ಭಾಮಿನಿ ಷಟ್ಪದಿ

ಭಾಮಿನಿ ಷಟ್ಪದಿಯ ಪ್ರತಿಗಳು ಖಾಲಿಯಾಗಿವೆ. ಪುನರ್‌ಮುದ್ರಣ ಮಾಡುವ ಬದಲು ಹೀಗೆ ಪಿಡಿಎಫ್ ಪ್ರತಿ ಅಪ್‌ಲೋಡ್‌ ಮಾಡಿದರೆ ಆಸಕ್ತರೆಲ್ಲರೂ ಓದಿಕೊಳ್ಳಬಹುದು. ಇಷ್ಟವಾಗಲಿಲ್ಲವೆಂದರೆ ದುಡ್ಡು ದಂಡವಾಯ್ತೆಂದು ಗೊಣಗಿಕೊಳ್ಳುವ ಗೋಜಿಲ್ಲ...  bhamini ಮೇಲೆ ಕ್ಲಿಕ್ ಮಾಡಿದರೆ ಪಿಡಿಎಫ್ ಪುಟಗಳು ತೆರೆದುಕೊಳ್ಳುವವು....    bhamini

ಸೆಕ್ಸ್‌: ನಿರಾಕರಣೆಯ ಹಕ್ಕು

ದೆಹಲಿ ಹೈಕೋರ್ಟ್ ಒಂದು ಐತಿಹಾಸಿಕ  ತೀರ್ಪು ನೀಡಿತು. ಹೆಂಡತಿ ಮೊದಲ ರಾತ್ರಿಯಿಂದ ಹಿಡಿದು ಮದುವೆಯಾದ ಐದು ತಿಂಗಳ ಪರ‍್ಯಂತ ಸೆಕ್ಸ್ ಅನ್ನು ನಿರಾಕರಿಸಿದಳು ಎನ್ನುವುದು ಫಿರ‍್ಯಾದಿಯ ದೂರಾಗಿತ್ತು. ದಂಪತಿಗಳಲ್ಲಿ ಯಾರೊಬ್ಬರ ಕಡೆಯಿಂದ ಸೆಕ್ಸ್ ನಿರಾಕರಿಸಲ್ಪಟ್ಟರೂ ಅದನ್ನು ಕ್ರೌರ‍್ಯವೆಂದು ಪರಿಗಣಿಸಲಾಗುತ್ತದೆ ಹಾಗೂ ಇದನ್ನು ಆಧಾರವಾಗಿಟ್ಟುಕೊಂಡು ಡೈವೋರ್ಸ್ ಪಡೆಯಬಹುದು ಎಂದು ಹೈಕೋರ್ಟ್ ಹೇಳಿತು. ಈಗ ಈ ತೀರ್ಪಿನ ಸಾಧಕ ಬಾಧಕಗಳ ಬಗ್ಗೆ ಒಂದಷ್ಟು ಚರ್ಚೆ ನಡೆಯಿತು. ಗಂಡಸರು ಈ ಅವಕಾಶದ ದುರ್ಬಳಕೆ ಮಾಡಿಕೊಳ್ಳುವ ಸಾಧ್ಯತೆ ಹೆಚ್ಚು ಎಂದು ಕೆಲವರು ವಾದಿಸಿದರೆ,... Continue Reading →

