ಇದೋ! ಕತ್ತಲಾಗಿದೆ. ನಿನ್ನ ಬೆತ್ತಲು ಕಾಣುವುದಿಲ್ಲ ನಿನಗೂ... ನಾಚಿಕೆ ಕಿತ್ತೆಗೆ, ಒಳಗನೆಲ್ಲ ಹರಡಿ ಹಗುರಾಗು. ಸುಳ್ಳು ನಾಟಕದ ಹೊರೆ ಎಷ್ಟೆಂದು ಹೊರುತ್ತೀ? -ಆತ್ಮ ಸಾಕ್ಷಿಯ ಮಾತು. ತಪ್ಪೊಪ್ಪಿಗೆಯ ಹೊತ್ತಲ್ಲಿ ಬೆಳೆಯುತ್ತಿದೆ ಪಟ್ಟಿ॒ ಎದೆಗೋರಿಯ ಕನವರಿಕೆ, ಹೇಳಲಾಗದ ಅವನ ಹೆಸರು; ಬರೆಯದೆ ಬಿಟ್ಟ ಕವಿತೆ, ಮಡಚಿಟ್ಟ ಪುಟಗಳು. ಸಂತನೊಡಲಲ್ಲಿ ಹಚ್ಚಿಟ್ಟ ಹೆಣ ಸುಡುವ ಕಿಚ್ಚು! ಒಂದೇ, ಎರಡೇ? ನಾ ನಂಬಿಕೊಂಡ ನನ್ನ ಸುಳ್ಳುಗಳು, ನಾನಪ್ಪಿಕೊಂಡ ನನ್ನ ಶತ್ರುಗಳು, ನಾ ಕೊಂದ ನನ್ನ ಇಷ್ಟಗಳು, ನನ್ನದಲ್ಲದ... Continue Reading →
ಬೇಳೂರು ಸುದರ್ಶನರ ಕವಿತೆ, ಅನುಮತಿಯಿಲ್ಲದೆ…
ಇದು ನನ್ನ `ಸಿಡಿಲಾಗಲು ಕಾದಿದ್ದೇನೆ' ಕವಿತೆಗೆ ಸುದರ್ಶನ ಬೇಳೂರು ಅವರು ಪ್ರತಿಕ್ರಿಯೆಯಾಗಿ ಪೋಸ್ಟ್ ಮಾಡಿದ್ದ ಕವಿತೆ. ಇಪ್ಪತ್ತೈದು ವರ್ಷಗಳ ಹಿಂದೆ ಬರೆದಿದ್ದು!! ನನಗಿಷ್ಟವಾಯ್ತು ಅಂತಲೇ ನಿಮ್ಮ ಜತೆ ಹಂಚಿಕೊಳ್ತಿದೇನೆ, ಅವರ ಅನುಮತಿ ಪಡೆಯದೆ... ಅವರು ಮನ್ನಿಸಿಯಾರು ಎನ್ನುವ ಭರವಸೆಯಿಂದ! ~ಚೇತನಾ ನನಗೆ ಶಬ್ದಗಳ ಪರಿಚಯವಿದೆ ಎಂದ ಮಾತ್ರಕ್ಕೆ ಮಾತನಾಡುತ್ತೇನೆ ಎಂದೆಲ್ಲ ಖುಷಿಪಡಬೇಡಿ. ನಾನು ಸುಮ್ಮನಿರುತ್ತೇನೆ ಶಬ್ದಗಳಿಗೆ ನೊಂದು. ನನಗೆ ನಿಶ್ಶಬ್ದದ ಬಗ್ಗೆ ಒಲವಿದೆ ಎಂದಮಾತ್ರಕ್ಕೆ ಸುಮ್ಮನಿರುತ್ತೇನೆ ಎಂದೆಲ್ಲ ದುಃಖಿಸಬೇಡಿ. ನಾನು ಮಾತನಾಡುವೆನಲ್ಲಿ ನಿಶ್ಯಬ್ದಕ್ಕೆ ಸೋತು. ನಿಮಗೆ ಖುಷಿಯಿದ್ದಾಗ ಸುಮ್ಮನಿರುತ್ತೇನೆ ನೀವು... Continue Reading →
ಮೇಣದ ಚರಟ
