‘ಜಂಭಗಾತಿ ಹುಡುಗಿ’ಯನ್ನ ಎದುರಿಟ್ಟುಕೊಂಡು ಮಾತನಾಡುತ್ತಿದ್ದಾಗ, ``ಹುಟ್ಟಿದಾಗಿನಿಂದಲೆ ಅವಳ ಆತ್ಮವಿಶ್ವಾಸವನ್ನು ಕೊಲ್ಲುವ ಎಲ್ಲ ಪ್ರಯತ್ನಗಳನ್ನು ಸಮಾಜ ಅದರಲ್ಲೂ ಹೆಚ್ಚಾಗಿ ಹಿರಿಯ ಹೆಂಗಸರೇ ಮಾಡುತ್ತಾರೆ" . ಇದಕ್ಕೆ ಕಾರಣವೇನಿರಬಹುದು? ಎಂದು ಸುಮಾ ಕೇಳಿಕೊಂಡ ಪ್ರಶ್ನೆಗೆ ‘ವಿ’ ಕೂಡಾ ದನಿ ಸೇರಿಸಿದ್ದಾರೆ. ಈ ಪ್ರಶ್ನೆಗೆ ಮೊದಲಿಂದಲೂ ನನಗೆ ತೋಚಿದ್ದ ಸರಳ ಉತ್ತರವನ್ನ ಈ ಕೆಳಗೆ ಹೇಳಿದೇನೆ. ಆದರೆ, ಹೆಣ್ಣು ಕೂಡ ಗಂಡಿನಂತೆ ಮಾನವ ಕುಲಕ್ಕೆ ಸೇರಿದ ಜೀವಿಯಾದ್ರಿಂದ, ಆಕೆಗೂ ಮಾನವ ಸಹಜವಾದ ಸ್ಪರ್ಧಾ ಮನೋಭಾವ, ಅರಿಷಡ್ವರ್ಗಾದಿ ಮನಸ್ಥಿತಿಗಳು ಇರುತ್ತವೆ ಅನ್ನುವುದನ್ನು ನಾವು ನೆನಪಿಟ್ಟುಕೊಳ್ಳಬೇಕು.... Continue Reading →
ಚರ್ಚೆ- ಕೊನೆಯ ಕಂತು
‘ಶ್ರೀ ರಾಮ ಸೇನೆ’ ಮಾಡಿದ್ದು ತಪ್ಪು. ಅದು ಬಹಿರಂಗವಾಗಿ ಕ್ಷಮೆ ಕೇಳಬೇಕು ಮತ್ತು ಮುಂದೆ ಈ ರೀತಿಯ ದುರ್ನಡತೆಗೆ ಅವಕಾಶ ಕೊಡುವುದಿಲ್ಲವೆಂದು ಭರವಸೆ ನೀಡಬೇಕು. ಇದು ನನ್ನ ಒತ್ತಾಯ. ಬಿಜೆಪಿಗಾಗಲೀ ಅದರ ಸಚಿವರಿಗಾಗಲೀ ‘ಪಬ್ ಸಂಸ್ಕೃತಿ ವಿರೋಧಿಸುತ್ತೇವೆ’ ಎಂದೆಲ್ಲ ಹೇಳಿಕೆ ನೀಡುವ ನೈತಿಕತೆ ಎಷ್ಟು ಮಾತ್ರವೂ ಇಲ್ಲ. ಚುನಾವಣೆಗಳಲ್ಲಿ, ರಾಜಕಾರನದ ‘ಆಪರೇಶನ್ನು’ಗಳಲ್ಲಿ, ಖಾಸಗಿ ಮೀಟಿಂಗುಗಳಲ್ಲಿ, ‘ರೆಸಾರ್ಟ್ ರಾಜಕಾರಣ’ದ ಸಂದರ್ಭಗಳಲ್ಲಿ ನೆನಪಾಗದ ಸಾಂಸ್ಕೃತಿಕ ಕಾಳಜಿ ಈಗ ಜಾಗೃತಗೊಂಡರೆ ಅದಕ್ಕೆ ಮೌಲ್ಯವಿಲ್ಲ. ಇನ್ನು ಶ್ರೀ ರಾಮ ಸೇನೆಯವರು... ಇವರಲ್ಲಿ ನನ್ನ ವಿನಂತಿ,... Continue Reading →
ಪುಂಡಾಟಿಕೆ ಬಗ್ಗೆ ಮಾತಾಡಿ ಅಂದ್ರೆ, ‘ನೀವು ಕುಡೀತೀರಾ?’ ಕೇಳ್ತಾರೆ!
