ವಿವಾದ ಮತ್ತು ನನಗನಿಸಿದ್ದು….

ತಸ್ಲಿಮಾ ಬುರ್ಖಾಕೆ ಬೆಂಕಿ ಹಾಕಿ ಅಂದಿದ್ದಳು. ಜನ ಸಾರ್ವಜನಿಕ ಆಸ್ತಿಗೆ ಬೆಂಕಿ ಇಟ್ಟರು. ದೊಂಬಿ ಹತ್ತಿಕ್ಕಲು ನಡೆದ ಗೋಲೀಬಾರಿನಲ್ಲಿ ಒಬ್ಬ ಅಮಾಯಕ ಪ್ರಾಣ ತೆತ್ತರೆ, ಏನೂ ಅರಿಯದ ಹುಡುಗ ಇರಿತಕ್ಕೊಳಗಾದ. ಸಾಕಷ್ಟು ನಷ್ಟವಾಯ್ತು. ಎಲ್ಲಕ್ಕಿಂತ ಜನರ ಮನಸುಗಳು ಮತ್ತಷ್ಟು ಮುರುಟಿಹೋದವು. ಈ ಹೊತ್ತು ನನ್ನ ನೋವು, ಸಮಾಜ ಯಾಕಿಷ್ಟು ಅಸಹಿಷ್ಣುವಾಗಿದೆ ಅನ್ನುವುದರ ಬಗ್ಗೆ. ತಸ್ಲಿಮಾಳ ಬರಹಗಳು ಹೊಸತೇನಲ್ಲ. ಸಾರ್ವಜನಿಕ ಓದಿಗೆ ಸಿಗುತ್ತಿರುವುದೂ ಮೊದಲ ಸಾರ್ತಿಯಲ್ಲ. ಈ ಬಾರಿ ಪತ್ರಿಕೆ ಆಕೆಯ ಲೇಖನವನ್ನು ಪ್ರಕಟಿಸಿದ ಸಮಯ ಸರಿಯಿಲ್ಲ. ಹಬ್ಬದ... Continue Reading →

ನಾನು ಹೆಂಗಸಾದ ದಿನ….

ಪ್ರತಿ ಸಾರ್ತಿಯಂತೆ ಈ ಸಲವೂ ‘ಸಾಂಗತ್ಯ’ ಸಿನೆಹಬ್ಬದಲ್ಲಿ ಒಳ್ಳೊಳ್ಳೆ ಸಿನೆಮಾಗಳನ್ನ ನೋಡಿದ್ವಿ, ಚರ್ಚೆ ಮಾಡಿದ್ವಿ. ಅವುಗಳಲ್ಲೊಂದು The Day I became Woman ಅನ್ನುವ ಇರಾನಿ ಸಿನೆಮಾ. ನಂಗೆ ಈ ಸಿನೆಮಾ ಬಹಳ ಇಷ್ಟವಾಯ್ತು.  ಅದರ ಮೇಕಿಂಗ್ ಖುಷಿ ಕೊಡ್ತು. ಇದರ ಜತೆ ಪುಟಾಣಿ ಪಾರ್ಟಿ, ಎಲ್ ವಯೋಲಿನೋ, ರೆಡ್ ಬಲೂನ್, ಪೊನೆಟ್ ಮೊದಲಾದ ಚೆಂದದ ಸಿನೆಮಾಗಳನ್ನೂ, ಅಘನಾಶಿನಿ, ದ ಹೋಮ್ ಮೊದಲಾದ ಸಾಕ್ಷ್ಯಚಿತ್ರಗಳನ್ನೂ ನೋಡಿದ್ವಿ. ಅದೆಲ್ಲ ಇರ್ಲಿ...  ‘ದ ಡೇ...’ ಬಗ್ಗೆ ಅನಿಸಿಕೆ ಬರೆದು ನನ್ನ... Continue Reading →

