ರಾಧೇ, ಎದೆಯ ಕಸ ಹೇಗೆ ಗುಡಿಸಿದೆಯೆ?

ಇವತ್ತು ನನಗೆ ಝಾಡಮಾಲಿಯ ಕೆಲಸ. ಎದೆಯೊಳಗಿನ ಕೋಣೆಯೊಂದರ ಸಫಾಯಿ ಮಾಡಬೇಕಿದೆ. ಅದು ಗುಟ್ಟುಗುಟ್ಟಿನ ಖಾಸಗಿ ಕೋಣೆ. ಅದರ ತುಂಬ ಈಗ ನೆನಪಿನ ಕಸ ತುಂಬಿ ಹಾಳುಬಿದ್ದಿದೆ. ಮೊದಲೆಲ್ಲ ಅಲ್ಲಿ ಇರುತ್ತಿದ್ದನಲ್ಲ ಆ ಹುಡುಗ, ಅವಂಗೇನೋ ರಾಜಕಾರ್ಯವಂತೆ, ಎದ್ದು ಹೋಗಿಬಿಟ್ಟ. “ನಾಳೆಯಿಂದ ನಿನ್ನ ಮರೀತೇನೆ" ಅಂತ ಪತ್ರ ಬರೆದಿದ್ದ. ಯಾವ ನಾಳೆ ನನ್ನ ಮರೆತನೋ, ಮರಳಿ ಬರುವ ಮಾತಂತೂ ಇನ್ನು ಇಲ್ಲ. ಈ ಕೋಣೆಯ ಕನ್ನಡಿಯಲ್ಲಿ ಅರೆ! ಅವನ ಬಿಂಬ ನಗುತ್ತಲೇ ಇದೆ. ‘ಒಡೆಯನೆಲ್ಲಿ?’ ನನ್ನ ಕಂಡ ಬಿಂಬಕ್ಕೆ... Continue Reading →

ಚಿಕ್ಕಮ್ಮಾ, ಚಾಟರ್ ಬಿಲ್ಲು ಕೊಡಿಸ್ತೀರಾ?

ನೂರೊಂದು ನೆನಪು ಎದೆಯಾಳದಿಂದ ಹಾಡಾಗಿ ಬಂತು ಆನಂದದಿಂದ... ಎಂಟು ವರ್ಷದ ಮಧು ಗಿಟಾರ್ ಬಾರಿಸ್ತಿರೋ ಹಾಗೆ ಪೋಸು ಕೊಟ್ಕೊಂಡು ಹಾಡ್ತಾ ಇದ್ರೆ, ಮುದ್ದಿಸಿ ಹಿಂಡಿ ಹಿಪ್ಪೆ ಮಾಡ್ಬಿಡ್ಬೇಕು ಅನಿಸ್ತಿತ್ತು. ಅದೊಂದು ದೊಡ್ಡ ಮನೆತನ. ನೂರೆಂಟು ಕಚ್ಚಾಟ- ಕಿತ್ತಾಟಗಳ ನಡುವೆಯೂ ಆದಿ ಮನೆಯ ಭದ್ರ ತೇಪೆ. ಹಬ್ಬ ಹರಿದಿನ, ಮದುವೆ ಮುಂಜಿ ಅಂದ್ರೆ ಎಲ್ರೂ ಅಲ್ಲಿ ಸೇರಲೇಬೇಕು. ಊರಗಲ ಹೊಳಪು ಕಣ್ಣೂ, ಮೂಗಿನ ತುದಿ ಮೇಲೆ ಕೋಪ, ಮೊಂಡು ವಾದ ಮತ್ತು ಅಗ್ದಿ ತಲೆ ಹರಟೆ- ಇವು ಆ... Continue Reading →

Blog at WordPress.com.

Up ↑