ಆ ನೀಲಿ ಹೊದಿಕೆಯನ್ನ ಚೂರೇ ಬಿಚ್ಚಿ, ಒಳಗಿನ ಬಂಗಾರದಪ್ಪುಗೆಯನ್ನ ಹಗೂರ ಬೇರ್ಪಡಿಸುತ್ತ, ಒಳಗಿನ ಲಘುಕಂದು ಬಣ್ಣದ ಚೌಕಗಳ ಘಮವನ್ನ ಹಾಗೇ ಒಮ್ಮೆ ಒಳಗೆಳೆದುಕೊಂಡು, ಅದರ ರುಚಿಗೆ ನನ್ನನ್ನೇ ಕೊಟ್ಟುಕೊಳ್ಳುತ್ತ ಚಾಕಲೇಟು ಕಡಿಯುವುದಂದರೆ ನನಗೆ ಸ್ವರ್ಗಸುಖ. ಮತ್ತು ಈ ಸ್ವರ್ಗ ನಿತ್ಯವೂ ನನ್ನ ಅಂಗೈಲಿ. ಈ ಕಾರಣಕ್ಕೇ ಬಹುಶಃ ನನ್ನ ಮುಖ ಹುಣ್ಣಿಮೆ ಚಂದ್ರನ ಹಾಗೆ ಕಲೆಮಯವೂ ಕುಳಿಪೂರ್ಣವೂ ಆಗಿರುವುದು. ಚಿಂತಿಯೇನಿಲ್ಲ. ಅಷ್ಟಕ್ಕೆಲ್ಲ ಚಾಕಲೇಟು ತಿನ್ನುವ ಸುಖವನ್ನ ಬಿಟ್ಟುಕೊಡಲಾಗುತ್ತೆಯೇ? ಚಾಕಲೇಟು ಬಿಟ್ಟರೆ, ಆ ಸುಖವನ್ನ ಕೊಡೋದು ಕಾಫಿ ಮಾತ್ರ.... Continue Reading →
