ಒಂದು ಊರಿನಲ್ಲಿ ನಾಗರಹಾವೊಂದು ದೊಡ್ಡ ಹುತ್ತದಲ್ಲಿ ವಾಸವಿತ್ತು. ಅದು, ಒಮ್ಮೆ ನಾರದ ಮಹರ್ಷಿಗಳ ಪ್ರಭಾವಕ್ಕೆ ಒಳಗಾಗಿ ಅವರ ಶಿಷ್ಯನಾಯಿತು. ಹೀಗೆ ನಾರದರ ಶಿಷ್ಯತ್ವ ವಹಿಸಿದ ಕ್ಷಣದಿಂದಲೇ ಅದು ತನ್ನತನವನ್ನು ಬಿಟ್ಟುಕೊಟ್ಟು ಸಾಧುವಾಗಿಹೋಯಿತು. ಸರ್ಪ ಸಂನ್ಯಾಸ ತೆಗೆದುಕೊಂಡ ಸುದ್ದಿ ಆ ಊರಿನ ಹುಡುಗರಿಗೆ ಗೊತ್ತಾಯಿತು. ಸದಾ ನಾಲಿಗೆ ಹೊರಹಾಕುತ್ತ ಹೊಂಚು ಹಾಕುತ್ತಿದ್ದ ಸರ್ಪ, ಈಗ ಯಾವಾಗ ನೋಡಿದರೂ ತೆಪ್ಪಗೆ ಬಿದ್ದಿರುತ್ತಿತ್ತು. ಇದು ಹುಡುಗರ ಪಾಲಿಗೊಂದು ಮೋಜಿನಂತಾಯ್ತು. ಅವರು ಹೋಗುತ್ತ-ಬರುತ್ತ ಸರ್ಪದ ಬಾಲ ಹಿಡಿದೆಳೆಯುವುದು, ಕಾಲಿನಿಂದ ಝಾಡಿಸುವುದು, ಕಲ್ಲು... Continue Reading →
ಮತೀಯ ದುರಂತಗಳ ಬಗ್ಗೆ – ನನ್ನದೊಂದು ಸತ್ತ ದನಿ
ಇತ್ತೀಚೆಗೆ ಕೆಲವು ದಿನಗಳಿಂದ ಯಾಕೋ ಚಿಪ್ಪಿನೊಳಗೆ ಹುದುಗಿಹೋಗಬೆಕೆನ್ನುವ ಹಂಬಲ ಮತ್ತೆ ತಲೆ ಎತ್ತುತ್ತಿದೆ. ಥೇಟು ಆಮೆಯ ಹಾಗೆ. ಈ ‘ಸುಮ್ಮನಿದ್ದುಬಿಡಬೇಕು’ ಅನ್ನಿಸುವ ಕಾಯಿಲೆ ಕಾಡಬಾರದು ನೋಡಿ ಯಾರಿಗೂ. ಇತ್ತೀಚೆಗೆ ದೆಹಲಿ ಸ್ಫೋಟವಾಯ್ತಲ್ಲ, ಎದೆ ಉರಿದುಹೋಗಿತ್ತು ಅವತ್ತು. ಹಾಗೆ ಉರಿದಿದ್ದನ್ನ ಬರೆದು ಬಿಸಾಡಬೇಕು ಅಂದ್ಕೊಂಡೆ. ಯಾಕೋ ಸಾಧ್ಯವೇ ಆಗಲಿಲ್ಲ. ಆಮೇಲೆ ಮತಾಂತರದ ಅವಾಂತರವಾಯ್ತಲ್ಲ, ಪ್ರಚೋದನೆ- ಪ್ರತಿಕ್ರಿಯೆಗಳಾದುವಲ್ಲ, ಆಗಲೂ ವಿಪರೀತ ಕಸಿವಿಸಿಯಾಯ್ತು. ಬರೀಬೇಕಂದುಕೊಂಡೆ. ಊಹೂಂ... ಆಗಲಿಲ್ಲ. ಒಳಗೊಳಗೆ ಎದ್ದ ಕೂಗು ಹಾಗೆಹಾಗೇ ಸತ್ತು ಹೋಗುತ್ತಿತ್ತು. ನಾನು ಮತ್ತೆ ಉರುಟುರುಟಿ ಸುತ್ತಿಕೊಳ್ಳುತ್ತ,... Continue Reading →
ನೆಲದಡಿಯ ನದಿಯೆಡೆಗೆ…
