ಲವ್ ಜಿಹಾದ್ ಮತ್ತು ಅಮ್ಮನ ತಲೆಬಿಸಿ….

ಅಮ್ಮ ಕಾಲ್ ಮಾಡಿದ್ದಳು. “ನೆನ್ನೆ ತೀರ್ಥಳ್ಳಿ ಬಂದ್ ಇತ್ತು ಕಣೇ. ಟೀವಿ ನೈನಲ್ಲಿ ತೋರಿಸ್ತಿದಾರೆ ನೋಡ್ಲಿಲ್ವ?” ಅಂದಳು. ಬಂದ್ ಆಗಿರೋ ತೀರ್ಥಳ್ಳೀನ ಟೀವೀಲಿ ತೋರಿಸೋವಷ್ಟು ಘನಂದಾರಿ ಕೆಲಸ ಏನಾಗಿದೆ ಅಂತ ನಂಗೆ ಕುತೂಹಲ. ಮುಂದಿನದು ಅಮ್ಮನ ಮಾತು, ಹಾಹಾಗೇ... “ಹೋ ನಿಂಗೊತ್ತಿಲ್ವ? ದೊಡ್ ಮನೆ ಕೇರಿ ಹುಡುಗ, ಮಿಲ್ಕೇರಿ ಹುಡುಗಿ ಓಡೋಗಿದಾರೆ. ಅದ್ಕೆ ದೊಡ್ ಗಲಾಟೆ ಇಲ್ಲಿ. ನೆನ್ನೆ ಬಂದ್. ಇವತ್ತೂ ಚೂರು ಪಾರು ರಗಳೆ ಇದ್ದೇ ಇದೆ. ಎಂಥದೇನೋ ಮಾರಾಯ್ತಿ. ನಮ್ ಪಾಡಿಗೆ ನಾವಿದ್ವಿ ಅತ್ಲಾಗೆ.... Continue Reading →

ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು…

ಒಮ್ಮೊಮ್ಮೆ ಅನಿಸುತ್ತದೆ ಸಾವನ್ನ ತಟ್ಟೆಯೊಳಗಿಟ್ಟು ಚೂರು ಚೂರೆ ಹರಿದು ತಿನ್ನಬೇಕು ನನಗೆ ಸಾವಿನ ಹಸಿವು... ಅನಿಸುತ್ತದೆ ಸಾವನ್ನ ತಬ್ಬಿ ಚುಂಬಿಸಬೇಕು ತೋಳಲ್ಲಿ ಬಳಸಿ ಇಂಚಿಂಚು ಕರಗುತ್ತ ಕಳೆದುಹೋಗಬೇಕು ಒಲ್ಲದ ಮದುವೆಯಂತೆ ಇದು ಕಟ್ಟಿಕೊಂಡ ಬದುಕು ಅನಿಸುತ್ತದೆ, ಕಳ್ಳಾಟವಾಡುತ್ತ ಸಾವಿನೊಟ್ಟಿಗೆ ಹಾದರಕ್ಕಿಳಿಯಬೇಕು... ವಿ.ಸೂ: ಇವೆಲ್ಲ ನನ್ನ ವಿಷಾದಗೀತ ಸೀರೀಸ್ ಕವಿತೆಗಳಷ್ಟೆ. ಸುಮ್ಮನೆ ಬಿದ್ದು ಒದ್ದಾಡಿಕೊಂಡು ಅಳುತ್ತಿದ್ದವು, ಇಲ್ಲಿ ಹಾಕಿಕೊಂಡಿದೇನೆ.

ಇದು ನಮ್ಮ ಅಳಿಲುಸೇವೆ, ನೀವೂ ಕೈಜೋಡಿಸ್ತೀರಾ?

ಹೌದು.  ತಮ್ಮೆಲ್ಲ ಸ್ವಾರ್ಥ, ಸ್ವಂತದ ತಲೆಬಿಸಿಗಳ ನಡುವೆಯೂ ನೈಸರ್ಗಿಕ ದುರಂತ, ಯುದ್ಧವೇ ಮೊದಲದ ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸುವ ಮೂಲಕ ನಮ್ಮ ಜನ ತಮ್ಮ ನೈಜ ಸಹೃದಯತೆಯನ್ನು ತೋರಿಸಿಕೊಟ್ಟಿದಾರೆ. ಸುನಾಮಿ ಬಂದೆರಗಿದಾಗ ಇತರ ದೇಶಗಲ ಸಹಾಯವನ್ನು ತಿರಸ್ಕರಿಸುವಷ್ಟು ಮಟ್ಟಿಗೆ ನಮ್ಮವರ ಸಹಾಯ ಕಾಣಿಕಎಗಳು ಹರಿದು ಬಂದಿತ್ತು, ಥೇಟ್ ಸುನಾಮಿಯ ಹಾಗೇ! ಜೊತೆಗೆ, ಅದನೆಲ್ಲ ಹಂಚುವ ಕೈಗಳು ಶುದ್ಧವಾಗಿರಬೇಕೆನ್ನುವುದಷ್ಟೆ ಗಮನಿಸಬೇಕಾದ ಸಂಗತಿ. ಅಂತಹ ಶುದ್ಧ ಹಸ್ತರಿಗೂ ಕಡಿಮೆಯೇನಿಲ್ಲ. ನಾವು ಅಷ್ಟೆಲ್ಲ ನಿರಾಶಾವಾದಿಗಳಾಗಬೇಕಿಲ್ಲ ಅಲ್ಲವೆ? ಇರಲಿ. ಈಗ ಹೇಳಹೊರಟಿರೋದು ಉತ್ತರ ಕರ್ನಾಟಕದಲ್ಲಿ... Continue Reading →

