ಜಮ್ಮು, ಕಾಶ್ಮೀರ ಮತ್ತು ಲಡಾಖ್

ಇದು ನಮ್ಮ ಜಮ್ಮು, ಕಾಶ್ಮೀರ ಮತ್ತು ಲಡಾಖ್‌ ಪ್ರವಾಸದ ಕಥನ. ಹದಿನೆಂಟು ದಿನಗಳ ಈ ಪ್ರವಾಸ ಒಂದು ದಿವ್ಯಾನುಭೂತಿಯೇ ಆಗಿತ್ತು. ಈ ಕಥನದ ಹಿಂದಿನ ಭಾಗ ಓದಲು ಇಲ್ಲಿ ಕ್ಲಿಕ್‌ ಮಾಡಿ... ೨. ಸೆಖೆಯ ಸ್ವಾಗತ ಹಾಗೆ ನಾವು ಒಟ್ಟು ಆರು ಜನ ಹೊರಟೆವಲ್ಲ, ಈ ಪ್ರವಾಸದ ಹಿಂದೆ ನಮ್ಮೆಲ್ಲರಿಗೂ ನಮ್ಮದೇ ಆಸಕ್ತಿ- ಕಾರಣಗಳಿದ್ದವು. ಯೋಗೀಶ್‌ ಮತ್ತು ಸಚಿನ್‌ ಶತಾಯ ಗತಾಯ ಅಮರನಾಥಕ್ಕೆ ಹೋಗಿಯೇ ಬರುವುದು ಅಂತ ನಿರ್ಧರಿಸಿಕೊಂಡಿದ್ದರು. ಅವರ ಪೂರ್ತಿ ಗಮನ ಅದರತ್ತಲೇ ಇತ್ತು. ಅನೂಪನಿಗೆ... Continue Reading →

ತುಂಬಾ ಸಿಹಿ, ಸ್ವಲ್ಪ ಕಹಿ- ನನ್ನ ಪ್ರವಾಸ ಕಥನ!

ಭುವನೇಶ್ವರದಿಂದ ಬರೋಬ್ಬರಿ ನಾಲ್ಕು ಗಂಟೆ ತಡವಾಗಿ ಹೊರಟ ರೈಲು ಅಂತೂ ಮರು ದಿನ ಇಳಿ ಮಧ್ಯಾಹ್ನದ ಹೊತ್ತಿಗೆ ಕರ್ನಾಟಕದ ಅಂಚು ಮುಟ್ಟಿತು. ಬಂಗಾರ ಪೇಟೆ, ಮಾಲೂರುಗಳೆಲ್ಲ ಹಾದು ಈ ಗೌಹಾಟಿ- ಬೆಂಗಳೂರು ಎಕ್ಸ್ ಪ್ರೆಸ್ಸು ಕೆ.ಆರ್.ಪುರದ ಸ್ಟೇಶನ್ನಿನಲ್ಲಿ ಒಂದು ಕ್ಷಣ ನಿಂತಿತು ನೋಡಿ.... ಆಆಆಆಆ.......... ಖ್ಷೀ....... ಉಹ್... ನನ್ನ ಹಾಳು ಇಂದ್ರಿಯಗಳಿಗೆ ಬೆಂಗಳೂರು ಬಂದಿದ್ದು ಗೊತ್ತಾಗಿಹೋಯ್ತು!                                   ಹತ್ತು ಮತ್ತೆರಡು ದಿನಗಳ ಕಾಲ ಸಾಸಿವೆ ಎಣ್ಣೆಯಲ್ಲೇ ಮುಳುಗೆದ್ದಿದ್ದರೂ ಹೊಟ್ಟೆ ಪಿಟ್ಟೆಂದಿರಲಿಲ್ಲ. ಮೂರು ಹೊತ್ತೂ ಆಲೂಗಡ್ಡೆ ತಿಂದಿದ್ದರೂ ಕೂದಲು... Continue Reading →

ಕೌಲೇದುರ್ಗದ ಕಥೆ

ಮತ್ತೆ ಇದೊಂದು ಹಳೆಯ ಬರಹ. ಸರಿಯಾಗಿ ಒಂದು ವರ್ಷ ಹಿಂದೆ ಬರೆದಿದ್ದು. ಕೆಂಡ ಸಂಪಿಗೆಯಲ್ಲಿ ಪ್ರಕಟವಾಗಿ ಎಂಟು ತಿಂಗಳು ಕಳೆದಿವೆ. ಆದರೂ ಕವಲೇದುರ್ಗದ ನೆನಪು ತಾಜಾ ಆಗಿದೆ. ಕಾಲು ಮತ್ತೆ ಮತ್ತೆ ಅತ್ತ ಎಳೀತಿದೆ. ನಾವು ಆಗೆಲ್ಲ ಕೊಡಚಾದ್ರಿ, ಬರ್ಕಣ, ಜೋಗಿ ಗುಂಡಿ, ಸಿರಿಮನೆ ಜಲಪಾತ ಅಂತ ಅದೆಷ್ಟು ಸುತ್ತಾಡ್ತಿದ್ದೆವು ಗೊತ್ತಾ? (ಹಳೇ ಹಪ್ಪಟ್ಟು ಕಥೆ ಬಿಡಿ. ಹನ್ನೆರಡು- ಹದಿಮೂರು ವರ್ಷ ಹಿಂದಿನದು!) ಅದನ್ನೆಲ್ಲ ಬರೆಯುವ ಆಸೆ. ಫೋಟೋಗಳಿಲ್ಲ ಅನ್ನೋದು ಕೊರಗು. ಮತ್ತೀಗ ಅಲ್ಲೆಲ್ಲ ನಕ್ಸಲರ ಪಾರುಪತ್ಯ... Continue Reading →

Blog at WordPress.com.

Up ↑