ಅಪ್ಪನೂ ಅಮ್ಮನೂ ನೀನೇ…

ಮಗು ತಲೆ ತಗ್ಗಿಸಿ ನಿಂತುಕೊಂಡಿದೆ. ಆ ಹೊತ್ತಿನ ತನಕ ಹೀರೋ ಆಗಿ ಮೆರೀತಿದ್ದುದು ಇದ್ದಕಿದ್ದಹಾಗೆ ಭೂಮಿಗಿಳಿದು ಹೋಗಿದೆ. ಅವಮಾನಿತ ಮುಖ, ಕಣ್ಣಲ್ಲಿ ಬಿಗಿಹಿಡಿದ ನೀರ ಹನಿ. ಸಹಪಾಠಿಗಳಲ್ಲಿ ಕೆಲವರಿಗೆ ಅನುಕಂಪ, ಕೆಲವರಿಗೆ ಆತಂಕ, ಮತ್ತೆ ಕೆಲವರಿಗೆ ನಾವು ಗೆದ್ದೆವೆಂಬ ಹೆಮ್ಮೆ. ವಿಷಯ ಇಷ್ಟೇ. ಆ ಮಗುವಿನ ಮನೆಯಲ್ಲಿ `ಅಪ್ಪ' ಇಲ್ಲ. ಅಂವ ಓಡಿಹೋಗಿದಾನೆ ಅಥವಾ ಅಮ್ಮನೇ ಮನೆಯಿಂದ ಈಚೆ ಬಂದಿದಾಳೆ. ಒಟ್ಟಿನಲ್ಲಿ ಮಗುವಿಗೆ ಅದು ಸಂಕಟದ ವಿಷಯ. ಸ್ವಂತಕ್ಕೆ ಅಪ್ಪನ ಕೊರತೆ ಕಾಡದಿದ್ದರೂ ಸುತ್ತಲಿನವರ ಜತೆ ಏಗಲಿಕ್ಕಾದರೂ... Continue Reading →

ಎರಡನೇ ಮದ್ವೆ ಗೆಲ್ಲುತ್ತಾ?

ಮ್ಯಾಟ್ರಿಮೊನಿಯಲ್  ವೆಬ್‌ಸೈಟಿನ ಮೂಲೆಯಲ್ಲೊಂದು ಜಾಹೀರಾತು ಪಿಳಿಪಿಳಿ ಅನ್ನುತ್ತಿದೆ. `ನನ್ ಹೆಸ್ರು ಅನಾಮಿಕಾ. ಡೈವೋರ್ಸಿ. ವಯಸ್ಸು ೩೨. ರೆಪ್ಯುಟೆಡ್ ಕಂಪೆನಿ ಒಂದ್ರಲ್ಲಿ ಕೆಲಸ ಮಾಡ್ತಿದೀನಿ. ನಂಗೆ ನನ್ನ ಮಗೂನ ಅಕ್ಸೆಪ್ಟ್ ಮಾಡ್ಕೊಳ್ಳಬಲ್ಲ, ಒಳ್ಳೆ ಮನಸ್ಸಿನ, ಹ್ಯಾಂಡ್‌ಸಮ್ ಆಗಿರೋ ಗಂಡು ಬೇಕು. ಕ್ಯಾಸ್ಟ್  ನೋ ಬಾರ್.  ಮತ್ತೆ ಮದ್ವೆಯಾಗಿ ಲೈಫ್‌ನಲ್ಲಿ ಸೆಟಲ್ ಆಗ್ಬೇಕು ಅನ್ನೋದು ನನ್ನಾಸೆ ಅಷ್ಟೆ...' ಅನ್ನುತ್ತಾ ಫೋಟೋ ಅಟ್ಯಾಚ್ ಮಾಡಿರುವ ಹೆಣ್ಣು ನಿಜಕ್ಕೂ ಚೆಂದವಿದ್ದಾಳೆ. ನಗುಮುಖದ ಒಳಗೆ ಎಲ್ಲೋ ನೋವಿನ ಎಳೆ ಕಂಡಂತಾಗುತ್ತೆ. ಅವಳ ಹುಡುಕಾಟ ಗೆದ್ದು,... Continue Reading →