ಹತ್ತು, ಇಪ್ಪತ್ತು... ನಲವತ್ತು ಮುಂಬತ್ತಿಗಳು!! ಮುಗಿದ ಬದುಕಿನ ಲೆಕ್ಕ. ಬೆಳಕು ಹರಡಿದ ಸಾರ್ಥಕ ಘಳಿಗೆಗಳೂ ಇವೆಯಿದರಲ್ಲಿ. ಈಗ ಉಪಯೋಗವಿಲ್ಲದ ಮೇಣದ ಚರಟದ ಹಾಗೆ ಉಳಿದಿದೀನಾ? ಯೋಚಿಸಬೇಕಿದೆ. ಬೆಳಗಿಂದ ಒಂದೇ ಸಮ ಫೋನ್ ಕಾಲ್ ಗಳು. ಹರಕೆ ಹೊತ್ತಂತೆ ಶುಭ ಹಾರೈಕೆಯ ಶಾಸ್ತ್ರ ಮುಗಿಸ್ತಿದಾರೆ. ಗೊತ್ತಿರುವ ಗೆಳೆಯ ಗೆಳತಿಯರೆಲ್ಲರೂ ‘ಇನ್ನೇನು ಆಂಟಿಯಾದೆ’ ಅಂತ ಛೇಡಿಸುವವರೇ. ಹೀಗೆ ಎಲ್ಲರ ಹಾರೈಕೆಯೂ ಬಂದಿದೆ, ಬರುತ್ತಿದೆ. ಅವರಿಬ್ಬರದನ್ನ ಬಿಟ್ಟು. ‘ನನ್ನತನ ಮೀರಿದ ಜೀವ’ ಅಂದುಕೊಂಡ ವ್ಯಕ್ತಿಗಳು ಬಹಳಷ್ಟು ಸಾರ್ತಿ ಬದಲಾಗಿದಾರೆ. ಕೊನೆಗೂ... Continue Reading →
ಸಿಡಿಲಾಗಲು ಕಾದಿದ್ದೇನೆ…
ಮೌನವಾಗಿ ಉಳಿದಿದೇನೆ ಅಂದ ಮಾತ್ರಕ್ಕೆ ಶಾಂತವಾಗಿದ್ದೇನೆ ಎಂದಲ್ಲ ನೂರೊಂದು ನೋವುಗಳ ಎದೆಗುದಿಯುಕ್ಕಿ ಸಿಡಿಯುವ ಹೊತ್ತಿಗೆ ಕಾದಿದ್ದೇನೆ. ವಿಷದ ಹನಿ ಹನಿ ನುಂಗುತ್ತ ಬೆಳೆದಿದ್ದೇನೆ. ಸಾವಿರ ನಾಲಗೆಯ ನಂಜು ಕೂಡ ನನ್ನ ನೀಲಿಗಟ್ಟಿಸಲು ಸೋತಿವೆ ರಣಚೋರಳೆನ್ನ ಬೇಡಿ, ತಮ್ಮ ಕಣ್ಣುರಿಗೆ ತಾವೇ ಬೂದಿಯಾಗುವಂತೆ ಕನ್ನಡಿಗಳನಿರಿಸಿದ್ದೇನೆ. ಅವರವರ ‘ನಿಜ’ ಬಿಂಬ ಕಂಡವರು ಸುಟ್ಟುಹೋಗುತ್ತಿದ್ದಾರೆ. ಜಡಿಮಳೆಗೆ ಮುನ್ನ ಹೆಪ್ಪುಗಟ್ಟುವ ಕತ್ತಲಂತೆ ಅಮಾಯಕಳಂತೆ ಸುಮ್ಮನೆ- ಸುಮ್ಮನೇ ಕುಳಿತಿದೇನೆ. ಅಂದ ಮಾತ್ರಕ್ಕೆ ಶಾಂತವಾಗಿದ್ದೇನೆ ಎಂದಲ್ಲ ಸಿಡಿಲಾಗುವ ತವಕದಲ್ಲಿ ಮಾತನೆಲ್ಲ ಒಟ್ಟುಮಾಡುತಿದ್ದೇನೆ. ಅದೋ,... Continue Reading →
ಮತ್ತೆ ಮತ್ತೆ ಕಲರವ!
