ಇವರ ಪಾಲಿಗೆ ‘ಹೆಣ್ಣು’ ಟಿ ಆರ್ ಪಿ ಹೆಚ್ಚಿಸುವ ಕ್ಯಟಲಿಸ್ಟ್ ಮಾತ್ರ…

'ಸತ್ತು ಬಿದ್ದಿತ್ತು ಭಾರತ' - ಇದು ಡಿಸೆಂಬರ್ 2, 2007ರಂದು ಬರೆದು ನನ್ನ ಬ್ಲಾಗ್ ನಲ್ಲಿ ಹಾಕಿಕೊಂಡಿದ್ದ ಲೇಖನ. ಆ ದಿನ ಅಸ್ಸಾಮಿನ ಬುಡಕಟ್ಟು ಜನಾಂಗವೊಂದು ತನ್ನ ಹಕ್ಕುಗಳಿಗಾಗಿ ಒತ್ತಾಯಿಸಿ ಧರಣಿ ಹೂಡಿತ್ತು. ಅದರಲ್ಲಿ ಹೆಂಗಸರೂ ಇದ್ದರು. ದಿಬ್ರುಗಡ್ ನಲ್ಲಿ ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗುತ್ತಿತ್ತು. ಅದೇ ಸಮಯಕ್ಕೆ ಗುವಹಾಟಿಯ ಬೀದಿಯೊಂದರಲ್ಲಿ ಒಬ್ಬ ಟ್ರೈಬಲ್ ಹೆಣ್ಣುಮಗಳು ಪ್ರತಿಭಟನೆಯ ಬೋರ್ಡ್ ಹಿಡಿದು ತನ್ನ ಪಾಡಿಗೆ ನಿಂತಿದ್ದಳು. ತನ್ನ ಜನಾಂಗದ ಹಕ್ಕಿಗಾಗಿ ಶಾಂತಿಯುತ ಪ್ರತಿರೋಧ ತೋರುತ್ತಿದ್ದ ಆ ಹೆಣ್ಣನ್ನು ಗುವಹಾಟಿಯ ಕೆಲವು... Continue Reading →

ಜಮ್ಮು, ಕಾಶ್ಮೀರ ಮತ್ತು ಲಡಾಖ್

ಇದು ನಮ್ಮ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರವಾಸದ ಕಥನ. ಹದಿನೆಂಟು ದಿನಗಳ ಈ ಪ್ರವಾಸ ಒಂದು ದಿವ್ಯಾನುಭೂತಿಯೇ ಆಗಿತ್ತು. ಈ ಕಥನದ ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್‌ ಮಾಡಿ... ೨. ಸೆಖೆಯ ಸ್ವಾಗತ ಹಾಗೆ ನಾವು ಒಟ್ಟು ಆರು ಜನ ಹೊರಟೆವಲ್ಲ, ಈ ಪ್ರವಾಸದ ಹಿಂದೆ ನಮ್ಮೆಲ್ಲರಿಗೂ ನಮ್ಮದೇ ಆಸಕ್ತಿ- ಕಾರಣಗಳಿದ್ದವು. ಯೋಗೀಶ್‌ ಮತ್ತು ಸಚಿನ್‌ ಶತಾಯ ಗತಾಯ ಅಮರನಾಥಕ್ಕೆ ಹೋಗಿಯೇ ಬರುವುದು ಅಂತ ನಿರ್ಧರಿಸಿಕೊಂಡಿದ್ದರು. ಅವರ ಪೂರ್ತಿ ಗಮನ ಅದರತ್ತಲೇ ಇತ್ತು. ಅನೂಪನಿಗೆ... Continue Reading →

ಜಮ್ಮು, ಕಾಶ್ಮೀರ ಮತ್ತು ಲಡಾಖ್ ~ 1

ಟೇಕ್ ಆಫ್ ನನ್ನ ಪಾಲಿಗೆ ಯಾವುದಾದರೂ ಒಂದು ಊರು ನೋಡೋದು ಅಂದರೆ ಅಲ್ಲಿನ ಪ್ರಸಿದ್ಧ ಸ್ಮಾರಕಗಳನ್ನೋ ಚೆಂದದ ಕಟ್ಟಡಗಳನ್ನೋ ಅಥವಾ ಜನಪ್ರಿಯ ಪ್ರವಾಸೀ ಆಕರ್ಷಣೆಯ ಸ್ಥಳಗಳನ್ನೋ ನೋಡುವುದಲ್ಲ. ಅಥವಾ ಹಾಗೆ ಅವಷ್ಟನ್ನು ನೋಡುವುದು ಮಾತ್ರ ಅಲ್ಲ. ನಾನು ಹೋಗುವ ಊರಿನ ಒಳಹೊಕ್ಕು ಅಲ್ಲಿಯೂ ಇರುವ ನನ್ನ ಜನರನ್ನೆಲ್ಲ ಹಾದು ಬಂದಾಗಲೇ ನನ್ನ ಪ್ರವಾಸ ಪರಿಪೂರ್ಣವಾಗೋದು. ಹೀಗೇ ಇತ್ತು ನಮ್ಮ ಈ ಸರ್ತಿಯ ಜಮ್ಮು- ಕಾಶ್ಮೀರ- ಲಡಾಖ್ ಪ್ರವಾಸ ಕೂಡಾ. ನಮ್ ಟೀಮ್ ಸಾಮಾನ್ಯವಾಗಿ ನಾವು ಪ್ರವಾಸ ಹೊರಡುವಾಗ... Continue Reading →

