ಮೊನ್ನೆ ನಾನು, ನನ್ನ ತಮ್ಮ ನನ್ನೂರು ತೀರ್ಥಳ್ಳಿಗೆ ಹೋಗಿದ್ವಿ. ಬರೋಬ್ಬರಿ ಒಂದೂವರೆ ದಶಕದ ನಂತರ ನಾವಿಬ್ಬರೂ ಹಾಗೆ ನಮ್ಮೂರ ರೋಡಲ್ಲಿ ಒಟ್ಟಾಗಿ ಓಡಾಡಿದ್ದು! ಅದರದೊಂದು ಖುಷಿ ಖುಷಿ ಸಂಕಟದ ಅನುಭವ ಹಂಚಿಕೊಳ್ತಿದೇನೆ ನಿಮ್ಮೊಟ್ಟಿಗೆ... ಊರು, ಉಳಿದಂತೆಲ್ಲ ಹಾಗೇ ಇತ್ತು. ಗದ್ದೆಗಳಲ್ಲಿ ಕಾಂಪ್ಲೆಕ್ಸುಗಳು ಎದ್ದು ನಿಂತಿದ್ದು, ಖಾಲಿ ಹೊಡೆಯುತ್ತ ಬೀಗ ಬಡಚಿಕೊಂಡು ಬಿದ್ದಿದ್ದವು. ಊರಿನ ರೋಡಿನುದ್ದಕ್ಕೂ ನಡೆಯುವ ಖುಷಿಗೆಂದೇ ನಾನು, ಅಪ್ಪಿ ಆಟೋ ಹತ್ತದೆ ಪೇಟೆ ತನಕ ಕಾಲು ಬೀಸುತ್ತ ಹೊರಟಿದ್ದೆವು. “ಇವ್ರೆಲ್ಲ ಹೊಟ್ಟೆಗೆ ಏನು ಮಾಡ್ಕೊಳ್ತಾರೋ?" ಭೂತ... Continue Reading →
