ಇವತ್ತು ಸಖತ್ ಹರ್ಟ್ ಆಗ್ಬಿಟ್ಟಿದೆ. ತಗೋ, ಮತ್ತೊಂದು ಕಥೆ ಶುರು! ಅದು ಆಗೊದೇ ಹಾಗೆ. ಎಲ್ಲ ಸುಕೂನವಿದ್ದುಬಿಟ್ರೆ ಕಥೆಗೆ ಜಾಗವಿರೋದಿಲ್ಲ. ಖುಷಿ ಇದ್ದಲ್ಲಿ ಕಥೆ ಮುಗೀತದೆ. ಇವಳ ವಿಷಯ ಹಾಗಲ್ಲ. 'ಸದ್ಯ, ದಡ ಹತ್ತಿದಳು' ಅಂದ್ಕೊಳ್ಳುವಾಗಲೆ `ಸಶೇಷ' ಅನ್ನುತ್ತಾಳೆ. ಅವಳು ಮಗು ಥರ. ಪೂರಾ ಮಕ್ಕಳ ಥರ. ಅವಕ್ಕೆ ಗೊತ್ತಿರುತ್ತೆ. ಅತ್ತರೇನೇ ಅಮ್ಮ ಬಂದು ಎತ್ಕೊಳೋದು. ರಚ್ಚೆ ಹಿಡಿದರೇನೇ ಮೊಲೆತೊಟ್ಟು ಬಾಯಿಗಿಡೋದು. ಇವಳೂ ಅಂದ್ಕೊಂಡುಬಿಟ್ಟಿದಾಳೆ, ನೋವುಗಳನ್ನೆಲ್ಲ ಮುಖಕ್ಕೆಳೆದು ಗುಡ್ಡೆ ಹಾಕ್ಕೊಂಡರೇನೆ ಗಮನ ಹರಿದು ಬರೋದು. ಅವತ್ತು ಹಾಗೇ... Continue Reading →
ದಸರೆಯ ಬೆಳಗಿನಲ್ಲಿ ಹಣಕಿ ಬಂದ ಹುಲಿವೇಷ
ಡಂಡರಡಟ್ಟರ ಡಂಡರಡಟ್ಟರ ಡಂಡರ…. ಪಟ್ಟೆಪಟ್ಟೆ ಹುಲಿರಾಯ ಬಾಯಲ್ಲಿ ನಿಂಬೆ ಹಣ್ಣು ಕಚ್ಚಿಕೊಂಡು ಕುಣೀತಿದ್ದರೆ ಕಾಲು ನಿಲ್ಲುತ್ತಿರಲಿಲ್ಲ ನಂದು. ಕುಣಿತದ ಲಯಕ್ಕೆ ನನ್ನ ಕೊಟ್ಟುಕೊಳ್ಳುತ್ತಾ ಹುಲಿಯ ಚೂಪು ಉಗುರು, ಕೋರೆ ಹಲ್ಲುಗಳೆಲ್ಲ ಮರೆತು ಬರೀ ಶಬ್ದದ ಮೋಡಿ ಉಳಿಯುತ್ತಾ ಹುಲಿ ವೇಷ ತೊಟ್ಟು ಕೆಂಪಗಿನ ಕಣ್ಣು ಗಿರ್ರನೆ ತಿರುಗಿಸ್ತಾ ಕುಣಿಯುತ್ತಿದ್ದವರ ಪಟ್ಟಿನಲ್ಲಿ ಕಳೆದುಹೋಗುತ್ತಾ… ಅಪ್ಪ ಬಯ್ತಿದ್ದರು. ಗಂಡುಬೀರಿ ಹಾಂಗೆ ನಡೂ ಅಂಗಳದಲ್ಲಿ ನಿಂತುಕೊಳ್ಳೋದು ಎಂತಕ್ಕೆ? ಬಾರೆ ಒಳಗೆ… ನಾನು ಒಳಗೆ ಹೋಗುತ್ತಿದ್ದೆ, ಜಾಣ ಮಗಳಂತೆ. ಹಿತ್ತಿಲ ಬಾಗಿಲು ನನಗಾಗಿ... Continue Reading →
ಹಳೆಯದೊಂದು ಮಳೆಕವಿತೆ
ಇವತ್ತೂ ಮಳೆ ಬರಲಿಲ್ಲ ಕಣೋ ಮೋಡಗಟ್ಟಿದ ಮಬ್ಬು ಹಾಗೇ ಇದೆ ಇನ್ನೂ ಬಾಯಾರಿ ಬಿರಿದ ಎದೆಗೆ ನಿನ್ನ ನೆನಪು ಸುಡು ಸೂರ್ಯ ಇಲ್ಲ, ಬರಲಿಲ್ಲ ಮಳೆ ಇವತ್ತೂ, ಕ್ಷಿತಿಜದಂಚಲ್ಲಿ ಕಾಮನ ಬಿಲ್ಲು ಮೂಡಿದ್ದು ಯಾಕೋ ಗೊತ್ತಾಗಲಿಲ್ಲ! ನನ್ನ ಕಣ್ಣ ಹನಿ, ನಿನ್ನ ನಗೆ ಬೆಳಕು- ಅದರಲ್ಲಿ ಇದು ಹಾದು ನಡೆದ ಭೌತ ಶಾಸ್ತ್ರದ ಕರಾಮತ್ತು ನನಗೆ ತಿಳಿಯಲಿಲ್ಲ ಮಳೆ ಇವತ್ತೂ ಬರಲಿಲ್ಲವೋ… ಅದಕೆಂದೇ ಕಾಪಿಟ್ಟ ಮಳೆ ಹಾಡು ಉಳಿದುಹೋಗಿದೆ ಹಾಗೇ, ಹನಿ ಹನಿಗು ನಿನ್ನ ಮುತ್ತನಿಟ್ಟು ಹೆಣೆಯಲಿದ್ದ... Continue Reading →