ಇವರನ್ನು ದಯವಿಟ್ಟು ರಾಜಕೀಯಪಕ್ಷಗಳಿಂದ ದೂರವಿಡಿ…

ನೆನ್ನೆ-ಮೊನ್ನೆ ಕೇಳಿಪಟ್ಟೆ, ಸಂಸತ್ತಲ್ಲಿ ‘ಯೂಥ್ ಐಕಾನ್’ ಅಂತ ಸರ್ವಪಕ್ಷಗಳ ಸಮಾನ ಸಮ್ಮತಿಯಿಂದ ವಿವೇಕಾನಂದರ ಹೆಸರನ್ನ ಅಂಗೀಕಾರ ಮಾಡಲಾಯ್ತು ಅಂತ. ಸಖತ್ ಖುಷಿ ಆಯ್ತು. ಸಧ್ಯ! ವಿವೇಕಾನಮ್ದರನ್ನ ಯಾವುದೋ ಪಕ್ಷದ, ಜಾತಿಯ ಐಕಾನ್ ಆಗಿ ಸೀಮಿತಗೊಳಿಸ್ಲಿಲ್ವಲ್ಲ ಅಂತ. ವಿವೇಕಾನಂದರಂಥವರನ್ನು ಇಂವ ನಮ್ಮವ ಅನ್ನೋರೇ ಎಲ್ರೂ. ಅವರ ವ್ಯಕ್ತಿತ್ವ ಅಂಥದ್ದು. ಬಟ್ ಇತ್ತೀಚೆಗೆ ಬಿಜೆಪಿ-ಎಬಿವಿಪಿ ಅವರನ್ನ ಹೈಜಾಕ್ ಮಾಡಿಬಿಟ್ಟಿತ್ತು. ಯಾರಾದ್ರೂ ಸರಿಯೇ. ಈ ವಿಶ್ವಮಾನವನ ಚಿಂತನೆಗಳು ಹರಡೋದಷ್ಟೆ ಇಂಪಾರ್ಟೆಂಟು ಅನ್ನೋದೇನೋ ಸರಿ. ಅವರು ಮಾಡಿದ್ದು ಒಳ್ಳೆ ಕೆಲಸಾನೇ. ಬಟ್, ಉಳ್ದವ್ರು... Continue Reading →

ಸಿನೆಮಾ `ಸಾಂಗತ್ಯ’

ವರ್ಷದ ಹಿಂದಿನ ಮಾತು. ಕುಪ್ಪಳ್ಳಿಗೆ ಹೊರಟಾಗ ನನಗೆ ಗೊತ್ತಿದ್ದುದು ನಾನು ಸಿನೆಮಾ ನೋದಲಿಕ್ಕೆ ಹೋಗ್ತಿದೇನೆ, ಅದೂ ನನ್ನ ಮೆಚ್ಚಿನ ಮಲೆನಾಡಲ್ಲಿ ತಣ್ಣಗೆ ಕುಂತು ನೋಡಲಿದ್ದೇನೆ, ಮತ್ತಿದನ್ನ ನಾವಡ, ಸುಧೀರ್ ಕುಮಾರ್ (ನನ್ನ ಪ್ರೀತಿಯ ಗೆಳತಿ ದೀಪಾಳ ಪತಿಯೂ ಆಗಿರುವ), ಮಧು, ವಾದಿರಾಜ್ ಮೊದಲಾದ ಗೆಳೆಯರು `ಸಾಂಗತ್ಯ' ವೇದಿಕೆಯಡಿ ಆಯೋಜಿಸಿದಾರೆ ಅನ್ನುವುದಷ್ಟೆ. ಅಲ್ಲಿ ಹೋಗಿ ಸಿನೆಮಾ ನೊಡಿ ಬರುವುದು ಬಿಟ್ಟು ಬೇರೆ ಏನೂ ನಿರೀಕ್ಷೆ ಇರಲೂ ಇಲ್ಲ, ಅವರು ಅದರ ಹೊರತಾಗಿ ಮತ್ತೇನೋ ಮಾಡಲಿದ್ದಾರೆ ಅನ್ನುವ ನಿರೀಕ್ಷೆಯಂತೂ ಇರಲೇ... Continue Reading →

2009 ಖುಷಿ, ಬೇಸರ ಮತ್ತು ಗುಟ್ಟು!