ಶೋಭಾ ತಲೆದಂಡ- ಎಲ್ಲ ಮುಗಿದ ಮೇಲೆ, ನನ್ನ ನಾಲ್ಕು ಮಾತು…

ರಾಜಕಾರಣದ ಬಗ್ಗೆ ಯಾವತ್ತೂ ಬರೆಯಬಾರದು ಅಂತ ಇದ್ದೆ. ಸುಮ್ಮನಿರಲಾಗಲಿಲ್ಲ. ಬರೆದಿದ್ದನ್ನ ಇಲ್ಲಿ ಪೋಸ್ಟ್ ಮಾಡಬಾರದು ಅಂತಲೂ ಇದ್ದೆ. ಆಗಲೂ ಸುಮ್ಮನಿರಲಾಗಲಿಲ್ಲ. ಶೋಭಾ ತಲೆದಂಡ ಪ್ರಹಸನವನ್ನ ಇಟ್ಟುಕೊಂಡು ನಾಲ್ಕು ಮಾತಾಡುವ ಅನಿಸಿತು. ಗೊತ್ತು, ಇದರಿಂದೇನೂ ಉಪಯೋಗವಿಲ್ಲ! ಸಿಂಹಾಸನದ ಉಳಿಕೆಗೆ ಪ್ರಾಣಿ, ಪಕ್ಷಿ, ಚಿಕ್ಕ ಮಕ್ಕಳನ್ನು ಬಲಿಕೊಡುತ್ತಿದ್ದುದು ವಾಡಿಕೆ. ಅದೇ ಯಾದಿಯಲ್ಲಿ ಹೆಣ್ಣನ್ನೂ ಸೇರಿಸಿರೋದ್ರಿಂದಲೋ ಏನೋ, ಯಡ್ಯೂರಪ್ಪರ ಪಟ್ಟ ಉಳಿಸಲಿಕ್ಕೆ ಶೋಭಾ ಕರಂದ್ಲಾಜೆಯ ಬಲಿ ನೀಡಿಕೆ ಸಾಂಗವಾಗಿ ನೆರವೇರಿದೆ. ಶುರುವಿನಿಂದಲೂ ‘ಶೋಭಾ ರಾಜೀನಾಮೆ ನೀಡಬೇಕು’ ಎಂದು ಹಾಡಿಕೊಳ್ತಾ ಬಂದಿದ್ದ ಗಣಿಧಣಿ... Continue Reading →

SAMSARAದ ಒಳಹೊರಗೆ….

" What is more important? To satisfy one thousand desires, or to conquer just one?" ".......... There are things we must unlearn inorder to learn.......... There are things we must own to renounce them"  ತಾಶಿ ಎಂಬ ಶಿಷ್ಯ ವಾದ ಹೂಡುತ್ತಾನೆ. ಹೀಗೆ ತ್ಯಜಿಸಬೇಕಾದ ವಸ್ತುಗಳನ್ನ ಗಳಸಿಕೊಳ್ಳಲೆಂದೇ ‘ಬುದ್ಧ ವಿಹಾರ’ ಬಿಟ್ಟು ಹೊರಡ್ತಾನೆ. ಕಾಲಕ್ಕೆ ಸದಾ ಓಡುವ ಕಾಲು. ಎಷ್ಟು ಬೇಗ ಪ್ರಣಯದಾಟ, ಒದೆತ,... Continue Reading →

ನಾವಡರ ಹೊಸ ಸಾಹಸ!