ಇನ್ನೂ ಒಂದು ಹಳೆಕವಿತೆ
ನೀರಿಲ್ಲದ ಬಾವಿ ಯೆದುರು ಖಾಲಿ ಕೊಡದ ನಾನು ಎದೆ ಬಗೆದು ತೋಡಿದರೂ ಕಣ್ಣು ಹನಿಯದು ~ ಮರಳುಗಾಡು, ಮರೀಚಿಕೆ… ಅವೆಲ್ಲ ಕ್ಲೀಷೆ. ನೀನಿಲ್ಲದ ಬದುಕಿಗೆ ನೀ ನೀಡದ ಪ್ರೀತಿಗೆ ಬೇರೇನೂ ಹೋಲಿಕೆ ತೋಚುತ್ತಿಲ್ಲ ನನಗೆ. ~ ಹಾಳು ಮೌನದ ಬಯಲಲ್ಲಿ ಒಂಟಿ ಪಾಪಾಸುಕಳ್ಳಿ ಯ ಹಾಗೆ ನಿಂತಿರುವೆ ಅದಕ್ಕೇ, ಮಾತಿಗೆ ನೆವವಿಲ್ಲ, ಪ್ರೀತಿಗೆ ಜನವಿಲ್ಲ!
ಮತ್ತೂ ಒಂದು ಹಳೆ ಕವಿತೆ
ಮಳೆ ಯಾಕೋ ಇವತ್ತು ಹಠ ಹಿಡಿದಿದೆ ನಿನ್ನ ಹಾಗೆ ನೆನೆನೆನೆದು ಮುನಿಯುತ್ತಿದೆ ಮುನಿಮುನಿದು ನೆನೆಸುತ್ತಿದೆ ಯಾಕೋ… ಮಳೆ ಯಾಕೋ ಇವತ್ತು ಹಠ ಹಿಡಿದಿದೆ ನಿನ್ನ ಹಾಗೆ ನೀ ಕಣ್ತೆರೆದಂತೆ ಮಿಂಚು ಮಿಂಚಿ ಮೈಯೆಲ್ಲ ಸೆಳೆದು ಒಳಗೆಲ್ಲೋ ಕೋಡಿ ಒಡೆದು ಪ್ರವಾಹ ಬಿದ್ದು ಸುಳಿವು ನಿನ್ನ ನಗುವಿನದೇ ಸಿಡಿಲು- ನೀ ನಗುನಗುತ್ತ ಸಿಡುಕಿ ಆಡಿದ ಮಾತು ನನ್ನ ಸುಟ್ಟಿತ್ತಲ್ಲೇ ಸಿಡಿಲ ಹಾಗೆ! ಹಾಗೆ ಸುಟ್ಟಿದೆ ನೋಡು ಮನೆಯೆದುರ ಒಂಟಿ ತೆಂಗು, ಗರಿಗಳೆಲ್ಲ ಉದುರಿ, ಫಲಗಳೆಲ್ಲ ಚದುರಿ ಉದ್ದಾನುದ್ದ ನಿಂತಿದೆಯಲ್ಲಿ... Continue Reading →
ಮತ್ತೊಂದು ಹಳೆ ಕವಿತೆ
ಮೊಗ್ಗಿನ್ನು ಅರಳುವುದಿಲ್ಲ… ಇನ್ನು, ಮೊಗ್ಗು ಅರಳುವುದಿಲ್ಲ. ಹೂವಾಗದೆ, ಕಾಯಾಗದೆ, ಹಣ್ಣಾಗಿದೆ ಮೊಗ್ಗು- ಬಿರಿಯುವುದಿಲ್ಲ. ಯಾವ ಪಾತರಗಿತ್ತಿಯ ತುಟಿ ಸೋಂಕಿಗೂ ದಳ ತಳಮಳಿಸುವುದಿಲ್ಲ. ಬಿಗಿದು ಕುಂತಿದೆ ಮೊಗ್ಗು, ಇನ್ನು ಅರಳುವುದಿಲ್ಲ. ಮೊಗ್ಗೊಳಗೆ ಹೂತು ಕೂತ ಬೀಜ ಮತ್ತೆ ಮೊಳೆಯುವುದಿಲ್ಲ. ಅದು, ಗಿಡವಾಗಿ ಚಿಗಿಯುವುದಿಲ್ಲ, ಹೂ ಹೆರುವುದಿಲ್ಲ. ಯಾಕೆಂದರೆ, ಮೊಗ್ಗಿನ್ನು ಅರಳುವುದಿಲ್ಲ. ಹೂವಾಗದೆ ಕಾಯಾಗದೆ ಹಣ್ಣಾಗಿದೆ ಮೊಗ್ಗು, ಇನ್ನು ಬಿರಿಯುವುದಿಲ್ಲ.
