ ಬ್ಲಾಗ್ ದುನಿಯಾದಲ್ಲಿ ‘ನನ್ನ ಆಗಮನದ ನಂತರ’ ಸಾಕಷ್ಟು ತೊಂದರೆಯಾಗಿದೆ. ನಿಜ! ನನ್ನ ಕೆಪಾಸಿಟಿ ಇಷ್ಟರ ಮಟ್ಟಿಗೆ ಇದೆ ಅನ್ನೋದು ಖಂಡಿತ ನನಗೆ ಗೊತ್ತಿರ್ಲಿಲ್ಲ. ಗೊತ್ತು ಮಾಡಿಕೊಟ್ಟ ಮಹಾಶಯರಿಗೆ ಅನಂತಾನಂತ ಧನ್ಯವಾದಗಳು. ನೆನ್ನೆ ತಾನೆ ಗೆಳತಿಯೊಟ್ಟಿಗೆ ಮಾತನಾಡಿದ್ದೆ. ಈ ಪೂರ್ವಗ್ರಹ ಪೀಡಿತ ಮಂದಿಯೆದುರು ಮಾತಾಡಿ ಉಪಯೋಗವಿಲ್ಲ, ಸದ್ಯಕ್ಕೆ ನನ್ನ ಪಾಡಿಗೆ ನಾನು ಕಥೆ ಕವನದ ಥರದ್ದೇನಾದರೂ ಬರೆದ್ಕೊಂಡು ಇದ್ದುಬಿಡ್ತೇನೆ ಅಂತ. ಬಹುಶಃ ನನ್ನ... Continue Reading →
ಇಲ್ಲಿ ಸವಾಲ್ ಜವಾಬ್ ನಡೆದಿದೆ…
ಇಲ್ಲಿ ಕವಿತೆಗಳ ಸವಾಲ್ ಜವಾಬ್ ನಡೆದಿದೆ! ಆನಂದ್ ಋಗ್ವೇದಿ ಅವರ ‘ನಿನ್ನ ನೆನಪಿಗೊಂದು ನವಿಲುಗರಿ ಸಾಕು’ ಕವಿತೆಗೆ ಉತ್ತರವೆಂಬಂತೆ ಶಿಶಿರ ಅವರ ‘ಶಾಸ್ತ್ರ’ ಕವಿತೆಯಿದೆ. ಅದಕ್ಕೆ ಸಂವಾದಿಯಾಗಿದೆ, ಪೂರ್ಣಾ ಅವರ ‘ಮೋಸವಾಯಿತೇನೆ ರಾಧೆ!?’ ಕವಿತೆ. ಕನ್ನಡ ಬ್ಲಾಗ್ದಾಣದಲ್ಲಿ ಇದೊಂಥರಾ ಹೊಸ ಪ್ರಯೋಗ. ಆಸಕ್ತಿಯಿದ್ದವರು ಇಲ್ಲೊಮ್ಮೆ ಭೇಟಿಕೊಡಿ. ನಲ್ಮೆ, ಚೇತನಾ ತೀರ್ಥಹಳ್ಳಿ
ಇಲ್ಲೊಂದಷ್ಟು ಆರೋಪಗಳಿವೆ…
ನಾನು ನೆಟ್ ತೆಗೆಸಿ ನಾಲ್ಕು ತಿಂಗಳಾಗ್ತಾ ಬಂತು. ಅವತ್ತಿಂದ ರೆಗ್ಯುಲರ್ರಾಗಿ ಮೇಲ್ ಚೆಕ್ ಮಾಡಲು ಸಾಧ್ಯವೇ ಆಗ್ತಿಲ್ಲ. ಕೆಲಸ ಮಾಡೋದ್ ಬಿಟ್ಟು ಚಾಟ್ ಮಾಡ್ಕೊಂಡು ಕೂರ್ತಾರೆ ಅಂತಲೋ ಏನೋ ಆಫೀಸಲ್ಲೂ ಬ್ಲಾಕ್ ಮಾಡಿಬಿಟ್ಟಿದಾರೆ ನೋಡಿ! ಅದಕ್ಕೇ. ಹಾಗೂ, ನೆನ್ನೆ ಸಂಜೆ ಸೈಬರ್ ನತ್ತ ಹೆಜ್ಜೆ ಹಾಕಿದೆ. ಆಮೇಲೆ ‘ಯಾಕಪ್ಪಾ ಬೇಕಿತ್ತು ಈ ಉಸಾಬರಿ’ ಅಂತ ಬೇಸರಪಟ್ಕೊಂಡು ಉಳಿದ ಸಮಯ ಹಾಳು ಮಾಡ್ಕೊಂಡೆ. ಕಾರಣ, ಸ್ವಲ್ಪ ಗಂಭೀರವಾಗಿದೆ. ಒಬ್ಬ ಪುಣ್ಯಾತ್ಮರು ಮೇಲ್ ಮಾಡಿದ್ದರು. (ಅವರನ್ನು ವೈಯಕ್ತಿಕವಾಗಿ ತರಾಟೆಗೆ ತೆಗೆದ್ಕೊಳ್ಳುವ... Continue Reading →
ನಾಲ್ಕು ಮಾತು- ನಾಲ್ಕು ಮಂದಿಯ ಪ್ರತಿಕ್ರಿಯೆ
ಈ ಲೇಖನದಲ್ಲಿ ಹೇಳಿದ್ದೆ. ನನಗೆ ಚರ್ಚೆ ಬೇಕು, ಸರಿ ತಪ್ಪು ತಿಳಿಯಬೇಕು ಅಂತೆಲ್ಲಾ. ಅದಕ್ಕೆ ಸರಿಯಾಗಿ, ನನ್ಒಂದು ಕಥೆ, ನಾಲ್ಕು ಮಾತಿಗೆ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನ್ನ ಉತ್ತರಗಳೂ ಇವೆ. ಇದರ ಮೂಲಕ ವಿಷಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹಾಕ್ತಿದೇನೆ. ಆಸಕ್ತಿಯಿದ್ದವರು ಮುಂದುವರೆಸಬಹುದು. ಚೇತನಾ, ವಿಶ್ವಮಾನವರ ಬಗ್ಗೆ ಯಾಕ್ರಿ ತಲೆ ಕೆಡಿಸ್ಕೋತೀರಾ?? ಗಾಂಧೀಜಿಯ ರಾಮರಾಜ್ಯ,ಕುವೆಂಪುರವ ವಿಶ್ವಮಾನವ ಕಲ್ಪನೆ ಎಲ್ಲ ಪುಸ್ತಕದಲ್ಲಿದ್ರೇನೆ ಚೆನ್ನ. ಕಾನೂನು ಕೈಗೆತ್ತಿದರ ಬಗ್ಗೆ ಆಕ್ಶೇಪ ಎತ್ತೋರು ತುಂಬಾ ಜನ ಸಿಗ್ತಾರೆ. ಕೊಲೆ... Continue Reading →
