ಇದು ನಂಗಿಷ್ಟದ ಕಥೆ. ನೆನ್ನೆ ಒಬ್ಬ ಪ್ರೀತಿಯ ತಮ್ಮ ಇದನ್ನ ನೆನಪಿಸಿದ... ಅವಂಗೂ ಥ್ಯಾಂಕ್ಸ್... ನಂಗೂ ಥ್ಯಾಂಕ್ಸ್ 🙂 ನಡೆಯುತ್ತ ನಡೆಯುತ್ತ ಹಾಗೇ ಅಂಗಾತ ಬಿದ್ದ ರೋಡು ಸುರುಳಿ ಸುತ್ತಿ, ಆಸುಪಾಸಿನ ಅಂಗಡಿಗಳೆಲ್ಲ ಅಡ್ಡಬಿದ್ದು, ಹೆಜ್ಜೆಹೆಜ್ಜೆಗೂ ಹಾದಿ ಮುಗಿದು, ಊರಿಗೂರೇ ಉಂಡೆಯಾಗಿ, ಭೂಮಿ ಬುಗರಿಯಂತೆ ರೊಂಯ್ಯನೆ ತಿರುಗಿ, ಅದರೊಳಗೆ ನಾನೂ ಗಿರ ಗಿರ ಗಿರ ಗಿರ…. ಹಾಗೇ ನಿಂತಿರುವೆ ಡಿವೈಡರಿನ ಮೇಲೆ. ಬಸ್ಸು ಕಾರುಗಳು ಸಾಲುಸಾಲು ಹೊಗೆಯುಗುಳುತ್ತ ಹೋಗುತ್ತಿವೆ. ನನ್ನೊಳಗೆ ಧಗಧಗ ಬೆಂಕಿ! ಅಸಹನೆಯ ಕುದಿ ಉಕ್ಕುತ್ತಿದೆ... Continue Reading →
ಮಜ್ಜ ಮಜದ ನಂಬಿಕೆಗಳು (ಅವತ್ತಿನವು!)
ಸುಮ್ನೇ ಹಿಂಗೆ ನಾನು ಇಷ್ಟೂ ದಿನ ಏನೆಲ್ಲ ಸಾಹಸ ಮಾಡಿಕೊಂಡಿದೇನೆ ಅಂತ ಓ ನನ್ನ ಚೇತನಾ- ಭಾಗ 1 ನ್ನ ನೋಡ್ತಾ ಇದ್ದೆ. ಭಾಗ ಒಂದು ಅಂದರೆ, ನಾನು ಮೊದಲೊಂದಷ್ಟು ದಿನ ಬ್ಲಾಗಿಸಿ ಡಿಲೀಟ್ ಮಾಡಿದ ಪಾರ್ಟು. ಅದರಲ್ಲಿ ಇದು ಸಿಕ್ತು... ಅದೇ ಈ ಕೆಳಗಿನ ‘ಕನ್‌ಫೆಶನ್ನು’! ಬರಕೊಂಡವರು ಮರೆತಿದ್ದರೆ, ಓದಿ ಮಜಾ ತೊಗೊಳ್ಳಲಿ ಅಂತ... "ಈಗ ಅದನ್ನೆಲ್ಲ ನೆನೆಸಿಕೊಂಡ್ರೆ ಮಜಾ ಅನ್ನಿಸತ್ತೆ. ಚಿಕ್ಕಂದಿನ ಮೂಢ ಅನ್ನಲಾಗದ ಆ ಮುಗ್ಧ ನಂಬಿಕೆಗಳು ಈಗ ಅದೆಷ್ಟು ಕ್ಷುಲ್ಲಕವಾಗಿ ಕಂಡು... Continue Reading →
