ಬಳೆ ಇಲ್ಲದ, ಸರವಿಲ್ಲದ, ಹಣೆಗಿಲ್ಲದ, ಕ್ರಿಶ್ಚಿಯನ್ನರ ಥರವೋ ಮುಸಲ್ಮಾನರ ಥರವೋ ವಿಧವೆಯ ಥರವೋ ಕಾಣುವ ಹೆಂಗಸರೆಲ್ಲ ಸೂತಕದವರು. ಅವರು ಕೊನೆಪಕ್ಷ ಕಾಮವನ್ನು ಪ್ರಚೋದಿಸಲಿಕ್ಕೂ ನಾಲಾಯಖ್ಖಾದವರು. ಅವರು ಹೆಚ್ಚೂಕಡಿಮೆ ಹೆಂಗಸು ಜಾತಿಗಿಂತ ಹೊರಗೆ. ಅವರೆಲ್ಲ ಸ್ತ್ರೀವಾದಿಗಳು. ಶೋಷಣೆಯ ಪುಕಾರುಗಳನ್ನು ಸುಖಾಸುಮ್ಮನೆ ಹಬ್ಬಿಸಿ ಗಂಡಸಿನ ಬದುಕನ್ನು ಮೂರಾಬಟ್ಟೆ ಮಾಡಲೆಂದೇ ಹುಟ್ಟಿಕೊಂಡವರು. ನಿಮಗ್ಗೊತ್ತಾ? ಅವರು ಗಂಡನ್ನ, ಗಂಡಸರನ್ನ ಏಕವಚನದಲ್ಲೆ ಕರೀತಾರೆ! ಇದು ಸಂಸ್ಕೃತಿಗೆ ಹೊಂದುತ್ತದೆಯೇ? ಇವತ್ತಿನ ಭಾರತದ ಸಂಸಾರಗಳು ಇಂಥ ಮಹಿಳಾವಾದಿ ಹೆಂಗಸರಿಂದಲೇ 'ಪುಡಿಪುಡಿ' ಆಗಿಹೋಗ್ತಿದೆ.... ಇಂಥದೊಂದು ಪರಮಸಂಕಟದಿಂದ ಭೈರಪ್ಪನವರು ಬರೆದ... Continue Reading →
