ಹೆಜ್ಜೆ ಕಿತ್ತು ಬಂದ ದಿನದ ನೆನಪು ಹಾಗೇ ಇದೆ. ಮುಳ್ಳು ಕಿತ್ತ ನೋವು, ಮುಳ್ಳು ಕಿತ್ತ ನಿರುಮ್ಮಳ, ಹಾಗೇ ಇದೆ. ಕಿವುಡಾಗಲೇಬೇಕಿತ್ತು ನಾನು, ಕುರುಡಾಗಲೇಬೇಕಿತ್ತು. ಮೂಕತನವನೆಲ್ಲ ಹುಗಿದು ಮಾತಾಡಲೇಬೇಕಿತ್ತು. ಅಬ್ಬರದ ಸಂತೆಯಲಿ ನೀನು ಅಮ್ಮಾ ಅಂದಿದ್ದು- ಎದೆಯ ಆಚೆಗೇ ನಿಂತು ಹೋಗಿತ್ತು... ನಿನ್ನ ಪುಟ್ಟ ಕೈಗಳು ನನ್ನ ತಡೆಯಲಾಗಲಿಲ್ಲ. ಪ್ರಶ್ನೆಗಳ ಕಂಬನಿ ಕರೆಗಟ್ಟಿದ್ದ ಕಣ್ಣುಗಳನ್ನ ತಪ್ಪಿಸಿಬರಬೇಕಿತ್ತು... ನಾ ಕಳೆದ ನಿನ್ನ ಬದುಕಿನ ಮೊತ್ತ ಲೆಕ್ಕವಿಟ್ಟಿದೇನೆ ಮಗೂ, ನಿನ್ನ ನೋವಿನ ಋಣ ನನ್ನ ಹೆಗಲ ಮೇಲಿದೆ. ನೆನಪಿಗೊಂದು ಕಂಬನಿ... Continue Reading →