ಅಯ್ಯಬ್ಬ! ಮುಗ್ದೇ ಹೋಯ್ತಲ್ಲ ಮತ್ತೊಂದ್ ವರ್ಷ!! ನೆನೆಸ್ಕೊಂಡ್ರೆ ಬೇಜಾರಾಗತ್ತೆ. ಹೀಗೇ ವರ್ಷಾ ವರ್ಷಾ ಶುಭಾಷಯಗಳನ್ನ ಹೇಳ್ಕೊಂಡು ಕಳೆದುಬಿಡ್ಬೇಕಲ್ಲ ಅಂತ. ನಂಗಂತೂ ಸುಮ್ನೇ ಒಂದಿನ ಸತ್ತೋಗ್ಬಿಡಕ್ಕೆ ಬೇಜಾರಪ್ಪ. ಎಷ್ಟೊಂದು ದಿನಗಳಿವೆ ನಮ್ಮ ಕೈಲಿ. ಉಪಯೋಗಿಸ್ಕೊಳೋಕೆ ಬರೋಲ್ವಲ್ಲಾ ಅಂತ... ಇರಲಿ. ವೇದಾಂತದ ಮೂಡ್ ಇಲ್ಲ. ನಾಳೆ ಚಾರ್ಜ್ ಆಗತ್ತೇಂತ ಇವತ್ತೇ ಕೆಲವರೆಲ್ಲ ವಿಶಸ್ ಕಳಿಸಿದ್ರು. ಆಗ ಗಾಬರಿಯಾಗೋಯ್ತು, ೨೦೦೯ ಮುಗ್ದೇಬಿಡ್ತಲ್ಲ ಅಂತ. ಈ ಹೊತ್ತಲ್ಲಿ ಒಂದ್ ಸಲ ಹಿಂತಿರುಗಿ ನೋಡಿದಾಗ ಕಂಡ ೨೦೦೯ರ ಖುಷಿ, ಬೇಸರ, ಗುಟ್ಟುಗಳು ಇಲ್ಲಿವೆ. ಜತೆಗೆ... Continue Reading →

‘ಚೈತ್ರೋದಯ’ದ ಕಾಲಕ್ಕೆ ಅಲ್ಲಿ ನಾನು ಮತ್ತು ನೀವು…

ವಾರಾಂತ್ಯದಲ್ಲಿ, ವರ್ಷಾಂತ್ಯದಲ್ಲಿ  ಒಂದು ಒಳ್ಳೆ ಕಾರ್ಯಕ್ರಮ. ಧನುರ್ಮಾಸದ ಬೆಳಗ್ಗೆ  ಕಾವ್ಯದ ಹಣತೆ ಹಚ್ಚಿ ಕಾರ್ತಿಕದ ಸಂಭ್ರಮ, ರವೀಂದ್ರ ಕಲಾಕ್ಷೇತ್ರದಲ್ಲಿ ಚೈತ್ರೋದಯ! ನಾವೆಲ್ಲ ಅಲ್ಲಿ ಸೇರೋಣವಾ?

ಮಗುವಿಗೊಂದು ಪತ್ರ

ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ. ಮುಳ್ಳು ಕಿತ್ತ ನೋವು, ಮುಳ್ಳು ಕಿತ್ತ ನಿರುಮ್ಮಳ, ಹಾಗೇ ಇದೆ. ಕಿವುಡಾಗಲೇಬೇಕಿತ್ತು ನಾನು, ಕುರುಡಾಗಲೇಬೇಕಿತ್ತು. ಮೂಕತನವನೆಲ್ಲ ಹುಗಿದು ಮಾತಾಡಲೇಬೇಕಿತ್ತು. ಅಬ್ಬರದ ಸಂತೆಯಲಿ ನೀನು ಅಮ್ಮಾ ಅಂದಿದ್ದು- ಎದೆಯ ಆಚೆಗೇ ನಿಂತು ಹೋಗಿತ್ತು... ನಿನ್ನ ಪುಟ್ಟ ಕೈಗಳು ನನ್ನ ತಡೆಯಲಾಗಲಿಲ್ಲ. ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ ಕಣ್ಣುಗಳನ್ನ ತಪ್ಪಿಸಿಬರಬೇಕಿತ್ತು... ನಾ ಕಳೆದ ನಿನ್ನ ಬದುಕಿನ ಮೊತ್ತ ಲೆಕ್ಕವಿಟ್ಟಿದೇನೆ ಮಗೂ, ನಿನ್ನ ನೋವಿನ ಋಣ ನನ್ನ ಹೆಗಲ ಮೇಲಿದೆ. ನೆನಪಿಗೊಂದು ಕಂಬನಿ... Continue Reading →

ಮತಕ್ಕೊಂದು ಬಣ್ಣ! ಅತಿ ಹೆಚ್ಚು ಕಚ್ಚಾಡುವ ಪ್ರಾಣಿಗಳು ಯಾವುವು?

