ಹೌದಲ್ಲ? ನಾನೂ ನೆರೂದನ ಕವಿತೆ ಅನುವಾದ ಮಾಡಿದೀನಿ ಅಂತ ಹೇಳ್ಕೊಂಡು ಅದನ್ನ ಹಾಕದೆ ಹೋದರೆ ತಲೆತಪ್ಪಿಸ್ಕೊಂಡ ಹಾಗೆ ಆಗುತ್ತೇನೋ? ಅದಕ್ಕೇ, ಸಂಕೋಚದಿಂದಲೇ ಇಲ್ಲಿ ಹಾಕ್ತಿದೇನೆ. ಈಗಾಗಲೇ ಟೀನಾ ಮತ್ತು ಮಹೇಶ್ ಅನುವಾದಗಳನ್ನ ಓದಿದೀರಲ್ಲ? ನಿಮ್ಮಲ್ಲೂ ಯಾರಾದರೂ ಇದೇ ಕವಿತೆಯನ್ನ ಅನುವಾದಿಸಿದ್ದರೆ ದಯವಿಟ್ಟು ನಮ್ಮ ಜೊತೆ ಹಂಚಿಕೊಳ್ಳಿ. ನಿಸಾರರು ಮಾಡಿರುವರೆಂದು ಕೇಳಿದ್ದೇನೆ. ಯಾರಲ್ಲಾದರೂ ಅದರ ಪ್ರತಿ ಇದ್ದರೆ ಪೋಸ್ಟ್ ಮಾಡಬೇಕೆಂದು ವಿನಂತಿ. ಇಂದಿನಿರುಳು ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ... ಇಂದಿನಿರುಳು ನಾ ಬರೆಯಲಿರುವೆ ಅತಿ ವಿಷಾದದ ಸಾಲುಗಳ.... Continue Reading →
