ಗಾಂಧಿ, ಅಪ್ಪ ಮತ್ತು ವ್ಯವಸ್ಥೆಯ ಮೇಲಿನ ದ್ವೇಷ!

“ನಾನು ಅಪ್ಪನನ್ನ ದ್ವೇಷಿಸ್ತೇನೆ. ಅದಕ್ಕೇ, ಅಂತಹ ಅಪ್ಪಂದಿರನ್ನ ಸೃಷ್ಟಿಸುವ ಈ ವ್ಯವಸ್ಥೆಯನ್ನೂ ದ್ವೇಷಿಸ್ತೇನೆ” ಅಂತ ಅಂವ ಪತ್ರ ಬರೆದಿಟ್ಟು ಹೋಗಿದ್ದ! “ಹಾಗೇನೂ ಇಲ್ಲ. ನಮ್ಮ ದೇಶಕ್ಕೆ ಸ್ವಾತಂತ್ರ್ಯ ತಂದುಕೊಟ್ಟಿದ್ದು ಗಾಂಧೀಜಿ ಏನಲ್ಲ. ತುಂಡು ಲಂಗೋಟಿ ಉಟ್ಟು ಉಪವಾಸ ಕುಂತ ಮಾತ್ರಕ್ಕೆ ಬಿಳಿಯರು ಓಡಿಹೋಗಿಬಿಟ್ರು ಅನ್ನೋದು ಮೂರ್ಖತನ!” ಅಣ್ಣ ವಾದಿಸ್ತಿದ್ದ. ಅಪ್ಪನ ಮುಖ ಸುಟ್ಟ ಬದನೆಕಾಯಿ ಆಗಿತ್ತು. ಮಾತಿಗೆ ಮಾತು ಬೆಳೀತು. “ಗಾಂಧೀಜಿ ಅಹಿಂಸಾವಾದಿಯಾಗಿದ್ರು, ಸಹನಾಮೂರ್ತಿಯಾಗಿದ್ರು…” ಅಂತ ಅಂವ ಕಿರುಚಾಡಿದ. ” ಅವರು ಯಾವತ್ತೂ ಯಾರನ್ನೂ ನೋಯಿಸಿದೋರಲ್ಲ. ಬಡ್ಡೀ... Continue Reading →

ವ್ಯವಸ್ಥೆಯ ತಲೆ ಕಡಿದರೆ ಆದರ್ಶ ಚಿಗುರುವುದಂತೆ!

"ಹಂಗಂದ್ರೆ ಹೆಂಗೇ ಅಮ್ಮಿ? ಸುಖಾಸುಮ್ನೆ ಯಾರೋ ಅಡ್ನಾಡಿಗಳು ಕೇಳಿದ್ರು ಅಂತ ಹಂಗೆಲ್ಲ ಮನೆ- ಜಮೀನು ಕೊಟ್ಬಿಡಕ್ಕಾಗ್ತದಾ? ಅದ್ಕೇಯ, ನಾ ನಿಮ್ಮಪ್ಪನ್ ಹತ್ರ ಬಡ್ಕಂಡಿದ್ದು. ಓದ್ಸೋ ಉಸಾಬ್ರಿ ಬೇಕಾಗಿಲ್ಲ, ಸುಮ್ನೆ ನಮ್ಮಣ್ಣನ ಮಗನ ಕೈಲಿ ತಾಳಿ ಕಟ್ಟಿಸ್ಬಿಡಿ ಅಂತ" ಅಮ್ಮ ವಟಗುಡ್ತಿದ್ದಳು. ಹಾಗೆ ಅವಳು ನನ್ನ ಮೇಲೆ ಹರಿಹಾಯೋದಕ್ಕೆ ಕಾರಣವೂ ಇತ್ತು... ಅದೇ ತಾನೆ ನಾನು ಕಾಲೇಜಿಂದ ಮನೇಗೆ ಹೊರಟಿದ್ದೆ. ಈಗ ಇಲ್ಲವಾಗಿರೋ ಆ ಇಬ್ಬರು ಹೆಣ್ಮಕ್ಕಳು ನನ್ನ ದಿಕ್ಕು ತಪ್ಪಿಸಿದ್ದರು. ತಿಳಿಯಾಗಿದ್ದ ನನ್ನ ಮನಸಿಗೆ ಆದರ್ಶಗಳ ಕಲ್ಲೆಸೆದು... Continue Reading →

Blog at WordPress.com.

Up ↑