ನಮಸ್ತೆ ಕನ್ನಡ ಬ್ಲಾಗೊದುಗರಿಗೆಲ್ಲ ಸುಪ್ರೀತ್ ಕೆ.ಎಸ್. ಎನ್ನುವ ಹುಡುಗ ಗೊತ್ತಿರಲಿಕ್ಕೆ ಬೇಕು. ಈತನ ಸಾರಥ್ಯದಲ್ಲಿ ಬರುತ್ತಿದ್ದ `ಕಲರವ' ಪತ್ರಿಎ ಬಗ್ಗೆ ಈ ಹಿಂದೆ ಬರೆದಿದ್ದೆ. ಈಗ ಅದು ಕೇವಲ ಅಂತರ್ಜಾಲ ತಾಣದಲ್ಲಿ ಮಾತ್ರ ಲಬ್ಯ ಎಂದು ಹೇಳಲು ವಿಷಾದವು ಕೊನೆಯ ಪಕ್ಷ ಇಲ್ಲಾದರೂ ದೊರೆಯಲಿದೆ ಎಂದು ಹೇಳಲು ಕುಶಿಯು ಆಗುತ್ತಿದೆ. ಸೂಕ್ಷ್ಮ ಒಳನೋಟಗಳ ಈ ಹುಡುಗನ ಹಾಗು ಅವನ ಗೆಳೆಯರ ಈ ಪ್ರಯತ್ನಕ್ಕೆ ಪ್ರೀತಿಯ ಹಾರೈಕೆಗಳನ್ನು ಹೇಳಬೇಕಲ್ಲವೇ? ಹಾಗಾದರೆ ಇಲ್ಲಿ ಬನ್ನಿ... ನಲ್ಮೆ, ಚೇತನ
ನನ್ನೊಳಗಿನ ಸಿದ್ಧಾರ್ಥ….
ತಿಂಗಳಾಯ್ತು ಈ ಅಸಹನೆ ಶುರುವಿಟ್ಟು. ಖಡಾಖಂಡಿತವಾಗಿ ಹೇಳ್ಬಿಟ್ಟಿದಾರೆ, ಇನ್ನು ‘ಅಪ್ ರೈಸಲ್’ ಪ್ರಶ್ನೆಯೇ ಇಲ್ಲ! ಲೇ ಆಫ್ ಮಾಡದಿರೋದೇ ನಮ್ಮ ಪುಣ್ಯವಂತೆ!! ಐಟಿ ಸೆಕ್ಟರಿನ ಜತೆ, ಅಮೆರಿಕದ ಜತೆ ಪೈಸಾಪೈಸ ಸಂಬಂಧವಿರದ ಈ ಆಫೀಸಿಗೂ ರಿಸೆಷನ್ನಿನ ರೋಗ ಹರಡಿದೆ. ಇದೊಂಥರಾ ‘ಗೋಕುಲಾಷ್ಟಮಿಗೂ, ಇಮಾಮ್ ಸಾಬರಿಗೂ...’ ~ ಬಹಳ ದಿನಗಳೇ ಆಗಿತ್ತು ಹೀಗೆ ಕಾಲ್ನಡಿಗೆಯಲ್ಲಿ ಓಡಾಡದೆ. ಅದರಲ್ಲೂ ಶ್ರೀರಾಮಪುರದಲ್ಲಿ ದಾರಿ ತಪ್ಪಿ ಅಲೆಯದೆ ಮೂರ್ನಾಲ್ಕು ವರ್ಷಗಳೇ ಅಗಿಹೋಗಿತ್ತು. “ಇಲ್ಲೇ..." “ಇನ್ನೇನು ಬಂದೇಬಿಡ್ತು..." ಅನ್ನುತ್ತಾ, ನಾನೂ ದಾರಿ ತಪ್ಪಿ, ಜತೆಗಿದ್ದವಳನ್ನೂ... Continue Reading →
ಸೃಜನ್ ಅನುವಾದಿಸಿದ ಜಯಪ್ರಭಾ ಕವಿತೆ, ನನ್ನದೆರಡು ಮಾತು…