ಪುಸ್ತಕ ಹುಡುಕುತ್ತಾ ಹುಟ್ಟಿಕೊಂಡ ಹರಟೆ

ನನಗೆ ಏನನ್ನಾದರೂ ಓದಬೇಕು ಅನ್ನಿಸಿ, ಯಾವ ಪುಸ್ತಕವೂ ಕೈಕೂರದೆ ಇದ್ದಾಗ ನೆರವಿಗೆ ಬರೋದು ಎರಡು ಪುಸ್ತಕಗಳು. ತೇಜಸ್ವಿಯವರ 'ಪರಿಸರದ ಕತೆಗಳು' ಮತ್ತು ರಾಹುಲ ಸಾಂಕೃತ್ಯಾಯನರ ವೋಲ್ಗಾ ಗಂಗಾ. ನಾಗರಿಕತೆ ಮತ್ತು ಆರ್ಯನ್ನರ ಹುಟ್ಟು ವೋಲ್ಗಾದತಟದಲ್ಲಾಗಿ ಅದು ಗಂಗೆಯ ವರೆಗೆ ಸಾಗಿ ಬಂತೆನ್ನುವ ಅದರ ಎಳೆಯ ಬಗ್ಗೆ ಚೂರೂ ಸಮ್ಮತಿ ಇಲ್ಲದೆ ಇದ್ದರೂ ವೋಲ್ಗಾ ಗಂಗಾದ ಬಿಡಿಬಿಡಿ ಕಥೆಗಳು ಯಾವತ್ತೂ ನನ್ನನ್ನ ಸಿದ್ಧ ಮಾದರಿಯಾಚೆಗಿನ ಚಿಂತನೆಗೆ ಹಚ್ಚುತ್ತವೆ. ಅಲ್ಲದೆ, ಯಾವುದೇ ವಿಷಯವನ್ನ ಗ್ರಹಿಸುವಾಗ ಸಾಮಾನ್ಯ ಊಹೆಗೆ ನಿಲುಕದ ದಿಕ್ಕಿನಲ್ಲೇ... Continue Reading →

ಶಾಪಗ್ರಸ್ಥ ಕಿನ್ನರಿಗೆ ಹೂಘಮವೇ ತಲೆನೋವು

ಆಗಾಗ ನನಗೆ ನಾನೊಬ್ಬ ಶಾಪಗ್ರಸ್ಥ ಕಿನ್ನರಿ ಅಂತ ಅನ್ನಿಸೋದಿದೆ. ಪ್ರತಿ ಜೀವಕೋಶ ಹುಚ್ಚೆದ್ದು ಕುಣೀವಾಗಲೂ ಕುಣಿಯಲಾಗದ, ಜೀವವೇ ಹಾಡಾಗಿ ಹರೀವಾಗಲೂ ಹಾಡಲು ಬರದ, ಚಿತ್ರಗಳನ್ನ ತಿಂದುಬಿಡುವಷ್ಟು ಲಾಲಸೆಯಿಂದ ನೋಡುವುದಿದ್ದರೂ ಕುಂಚ ಕೈಯಲ್ಲಿ ಹಿಡಿಯಲೂ ಬರದ ಈ ಜನ್ಮ, ಏನೋ ತರಲೆ ಮಾಡಿ ಭೂಮಿಗೆ ದಬ್ಬಿಸ್ಕೊಂಡ ಕಿನ್ನರಿಯದ್ದೇ ಅನ್ನೋದು ನನ್ನೊಳಗಿನ ಆಲೀಸ್‌ಗಂತೂ ಖಾತ್ರಿ ಇದೆ. ಅದು ಆಲೀಸಳ ಜಗತ್ತಿನಿಂದ ಹೊರಗೂ ಖಾತ್ರಿಯಾಗತೊಡಗಿದ್ದು, ಮಲ್ಲಿಗೆ ಸುಗಂಧ ನನ್ನ ಜೀವ ಬೇಡಲು ಮುಂದಾದ ಸಂದರ್ಭದಲ್ಲಿ... ~ ನಾನು ಓದುವ ಕಾಲಕ್ಕೆ ಸಿಟಿ... Continue Reading →

ನಡೆಯುತ್ತಲೇ ನಿಂತವರು, ನಿಂತೂ ನಡೆವವರು….

