ಭಾನುವಾರದ ಸಾಕ್ಷಿಯಾಗಿ ಹೇಳುತ್ತೇನೆ ಕೇಳು, ವಾರವೆಲ್ಲ ಹೀಗೇ ಇದ್ದರೆಷ್ಟು ಚೆಂದ! ಅಂದುಕೊಂಡಿದ್ದು ಸುಳ್ಳಲ್ಲ. ಥರ ಥರದ ತರಕಾರಿ, ಹೊಸ ರುಚಿಯ ಬುಕ್ಕು, ಮಜ ಮಜದ ಸೀರಿಯಲ್ಲು, ಸಂಜೆ ಶಾಪಿಂಗು ನೀ ಬರುವ ಹೊತ್ತಲ್ಲಿ (ಮಲ್ಲಿಗೆ ಮುಡಿಯಲಾರೆ ಅಲರ್ಜಿ!) ಹೊಸಿಲಲ್ಲಿ ನಿಂತು ನಾಚುವುದೆಷ್ಟು ಚೆಂದ! ಅಂದುಕೊಂಡಿದ್ದು ಸುಳ್ಳಲ್ಲ. ಫೋನಲ್ಲಿ ಗಂಟೆ ಗಂಟೆ ಹರಟುವುದು ನೀ ಬಿಲ್ಲು ನೋಡಿ ಬಯ್ಯುವುದು, ಹಗೂರ ಹೆಜ್ಜೆಯಲಿ ಬಂದು ಹ್ಯಾಂಗರಿನ ಷರಟಿಂದ ನೋಟು ಕದಿಯುವುದು, ಲೆಕ್ಕ ತಪ್ಪುವ ನಿನ್ನ ಕೆನ್ನೆಗೊಂದು ಚಿವುಟಿ ನೂರೊಂದು ಕಥೆ... Continue Reading →
