‘ಮಿಂಚುಹುಳು’- ಹನಿಗೊಂಚಲು (ಕೆಟ್ಟ ಟೈಟಲ್!)

ನಂಗೆ ಮಿಂಚುಳ ತುಂಬಾ ಇಷ್ಟ. ಚಿಕ್ಕವಳಿರುವಾಗ ತಮ್ಮನೊಟ್ಟಿಗೆ ಅವನ್ನ ಹಿಡಿದು ಮೈಮೇಲೆ ಬಿಟ್ಟುಕೊಳೋದೊಮ್ದು ಆಟವಾಗಿತ್ತು. ಗೊತ್ತಾ!? ನಮ್ಮ ಸಂಬಂಧಿಕರೊಬ್ಬರ ಮದ್ವೆ ಹಳ್ಳೀಲಾಗಿತ್ತು. ರಾತ್ರಿ ವರಪೂಜೆ ಹೊತ್ತಿಗೆ ಕರೆಂಟ್ ಹೊರ್ಟೋಯ್ತು. ಅಲ್ಲಿ ದೇವಸ್ಥಾನದ ದಬ್ಬೆ ಬೇಲಿ ಉದ್ದಕ್ಕೂ ಗೊಂಚಲುಗೊಂಚಲು ಬೆಳಕು! ಅವು ಮಿಂಚುಹುಳು!! ಆ ನೋಟ ಕಟ್ಟಿಕೊಟ್ಟ ಅನುಭಾವ (ಭಾ- ಸ್ಪೆಲಿಂಗ್ ಮಿಸ್ಟೇಕ್ ಅಲ್ಲ)ವನ್ನ ಮರೆಯೋದು ಹೇಗೆ? ಅದನ್ನ ನೆನೆಸ್ಕೊಂಡ್ರೆ ಈಗ್ಲೂ ಅಷ್ಟೇ ಪ್ರಮಾಣದಲ್ಲಿ ರೋಮಗಳು ಎದ್ದೇಳ್ತವೆ. ಹಾಗೆ ಎದ್ದ ಘಳಿಗೆಯಲ್ಲಿ ಹುಟ್ಟಿದ ಕೆಲವು ಮಿಣುಕುಗಳು...... ~1~ ಚಂದ್ರನ... Continue Reading →

‘ರಾಧಾಷ್ಟಮಿ’ ಹೊತ್ತಲ್ಲಿ ‘ದುಂಬಿಗೆ ಧ್ಯಾನದ ಸಮಯ….’

ಕೊಳಲ ತರಂಗ ಕೊಳದ ತರಂಗ ಸೆಳೆತಕೆ ಸಿಕ್ಕ ರಾಧೆ ಯಂತರಂಗ ಕ ಲ ಕಿ ರಾಡಿ ~ ಕಣ್ಣಾ ಒಳಗಿದ್ದು ಕಾಡಬೇಡ ವಿಶ್ವರೂಪಿ ನಿನ್ನಗಲ ಎತ್ತರಕೆ ಸಾಲದಿದು ಪುಟ್ಟ ಹೃದಯ. ತುಣುಕು ಮಾತಿಗೆ ತುಂಬುವುದು ನಗೆ ಮಿಂಚಿಗೆ ಸುಳ್ಳು ಪ್ರೀತಿಗೂ ತುಂಬುವುದು ನೆನಪಿಗೂ ವಿರಹಕೂ ಸಾವಿರ ಬಾಳ ಫಲಗರೆವ ಒಂದು ಧನ್ಯ ನೋಟಕೂ ~ ಮಧು ತೀರಿದ; ರವಿ ತೆರಳಿದ... ಮಧು ತೀರಿದ, ರವಿ ತೆರಳಿದ ಹೊತ್ತೀಗ ದುಂಬಿಗೆ ಧ್ಯಾನದ ಸಮಯ ಮುದುಡದೆ ವಿಧಿಯೇ ಕಮಲಕೆ? ರಾಧೆಗೆ?... Continue Reading →

