ನೀ ಹೇಗೆ ಒಂಟಿಯಾಗಿರುವೆ ಅಲ್ಲಿ!? ನೀ ಹೇಗೆ ಒಂಟಿಯಾಗಿರುವೆ ಅಲ್ಲಿ? ಇಲ್ಲಿ, ಒಂದೆ ಸಮನೆ ಇಬ್ಬನಿ ಸುರಿಯುತ್ತಿದೆ ನನ್ನೆದೆಗೆ ಭಗ್ಗೆನ್ನಲು ವಿರಹದುರಿ ನೀನಿಲ್ಲದೆ ಈ ಬಾರಿ ವಿಪರೀತ ಚಳಿ ರಗ್ಗು- ರಝಾಯಿಗಳ ಕೊಡವುತ್ತಿದ್ದೇನೆ, ಬಿಸಿಯುಸಿರನಷ್ಟು ಕಳಿಸಿಕೊಡು ಬೇಗ! ಹೊರಗೆ ಯಾರೋ ಇಬ್ಬರು ಪ್ರೇಮಿಗಳ ಜಗಳ. ಹೌದು ಬಿಡು, ಹುಡುಗಿಯರ ಕೂಗಾಟವೆ ಹೆಚ್ಚು! ನೀ ಛೇಡಿಸಿದ ನೆನಪು. ಊಟದ ಟೇಬಲ್ಲಿನ ಮೇಲೆ ಅರ್ಧ ಬರೆದಿಟ್ಟ ಕವಿತೆ, ಮಂಚದ ಮೇಲೆ ಕುಂತು ಕುಡಿದಿಟ್ಟ ಕಾಫಿ ಬಟ್ಟಲು ಹಾಗೇ ಇವೆ ಮನೆಯಲ್ಲಿ... Continue Reading →