ಮೊನ್ನೆವರೆಗೂ ಸೃಜನ್ ಚೆಂದದ ಚಿತ್ರಗಳನ್ನು ಬರೆಯುತ್ತಾರೆ, ಸೊಗಸಾದ ವಿನ್ಯಾಸ ಮಾಡುತ್ತಾರೆ ಎಂದಷ್ಟೆ ಗೊತ್ತಿದ್ದ ನನಗೆ, ಅವರು ಕಥೆಯನ್ನೂ ಕವನವನ್ನೂ ಬರೆಯುವುದಲ್ಲದೆ ಒಳ್ಳೆಯ ಅನುವಾದವನ್ನೂ ಮಾಡುತ್ತಾರೆಂದು ತಿಳಿಯಿತು. ನಮ್ಮ ವಾರಗೆಯ ಬರಹಗಾರರ ಬಗ್ಗೆ ಇರುವ ಅಜ್ಞಾನಕ್ಕೆ ನಾಚಿಕೆಯಾಗುವುದರ ಜೊತೆಗೇ ಓದಿನ ಕೊರತೆ ಮುಖಕ್ಕೆ ಹೊಡೆದಂತಾಯ್ತು! ಈ ಜ್ಞಾನೋದಯವಾಗಿದ್ದು, ಸೃಜನ್ ಅವರ ‘ಯಶೋಧರೆ, ಈ ವ್ಯಥೆಯೇತಕೆ?’ ಎಂಬ ಅನುವಾದಿತ ಕವಿತೆಯನ್ನೋದಿದಾಗ. ಈ ಕವಿತೆಯ ಮೂಲ ತೆಲುಗಿನದು. ಅಲ್ಲಿನ ಸ್ತ್ರೀ ಸಂವೇದನೆಯ ಕವಯತ್ರಿ ಡಾ.ಜಯಪ್ರಭಾ ಅವರ ಅದೇ ಹೆಸರಿನ ಕವನ ಸಂಕಲನದ... Continue Reading →
ಬಣ್ಣಗಳ ಸುಳಿಯಲ್ಲಿ ಇಲ್ಲವಾದ ಹುಡುಗಿ….
‘ಇಲ್ಲ’ವಾಗಿ ಉಳಿಯುವ ಪ್ರಕ್ರಿಯೆ ಬಹಳ ದೊಡ್ಡ ಸಾಧನೆ! ಪ್ರವಚನ ಕೇಳಿದ್ದಳು ಹುಡುಗಿ. ಬಾಗಿ ಬಾಗಿ ಬಾಗಿ, ಇಲ್ಲವಾಗುತ್ತ ನಡೆದಳು. ಕಳೆದು ಉಳಿಯುವ ಸೊನ್ನೆಗೆ ಬೆಲೆಯಿಲ್ಲ- ಅನ್ನುವುದು ಅವಳಿಗೆ ಗೊತ್ತಿರಲಿಲ್ಲ. ~ ಗೊಂದಲಕ್ಕೆ ಬಿದ್ದಿದ್ದಳು. ಕನ್ನಡಿಯಲ್ಲಿನ ಬಿಂಬ ತನ್ನ ಮುಖವೋ? ಮುಖವಾಡವೋ!? ಸ್ವಂತಿಕೆ ಮರೆತು ಕುಂತವಳಿಗೆ ಆತಂಕ. ಗಿಡದ ಮರೆಯ ಗೋಸುಂಬೆಯ ಬಣ್ಣ, ಅಲ್ಲಿದ್ದಷ್ಟು ಕಾಲವೂ ಹಸಿರೇ. ಹೊತ್ತುಹೊತ್ತಿಗೆ ಬದಲಾಗುವ ಸತ್ಯವನ್ನ ನೆಚ್ಚಿಕೊಳ್ಳೋದು ಹೇಗೆ? ತನ್ನ ಮೇಲಿನ ನಂಬಿಕೆಯನ್ನೇ ಕಳೆದು ಕುಂತಳು. ಬದುಕಲಿಕ್ಕೆ ಬಣ್ಣ ಬದಲಿಸಬೇಕು. ತಾನೊಂದು ಗೋಸುಂಬೆಯೇ?... Continue Reading →
ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು…