ಪ್ರವಾಸದಲ್ಲಿ ನಮ್ಮ ಕಥನ

ನಂಗೆ ಹೋದ ಸಾರ್ತಿಯೇ ನಮ್ಮ ಅನುಭವಗಳನೆಲ್ಲ ಒಟ್ಟು ಹಾಕಿ ಊದ್ದನೆಯದೊಂದು ಕಥನ ಬರೆದಿಟ್ಟುಕೋಬೇಕು ಅನಿಸಿತ್ತು. ಸೋಮಾರಿತನದಿಂದ ಆ ಪ್ರಾಜೆಕ್ಟ್ ಹಾಗೇ ಬಿದ್ದುಹೋಗಿ, ಕೆಂಡಸಂಪಿಗೆಯಲ್ಲಿ ಎರಡು ಕಂತಿಗೇ ಸರಣಿ ತುಂಡಾಗಿ ನೆನೆಗುದಿಗೆ (ನಂಗೆ ಈ ಪದ ಅದ್ಯಾಕೋ ಇಷ್ಟ!) ಬಿದ್ದಿತ್ತು. ಆ ಎರಡನ್ನು ಹೆಕ್ಕಿಕೊಂಡು ಬಂದಿದೇನೆ. ಮತ್ತೆ ಮುಂದುವರೆಸೋ ಇರಾದೆಯಿಂದ! ಅಂವ ಒಂದೇ ಸಮ ಬೆನ್ನು ಬಿದ್ದಿದ್ದ. "ಬಸ್ ಏಕ್ ಸೆಟ್ ಲೇಲೋ ಭಯ್ಯಾ!" ನಾವಂತೂ ಡಿಸೈಡ್ ಮಾಡಿಯಾಗಿತ್ತು. ಜಪ್ಪಯ್ಯಾ ಅಂದ್ರೂ ಶಾಪಿಂಗ್ ಮಾಡೋದಿಲ್ಲ ಅಂತ!! ನಮ್ಮ ಹಿಂದೆಯೇ... Continue Reading →

ಅದನ್ನಲ್ಲಿಯೇ ಬಿಟ್ಟು… am sorry

ಸುಮಾ, ರಾಜೇಶ್, ಶ್ರೀ(and again, ಯಾವ ಶ್ರೀ ಗೊತ್ತಾಗ್ತಿಲ್ಲ), ಗುರು ಮತ್ತು ಕಿರಣ್... sorry. ನಾನು ನನ್ನ ‘ಸುಳ್ಳಾದಳು...’ಗೆ ಕಮೆಂಟ್ ಆಪ್ಶನ್ ಇಡದೆ ಇದ್ದುದೇ ಅದನ್ನೊಂದು ನಿರರ್ಥಕ ಇಶ್ಯೂ ಮಾಡೋದು ಬೇಡವಂತ. ಆದರೂ ನೀವು ಬೇರೆ ಸ್ಪೇಸಿನಲ್ಲಿ ಆ ಬಗ್ಗೆ ಪ್ರತಿಕ್ರಿಯಿಸಿದ್ದು, ಅದನ್ನು ನಾನು ಅಪ್ರೂವ್ ಮಾಡುವುದಿಲ್ಲ. ಕ್ಷಮಿಸಿ. ನನಗೆ ಸಂಭಾಳಿಸಲಿಕ್ಕೆ ಹಳೇಹಪ್ಪಟ್ಟು ಭೂತವೊಂದು ಹಾಗೇ ಹೆಗಲ ಮೇಲಿದೆ. ಈ ನೆನ್ನೆ ಮೊನ್ನೆಗಳ ಬೇಸರದ ಹೆಣಗಳನ್ನು ಮತ್ತಷ್ಟು  ಹೊರಲಾರೆ. ಅದನ್ನಲ್ಲಿಯೇ ಬಿಟ್ಟು..... ಪ್ರೀತಿಯಿಂದ, ಚೇತನಾ

ಸುಳ್ಳಾದಳು ಕೇದಗೆ….

ನನಗೆ ಬೇಜಾರಾಗಿದೆ. ಇದೇನೂ ಅಂಥ ದೊಡ್ಡ ಸಂಗತಿ ಅಲ್ಲದಿರಬಹುದು. ಸಾಮಾನ್ಯ ಮನುಷ್ಯರ ಮಾತುಗಳಿಗೆ ಬೆಲೆ ಇರದ, ದನಿ ಇರದ ಜಗತ್ತಿದು ಅನ್ನುವುದು ಗೊತ್ತಾದ ಬೇಸರ. ಏನೂ ಅಲ್ಲದವರಿಗೆ ಅಸ್ತಿತ್ವವೇ ಇಲ್ಲವಲ್ಲ ಅನ್ನುವ ಬೇಸರ. ನನ್ನ ‘ಪ್ರಕಟವಾಗದ’ ಪುಸ್ತಕದ ರಿವ್ಯೂ ಪ್ರಕಟಗೊಂಡಿದ್ದನ್ನ ಪ್ರಶ್ನಿಸಿ ಇಶ್ಯೂ ಮಾಡುವುದು ಉದ್ದೇಶವಲ್ಲ. ಇದರ ಹಿನ್ನೆಲೆಯಲ್ಲಿ, ಯಾವುದೇ ವ್ಯಕ್ತಿಯ ಭಾವನೆಗೆ ಸ್ಥಾಪಿತ, ಪ್ರಸಿದ್ಧ  ಮತ್ತು ಉನ್ನತ ಜಾಗದಲ್ಲಿರುವವರು ತೋರುವ ಅಲಕ್ಷ್ಯವನ್ನು ಕುರಿತು ಮಾತಾಡುವುದಷ್ಟೆ ನನ್ನ ಬಯಕೆ. ನಾನು 2ಬಾರಿ ನನ್ನ ಪುಸ್ತಕ ಪ್ರಕಟವಾಗಿಲ್ಲ ಎಂದು... Continue Reading →