ತೀರ ಇತ್ತೀಚಿನವರೆಗೂ ಅಂದರೆ ದಶಕದ ಹಿಂದಿನವರೆಗೂ ಇವೆಲ್ಲ ಇಷ್ಟು ಹದಗೆಟ್ಟಿರಲಿಲ್ಲ. ಅವರು ಮಾಡ್ತಾರೆ ಅಂತ ಇವ್ರು, ನೋಡ್ಕೊಂಡು ಸುಮ್ನಿರಬೇಕ ಅಂತ ಮತ್ತೊಬ್ರು ಎಲ್ರೂ ಕಾಂಪಿಟೇಷನ್ನಿನ ಮೇಲೆ ಧರ್ಮದ ಹೆಸರಲ್ಲಿ ಅನಾಚಾರ ಮಾಡೋರೇ. ಈ ಕರ್ಮಕಾಂಡಕ್ಕೆ ಹೊಸ ಸೇರ್ಪಡೆ- ಚರ್ಚಲ್ಲಿ ಕನ್ನಡದ ಬಾವುಟ ಹಾರಿಸಿದ್ದಕ್ಕೆ ತಕರಾರು ತೆಗೆದಿರುವ ಘಟನೆ. ಎಂಥ ಅಸಹ್ಯ-ವಿಕೃತ ಮನುಷ್ಯರು! ವಂದೇ ಮಾತರಂ ಗೀತೆಯನ್ನ ‘ಹಿಂದೂ ದೇವಿಯ ಪೂಜೆ’ ನಾವು ಅದನ್ನ ತಿರಸ್ಕರಿಸ್ತೇವೆ ಅಂತ ಕೆಲವರಂದರು. ನಾಲ್ಕು ಹೆಜ್ಜೆ ಮುಂದೆ ಹೋಗಿ ಶ್ರದ್ಧಾವಂತರ ಮನನೋಯಿಸುವ ಜೋಶಾವೇಶದ  ಮಾತನ್ನೂ ಆಡಿದರು.... Continue Reading →

ನಿಜಘಮದ ಕೇದಗೆ

ಶಿವನ ಮೂಲ ಹುಡುಕುತ್ತ ಕೆಳಗೆ ವಿಷ್ಣು, ಮೇಲೆ ಬ್ರಹ್ಮ ನಡುವೆ ಗುಟ್ಟು ಬಿಚ್ಚಿಟ್ಟ ಕೇದಗೆಗೆ ಶಿವನ ತಲೆ ಸೋಕಬಾರದ ಶಾಪ- ಕ್ಕೆ ಹುಟ್ಟಿದ ಹೆಣ್ಣು ನಾನು ಹೊಟ್ಟೆಯಲ್ಲಿ ಗುಟ್ಟು ಬಚ್ಚಿಡಲು ಬರುವುದಿಲ್ಲ ಹಿತ್ತಿಲ ಬಾಗಿಲಾಚೆ ಮಲ್ಲಿಗೆ, ಕನಕಾಂಬರ, ತುಂಬೆ ಪೂಜೆಗೆ ಹತ್ತು ಹೂವು ಹೆಣೆಯುತ್ತ ಕುಂತವರು ಕೇದಗೆ ಸೋಂಕಿಗೆ ಉರಿಯಾಗಿದ್ದಾರೆ ಮೈ ಮುತ್ತಿದ ಘಮ ಶಿವನ ಪೂಜೆಗೆ ಅಡ್ಡಿ ‘ಇದು ಬಿಳಿ ಮಲ್ಲಿಗೆಯದೆ’ ಅನ್ನುತ್ತ ಸುಳ್ಳಾಗುತ್ತಿದ್ದಾರೆ... ಕೇದಗೆ ಇರುವಿನರಿವಿಗೆ ಜಾಹೀರಾತು ಬೇಕಿಲ್ಲ, ಎಲೆಹೂವ ಸೆಳೆತಕ್ಕೆ ಭುಸುಗುಟ್ಟಿವೆ ಹಾವುಗಳೂ,... Continue Reading →

ಮಾತಾಡೆನೆಂಬ ಮುನಿಸು ಮಂದಿಗೆ…

ನನ್ನ ಮನೆಯ ಗೋಡೆಗಳಿಗೆ ಕಿವಿಗಳನಿರಿಸಿಲ್ಲ ಮಾತಾಡಲಿ ಯಾರ ಕೂಡ? ಮಾತೆಂದರೆ ವಾಕರಿಕೆ ಗೆಳೆಯಾ ಮುತ್ತೆಂದು ಅರಸುತಿದ್ದ ನೀ ಜತೆಗಿಲ್ಲದೆ... ಕಾದು ಕಾಯಿಸುವ ಜೀವವಿರಲುಕ್ಕಿ ಸುರಿಯುತಿತ್ತು ಮಾತು, ಸತ್ತ ದಿನಗಳ ಹೆಣದ ತಂಪಿಗೆ ಸೆಟೆದು ಬಿದ್ದಿವೆ ಪದಗಳು. ಮಾತಾಡೆನೆಂಬ ಮುನಿಸು ಮಂದಿಗೆ, ದನಿಯನೆಲ್ಲಿಂದ ಬಗೆದು ತರಲಿ ನಾನು?

Create a free website or blog at WordPress.com.

Up ↑