ಪ್ರತಿಕ್ರಿಯೆ ಅಂತ ಬರೆದಿದ್ದನ್ನೆಲ್ಲ ಚರ್ಚೆ ಅಂತ ಹಾಕಿಬಿಡೋದು ಸರಿಯಾ? ಅಂತ ಕೇಳಿದ್ದಾರೆ ವಿಕಾಸ್. ಯಾವುದೇ ಒಂದು ವಿಷಯಕ್ಕೆ ವಿಭಿನ್ನ ಅಥವಾ ಪೂರಕ ಪ್ರತಿಕ್ರಿಯೆಗಳು ಬರತೊಡಗಿದಾಗ ಅದು ಚರ್ಚೆಯ ರೂಪ ಪಡಕೊಳ್ಳುತ್ತದೆ ಅನ್ನೋದು ನನ್ನ ಅನಿಸಿಕೆ. ಅದು ಸರಿಯೇ ಅನ್ನುವುದನ್ನ ತಿಳಿದವರು ಹೇಳಬೇಕಷ್ಟೆ. ಮತ್ತಷ್ಟು ಚಿಂತನಾರ್ಹ ಕಮೆಂಟುಗಳೊಂದಿಗೆ ಈ ಚರ್ಚೆ ಮುಂದುವರೆದಿದೆ. ಜೊತೆಗೆ, ಸಂಕೇತ್ ಬರೆದಿರುವ ‘ಸಂರಕ್ಷಕನೆ’ ಎನ್ನುವ ಸ್ವಾರಸ್ಯಕರ- ಅರ್ಥಪೂರ್ಣ ಲೇಖನದ ಲಿಂಕ್ ಮತ್ತು ಮೌನ ಕಣಿವೆಯ ಒಂದು ಲೇಖನದ ಲಿಂಕ್ ಕೊಟ್ಟಿರುವೆ. ಮತ್ತೊಂದು ಮಾತು... ಸಹಬ್ಲಾಗಿಗರೊಬ್ಬರು... Continue Reading →
‘ಶ್ರೀ ರಾಮ ಸೇನೆಯ ಕಪಿ ಚೇಷ್ಟೆ’- ಮುಂದುವರಿದ ಚರ್ಚೆ…
ಶ್ರೀ ರಾಮ ಸೇನೆಯ ‘ಕಪಿ ಚೇಷ್ಟೆ’ ಕುರಿತ ಚರ್ಚೆಯನ್ನು ಗೆಳೆಯರು ಮುಂದುವರೆಸಿದ್ದಾರೆ. ಇಂಥ ಸಂಗತಿಗಳನ್ನು ಈ ಹೊತ್ತಲ್ಲೇ ವಿರೋಧಿಸದೆ ಉಳಿದರೆ ಪರಿಸ್ಥಿತಿ ಕೈ ಮೀರಿದ ನಂತರ ಏನೂ ಮಾಡಲು ಸಾಧ್ಯವಾಗುವುದಿಲ್ಲ. ಆಗ ಸುಮ್ಮನೆ ಉಳಿದ ದೋಷ ನಮ್ಮದೇ ಆಗುವುದು. ಮಂಗಳೂರಿನಲ್ಲಿ ಬಂದ್ ಗೆ ಕರೆ ನೀಡಲಾಗಿದೆ ಎಂದು ಕೇಳಿಪಟ್ಟೆ. ಹಾಗೆಯೇ ಕೆಲವು ಮಂದಿ ಬಂದ್ ಗೆ ಸಹಕರಿಸದಂತೆ ಚಿತಾವಣೆ ನಡೆಸುತ್ತಿರುವುದೂ ತಿಳಿದಿದೆ. ಇಲ್ಲಿಯೂ ಕೂಡ ರಾಜಕಾರಣವನ್ನು ಎಳೆದು ತರುತ್ತಿರುವ ಮನಸ್ಸುಗಳ ಅಸ್ವಸ್ಥತೆಯ ಬಗ್ಗೆ ಅನುಕಂಪ ಮೂಡುತ್ತಿದೆ.... Continue Reading →
ಮೊದಲು, ಬಣ್ಣದ ಕನ್ನಡಕಗಳನ್ನು ಕಳಚಿಡಿ