ನಮನಿಮಗೆಲ್ರಿಗೂ ಗೊತ್ತಿರುವ ಬಹುಮುಖಿ ಆಸಕ್ತಿಯ ಅರವಿಂದ ನಾವಡರು ಮತ್ತೊಂದು ಹೊಸ ಸಾಹಸಕ್ಕೆ ಕೈಹಾಕ್ತಿದಾರೆ. ಹಳೆಯ ಸಾಹಸ ಏನು ಅಂತ ಕೇಳಿದ್ರಾ? ಚಂಡೆಮದ್ದಳೆಯಂತೂ ಸರಿಯೇ, ನಮ್ಮಂಥವರಿಗಾಗಿ ‘ಪಾಕ ಚಂದ್ರಿಕೆ’, ಸಿನೆಮಾಸಕ್ತರಿಗಾಗಿ ‘ಸಾಂಗತ್ಯ’ದ ಸಾರಥ್ಯ, ಹೀಗೇ... ಅವರು ಬ್ಲಾಗ್ ಸ್ಪಾಟಿನಲ್ಲಿ ‘ಪತ್ರಿಕೋದ್ಯಮ’ ಕುರಿತಂತೆ ಎಜುಕೇಟಿವ್ ಆದ ಬ್ಲಾಗೊಂದನ್ನು ಶುರು ಮಾಡ್ತಿರೋದು ಲೇಟೆಸ್ಟ್ ಸುದ್ದಿ. ಇದು ನಮಗೆಲ್ರಿಗೂ ಪ್ರಯೋಜನಕಾರಿಯಾಗಿರಲಿ, ಎಲ್ಲ ಒಳ್ಳೆಯ ಪ್ರಯತ್ನಗಳಿಗೆ ಆಗುವಂತೆ ಇದಕ್ಕೆ ಯಾವ ವಿಘ್ನಗಳೂ ಬರದೆ ಮುಂದುವರೆದುಕೊಂಡು ಹೋಗಲಿ ಅನ್ನೋದು ನನ್ನ ಹಾರೈಕೆ. ಹೆಚ್ಚಿನ ಮಾಹಿತಿಗೆ ಭೇಟಿ... Continue Reading →

……… ಇದಕ್ಕೆ ಕಾರಣವೇನಿರಬಹುದು?

‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ,  ``ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ" . ಇದಕ್ಕೆ ಕಾರಣವೇನಿರಬಹುದು?  ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ. ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು.... Continue Reading →

‘ಜಂಭಗಾತಿ’ ಹುಡುಗಿಯನ್ನ ಎದುರಿಟ್ಟುಕೊಂಡು…

ಯಾಕೆ ಯಾವಾಗಲೂ ಹೀಗಾಗುತ್ತದೆ? ಹೆಣ್ಣೊಬ್ಬಳು ಆತ್ಮವಿಶ್ವಾಸದ ಗರ್ವದಿಂದ ನಡೆದುಕೊಂಡಾಕ್ಷಣ ಯಾಕೆ ಪುರುಷಲೋಕದ ನಿದ್ದೆ ಕೆಡುತ್ತದೆ? ಈ ಪ್ರಶ್ನೆ ಕೇಳಲು ಕಾರಣವಿದೆ. ನಮ್ಮ ಚಲನಚಿತ್ರ ರಂಗದ ಇತಿಹಾಸವನ್ನ ಒಮ್ಮೆ ಪ್ರಾಮಾಣಿಕವಾಗಿ ಅವಲೋಕಿಸಿದರೆ ಅದು ಹೊಳೆಯುತ್ತದೆ ಕೂಡ.... ಚಿತ್ರ ನಟಿ ರಮ್ಯಾ ನೃತ್ಯ ನಿರ್ದೇಶಕರನ್ನ, ಸ್ಪಾಟಲ್ಲಿದ್ದ ಕೆಲವರನ್ನ ಅವಾಚ್ಯವಾಗಿ ಬಯ್ದು, ಸುದ್ದಿಯಾಗಿ ಕ್ಷಮೆ ಕೇಳಿದ ಘಟನೆ ಇವತ್ತಿಗೆ ಹಳೇಹಪ್ಪಟ್ಟೆನಿಸಬಹುದು. ರಮ್ಯಳೋ, ರಂಜಿತಳೋ, ಯಾವ ನಟಿ, ನಟ, ನಿರ್ದೇಶಕ, ಒಟ್ಟಾರೆ ಮನುಷ್ಯ ಜಾತಿಯ ಜೀವಿಯೋ, ಹಾಗೆಲ್ಲ ಅಸಭ್ಯವಾಗಿ ವರ್ತಿಸೋದು ಶುದ್ಧ ತಪ್ಪು.... Continue Reading →

ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?

ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್ದು ಹೋಗಿಬಿಟ್ಟ. “ನಾಳೆಯಿಂದ ನಿನ್ನ ಮರೀತೇನೆ" ಅಂತ ಪತ್ರ ಬರೆದಿದ್ದ. ಯಾವ ನಾಳೆ ನನ್ನ ಮರೆತನೋ, ಮರಳಿ ಬರುವ ಮಾತಂತೂ ಇನ್ನು ಇಲ್ಲ. ಈ ಕೋಣೆಯ ಕನ್ನಡಿಯಲ್ಲಿ ಅರೆ! ಅವನ ಬಿಂಬ ನಗುತ್ತಲೇ ಇದೆ. ‘ಒಡೆಯನೆಲ್ಲಿ?’ ನನ್ನ ಕಂಡ ಬಿಂಬಕ್ಕೆ... Continue Reading →

Blog at WordPress.com.

Up ↑