ಬೇಸಿಗೆ, ಚಳಿಗಾಲ, ಮತ್ತೀಗ ಮಳೆ

ಮೊದಲ ಸಾರ್ತಿ ವಿಮಾನ ಹತ್ತಿದ್ದೆ. ಅಣ್ಣ ನನ್ನ ಆತಂಕ, ಸಂಭ್ರಮವೆಲ್ಲ ನೋಡುತ್ತ ಖುಷಿಯಾಗಿದ್ದ. ನಾನು ಕಲ್ಕತ್ತಕ್ಕೆ ಹೊರಟಿದ್ದೂ ಅದೇ ಮೊದಲ ಸಾರ್ತಿ. ಬಂಗಾಳಿಗಳೆಲ್ಲರ ಕಣ್ಣು ದೊಡ್ಡದೊಡ್ಡ ಇರೋದಿಲ್ಲ. ನೂರಕ್ಕೆ ಐವತ್ತು ಚಿಕ್ಕ ಕಣ್ಣಿನವರೂ ಇದ್ದಾರಲ್ಲಿ. ನನ್ನ ಜಪಾನೀ ಕಣ್ಣುಗಳು ನನ್ನನ್ನ ಒಡಿಶಾದವಳೋ ಅಸೋಮ್ ಕಡೆಯವಳೋ (ಒರಿಸ್ಸಾ- ಅಸ್ಸಾಮ್‌ಗಳನ್ನು ಹಂಗನ್ನಬೇಕಂತೆ) ಅನ್ನುವಂತೆ ಮಾಡಿದ್ದವು. ಸಾಲದ್ದಕ್ಕೆ ನಂಗೆ ಚಿಕ್ಕವಳಿರುವಾಗಿಂದ್ಲೂ ಈಶಾನ್ಯ ರಾಜ್ಯಗಳ ಬಗ್ಗೆ ಮೋಹ. ಭಾನುವಾರಗಳ ಬಂಗಾಳಿ, ಒರಿಯಾ, ಅಸ್ಸಾಮಿ, ಮಣಿಪುರಿ ಪ್ರಾದೇಶಿಕ ಭಾಷಾ ಫಿಲಮ್‌ಗಳನ್ನು ತಪ್ಪಿಸದೆ ನೋಡುತ್ತ ಬೆಳೆದವಳು... Continue Reading →

ತುಂಬಾ ಸಿಹಿ, ಸ್ವಲ್ಪ ಕಹಿ- ನನ್ನ ಪ್ರವಾಸ ಕಥನ!

ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು. ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ.... ಆಆಆಆಆ.......... ಖ್ಷೀ....... ಉಹ್... ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು!                                   ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು... Continue Reading →

Blog at WordPress.com.

Up ↑