ಹೌದು. ತಮ್ಮೆಲ್ಲ ಸ್ವಾರ್ಥ, ಸ್ವಂತದ ತಲೆಬಿಸಿಗಳ ನಡುವೆಯೂ ನೈಸರ್ಗಿಕ ದುರಂತ, ಯುದ್ಧವೇ ಮೊದಲದ ಸಂದರ್ಭಗಳಲ್ಲಿ ಸಹಾಯಕ್ಕೆ ಧಾವಿಸುವ ಮೂಲಕ ನಮ್ಮ ಜನ ತಮ್ಮ ನೈಜ ಸಹೃದಯತೆಯನ್ನು ತೋರಿಸಿಕೊಟ್ಟಿದಾರೆ. ಸುನಾಮಿ ಬಂದೆರಗಿದಾಗ ಇತರ ದೇಶಗಲ ಸಹಾಯವನ್ನು ತಿರಸ್ಕರಿಸುವಷ್ಟು ಮಟ್ಟಿಗೆ ನಮ್ಮವರ ಸಹಾಯ ಕಾಣಿಕಎಗಳು ಹರಿದು ಬಂದಿತ್ತು, ಥೇಟ್ ಸುನಾಮಿಯ ಹಾಗೇ! ಜೊತೆಗೆ, ಅದನೆಲ್ಲ ಹಂಚುವ ಕೈಗಳು ಶುದ್ಧವಾಗಿರಬೇಕೆನ್ನುವುದಷ್ಟೆ ಗಮನಿಸಬೇಕಾದ ಸಂಗತಿ. ಅಂತಹ ಶುದ್ಧ ಹಸ್ತರಿಗೂ ಕಡಿಮೆಯೇನಿಲ್ಲ. ನಾವು ಅಷ್ಟೆಲ್ಲ ನಿರಾಶಾವಾದಿಗಳಾಗಬೇಕಿಲ್ಲ ಅಲ್ಲವೆ? ಇರಲಿ. ಈಗ ಹೇಳಹೊರಟಿರೋದು ಉತ್ತರ ಕರ್ನಾಟಕದಲ್ಲಿ... Continue Reading →
ಸೆಂಟ್ರಲ್ ಜೈಲಲ್ಲಿ ನಮ್ಮ ಯುಗಾದಿ ಸೆಲೆಬ್ರೇಶನ್ನು…
ಮಾರ್ಚ್ ೨೭ರ ಯುಗಾದಿಯ ದಿನ ಪರಪ್ಪನ ಅಗ್ರಹಾರದ ಕೇಂದ್ರ ಕಾರಾಗೃಹದಲ್ಲಿ ವಿಶೇಷವೇನೂ ಇರಲಿಲ್ಲ. ಸಿಬ್ಬಂದಿಗಳೊಂದಷ್ಟು ಜನ ಯೂನಿಫಾರಮ್ಮಲ್ಲದೆ ಸಾಮಾನ್ಯ ಉಡುಗೆಯಲ್ಲಿ ಕರ್ತವ್ಯಕ್ಕೆ ಹಾಜರಾಗಿದ್ದು, ಅವತ್ತು ಹಬ್ಬ ಎಂಬುದರ ಸಾಕ್ಷಿಯಾಗಿತ್ತಷ್ಟೆ. ಯುಗಾದಿಯ ದಿನವನ್ನ ಕಾರಾಗೃಹದಲ್ಲಿರುವ ಸಹೋದರರ ಜೊತೆ ಕಳೆಯಬೇಕು, ದೇಶ ಪ್ರೇಮ ಉದ್ದೀಪಿಸುವ ಗೀತ ಗಾಯನ ನಡೆಸಿಕೊಡಬೇಕು ಎಂದೆಲ್ಲ ಉಮ್ಮೇದಿಯೊಂದಿಗೆ ಹೋಗಿದ್ದ ಜಾಗೋಭಾರತ್ ತಂಡಕ್ಕೆ, ಅಲ್ಲಿ ಎದುರಾದ ವಾತಾವರಣ ಅಷ್ಟೇನೂ ಪ್ರೋತ್ಸಾಹದಾಯಕವಾಗಿರಲಿಲ್ಲ. “ನೋಡೋಣ, ಎಷ್ಟು ಸಾಧ್ಯವೋ ಅಷ್ಟು ಹಾಡಿ ಬರೋಣ. ನಮ್ಮ ಸಂಕಲ್ಪ ನಾವು ನೆರವೇರಿಸುವುದಷ್ಟೆ ನಮ್ಮ ಕೆಲಸ.... Continue Reading →