ಕ್ಷಮಿಸಿ. ಮುಂಬಯ್ ನರಮೇಧಕ್ಕೆ ಸಂಬಂಧಿಸಿದಂತೆ ನನ್ನ ಕೊನೆಯ ಪ್ರತಿಕ್ರಿಯೆ ಎಂದು ಹಿಂದಿನ ಪೋಸ್ಟಿನಲ್ಲಿ ಹೇಳಿಕೊಂಡಿದ್ದೆ. ಆದರೆ ಸಾಧ್ಯವಾಗುತ್ತಿಲ್ಲ. ಯಾವತ್ತೂ ಭಯೋತ್ಪಾದಕರ ಸಂಗತಿ ಹೀಗೆ ವಿಷಯಾಂತರಗೊಳ್ಳುತ್ತ ಸಾಗಿ, ನಮ್ಮ ನಮ್ಮ ನಡುವಿನ ಗಲಭೆಯಾಗಿ ಉಳಿದು ಅಸಲು ಸಂಗತಿ ಡೈಲ್ಯೂಟ್ ಆಗಿಹೋಗುತ್ತದೆ. ಇಲ್ಲಿ, ಪೀರ್ ಭಾಷಾ ಅವರ ಪ್ರತಿಕ್ರಿಯೆ ಇದೆ. ಅವನ್ನು ಯಥಾವತ್ತಾಗಿ ಹಾಕಿದ್ದೇನೆ. ಜೊತೆಗೆ ನನ್ನ ಪ್ರತ್ಯುತ್ತರವನ್ನೂ. ಗಾಳಿಯ ಜತೆ ಗುದ್ದಾಡಿ ಪ್ರಯೋಜನವಿಲ್ಲವೆಂದು ಈಗಾಗಲೇ ಅರಿವಾಗಿದ್ದರೂ ಮತ್ತೊಂದು ಹುಂಬ ಪ್ರಯತ್ನ ಮಾಡುತ್ತ, ಈ ಲೇಖನ ಸರಣಿಯನ್ನು ಇಲ್ಲಿಗೆ ಮುಗಿಸುತ್ತಿದ್ದೇನೆ.... Continue Reading →
ನಾಲ್ಕು ಮಾತು- ನಾಲ್ಕು ಮಂದಿಯ ಪ್ರತಿಕ್ರಿಯೆ
ಈ ಲೇಖನದಲ್ಲಿ ಹೇಳಿದ್ದೆ. ನನಗೆ ಚರ್ಚೆ ಬೇಕು, ಸರಿ ತಪ್ಪು ತಿಳಿಯಬೇಕು ಅಂತೆಲ್ಲಾ. ಅದಕ್ಕೆ ಸರಿಯಾಗಿ, ನನ್ಒಂದು ಕಥೆ, ನಾಲ್ಕು ಮಾತಿಗೆ ನಾಲ್ಕು ಮಂದಿ ಪ್ರತಿಕ್ರಿಯಿಸಿದ್ದಾರೆ. ಜೊತೆಗೆ, ನನ್ನ ಉತ್ತರಗಳೂ ಇವೆ. ಇದರ ಮೂಲಕ ವಿಷಯ ವ್ಯಾಪ್ತಿ ದೊಡ್ಡದಾಗಿರುವುದರಿಂದ ಅದನ್ನು ಪ್ರತ್ಯೇಕವಾಗಿ ಹಾಕ್ತಿದೇನೆ. ಆಸಕ್ತಿಯಿದ್ದವರು ಮುಂದುವರೆಸಬಹುದು. ಚೇತನಾ, ವಿಶ್ವಮಾನವರ ಬಗ್ಗೆ ಯಾಕ್ರಿ ತಲೆ ಕೆಡಿಸ್ಕೋತೀರಾ?? ಗಾಂಧೀಜಿಯ ರಾಮರಾಜ್ಯ,ಕುವೆಂಪುರವ ವಿಶ್ವಮಾನವ ಕಲ್ಪನೆ ಎಲ್ಲ ಪುಸ್ತಕದಲ್ಲಿದ್ರೇನೆ ಚೆನ್ನ. ಕಾನೂನು ಕೈಗೆತ್ತಿದರ ಬಗ್ಗೆ ಆಕ್ಶೇಪ ಎತ್ತೋರು ತುಂಬಾ ಜನ ಸಿಗ್ತಾರೆ. ಕೊಲೆ... Continue Reading →
‘ಬಸ್ಸಿನ ಹೆಂಗಸು’- ಒಂದು ಗಟ್ಟಿ ಚರ್ಚೆ