ಬೇಸಿಗೆ, ಚಳಿಗಾಲ, ಮತ್ತೀಗ ಮಳೆ

ಮೊದಲ ಸಾರ್ತಿ ವಿಮಾನ ಹತ್ತಿದ್ದೆ. ಅಣ್ಣ ನನ್ನ ಆತಂಕ, ಸಂಭ್ರಮವೆಲ್ಲ ನೋಡುತ್ತ ಖುಷಿಯಾಗಿದ್ದ. ನಾನು ಕಲ್ಕತ್ತಕ್ಕೆ ಹೊರಟಿದ್ದೂ ಅದೇ ಮೊದಲ ಸಾರ್ತಿ. ಬಂಗಾಳಿಗಳೆಲ್ಲರ ಕಣ್ಣು ದೊಡ್ಡದೊಡ್ಡ ಇರೋದಿಲ್ಲ. ನೂರಕ್ಕೆ ಐವತ್ತು ಚಿಕ್ಕ ಕಣ್ಣಿನವರೂ ಇದ್ದಾರಲ್ಲಿ. ನನ್ನ ಜಪಾನೀ ಕಣ್ಣುಗಳು ನನ್ನನ್ನ ಒಡಿಶಾದವಳೋ ಅಸೋಮ್ ಕಡೆಯವಳೋ (ಒರಿಸ್ಸಾ- ಅಸ್ಸಾಮ್‌ಗಳನ್ನು ಹಂಗನ್ನಬೇಕಂತೆ) ಅನ್ನುವಂತೆ ಮಾಡಿದ್ದವು. ಸಾಲದ್ದಕ್ಕೆ ನಂಗೆ ಚಿಕ್ಕವಳಿರುವಾಗಿಂದ್ಲೂ ಈಶಾನ್ಯ ರಾಜ್ಯಗಳ ಬಗ್ಗೆ ಮೋಹ. ಭಾನುವಾರಗಳ ಬಂಗಾಳಿ, ಒರಿಯಾ, ಅಸ್ಸಾಮಿ, ಮಣಿಪುರಿ ಪ್ರಾದೇಶಿಕ ಭಾಷಾ ಫಿಲಮ್‌ಗಳನ್ನು ತಪ್ಪಿಸದೆ ನೋಡುತ್ತ ಬೆಳೆದವಳು... Continue Reading →

ಚಾಕಲೇಟು, ಬ್ಲಾಗಿಂಗ್ ಚಟ ಇತ್ಯಾದಿ…

ಆ ನೀಲಿ ಹೊದಿಕೆಯನ್ನ ಚೂರೇ ಬಿಚ್ಚಿ, ಒಳಗಿನ ಬಂಗಾರದಪ್ಪುಗೆಯನ್ನ ಹಗೂರ ಬೇರ್ಪಡಿಸುತ್ತ, ಒಳಗಿನ ಲಘುಕಂದು ಬಣ್ಣದ ಚೌಕಗಳ ಘಮವನ್ನ ಹಾಗೇ ಒಮ್ಮೆ ಒಳಗೆಳೆದುಕೊಂಡು, ಅದರ ರುಚಿಗೆ ನನ್ನನ್ನೇ ಕೊಟ್ಟುಕೊಳ್ಳುತ್ತ ಚಾಕಲೇಟು ಕಡಿಯುವುದಂದರೆ ನನಗೆ ಸ್ವರ್ಗಸುಖ. ಮತ್ತು ಈ ಸ್ವರ್ಗ ನಿತ್ಯವೂ ನನ್ನ ಅಂಗೈಲಿ. ಈ ಕಾರಣಕ್ಕೇ ಬಹುಶಃ ನನ್ನ ಮುಖ ಹುಣ್ಣಿಮೆ ಚಂದ್ರನ ಹಾಗೆ ಕಲೆಮಯವೂ ಕುಳಿಪೂರ್ಣವೂ ಆಗಿರುವುದು. ಚಿಂತಿಯೇನಿಲ್ಲ. ಅಷ್ಟಕ್ಕೆಲ್ಲ ಚಾಕಲೇಟು ತಿನ್ನುವ ಸುಖವನ್ನ ಬಿಟ್ಟುಕೊಡಲಾಗುತ್ತೆಯೇ? ಚಾಕಲೇಟು ಬಿಟ್ಟರೆ, ಆ ಸುಖವನ್ನ ಕೊಡೋದು ಕಾಫಿ ಮಾತ್ರ.... Continue Reading →