ನನ್ನ ಪ್ರಿಯ ಸ್ನೇಹಿತರೊಬ್ಬರು ಒಂದು ಹೊಸ ಬ್ಲಾಗ್ ಶುರು ಮಾಡಿದಾರೆ. ಹೆಸರು- ಇನಿಗ್ಮಾ. “ಏನ ಬೇಡಲಿ ಹರಿಯೆ ನಿನ್ನ ಬಳಿಗೆ ಬಂದು” ಎಂದು ಹಾಡಿದರು ಹರಿದಾಸರು. ತನಗಿಂತಲೂ ಭಗವಂತನೇ ಹೆಚ್ಚು ಕಷ್ಟದಲ್ಲಿದ್ದಾನೆ ಎನ್ನಿಸಿದ ಆ ಗಳಿಗೆ ಅಗಾಧ ಶಕ್ತಿಯುಳ್ಳದ್ದು. ಅದೊಂದು ಮಿಂಚು. ನಮಗೆಲ್ಲ ಆ ಮಿಂಚು ಬೇಕು. ಅದನ್ನು ಹಿಡಿವ ಹಾದಿಯಲ್ಲಿ ಅರೆ, ನಾವೆಷ್ಟು ಜನ! ~ ಹೀಗನ್ನುತ್ತಾರೆ ಈ ಬ್ಲಾಗಿನ ಸಂಪಾದಕರು. ಈಗಿನ್ನೂ ಇದರ ಶುರುವಾತು ಅಷ್ಟೇ. ಮುಂದೆ ಅವರು ವಿಭಿನ್ನ ಓದನ್ನ ನಮಗಿಲ್ಲಿ ಕಟ್ಟಿಕೊಡಲಿರುವುದನ್ನು... Continue Reading →
‘ಬಸ್ಸಿನ ಹೆಂಗಸು’- ಒಂದು ಗಟ್ಟಿ ಚರ್ಚೆ
ನಿಮಗೆ ಗೊತ್ತು. ‘ಬಸ್ಸಿನ ಹೆಂಗಸು ಮತ್ತು ಬಿಳಿ ಬಿಳೀ ಸೀರೆಯ ಹುಡುಗಿಯರು’ ಲೇಖನದ ಪ್ರತಿಕ್ರಿಯೆಗಳು ಚರ್ಚೆಯಾಗಿ, ‘ಪೊರಕೆ ಎಲ್ಲಿದೆ?- ಮತ್ತೊಂದು ಚರ್ಚೆ’ ಎಂಬ ಶಿರೋನಾಮೆಯೊಂದಿಗೆ ಮುಂದುವರೆದಿದ್ದು. ಅಲ್ಲಿಂದಲೂ ಮುಂದುವರೆದು ಇದೀಗ ಚರ್ಚೆ ಬಹಳ ಸತ್ವಶಾಲಿಯಾಗಿ, ಗಟ್ಟಿಯಾಗಿ ಬೆಳೆದುನಿಂತಿದೆ ಸುಪ್ರೀತ್, ಹೇಮ ಶ್ರೀ, ಶ್ರೀಪ್ರಿಯೆ, ಸಂದೀಪ್ ಮತ್ತು ವಿಕೆ ಅವರು ಸಾಕಷ್ಟು ಸಂಗತಿಗಳನ್ನೊಳಗೊಂಡ ಸುದೀರ್ಘ ಪ್ರತಿಕ್ರಿಯೆಗಳನ್ನು ಬರೆದು ಚರ್ಚೆ ಮುಂದುವರೆಸಿದ್ದಾರೆ. ಅವೆಲ್ಲವನ್ನೂ ನಿಮ್ಮ ಅವಗಾಹನೆಗಾಗಿ ಪ್ರತ್ಯೇಕ ಪೋಸ್ಟ್ ಮೂಲಕ ಪೋಸ್ಟ್ ಮಾಡಿರುವೆ. ನಿಮ್ಮ ಪ್ರತಿಕ್ರಿಯೆಗೆ, ಪಾಲ್ಗೊಳ್ಳುವಿಕೆಗೆ ನಾನು ಆಭಾರಿ.... Continue Reading →
ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ
‘ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು’ ಲೇಖನದ ವಸ್ತು ನಿಜ ಘಟನೆಯನ್ನ ಆಧರಿಸಿದ್ದು. ಇಲ್ಲಿರುವ ಕೊನೆಯ ಪ್ರಶ್ನೆ, ಪ್ರಾಮಾಣಿಕವಾಗಿ ನನ್ನ ಅಂತರಾಳದ್ದು. ಇದು ನನ್ನನ್ನ ಕಾಡುತ್ತಿರುವುದಕ್ಕೆ ಕಾರಣ ಬಹಳವಿದೆ. ಭಾಷಣ, ಬರಹ ಅಂತೆಲ್ಲ ಶುಚಿಶುಚಿಯ ಚಟುವಟಿಕೆಯಲ್ಲಿ ಮುಳುಗಿಹೋಗುವ ನನಗೆ ಏನೂ ಮಡಲಾರದವಳಾಗಿರುವೆನಲ್ಲ ಎಂಬ ನಾಚಿಕೆ ಕಾಡಿ ಅದನ್ನ ಹೇಳಿಕೊಂಡಾದರೂ ಹಗುರಾಗುವ ಎಂದಿದನ್ನ ಬರೆದೆ. ಇದನ್ನ ಬರೆದಿದ್ದು ಮೇ ತಿಂಗಳಿನಲ್ಲಿ. ಈ ಲೇಖನ ಕೆಂಡ ಸಂಪಿಗೆಯಲ್ಲಿ ಬಂದು, ಇದೀಗ ನಿಮ್ಮೊಡನೆ ಚರ್ಚಿಸುವ ಸಲುವಾಗಿಯೆ ನನ್ನ ಬ್ಲಾಗಿಗೆ ಹಾಕಿಕೊಂಡೆ.... Continue Reading →
ಒಂದು ಪೀಠಿಕೆ, ಸಮಜಾಯಿಷಿ, ವರದಿ ಮತ್ತು ವಂದನಾರ್ಪಣೆ
ಪೀಠಿಕೆಗೊಂದು ಕಥೆ... ಇದು ನಿಜ್ವಾಗ್ಲೂ ನಡೆದ- ಇನ್ನೂ ಪರಿಹಾರ ಕಾಣದಿರುವ ಸಂಗತಿ. ನನ್ನ ಹಳೆ ಗೆಳತಿಯೊಬ್ಬಳ ಹೆಸರು ಭವ್ಯಾ. ಅವಳ ಗಂಡ ಚಂದನ್. ಅವರಿಬ್ರೂ ಪ್ರೀತಿಸಿ ಮದುವೆಯಾದ್ರು. ಪ್ರೀತಿ ಅಂದ್ರೆ... ಅದೆಂಥದ್ದು ಅಂತೀರಾ!? ಅಂವ ಇದ್ದಿದ್ದು ಮುಂಬಯಿಯಲ್ಲಿ. ಇವಳು- ಇಲ್ಲೇ, ಬೆಂಗ್ಳೂರಲ್ಲಿ. ದಿನಾ ಗಂಟೆಗೊಂದು ಸಾರ್ತಿ ಅಂವ ಇವಳಿಗೆ ಕಾಲ್ ಮಾಡಿ ಕಾಲು ಗಂಟೆಯಾದ್ರೂ ಮಾತಾಡ್ತಿರ್ತಿದ್ದ. ರಾಟ್ರಿಯಂತೂ ನಿದ್ದೆ ಬಿಟ್ಟು ಫೋನಲ್ಲಿ ಹರಟೆ ಕೊಚ್ತಿದರು. ಸರಿ. ಎರಡೂ ಕಡೆಯವರು ಒಪ್ಪಿ ಖುಶಿಖುಶಿಯಾಗೇ ಮದುವೆ ಮಾಡಿಕೊಟ್ಟರು. ಆದರೆ, ಮದುವೆಯಾದ... Continue Reading →
ಸ್ವಾತಂತ್ರ್ಯೋತ್ಸವದ ಸಂಭ್ರಮದಲ್ಲಿ ನಾಲ್ಕು ಮಾತು
ನಮಸ್ತೇ... ನಿಮ್ಮೆಲ್ಲರಿಗೂ ಸ್ವಾತಂತ್ರ್ಯೋತ್ಸವದ ಶುಭಾಶಿಶಗಳು. ನಾನಂತೂ ಈ ತಿಂಗಳು, ಇವತ್ತು ಮಾತ್ರವಲ್ಲದೆ ನಮ್ಮ ಹಿಂದಿನವರು ಸ್ವಾತಂತ್ರ್ಯ ಪ್ರಾಪ್ತಿಗಾಗಿ ಪಟ್ಟ ಬವಣೆಗಳನ್ನ ನೆನೀತಾ ಇರ್ತೇನೆ, ಮಾತಾಡ್ತಾ ಇರ್ತೇನೆ. ಅದೆಲ್ಲ ನನಗೆ ಸಿಕ್ಕ ಸಹವಾಸದ ಫಲವೆಂದೇ ತಿಳಿಯಿರಿ. ಆದರೆ ಇದರಿಂದ ನನಗೆ ವೈಯಕ್ತಿಕವಾಗಿಯೂ ಬಹಳಷ್ಟು ಲಾಭವಾಗಿದೆ. ನಾನು ನಾಡಿನ ಸ್ವಾತಂತ್ರ್ಯದ ಬಗ್ಗೆ ಯೋಚಿಸ್ತ ಯೋಚಿಸ್ತಲೇ ವ್ಯಕ್ತಿಯೊಬ್ಬನ ವೈಯಕ್ತಿಕ ಸ್ವಾತಂತ್ರ್ಯ- ಸ್ವೇಚ್ಚೆಗಳ ಬಗ್ಗೆಯೂ ಯೋಚಿಸಲು ಪ್ರೇರೇಪಣೆ ದೊರೆತಿದ್ದು ಇದರಿಂದಲೇ. ವ್ಯಕ್ತಿಯೊಬ್ಬನ ಸ್ವೇಚ್ಛೆಯನ್ನ ಅಮೆರಿಕಕ್ಕೆ ಹೋಲಿಸಬಹುದು ಅಂತ ಆಗಾಗ ನನಗನಿಸೋದಿದೆ. ~ ಅಂದ... Continue Reading →
ಹಳೆಯ ನೆನಪು ಮತ್ತು ಒಂದು ಹೊಸ ಪುಸ್ತಕ
ಈಗ ಅದೆಲ್ಲ ಮಜಾ ಅನಿಸತ್ತೆ. ನಾನು ಒಂದನೇ ಕ್ಲಾಸಿಂದ ಫಸ್ಟ್ ಬಿಎಸ್ಸಿ ವರೆಗೂ ಒಂದೇ ಒಂದು ನೋಟ್ಸೂ ಬರೆದಿರಲಿಲ್ಲ! ( ಆಮೇಲೆ ಬರ್ದೆ ಅಂದ್ಕೊಳ್ಬೇಡಿ... ನಾನು ಓದು ನಿಲ್ಲಿಸಿದ್ದು ಆಗಲೇ. ಮದ್ವೆ ಆಯ್ತಲ್ಲ, ಅದ್ಕೆ...) ಆದ್ರೂ ನಾನು ಮೊದಲ ಮೂರು ಪ್ಲೇಸಲ್ಲಿ ಇರ್ತಿದ್ದೆ ಅನ್ನೋದು ನಾನು ಕೊಟ್ಕೊಳೋ ಸಮಜಾಯಿಶಿ! (ನೀವು ನನ್ನ ಶತದಡ್ಡಿ ಅಂದ್ಕೋಬಾರದಲ್ಲ, ಅದ್ಕೆ!!) ಹಾಗಾದ್ರೆ, ದಪ್ಪ ದಪ್ಪ ರಟ್ಟಿನ ನೂರು- ಇನ್ನೂರು ಪುಟಗಳ ‘ಲೇಖಕ್’ ನೋಟ್ ಬುಕ್ ಗಳನ್ನ ನಾನೇನು ಮಾಡ್ತಿದ್ದೆ? ಕೊನೆ ಪುಟದಿಂದ... Continue Reading →
ಚೇತನಕ್ಕೆ ಒಂದು ವರ್ಷ!?
ಒಂದು ವರ್ಷ! ಅದೆನೂ ಹೆಚ್ಚಲ್ಲ ಬಿಡಿ. ಕಳೆದ ಎರಡು- ಮೂರು ವರ್ಷಗಳಿಂದ ಬ್ಲಾಗಿಂಗ್ ಮಾಡಿಕೊಂಡು ಒಮ್ಮೆಯೂ ಬೋರು ಎಂದು ಕೈ ಚೆಲ್ಲದೆ, ಮುನಿದುಕೊಳ್ಳದೆ ಕ್ರಿಯಾಶೀಲರಾಗಿರೋರು ಸಾಕಷ್ಟಿದ್ದಾರೆ. ಆದರೂ... ನನ್ನ ‘.... ಚೇತನ’ಕ್ಕೆ ಒಂದು ತುಂಬಿದ್ದೊಂದು ವಿಶೇಷ ಸಂಗತಿಯೇ! ಯಾಕೆ ಗೊತ್ತಾ? ನಾನು ಬ್ಲಾಗು ಶುರು ಮಾಡಿದ್ದು ಇವತ್ತಿಗೆ (೨೮ ಜುಲೈ) ಸರಿಯಾಗಿ ಒಂದು ವರ್ಷದ ಹಿಂದೆ. ಆದರೆ ರೆಗ್ಯುಲರ್ರಾಗಿ ಬರೀಲಿಕ್ಕೆ ಶುರು ಮಾಡಿದ್ದು ಅಕ್ಟೋಬರಿನಲ್ಲಿ. ಇನ್ನೂ ಮಜದ ವಿಷಯವೆಂದರೆ, ಮೊದಲ ಬಾರಿಗೆ ‘ಮುಚ್ಚುವೆ ಬ್ಲಾಗಿಲ’ ಅಂದಿದ್ದು ಎರಡೇ... Continue Reading →