ಅಭಿವ್ಯಕ್ತಿಗಿರಲಿ ಅವಕಾಶ…

ಇದನ್ನ ಅಪ್ಪ ಮಗಳ ಕಥೆಯಿಂದ ಶುರು ಮಾಡೋಣ. ಆತನಿಗೆ ಮಗಳೆಂದರೆ ತುಂಬಾ ಪ್ರೀತಿ. ತಾನು ಏನು ಮಾಡಿದರೂ ಅವಳ ಒಳ್ಳೆಯದಕ್ಕೇ ಅನ್ನುವ ನೆಚ್ಚಿಕೆ. ಒಮ್ಮೆ ಅವನು ಮಗಳನ್ನ ಕರೆದುಕೊಂಡು ಅಮ್ಯೂಸ್‌ಮೆಂಟ್‌ಪಾರ್ಕಿಗೆ ಹೊರಡ್ತಾನೆ. ದಾರಿಯಲ್ಲಿ ಒಂದು ದೊಡ್ಡ ಐಸ್‌ಕ್ರೀಮ್ ಪಾರ್ಲರ್. ಅದರ ಹತ್ತಿರ ಬರ್ತಿದ್ದ ಹಾಗೇ ಮಗಳು, `ಅಪ್ಪಾ...' ಅನ್ನುತ್ತಾಳೆ. ಆತ ಕಾರ್ ನಿಲ್ಲಿಸಿ, `ಹಾ, ಹಾ... ನನಗ್ಗೊತ್ತು, ತರ್ತೀನಿ ಇರು...' ಅನ್ನುತ್ತಾ ಹೋಗಿ ದೊಡ್ಡ ಸ್‌ಕ್ರೀಮ್ ಕೋನ್ ತರುತ್ತಾನೆ. ಮುಂದೆ ಸ್ವಲ್ಪ ದೂರ ಹೋಗುವಷ್ಟರಲ್ಲಿ ಮಗಳು ಮತ್ತೆ... Continue Reading →

ಮಲೆಗಳಲ್ಲಿ ಮದುಮಗಳು- ರಂಗ ಪ್ರಯೋಗ ಮತ್ತು ಪ್ರಸ್ತುತತೆ

ಹೊರ ನೋಟಕ್ಕೆ ನಾವೆತ್ತಲೋ ಸಾಗಿಬಿಟ್ಟಿದ್ದೇವೆ, ಚಂದ್ರನನ್ನು ಜೇಬೊಳಗಿಟ್ಟುಕೊಂಡಿದ್ದೇವೆ ಎನ್ನುವಂತೆ ಕಂಡರೂ ಭಾರತೀಯ ಸಂದರ್ಭದಲ್ಲಿ ಕೌಟುಂಬಿಕ, ಸಾಮಾಜಿಕ ಸಂಗತಿಗಳು ಅವೇ ಹಳೆಯ ಹಳವಂಡಗಳನ್ನೆ ಹೊತ್ತುಕೊಂಡಿವೆ. ಮಲೆಗಳಲ್ಲಿ ಮದುಮಗಳು ರಂಗಪ್ರಯೋಗದ ಪ್ರಸ್ತುತತೆಯ ಬಗ್ಗೆ ಚರ್ಚಿಸುವಾಗ ಈ ಅಂಶವನ್ನು ಗಮನಿಸಬೇಕಾಗುತ್ತದೆ. ಹತ್ತೊಂಭತ್ತನೇ ಶತಮಾನದ ಕಥಾವಸ್ತುವುಳ್ಳ ಕಾದಂಬರಿಯೊಂದು ಇಪ್ಪತ್ತನೇ ಶತಮಾನದಲ್ಲಿ ಬರೆಯಲ್ಪಟ್ಟಾಗ ಒಂದು ಸಂಚಲನವನ್ನು ಹುಟ್ಟು ಹಾಕಿತ್ತು. ರಾಮಾಯಣ ದರ್ಶನಮ್‌ ಬರೆದ ಕುವೆಂಪು ಮಲೆಗಳಲ್ಲಿ ಮದುಮಗಳು ಮಹತ್ಕೃತಿಯನ್ನು ಬರೆದಾಗ ಆ ಕಾಲಘಟ್ಟದಲ್ಲಿ ಅದನ್ನು ಮೆಚ್ಚಿಕೊಂಡವರಿಗಿಂತ ತೇಲಿಸಿ ಮಾತನಾಡಿದವರೇ ಹೆಚ್ಚು. ಕುವೆಂಪು ಅವರಿಂದ ಇಂತಹ... Continue Reading →

ಕೊರತೆ ಮರೆತರೇನೆ ಸುಖ

ಪ್ರತಿ ವರ್ಷ ಕೊಡಮಾಡುವ ಪ್ರಶಸ್ತಿಯೊಂದಕ್ಕೆ ಕೊಡುವಾತನ ಮಗಳ ಹೆಸರಿದೆ. ಅಲ್ಲೊಬ್ಬ ಹೆಣ್ಣುಮಗಳು ತನ್ನ ಗಂಡನ ಹೆಸರಲ್ಲಿ ಶಾಲೆ ತೆರೆದಿದ್ದಾಳೆ. ಪ್ರತಿ ಊರು, ಹಳ್ಳಿಯಲ್ಲೂ ದೊಡ್ಡ ಮೊತ್ತದಿಂದ ಹಿಡಿದು ಚಿಕ್ಕ ಸರ್ಟಿಪಿಕೇಟ್‌ವರೆಗೂ `ಸ್ಮಾರಕ ಪ್ರಶಸ್ತಿ' ಒಂದಾದರೂ ಇರುತ್ತದೆ. ಅದರ ಹಿಂದೆ ಇಲ್ಲವಾದವರ ಬಗೆಗಿನ ಪ್ರೀತಿ, ಅವರನ್ನು ತಮ್ಮ ನಡುವೆ ನಿರಂತರವಾಗಿ ಇರಿಸಕೊಳ್ಳುವ ಕಾಳಜಿ ಇರುತ್ತದೆ. ಹೀಗೆ ತೊರೆದುಹೋದವರ ಕೊರತೆಯನ್ನ ತುಂಬಿಕೊಳ್ಳುವ ಒಳ್ಳೊಳ್ಳೆ ದಾರಿಗಳನ್ನು ಕೆಲವಷ್ಟು ಜನ ಹುಡುಕಿಕೊಂಡಿರುತ್ತಾರೆ. ಆದರೆ ಎಲ್ಲರಿಗೂ ಇಂಥಾದ್ದು ಸಾಧ್ಯಾನಾ? ಪ್ರೀತಿ ಪಾತ್ರರ, ಇಷ್ಟ ವಸ್ತುವಿನ... Continue Reading →

ಹೆಣ್ಣಪ್ಪಿ ಹುಡುಗರು

ಅವನಿಗೆ ಕ್ರಿಕೆಟ್ ಇಷ್ಟ ಇಲ್ಲ. ಅವನು ಹುಡುಗರೊಟ್ಟಿಗೆ ಕುಸ್ತಿ ಆಡೋದಕ್ಕೆ ಹೋಗೋದಿಲ್ಲ. ಆಕ್ಷನ್ ಸಿನಿಮಾಗಳಿಗಿಂತ ರೊಮ್ಯಂಟಿಕ್ ಕಾಮಿಡೀಸ್ ನೋಡೋದೇ ಜಾಸ್ತಿ. ಗರ್ಲ್ ಫ್ರೆಂಡ್‌ಗೆ ದಿನಕ್ಕೆ ಹತ್ತು ಸಲ ಕಾಲ್ ಮಾಡ್ತಾನೆ. ಊಟ ಆಯ್ತಾ, ತಿಂಡಿ ಆಯ್ತಾ ವಿಚಾರಿಸ್ತಾನೇ ಇರ್ತಾನೆ. ನೆಂಟರಿಷ್ಟರಮನೆಗಳಿಗೆ ಹೋಗೋದು, ಯಾವ ಫಂಕ್ಷನ್ ಅನ್ನೂ ಮಿಸ್ ಮಾಡದೆ ಇರೋದು ಇವನ ಹೆಚ್ಚುಗಾರಿಕೆ. ಅವನು ಚಿಕ್ಕವನಿರುವಾಗಿಂದ್ಲೂ ಹಾಗೇನೇ. ಅಡುಗೆ ಮನೇಲಿ ಅಮ್ಮನಿಗೆ ಜತೆಯಾಗೋದು ಅಂದ್ರೆ ಅವಂಗೆ ಇಷ್ಟ. ರಂಗೋಲಿ ಹಾಕೋದಿರಲಿ, ಹೂ ಕಟ್ಟೋದಿರಲಿ,ಕಸೂತಿ ಹಾಕೋದಿರಲಿ... ಎಲ್ಲಾದರಲ್ಲೂ ಸಿಕ್ಕಾಪಟ್ಟೆ... Continue Reading →

