ಮೊನ್ನೆ ಸಣ್ಣಗೆ ಮಳೆ ಬಿದ್ದು ಹೋಯ್ತು. ಈ ಹೊತ್ತು ಬೆವರಲ್ಲಿ ಮೈಯೆಲ್ಲ ಒದ್ದೆಒದ್ದೆ. ಫ್ಯಾನಿನ ತಣ್ಣನೆ ಗಾಳಿಗೆ ಬೆವರಿನ ಮೈ ಆರಿ ಒಂಥರಾ ಅಂಟು. ಮಗ್ಗಲು ಬದಲಿಸಿದರೆ, ಹರಡಿಟ್ಟ ಪುಸ್ತಕ ರಾಶಿ. ಅಗೋ ಅಲ್ಲಿ, ಅವುಗಳ ಮಧ್ಯ ಗೆಳೆಯನೊಬ್ಬ ಹಾವು ಹಾವು ಅಂತ ಕನವರಿಸ್ಕೊಂಡು ಬರೆದಿಟ್ಟ ಕವನ ಪುಸ್ತಕ. ಅದನ್ನ ಓದಿಕೊಳ್ತಲೇ ಮಲಗಿದ್ದಕ್ಕೋ ಏನೋ ಕನಸ ತುಂಬ ಹಾವು. ಅದೊಂದಕ್ಕೆ ಅವನ ಕಣ್ಣು. ಕಾಣಬಾರದಂತೆ ಹಾವು ಕನಸಲ್ಲಿ. ಹಾವಂದರೆ ಕಾಮವಂತೆ! ಗೊತ್ತಿರೋದು ಇಷ್ಟೇನೇ... ಹಾವಂದರೆ ಅಧ್ಯಾತ್ಮ ಕೂಡ!... Continue Reading →
