ರಾತ್ರಿಯಲ್ಲೂ ಸೂರ್ಯ! ಏರ್‌ಪೋರ್ಟಿಂದ ಹೊರಬಂದು ನಿಂತ ನಮಗೆ ಮುಂದೆ ಎಲ್ಲಿಗೆ ಹೋಗೋದು ಅನ್ನುವ ನಿಕ್ಕಿ ಇರಲಿಲ್ಲ. ಓಡಾಟದ ಮಾಧ್ಯಮ ಯಾವುದು ಅನ್ನೋದೂ ಗೊತ್ತಿರಲಿಲ್ಲ. ಅಣ್ಣನಿಗೆ ಸೂಚನೆ ಇದ್ದಂತೆ `ವೈಷ್ಣೋಧಾಮ್'ಗೆ ಹೋಗೋದು ಅಂದುಕೊಂಡೆವು. ನಮ್ಮೆಲ್ಲರ ಪುಣ್ಯಕ್ಕೆ (ಅಥವಾ ಕರ್ಮಕ್ಕೆ) ನಮ್ಯಾರ ಸೆಲ್‌ಗಳೂ ಅಲ್ಲಿ ಕೆಲಸ ಮಾಡ್ತಿರಲಿಲ್ಲ. ಹೌದು... ಸೆಕ್ಯುರಿಟಿ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹೊರಗಿನ ಪ್ರಿಪೇಯ್ಡ್ ಸಿಮ್‌ಗಳಿಗೆ ನಿರ್ಬಂಧವಿದೆ. ಸುಮ್ಮನೆ ಬಿಸಿಲಲ್ಲಿ ಬೇಯುತ್ತ ನಿಂತಿದ್ದ ನಮ್ಮ ಕಣ್ಣಿಗೆ ಹೊಟ್ಟೆ ಬಿರಿಯುವಂತೆ ಜನರನ್ನ ತುಂಬಿಕೊಂಡು ಓಡಾಡುವ `ಮಿನಿಬಸ್'ಗಳು... Continue Reading →
ಜಮ್ಮು, ಕಾಶ್ಮೀರ ಮತ್ತು ಲಡಾಖ್
ಇದು ನಮ್ಮ ಜಮ್ಮು, ಕಾಶ್ಮೀರ ಮತ್ತು ಲಡಾಖ್ ಪ್ರವಾಸದ ಕಥನ. ಹದಿನೆಂಟು ದಿನಗಳ ಈ ಪ್ರವಾಸ ಒಂದು ದಿವ್ಯಾನುಭೂತಿಯೇ ಆಗಿತ್ತು. ಈ ಕಥನದ ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್ ಮಾಡಿ... ೨. ಸೆಖೆಯ ಸ್ವಾಗತ ಹಾಗೆ ನಾವು ಒಟ್ಟು ಆರು ಜನ ಹೊರಟೆವಲ್ಲ, ಈ ಪ್ರವಾಸದ ಹಿಂದೆ ನಮ್ಮೆಲ್ಲರಿಗೂ ನಮ್ಮದೇ ಆಸಕ್ತಿ- ಕಾರಣಗಳಿದ್ದವು. ಯೋಗೀಶ್ ಮತ್ತು ಸಚಿನ್ ಶತಾಯ ಗತಾಯ ಅಮರನಾಥಕ್ಕೆ ಹೋಗಿಯೇ ಬರುವುದು ಅಂತ ನಿರ್ಧರಿಸಿಕೊಂಡಿದ್ದರು. ಅವರ ಪೂರ್ತಿ ಗಮನ ಅದರತ್ತಲೇ ಇತ್ತು. ಅನೂಪನಿಗೆ... Continue Reading →