ಒಂದು ಹಳೆಯ ಕವಿತೆ
ಇದು, ಅದೇ ನೀರವ ರಾತ್ರಿ… ಗೂಬೆ ಕೂಗುವ ಸದ್ದು. ದೂ ರ ದ ಕಬ್ಬಿನ ಗದ್ದೆಯಲ್ಲಿ ಊಳಿಡುತ್ತಿರುವ ನರಿಗಳ ಧ್ವನಿ, ನನ್ನೆದೆಯಲ್ಲಿ ಪ್ರತಿಧ್ವನಿ. ಈ ರಾತ್ರಿ, ಚಂದಿರನ ಮುಖದಲ್ಲಿ ಸೂತಕದ ಛಾಯೆ. ಆಕಾಶ ವಿಷ ಕುಡಿದೇ ನೀಲಿಗಟ್ಟಿದೆಯೇನೋ ಅನ್ನುವಂತೆ… ನಕ್ಷತ್ರಗಳು ಕೂಡ ಅಂಗಳ ಬಿಟ್ಟು ನಡೆದಿವೆ, ನನ್ನ ಹಾಗೆ ಚಂದಿರ ಕೂಡ ಒಬ್ಬಂಟಿ. ನಾನಿಲ್ಲಿ ಹೀಗೆ, ಸರಿ ರಾತ್ರಿಯಲ್ಲಿ ಹಳದಿ ಹೂಗಳನ್ನ ಜೋಡಿಸಿಡುತ್ತ ಕುಳಿತಿದ್ದೇನೆ. ಕಾಯುತ್ತಿದ್ದೇನೆ; ಕ್ಯಾಲೆಂಡರಿನ ಹಾಳೆ ತಿರುವಲು, ನೀ ಬರುವ ದಿನ ಊಹಿಸಿ ತಿಂಗಳ... Continue Reading →
2009, ಮಾರ್ಚ್ 18ರ ಕವಿತೆ
ದಂಡೆ ನಿರ್ಲಿಪ್ತ ಓಡೋಡಿ ಬರುವ ಅಲೆಯ ನಿಯತ್ತು ಅದಕ್ಕೆ ಗೊತ್ತು. ~ ದಂಡೆ ಬಿಟ್ಟಿರಲಾಗದ ಅಲೆಗೆ ತಳಮಳ. ಬಂದಪ್ಪಿದರೆ ಮತ್ತೆ ನೀರ ಸೆಳೆತ. ~ ಬರುವಾಗ ಹೆದ್ದೆರೆ, ದಡವನಪ್ಪಿ ಭೋರ್ಗರೆದು ಹಿಂಜರಿದು ನಡೆವಾಗ ತಗ್ಗಿ ಕುಗ್ಗಿ, ಇಲ್ಲವಾಗಿಬಿಡುತ್ತಿದೆ. ~ ಸಾಗರದೊಡಲಿಂದ ಬಂಡೆದ್ದ ಸಾವಿರ ಸಾವಿರ ಅಲೆಗಳು ನೆಲವ ನೆಚ್ಚಿಕೊಳ್ಳಲಾಗದೆ ಮರಳಿ ಹೋಗುತ್ತಿವೆ. ~ ದಡ, ಸಾಗರ ದಡ, ಸಾಗರ- ದಾಟದಲ್ಲಿ ಅಲೆಗಳು ಸೋತು ಸೊರಗುತ್ತಿವೆ. ~ ನೀರೋ, ನೆಲವೋ? ಕ್ಷಣಕ್ಷಣವೂ ದ್ವಂದ್ವ... ಸಾಗರ ದನಿ ತೆಗೆದು... Continue Reading →
ಅಗಸ್ಟ್ 15 ~ಸ್ವಾತಂತ್ರ್ಯದೊಂದಿಗೇ ನಾನು ಹುಟ್ಟಿದವಳು!
