ಗೆಳೆಯ ರಾಘವ ಚಿನಿವಾರ್ ಬರೆದ ಇಂಗ್ಲಿಷ್ ನಾವೆಲ್ 'ಎ ಕಾಸ್ಮಿಕ್ ಜೋಕ್'. ಅದನ್ನ ಕನ್ನಡದಲ್ಲಿ ನನ್ನ ಗ್ರಹಿಕೆ- ಶೈಲಿಯಲ್ಲಿ ನಿರೂಪಣೆ ಮಾಡಿದರೆ ಹೇಗಿರುತ್ತೆ ಅನ್ನುವ ಪ್ರಯೋಗ ನಡೆದಿದೆ. ಹುಡುಗನೊಬ್ಬನ biographyಯನ್ನ ಮತ್ತೆ ನಿರೂಪಿಸುವಾಗ ಗೊತ್ತಾಗ್ತಿದೆ, ಈ ಸಹಜೀವಗಳ ಒಳತೋಟಿಗಳು ಹೇಗೆಲ್ಲ ಇರ್ತವಲ್ಲ ಅಂತ... ~ ಕಂತು 1 ~ ಒಂದೇ ಸಮ ಮಳೆ. ನಾನು ಕಾಯುತ್ತ ನಿಂತಿದೇನೆ ಅನ್ನುವುದಷ್ಟೆ ಗೊತ್ತು. ಜೀನ್ಸು ಟೀ ಷರ್ಟುಗಳ ಹದಿ ಹುಡುಗ ಹುಡುಗಿಯರು ನನ್ನ ನೋಡಿಕೊಂಡು ಕಿಸಕ್ಕನೆ ನಕ್ಕು ಹೋಗ್ತಿರುವುದು ಕಾಣುತ್ತಿದೆ.... Continue Reading →
ಮೇಲೇಳುತ್ತೇನೆ ನಾನು
ಚರಿತ್ರೆಯ ಪುಟಗಳಲ್ಲಿ ತುಂಬಿರಬಹುದು ನನ್ನ ಕಹಿ ಮಾತುಗಳಿಂದ, ತಿರುಚಿದ ಸುಳ್ಳುಗಳಿಂದ ಮಣ್ಣಂತೆ ಹೊಸಕಿ ತುಳಿಯಬಹುದು ನೀ ನನ್ನ, ದೂಳ ಕಣವಾಗಿಯಾದರೂನು ಮೇಲೇಳುತ್ತೇನೆ ನಾನು ನನ್ನ ಭಾವಭಂಗಿ ಬೇಸರವೇನು? ಮುಖ ಸೋತು ಕುಳಿತಿರುವೆ ಯಾಕೆ? ಕೋಣೆ ಮೂಲೆಯಲ್ಲಿ ನೂರು ತೈಲಬಾವಿಗಳನಿರಿಸಿಕೊಂಡಂಥ ಠೀವಿ ನನ್ನ ನಡೆಯಲಿದೆಯೆಂದೆ? ಸೂರ್ಯರಂತೆ, ಚಂದ್ರರಂತೆ ಕಡಲ ಮಹಾಪೂರದಂತೆ ಚಿಮ್ಮುಕ್ಕುವ ಭರವಸೆಯಂತೆ ಮೇಲೇಳುತ್ತೇನೆ ನಾನು ನಾನು ಮುರಿದು ಬೀಳುವುದ ನೋಡಬೇಕೆ? ತಲೆತಗ್ಗಿಸುವುದನ್ನು, ಕಣ್ ಕುಗ್ಗುವುದನ್ನು? ಎದೆಯ ಚೀರಾಟಕ್ಕೆ ಸೋತು ಕುಸಿದು ಬೀಳುವುದನ್ನು? ನನ್ನ ಗತ್ತು ನೋಯಿಸಿತೆ ನಿನ್ನ?... Continue Reading →
ನೆಚ್ಚಿನ ಕವಿತೆಯ ಮತ್ತೊಂದು ಅನುವಾದ…
ಅರೆ! ಖುಶಿಯಾಗ್ತಿದೆ... ಮತ್ತೊಬ್ಬರು ನೆರೂದನ ಕವಿತೆಯ ಅನುವಾದ ಮಾಡಿದ್ದಾರೆ, ಮತ್ತು ನಮ್ಮೊಂದಿಗೆ ಹಂಚಿಕೊಂಡಿದ್ದಾರೆ!! ‘ಕೂಗು’ ಬ್ಲಾಗಿನ ಚಂದಿನ ಕೂಡ ’Tonight I can Write the Saddest Lines ಕವಿತೆಯ ಅನುವಾದ ಮಾಡಿ ಪೋಸ್ಟ್ ಮಾಡಿದ್ದಾರೆಂದು ಇದೀಗ ಗೊತ್ತಾಯ್ತು. ಅನುವಾದ ನನಗೆ ಬಹಳ ಹಿಡಿಸಿತು. ಇದನ್ನ ನೀವೂ ಒಮ್ಮೆ ಓದಿ ನೋಡಲೇಬೇಕು... ಹೆಲೋ... ಮತ್ಯಾರಾದ್ರೂ ಇದ್ದಾರಾ? ದಯವಿಟ್ಟು ನಿಮ್ಮ ಅನುವಾದಗಳನ್ನು ನಮ್ಮೊಂದಿಗೆ ಹಂಚಿಕೊಳ್ಳಿ... ನಾನಂತೂ ಅಕ್ಕರೆಯಿಂದ ಕಾಯ್ತಿರ್ತೇನೆ...