ಈ ಛಳಿಯಲ್ಲಿ ಬೆಚ್ಚಗಿರಿ…

ಘಮ್ಮಗೆ ಮೈತುಂಬ ಸ್ನಾನ ಮಾಡಿ ಕುಳಿತಿದೇನೆ. ಮನೆಮುಂದೆ ಅಂಗಳದಷ್ಟು ವಿಶಾಲ ಜಾಗದಲ್ಲಿ... ಸೂರ್ಯ ಮೋಡ ಹೊದ್ದು ಮಲಗಿಬಿಟ್ಟಿದಾನೆ. ಅಬ್ಬ! ಇಬ್ಬನಿ ಇಲ್ಲದಿದ್ರೂ ಎಂಥ ಛಳಿ? ಈ ಅಮ್ಮ ಮಸಾಲೆದೋಸೆ ಯಾಕಾದರೂ ಮಾಡಿದಳೋ? ಕಪ್ಪೆ ನುಂಗಿದ ಹೆಬ್ಬಾವಿನ ಹಾಗೆ ಆಗಿದೆ ಹೊಟ್ಟೆ. ಯಾವುದನ್ನ ಸುತ್ತುಗಟ್ಟಿ ಅರಗಿಸ್ಕೊಳ್ಳಲಿ? ಮತ್ತೊಂದು ಹಬ್ಬದ ಸೀಸನ್ ಮುಗಿದಿದೆ. ಆಷಾಡದಲ್ಲಾ? ಅನ್ನಬೇಡಿ. ಅಂವ ಇರ್ತಾನಲ್ಲ... ಅಷ್ಟೂ ದಿನವೂ ಹಬ್ಬವೇ. ಧೂಪ ಹೊತ್ತಿಸಿ, ದೀಪ ಬೆಳಗಿ ಹೂವಿಟ್ಟಷ್ಟು ದಿವ್ಯದಿವ್ಯ, ಆ ಸಡಗರ ಸಂಭ್ರಮಗಳೆಲ್ಲ. ಇನ್ನೀಗ ಅಂವ ಹೊರಟ.... Continue Reading →

‘ಸ್ತ್ರೀವಾದ’ ಅಂದರೆ ಹಾದರದ ಮೊತ್ತವೇ ಭೈರಪ್ಪ ಸರ್?

ಬಳೆ ಇಲ್ಲದ, ಸರವಿಲ್ಲದ, ಹಣೆಗಿಲ್ಲದ, ಕ್ರಿಶ್ಚಿಯನ್ನರ ಥರವೋ ಮುಸಲ್ಮಾನರ ಥರವೋ ವಿಧವೆಯ ಥರವೋ ಕಾಣುವ ಹೆಂಗಸರೆಲ್ಲ ಸೂತಕದವರು. ಅವರು ಕೊನೆಪಕ್ಷ ಕಾಮವನ್ನು ಪ್ರಚೋದಿಸಲಿಕ್ಕೂ ನಾಲಾಯಖ್ಖಾದವರು. ಅವರು ಹೆಚ್ಚೂಕಡಿಮೆ ಹೆಂಗಸು ಜಾತಿಗಿಂತ ಹೊರಗೆ. ಅವರೆಲ್ಲ ಸ್ತ್ರೀವಾದಿಗಳು. ಶೋಷಣೆಯ ಪುಕಾರುಗಳನ್ನು ಸುಖಾಸುಮ್ಮನೆ ಹಬ್ಬಿಸಿ ಗಂಡಸಿನ ಬದುಕನ್ನು ಮೂರಾಬಟ್ಟೆ ಮಾಡಲೆಂದೇ ಹುಟ್ಟಿಕೊಂಡವರು. ನಿಮಗ್ಗೊತ್ತಾ? ಅವರು ಗಂಡನ್ನ, ಗಂಡಸರನ್ನ ಏಕವಚನದಲ್ಲೆ ಕರೀತಾರೆ! ಇದು ಸಂಸ್ಕೃತಿಗೆ ಹೊಂದುತ್ತದೆಯೇ? ಇವತ್ತಿನ ಭಾರತದ ಸಂಸಾರಗಳು ಇಂಥ ಮಹಿಳಾವಾದಿ ಹೆಂಗಸರಿಂದಲೇ 'ಪುಡಿಪುಡಿ' ಆಗಿಹೋಗ್ತಿದೆ.... ಇಂಥದೊಂದು ಪರಮಸಂಕಟದಿಂದ ಭೈರಪ್ಪನವರು ಬರೆದ... Continue Reading →

Create a free website or blog at WordPress.com.

Up ↑