ನಿಮಗೆ ಗೊತ್ತು. ‘ಬಸ್ಸಿನ ಹೆಂಗಸು ಮತ್ತು ಬಿಳಿ ಬಿಳೀ ಸೀರೆಯ ಹುಡುಗಿಯರು’ ಲೇಖನದ ಪ್ರತಿಕ್ರಿಯೆಗಳು ಚರ್ಚೆಯಾಗಿ, ‘ಪೊರಕೆ ಎಲ್ಲಿದೆ?- ಮತ್ತೊಂದು ಚರ್ಚೆ’ ಎಂಬ ಶಿರೋನಾಮೆಯೊಂದಿಗೆ ಮುಂದುವರೆದಿದ್ದು. ಅಲ್ಲಿಂದಲೂ ಮುಂದುವರೆದು ಇದೀಗ ಚರ್ಚೆ ಬಹಳ ಸತ್ವಶಾಲಿಯಾಗಿ, ಗಟ್ಟಿಯಾಗಿ ಬೆಳೆದುನಿಂತಿದೆ ಸುಪ್ರೀತ್, ಹೇಮ ಶ್ರೀ, ಶ್ರೀಪ್ರಿಯೆ, ಸಂದೀಪ್ ಮತ್ತು ವಿಕೆ ಅವರು ಸಾಕಷ್ಟು ಸಂಗತಿಗಳನ್ನೊಳಗೊಂಡ ಸುದೀರ್ಘ ಪ್ರತಿಕ್ರಿಯೆಗಳನ್ನು ಬರೆದು ಚರ್ಚೆ ಮುಂದುವರೆಸಿದ್ದಾರೆ. ಅವೆಲ್ಲವನ್ನೂ ನಿಮ್ಮ ಅವಗಾಹನೆಗಾಗಿ ಪ್ರತ್ಯೇಕ ಪೋಸ್ಟ್ ಮೂಲಕ ಪೋಸ್ಟ್ ಮಾಡಿರುವೆ. ನಿಮ್ಮ ಪ್ರತಿಕ್ರಿಯೆಗೆ, ಪಾಲ್ಗೊಳ್ಳುವಿಕೆಗೆ ನಾನು ಆಭಾರಿ.... Continue Reading →
ಪೊರಕೆ ಎಲ್ಲಿದೆ!? – ಮತ್ತೊಂದು ಚರ್ಚೆ
‘ಬಸ್ಸಿನ ಹೆಂಗಸು ಮತ್ತು ಬಿಳಿಬಿಳೀ ಸೀರೆಯ ಹುಡುಗಿಯರು’ ಲೇಖನದ ವಸ್ತು ನಿಜ ಘಟನೆಯನ್ನ ಆಧರಿಸಿದ್ದು. ಇಲ್ಲಿರುವ ಕೊನೆಯ ಪ್ರಶ್ನೆ, ಪ್ರಾಮಾಣಿಕವಾಗಿ ನನ್ನ ಅಂತರಾಳದ್ದು. ಇದು ನನ್ನನ್ನ ಕಾಡುತ್ತಿರುವುದಕ್ಕೆ ಕಾರಣ ಬಹಳವಿದೆ. ಭಾಷಣ, ಬರಹ ಅಂತೆಲ್ಲ ಶುಚಿಶುಚಿಯ ಚಟುವಟಿಕೆಯಲ್ಲಿ ಮುಳುಗಿಹೋಗುವ ನನಗೆ ಏನೂ ಮಡಲಾರದವಳಾಗಿರುವೆನಲ್ಲ ಎಂಬ ನಾಚಿಕೆ ಕಾಡಿ ಅದನ್ನ ಹೇಳಿಕೊಂಡಾದರೂ ಹಗುರಾಗುವ ಎಂದಿದನ್ನ ಬರೆದೆ. ಇದನ್ನ ಬರೆದಿದ್ದು ಮೇ ತಿಂಗಳಿನಲ್ಲಿ. ಈ ಲೇಖನ ಕೆಂಡ ಸಂಪಿಗೆಯಲ್ಲಿ ಬಂದು, ಇದೀಗ ನಿಮ್ಮೊಡನೆ ಚರ್ಚಿಸುವ ಸಲುವಾಗಿಯೆ ನನ್ನ ಬ್ಲಾಗಿಗೆ ಹಾಕಿಕೊಂಡೆ.... Continue Reading →