ಮಾರ್ಚ್ ೨೭ರ ಯುಗಾದಿಯ ದಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷವೇನೂ ಇರಲಿಲ್ಲ. ಸಿಬ್ಬಂದಿಗಳೊಂದಷ್ಟು ಜನ ಯೂನಿಫಾರಮ್ಮಲ್ಲದೆ ಸಾಮಾನ್ಯ ಉಡುಗೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಅವತ್ತು ಹಬ್ಬ ಎಂಬುದರ ಸಾಕ್ಷಿಯಾಗಿತ್ತಷ್ಟೆ. ಯುಗಾದಿಯ ದಿನವನ್ನ ಕಾರಾಗೃಹದಲ್ಲಿರುವ ಸಹೋದರರ ಜೊತೆ ಕಳೆಯಬೇಕು, ದೇಶ ಪ್ರೇಮ ಉದ್ದೀಪಿಸುವ ಗೀತ ಗಾಯನ ನಡೆಸಿಕೊಡಬೇಕು ಎಂದೆಲ್ಲ ಉಮ್ಮೇದಿಯೊಂದಿಗೆ ಹೋಗಿದ್ದ ಜಾಗೋಭಾರತ್ ತಂಡಕ್ಕೆ, ಅಲ್ಲಿ ಎದುರಾದ ವಾತಾವರಣ ಅಷ್ಟೇನೂ ಪ್ರೋತ್ಸಾಹದಾಯಕವಾಗಿರಲಿಲ್ಲ. “ನೋಡೋಣ, ಎಷ್ಟು ಸಾಧ್ಯವೋ ಅಷ್ಟು ಹಾಡಿ ಬರೋಣ. ನಮ್ಮ ಸಂಕಲ್ಪ ನಾವು ನೆರವೇರಿಸುವುದಷ್ಟೆ ನಮ್ಮ ಕೆಲಸ.... Continue Reading →
ಗೊಣಗೋದು ಬಿಟ್ಟು ನಾವೂ ಏನಾದರೂ ಮಾಡಬಹುದು!
ಇದು ಬಹಳ ತಿಂಗಳುಗಳ ಹಿಂದಿನ ಕಥೆ. ಒಂದಷ್ಟು ಜನ ’ಐ ಯಾಮ್ ಲೀವಿಂಗ್ ಬ್ಯಾಂಗಲೋರ್’ ಅಂತ ಕಮ್ಯುನಿಟಿಗಳನ್ನ ಮಾಡಿಕೊಂಡು ನಮ್ಮೂರಿನ (!?) ಬಗ್ಗೆ ಕಂಪ್ಲೇಂಟುಗಳನ್ನು ಹೇಳುತ್ತ, ಇಲ್ಲಿನ ಜನಗಳನ್ನು ಹೀಯಾಳಿಸುತ್ತ ದೊಡ್ಡ ದೊಡ್ಡ ಪೋಸ್ಟರುಗಳನ್ನು ಹಾಕಿಕೊಂಡು ಗುಲ್ಲು ಮಾಡಿದ್ದರು. ಹಾಗೆ ಬೆನ್ನು ತಿರುಗಿಸಿ ನಿಂತವರ ಕಡೆ ಕ್ಯಾರೇ ಅನ್ನದೆ ಜನ ಜೀವನ ನಡೆದುಕೊಂಡು ಹೋಯ್ತು ನೋಡಿ, ಎಲ್ಲವೂ ತಣ್ಣಗಾಯ್ತು. ಬೆಂಗಳೂರಂಥಾ ಬೆಂಗಳೂರಲ್ಲೇ ಇವರಿಷ್ಟು ಕ್ಯಾತೆ ತೆಗೀತಾರೆನ್ನುವುದಾದರ ಜಗತ್ತಿನ ಯಾವ ಭಾಗದಲ್ಲಿ ಜೀವನ ಮಾಡಬಲ್ಲರು ಹೇಳಿ!? ಮ್... ನಾವೂ(ನೂ)... Continue Reading →
