'ನಿನಗೆ ನನ್ ಬಗ್ಗೆ ಕೋಪ ಬರೋದಿಲ್ವಾ?' ತನ್ನನ್ನ ಒಡಹುಟ್ಟಿದ ಅಕ್ಕನ ಹಾಗೆ ಆದರಿಸ್ತಾ ಮನೆಯಲ್ಲಿಟ್ಟುಕೊಂಡಿದ್ದ ಅದಿತಿಯನ್ನ ನೋಡಿ ವಸಂತಸೇನೆಗೆ ಅಶ್ಚರ್ಯ. ಅದು ಹೇಗಾದ್ರೂ ಒಬ್ಬ ಹೆಂಡತಿ ತನ್ನ ಗಂಡನ ಪ್ರೇಯಸೀನ ಸಹಿಸ್ಕೊಳ್ಳಬಲ್ಲಳು? 'ಕೋಪಾನಾ? ಖಂಡಿತಾ ಇಲ್ಲ. ಇನ್ನೂ ಹೇಳಬೇಕಂದ್ರೆ, ನೀವು ಅವರ ಬದುಕಿನಲ್ಲಿ ಬಂದಿರೋದ್ರಿಂದ ನನಗೆ ಮತ್ತಷ್ಟು ಒಳ್ಳೇದೇ ಆಗಿದೆ' ಅವಳು ತುಸುವೇ ನಾಚಿ ಕಿಲಗುಟ್ಟುತ್ತಾಳೆ. ವಸಂತಸೇನೆಯ ಹುಬ್ಬು ಮೇಲೇರುತ್ತದೆ. 'ಯಾಕೆ? ಹೇಗೆ ಹಾಗೆ!?' 'ಅವರು... ಈಗೀಗ ನನ್ನ ತುಂಬಾ ಪ್ರೀತಿಸ್ತಾರೆ. ಅವರ ವರಸೆಗಳೂ ಬದಲಾಗಿವೆ!' ಅದಿತಿ... Continue Reading →
ಅಶ್ವಯುಜ ಶುಕ್ಲ ಮಾನವಮಿ ಬರಲೆಂದು…
ಟೆರೇಸಿನ ಮೇಲೆ ಒಣಹಾಕಿದ ಹಪ್ಪಳದ ವಾಸನೆಯಂತೆ ಬಿಸಿಲು. ಏನೋ ಒಥರಾ ಮಂಕು ಕವಿದ ಹಾಗೆ. ಆ ಭಾದ್ರಪದವೇ ಹಾಗಿತ್ತು. ಕೊನೆಯದರ್ಧ, ಶೂನ್ಯಮಾಸ. ಮುಗಿದ ಮಳೆ, ಶುರುವಾಗದ ಚಳಿ, ಒಳ್ಳೆ ಕೆಲಸಕ್ಕೆಲ್ಲ ಅಜ್ಜ-ಅಜ್ಜಿಯರ ಕತ್ತರಿ. ಚರ್ಮ ಬೇರೆ ಬೇಸಿಗೆಯೇನೋ ಅಂತೆಲ್ಲ ಗಲಿಬಿಲಿಯಾಗಿ ಒಡೆದುಕುಂತಿತ್ತು. ಹಾವಿನ ಚರ್ಮದ ಹಾಗೆ. ಮುಟ್ಟಿದರೆ ಹೊಟ್ಟೇಳುತ್ತಿದ್ದ ಮೈಯನ್ನ ನೋಡಿ ಚಿತ್ತಿ ವಾಚಾಮಗೋಚರ ಬಯ್ದಿದ್ದಳು. ಬಹಳ ಕಾವ್ಯಾತ್ಮಕವಾಗಿ ಬಯ್ತಾಳೆ ಚಿತ್ರಾ. ನನ್ನ, ‘ಶಕುಂತಲೆ ಹಾಗೆ ಕುಂತಿದೀಯಲ್ಲೆ, ನಿನ್ ಉಂಗುರ ಮೀನು ನುಂಗಿಲ್ಲ, ಯಾವ್ದೋ ದೊಡ್ಡ ತಿಮಿಂಗಿಲವೇ... Continue Reading →