ನದಿ ಹರೀತಿದೀನಿ ಅಂದುಕೊಳ್ಳತ್ತೆ ಉಹು... ಅದು, ಉಗಮ - ಅಂತಗಳ ನಡುವೆ ನಿಂತಿದೆ. ನಾವು ಬಾಳುವೆ ನಡೆಸ್ತಿದೀವಿ ಅಂದುಕೊಳ್ತೀವಿ. ತಾವೋ ಹೇಳುತ್ತೆ, 'ಬಾಳು ಅದರ ಪಾಡಿಗೆ ನಡೆಯುತ್ತೆ. ಅಸ್ತಿತ್ವ ಅದರ ಕಾಳಜಿ ವಹಿಸತ್ತೆ.' ಬಾಳು, ಹುಟ್ಟು - ಸಾವುಗಳ ನಡುವೆ ನಿಂತಿದೆ. ನಾವು ನಡೆದರೂನು ನಿಂತರೂನು ಅದು ಶತಸ್ಸಿದ್ಧವೇ. ~ ಅಹಂಕಾರ ಇರೋವನಿಗೆ ಸಮುದ್ರದಲ್ಲಿ ಅಲೆಗಳ ವಿರುದ್ಧ ಈಜೋ ಆಸೆ. ಹರಿವಿನೊಳಗೆ ಒಂದಾಗಿ ಹರಿದರೆ ಹಮ್ಮಿಗೆ ತೃಪ್ತಿ ಎಲ್ಲಿ? ಮರದ ಕುಂಟೆ ಹರಿವಿಗೆ ತನ್ನ ಕೊಟ್ಟುಕೊಂಡು, ಅದು... Continue Reading →

ಹೂವಿನ ಕಣಿವೆಗೆ ಮುಳ್ಳಿನ ಹಾದಿ

ಅವಳು ಹೊಕ್ಕುಳ ಹೂವಿಲ್ಲದ ಹುಡುಗಿ. ನಿಜಕ್ಕೂಅವಳಿಗೆ ಹೊಕ್ಕುಳಿಲ್ಲ. ಹಾಗಂದ ಮೇಲೆ ಅವಳು ಹುಟ್ಟಿಬಂದವಳಲ್ಲ. ಅವಳು ಇರುವವಳು. ಯಾವತ್ತಿಗೂ... ಅವಳು ಕನಸಿಂದ ಧಿಗ್ಗನೆ ಎದ್ದುಬಂದಳು. ಉಷ್ಣ ಇದೆ ಎಂದಾದರೆ ಅಲ್ಲಿ ಜ್ವಾಲೆ ಹೊತ್ತಿಕೊಂಡಿರಲೇಬೇಕು ತಾನೆ? ತಾನು 'ಉಷ್ಣ' ಇದ್ದೀನಿ. ಎಲ್ಲಿ ನನ್ನ ಜ್ವಾಲೆ? ಕನಸುಗಳಲ್ಲಿ ತಬ್ಬಿಹಿಡಿಯುವ ಆ ಗಂಡು ಬೆಂಕಿ...? ಎನ್ನುತ್ತ ಅಲೆಮಾರಿಯಾದಳು. ಕೊನೆಗೂ ಅವಳಿಗೆ ಆ ಬೆಂಕಿ ಸಿಕ್ಕಿದ್ದು ಹಿಮಬೆಟ್ಟದ ಮೇಲೆ, ಲೂಟಿಕೋರರ ನಾಯಕನ ಕಣ್ಣುಗಳಲ್ಲಿ. ಅವನ ಹೆಸರೂ ಅದೇನೇ- ಹಿಂದಿಯಲ್ಲಿ, ಜಲನ್! ಜಲನ್ ಮತ್ತವನ ತಂಡದ... Continue Reading →