ಗುಟ್ಟು ಬಚ್ಚಿಡಲು ಕಲಿಯಿರಿ

ಹೆಣ್ಣುಮಕ್ಕಳಿಗೆ ಮಾತು ಜಾಸ್ತಿ. ಹಾಗೇನೇ ಎಲ್ಲವನ್ನೂ ಹೇಳಿಕೊಂಡುಬಿಡುವ ಆತುರ. ಹಿಂದಿನ ಕಾಲದ ಹರಟೆ ಕಟ್ಟೆಯಿಂದ ಹಿಡಿದು ಇವತ್ತಿನ ಟ್ವಿಟರ್ ತನಕ ನೋಡಿ ಬೇಕಿದ್ದರೆ, ತಾವು ಹೊಸ ಕರ್ಚಿಫ್ ಪರ್ಚೇಸ್ ಮಾಡಿದ್ದರಿಂದ ಹಿಡಿದು ಬಾಯ್ ಫ್ರೆಂಡ್ ಜತೆಗಿನ ಜಗಳದವರೆಗೆ ಎಲ್ಲವನ್ನೂ ಹೇಳಿಕೊಳ್ಳುವವರೇ. ಫಿಲ್ಟರ್ ಇಲ್ಲದೆ ಬದುಕಬೇಕು ಅನ್ನೋ ಫಿಲಾಸಫಿ ಸರಿಯೇ. ಹಾಗಂತ ಫಿಲ್ಟರ್ ಹಾಕಬೇಕಾದಲ್ಲಿ ಹಾಕದೆ ಹೋದರೆ ಕೊಳೆ ಕಸಗಳೆಲ್ಲ ಹರಿದುಬಂದು ಸಂಬಂಧಗಳ ಸ್ವಾಸ್ಥ್ಯ ಕೆಡೋದು ಗ್ಯಾರಂಟಿ. ಕೆಲವೊಂದಷ್ಟು ಮಾತುಗಳನ್ನ ನಾವು ನಮಗಾಗಿ ಉಳಿಸ್ಕೊಂಡಿರಬೇಕು. ಯಾವುದೋ ಒಂದು ಘಟನೆ... Continue Reading →

ಮುಟ್ಟಿದ್ರೆ ಅಂಟ್ಕೊಳ್ತಾರೆ!

ಹೊತ್ತಲ್ಲದ ಹೊತ್ತಲ್ಲಿ ಬಡಕೊಳ್ಳುವ ಸೆಲ್‌ಫೋನ್ ಸ್ಕ್ರೀನ್ ಮೇಲೆ `ಕಿರಿಕಿರಿ' ಅಂತಲೋ `ಫೆವಿಕಾಲ್' ಅಂತಲೋ ಹೆಸರು. ಆ ಹೆಸರು ಅಂಟಿಸ್ಕೊಂಡವರು ಯಾರು ಬೇಕಾದರೂ ಆಗಿರಬಹುದು. ತೀರಾ ಸ್ವಂತ ಹೆಂಡತಿಯೂ ಅಥವಾ ಮುಖವೂ ಗೊತ್ತಿಲ್ಲದ ಯಾರೋ ಫೇಸ್‌ಬುಕ್ ಗೆಳೆಯನೂ. ಕೆಲವರು ಹಾಗಿರ್ತಾರೆ. ಯಾರಾದರೂ ಒಂಚೂರು ಸ್ಪಂದಿಸಿದರೂ ಚಕ್ಕಂತ ಕಚ್ಕೊಂಡುಬಿಡ್ತಾರೆ. ಇಂಥವರನ್ನ `ಗೋಂದು' ಅಂತಲೋ `ಗಮ್ ಪಾರ್ಟಿ' ಅಂತಲೋ ಆಡಿಕೊಂಡು ನಗೋದುಂಟು. ಇಂಥಾ ಅಂಟುತನ ಬೇರೆಯವರಲ್ಲಿ ತಮ್ಮ ಬಗ್ಗೆ ಇರಿಟೇಶನ್ ಬೆಳೆಸುತ್ತೆ ಅಂತ ಇವರು ಯೋಚಿಸೋದೂ ಇಲ್ಲ. ಅವರಿಗೇನೋ ತಾವು ತುಂಬಾ... Continue Reading →

Blog at WordPress.com.

Up ↑