... ಮತ್ತು ಆ ದಿನ ನಾನು ಹುಟ್ಟಿಕೊಂಡೆ. ಹೊಕ್ಕುಳ ಬಳ್ಳಿ ಕತ್ತರಿಸಿ ಬೀಳುತ್ತಲೇ ನಾನು ಸ್ವತಂತ್ರಳಾಗಿದ್ದೆ. ಕುಗ್ಗಿಸಲು ಬಂದ ಕಷ್ಟಗಳೆದುರು ಅಗಾಧ ಬೆಳೆದುಕೊಂಡೆ. ಕಟ್ಟಲು ಬಂದ ಖುಷಿಗಳೆದುರು ವಿನಯದಿಂದ ಹಿಡಿಯಾದೆ. ನೆನ್ನೆಯ ಅಂಟು, ನಾಳಿನ ನಂಟುಗಳೆಲ್ಲ ವಿಧಿಗೆ ಗುಲಾಮರನ್ನಾಗಿಸುತ್ತವೆ ನಮ್ಮನ್ನು. ಈ ಕ್ಷಣದ ಹೆಜ್ಜೆಯಷ್ಟೆ ನನ್ನದು. ನನ್ನದು ಪ್ರತಿ ಕ್ಷಣದ ಬದುಕು. ನಾನು ಹುಟ್ಟಿಂದಲೂ ಸ್ವತಂತ್ರಳು... ಸ್ವತಂತ್ರಳಾಗೇ ಇರುವೆ... ನಾನಾದರೂ ಏನು ಮಾಡಲಿ, ಸ್ವಾತಂತ್ರ್ಯನನ್ನ ಹುಟ್ಟಿಗೇ ಬೆಸೆದುಕೊಂಡುಬಿಟ್ಟಿದೆ!
ಜಮ್ಮು, ಕಾಶ್ಮೀರ ಮತ್ತು ಲಡಾಖ್ ~ 3
ರಾತ್ರಿಯಲ್ಲೂ ಸೂರ್ಯ! ಏರ್‌ಪೋರ್ಟಿಂದ ಹೊರಬಂದು ನಿಂತ ನಮಗೆ ಮುಂದೆ ಎಲ್ಲಿಗೆ ಹೋಗೋದು ಅನ್ನುವ ನಿಕ್ಕಿ ಇರಲಿಲ್ಲ. ಓಡಾಟದ ಮಾಧ್ಯಮ ಯಾವುದು ಅನ್ನೋದೂ ಗೊತ್ತಿರಲಿಲ್ಲ. ಅಣ್ಣನಿಗೆ ಸೂಚನೆ ಇದ್ದಂತೆ `ವೈಷ್ಣೋಧಾಮ್'ಗೆ ಹೋಗೋದು ಅಂದುಕೊಂಡೆವು. ನಮ್ಮೆಲ್ಲರ ಪುಣ್ಯಕ್ಕೆ (ಅಥವಾ ಕರ್ಮಕ್ಕೆ) ನಮ್ಯಾರ ಸೆಲ್‌ಗಳೂ ಅಲ್ಲಿ ಕೆಲಸ ಮಾಡ್ತಿರಲಿಲ್ಲ. ಹೌದು... ಸೆಕ್ಯುರಿಟಿ ಕಾರಣಗಳಿಂದಾಗಿ ಜಮ್ಮು ಮತ್ತು ಕಾಶ್ಮೀರ ರಾಜ್ಯದಲ್ಲಿ ಹೊರಗಿನ ಪ್ರಿಪೇಯ್ಡ್ ಸಿಮ್‌ಗಳಿಗೆ ನಿರ್ಬಂಧವಿದೆ. ಸುಮ್ಮನೆ ಬಿಸಿಲಲ್ಲಿ ಬೇಯುತ್ತ ನಿಂತಿದ್ದ ನಮ್ಮ ಕಣ್ಣಿಗೆ ಹೊಟ್ಟೆ ಬಿರಿಯುವಂತೆ ಜನರನ್ನ ತುಂಬಿಕೊಂಡು ಓಡಾಡುವ `ಮಿನಿಬಸ್'ಗಳು... Continue Reading →