ವಿದ್ರೋಹದ ನವಿರಲ್ಲಿ ಉತ್ಸವದ ನೆನಪು

'ನಿನಗೆ ನನ್ ಬಗ್ಗೆ ಕೋಪ ಬರೋದಿಲ್ವಾ?' ತನ್ನನ್ನ ಒಡಹುಟ್ಟಿದ ಅಕ್ಕನ ಹಾಗೆ ಆದರಿಸ್ತಾ ಮನೆಯಲ್ಲಿಟ್ಟುಕೊಂಡಿದ್ದ ಅದಿತಿಯನ್ನ ನೋಡಿ ವಸಂತಸೇನೆಗೆ ಅಶ್ಚರ್ಯ. ಅದು ಹೇಗಾದ್ರೂ ಒಬ್ಬ ಹೆಂಡತಿ ತನ್ನ ಗಂಡನ ಪ್ರೇಯಸೀನ ಸಹಿಸ್ಕೊಳ್ಳಬಲ್ಲಳು? 'ಕೋಪಾನಾ? ಖಂಡಿತಾ ಇಲ್ಲ. ಇನ್ನೂ ಹೇಳಬೇಕಂದ್ರೆ, ನೀವು ಅವರ ಬದುಕಿನಲ್ಲಿ ಬಂದಿರೋದ್ರಿಂದ ನನಗೆ ಮತ್ತಷ್ಟು ಒಳ್ಳೇದೇ ಆಗಿದೆ' ಅವಳು ತುಸುವೇ ನಾಚಿ ಕಿಲಗುಟ್ಟುತ್ತಾಳೆ. ವಸಂತಸೇನೆಯ ಹುಬ್ಬು ಮೇಲೇರುತ್ತದೆ. 'ಯಾಕೆ? ಹೇಗೆ ಹಾಗೆ!?' 'ಅವರು... ಈಗೀಗ ನನ್ನ ತುಂಬಾ ಪ್ರೀತಿಸ್ತಾರೆ. ಅವರ ವರಸೆಗಳೂ ಬದಲಾಗಿವೆ!' ಅದಿತಿ... Continue Reading →

ಪ್ರೀತಿಯೂ ಇಲ್ಲದ, ದ್ವೇಷಿಸಲಾಗದ….

'ಆಹ್! ಚೆಂದವಿದೆ!' ಅಂದುಕೊಂಡ ಹೊತ್ತಲ್ಲೆ ಕುರೂಪವೂ ಹುಟ್ಟಿಕೊಂಡಿರುತ್ತೆ. - ಹಾಗನ್ನುತ್ತೆ ತಾವೋ. 'ನಾ ನಿನ್ನ ಪ್ರೀತಿಸ್ತೀನಿ' ಅಂದುಕೊಳ್ಳುವಾಗಲೇ ಯಾವತ್ತಾದರೂ ಚಿಗುರಬಹುದಾದ ದ್ವೇಷದ ಬೀಜ ಬಿತ್ತಿರುತ್ತೀವಾ?- ಅಂದುಕೊಳ್ತೀನಿ ನಾನು. ~ ಎಷ್ಟು ನಿಜ ನೋಡಿ... ಯಾರೋ ದಾರಿಹೊಕನ ಮೇಲೆ ನಮಗ್ಯಾಕೆ ಪ್ರೀತಿ? ಆ ಕಾರಣಕ್ಕೇ ಅಲ್ಲಿ ದ್ವೇಷವೂ ಇರೋದಿಲ್ಲ. ಬಹುಶಃ ಜಗತ್ತನ್ನೆಲ್ಲ ಸಮವಾಗಿ ಕಂಡ ದೊಡ್ಡವರು ಎಲ್ಲರನ್ನೂ ಹೀಗೇ- ದಾರಿಹೋಕರ ಹಾಗೇ ಕಂಡಿರಬೇಕು... ಒಂದು ಇದೆ ಅಂದಾಗಲೇ ಮತ್ತೊಂದು ಹುಟ್ಟಿಕೊಳ್ಳೋದು. ಆ ಒಂದನೆಯದರ ಇರುವಿಕೆ ಸಾಬೀತಾಗಲೆಂದೇ ಮತ್ತೊಂದರ ಬರುವಿಕೆಗೆ... Continue Reading →

ಅವನ ಕಣ್ಣಲ್ಲಿ ನಗುವಿದೆ, ನನ್ನ ಕಾಲಲ್ಲಿ ಕಣ್ಣಿದೆ…

ನನ್ನ ಇತ್ತೀಚಿನ ಬರಹದ ಲಿಂಕ್ ಇಲ್ಲಿದೆ, ಐರಾವತಿ ಬ್ಲಾಗಿನಲ್ಲಿ.ನಿಮ್ಗೆ ಓದಿ ಅಂತ ರಿಕ್ವೆಸ್ಟ್ ಮಾಡ್ಕೊಳ್ಳೊದು ಯಾಕೆ ಗೊತ್ತಾ? ನಿಮ್ಮಗಳ ಪ್ರತಿಕ್ರಿಯೆಯಿಂದ ಮತ್ತಷ್ಟೊ ತಿದ್ದಿಕೊಳ್ಬಹುದು, ಬರಹದಲ್ಲಿ ಸುಧಾರಣೆ ಮಾಡ್ಕೊಳ್ಬಹುದು ಅಂತ. ನೀವ್ಯಾರೂ ಕ್ರಿಟಿಸೈಸ್ ಮಾಡೋದೇ ಇಲ್ಲ 😦 

Create a free website or blog at WordPress.com.

Up ↑