ಅದ್ಯಾವ ಘಳಿಗೇಲಿ ಬ್ಲಾಗೋದುಗ ಮಹಾಶಯರೊಬ್ಬರು ‘ಆಗು ನೀ ಅನಿಕೇತನ’ ಅಂತ ಹಾರೈಸಿದ್ರೋ, ಕಾಕತಾಳೀಯವೆನ್ನುವ ಹಾಗೆ ಮೇಲಿನ ಮನೆ ಆಂಟಿ ಕೂಡ ಬೆಳಗಾಗೆದ್ದು “ಪೂಜೀಸಾಲೆನ್ನಿಂದ ವರವೇ ಶ್ರೀ ಗವ್ರೀ ನಿನ್ನಯ ಚರಣಗಳಾ... ಓ ನನ್ನ ಚೇತನಾ, ಆಗು ನೀ ಅನಿಕೇತನಾ... ಹೂವ್ವೂ... ಚೆಲುವೆಲ್ಲಾ ನಂದೆಂದಿತೂ..." ಅಂತ ರಿಮಿಕ್ಸ್ ಹಾಡಲು ಶುರುವಿಟ್ಟರು. ದಿನಾಬೆಳಗೂ ಅವರ ಆರ್ಕೆಸ್ಟ್ರ್‍ಆ ಕೇಳೀ ಕೇಳೀ, ಅದಿಲ್ಲದೆ ಊಟ ನಿದ್ದೆ ಸೇರದೆ ಪುಷ್ಪಕವಿಮಾನದ ಕಮಲ್ ಹಾಸನ್ ಸ್ಥಿತಿ ತಲುಪಿದ್ದ ನನಗೆ ಈ ... ಅನಿಕೇತನ... ಎಲ್ಲಿಂದ ಬಂದು... Continue Reading →
ಚೇತನಕ್ಕೆ ಒಂದು ವರ್ಷ!?
ಒಂದು ವರ್ಷ! ಅದೆನೂ ಹೆಚ್ಚಲ್ಲ ಬಿಡಿ. ಕಳೆದ ಎರಡು- ಮೂರು ವರ್ಷಗಳಿಂದ ಬ್ಲಾಗಿಂಗ್ ಮಾಡಿಕೊಂಡು ಒಮ್ಮೆಯೂ ಬೋರು ಎಂದು ಕೈ ಚೆಲ್ಲದೆ, ಮುನಿದುಕೊಳ್ಳದೆ ಕ್ರಿಯಾಶೀಲರಾಗಿರೋರು ಸಾಕಷ್ಟಿದ್ದಾರೆ. ಆದರೂ... ನನ್ನ ‘.... ಚೇತನ’ಕ್ಕೆ ಒಂದು ತುಂಬಿದ್ದೊಂದು ವಿಶೇಷ ಸಂಗತಿಯೇ! ಯಾಕೆ ಗೊತ್ತಾ? ನಾನು ಬ್ಲಾಗು ಶುರು ಮಾಡಿದ್ದು ಇವತ್ತಿಗೆ (೨೮ ಜುಲೈ) ಸರಿಯಾಗಿ ಒಂದು ವರ್ಷದ ಹಿಂದೆ. ಆದರೆ ರೆಗ್ಯುಲರ್ರಾಗಿ ಬರೀಲಿಕ್ಕೆ ಶುರು ಮಾಡಿದ್ದು ಅಕ್ಟೋಬರಿನಲ್ಲಿ. ಇನ್ನೂ ಮಜದ ವಿಷಯವೆಂದರೆ, ಮೊದಲ ಬಾರಿಗೆ ‘ಮುಚ್ಚುವೆ ಬ್ಲಾಗಿಲ’ ಅಂದಿದ್ದು ಎರಡೇ... Continue Reading →
